AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಜಿಎಫ್​ ಗರುಡನ ಹೊಸ ಲುಕ್​ ನೋಡಿದ್ರಾ? ‘ಮಹಾ ಸಮುದ್ರಂ’ ಮಹಾ ರಾಕ್ಷಸ

KGF Garuda: ಇದು ಟಾಲಿವುಡ್​ನಲ್ಲಿ ಗರುಡ ರಾಮ್​ಗೆ ಮೊದಲ ಸಿನಿಮಾ ಎಂಬುದು ವಿಶೇಷ. ಈ ಚಿತ್ರ ರಿಲೀಸ್​ ಆದ ಬಳಿಕ ಅವರಿಗೆ ತೆಲುಗು ಅಭಿಮಾನಿಗಳ ಸಂಖ್ಯೆ ಹೆಚ್ಚಲಿದೆ.

ಕೆಜಿಎಫ್​ ಗರುಡನ ಹೊಸ ಲುಕ್​ ನೋಡಿದ್ರಾ? ‘ಮಹಾ ಸಮುದ್ರಂ’ ಮಹಾ ರಾಕ್ಷಸ
ಗರುಡ ರಾಮ್​
ಮದನ್​ ಕುಮಾರ್​
| Edited By: |

Updated on:Jun 26, 2021 | 12:35 PM

Share

ಭಾರತೀಯ ಚಿತ್ರರಂಗದಲ್ಲಿ ಕನ್ನಡದ ಕೆಜಿಎಫ್​ ಸಿನಿಮಾ ಮಾಡಿದ ಮ್ಯಾಜಿಕ್​ ಒಂದೆರಡಲ್ಲ. ನಿರ್ದೇಶಕ ಪ್ರಶಾಂತ್​ ನೀಲ್​, ನಟ ಯಶ್​ ಮಾತ್ರವಲ್ಲದೆ ಈ ಚಿತ್ರತಂಡದ ಅನೇಕರಿಗೆ ಪರಭಾಷೆಯಲ್ಲಿ ಹೇರಳ ಅವಕಾಶಗಳನ್ನು ತಂದುಕೊಟ್ಟ ಸಿನಿಮಾ ಅದು. ‘ಕೆಜಿಎಫ್​: ಚಾಪ್ಟರ್​ 1’ ಚಿತ್ರದಲ್ಲಿ ವಿಲನ್​ ಆಗಿ ಅಬ್ಬರಿಸಿದ್ದ ನಟ ರಾಮ್​ ಅಲಿಯಾಸ್​ ಗರುಡ ರಾಮ್​ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿತು. ಪರಭಾಷೆಯ ಸಿನಿಮಾರಂಗಗಳಿಂದ ಅವರಿಗೆ ಬಂಪರ್​ ಆಫರ್​ಗಳು ಒಲಿದುಬರಲು ಆರಂಭಿಸಿದವು. ಈಗ ಅವರು ಟಾಲಿವುಡ್​ನಲ್ಲೂ ವಿಲನ್ ಆಗಿ ಮಿಂಚುತ್ತಿದ್ದಾರೆ.

ಶರ್ವಾನಂದ್​ ಮತ್ತು ಸಿದ್ಧಾರ್ಥ್​ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ತೆಲುಗಿನ ‘ಮಹಾ ಸಮುದ್ರಂ’ ಚಿತ್ರದಲ್ಲಿ ರಾಮ್​ ಮುಖ್ಯ ವಿಲನ್​ ಆಗಿದ್ದಾರೆ. ಅವರಿಗೆ ತುಂಬ ರಗಡ್​ ಆದಂತಹ ಪಾತ್ರವನ್ನೇ ನೀಡಲಾಗಿದೆ. ಧನಂಜಯ್​ ಎಂಬ ಮಹಾ ರಾಕ್ಷಸನ ರೀತಿಯಲ್ಲಿ ಅವರು ಅಬ್ಬರಿಸಲಿದ್ದಾರೆ. ಆ ಪಾತ್ರದ ಝಲಕ್​ ತೋರಿಸಲು ಈಗ ಚಿತ್ರತಂಡ ಅವರ ಫಸ್ಟ್​ಲುಕ್​ ಬಿಡುಗಡೆ ಮಾಡಿದೆ.

ಕಣ್ಣುಗಳಲ್ಲಿ ಕ್ರೋಧವನ್ನೇ ಉಕ್ಕಿಸುತ್ತ, ಎದುರಾಳಿಯನ್ನು ಸದೆಬಡಿಲು ಹೊರಟಿರುವ ಭಂಗಿಯಲ್ಲಿ ರಾಮ್​ ಅವರ ಫಸ್ಟ್​ಲುಕ್​ ಪೋಸ್ಟರ್​ ವಿನ್ಯಾಸಗೊಂಡಿದೆ. ‘ಧನಂಜಯ್​ ಎಂಬ ಕ್ರೂರ ಮನುಷ್ಯನಾಗಿ ಗರುಡ ರಾಮ್​ ಅವರನ್ನು ಪರಿಚಯಿಸುತ್ತಿದ್ದೇವೆ’ ಎಂಬ ಕ್ಯಾಪ್ಷನ್​ನೊಂದಿಗೆ ಎ.ಕೆ. ಎಂಟರ್​ಟೇನ್ಮೆಂಟ್ಸ್​ ಸಂಸ್ಥೆಯು ಈ ಪೋಸ್ಟರ್​ ಬಿಡುಗಡೆ ಮಾಡಿದೆ. ಆ ಮೂಲಕ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಲಾಗಿದೆ. ಇಡೀ ಸಿನಿಮಾದಲ್ಲಿ ರಾಮ್​ ಹೇಗೆ ನಟಿಸಿರಬಹುದು ಎಂಬುದನ್ನು ತಿಳಿದುಕೊಳ್ಳುವ ಕಾತರ ಅಭಿಮಾನಿಗಳಲ್ಲಿ ಹೆಚ್ಚಿದೆ.

‘ಮಹಾ ಸಮುದ್ರಂ’ ಚಿತ್ರಕ್ಕೆ ಅಜಯ್​ ಭೂಪತಿ ನಿರ್ದೇಶನ ಮಾಡುತ್ತಿದ್ದಾರೆ. ಇದು ಟಾಲಿವುಡ್​ನಲ್ಲಿ ರಾಮ್​ಗೆ ಮೊದಲ ಸಿನಿಮಾ ಎಂಬುದು ವಿಶೇಷ. ಈ ಸಿನಿಮಾ ರಿಲೀಸ್​ ಆದ ಬಳಿಕ ಅವರಿಗೆ ತೆಲುಗು ಅಭಿಮಾನಿಗಳ ಸಂಖ್ಯೆ ಹೆಚ್ಚಲಿದೆ. ಕನ್ನಡ ಮತ್ತು ತಮಿಳಿನಲ್ಲೂ ಅವರು ಅನೇಕ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ.

ಸದ್ಯ ‘ಮಹಾ ಸಮುದ್ರಂ’ ಚಿತ್ರಕ್ಕೆ ಕೊನೇ ಹಂತದ ಶೂಟಿಂಗ್​ ಬಾಕಿ ಇದೆ. ಕೊವಿಡ್​ ಪ್ರಕರಣಗಳ ಸಂಖ್ಯೆ ಇಳಿಮುಖ ಆಗುತ್ತಿರುವುದರಿಂದ ಶೀಘ್ರದಲ್ಲೇ ಚಿತ್ರೀಕರಣಕ್ಕೆ ಮರು ಚಾಲನೆ ಸಿಗಲಿದೆ. ಈ ಸಿನಿಮಾದಲ್ಲಿ ನಾಯಕಿಯರಾಗಿ ಅದಿತಿ ರಾವ್​ ಹೈದರಿ ಮತ್ತು ಅನು ಇಮ್ಯಾನುಯಲ್​ ನಟಿಸುತ್ತಿದ್ದಾರೆ.

ಇದನ್ನೂ ಓದಿ:

‘ಪುಷ್ಪ ಸಿನಿಮಾ 10 ಕೆಜಿಎಫ್​ಗೆ ಸಮ’; ಅಲ್ಲು ಅರ್ಜುನ್​ ಚಿತ್ರಕ್ಕೆ ಸಿಕ್ತು ಹೊಸ ಮೆಚ್ಚುಗೆ

KGF Chapter 2: ಕೆಜಿಎಫ್ 2 ಹೊಸ ರಿಲೀಸ್ ಡೇಟ್ ಬಗ್ಗೆ ಹರಿದಾಡುತ್ತಿದೆ ಗುಸುಗುಸು

Published On - 12:08 pm, Sat, 26 June 21

Follow Us
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ