ವಿಜಯ್​ ದೇವರಕೊಂಡ ಜೊತೆ ಸೇರಿಕೊಂಡು ಸೈಲೆಂಟಾಗಿ ಮತ್ತೊಂದು ಸಾಧನೆ ಮಾಡಿದ ರಶ್ಮಿಕಾ ಮಂದಣ್ಣ

Rashmika Mandanna: ‘ಡಿಯರ್​ ಕಾಮ್ರೇಡ್’​ ಚಿತ್ರದ ಹಿಂದಿ ವರ್ಷನ್ ಅನ್ನು ಜನರು ಈ ಪರಿ ಮುಗಿಬಿದ್ದು ನೋಡಿದ್ದಾರೆ ಎಂದರೆ ಅವರಿಗೆ ರಶ್ಮಿಕಾ ಬಗ್ಗೆ ಇರುವ ಕ್ರೇಜ್​ ಎಂಥದ್ದು ಎಂಬುದು ಗೊತ್ತಾಗುತ್ತದೆ. ಈಗ ನೇರವಾಗಿ ರಶ್ಮಿಕಾ ಬಾಲಿವುಡ್​ಗೆ ಕಾಲಿಡುತ್ತಿದ್ದಾರೆ.

ವಿಜಯ್​ ದೇವರಕೊಂಡ ಜೊತೆ ಸೇರಿಕೊಂಡು ಸೈಲೆಂಟಾಗಿ ಮತ್ತೊಂದು ಸಾಧನೆ ಮಾಡಿದ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ, ವಿಜಯ್​ ದೇವರಕೊಂಡ
Madan Kumar

|

Jun 21, 2021 | 8:24 AM

ಟಾಲಿವುಡ್​ನಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್​ ದೇವರಕೊಂಡ ಅವರದ್ದು ಹಿಟ್​ ಜೋಡಿ ಎಂಬುದು ಸಾಬೀತಾಗಿದೆ. ಗೀತ ಗೋವಿಂದಂ ಹಾಗೂ ಡಿಯರ್​ ಕಾಮ್ರೇಡ್​ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದ ಈ ಜೋಡಿಗೆ ಅಭಿಮಾನಿಗಳು ಫಿದಾ ಆಗಿದ್ದರು. ಅಲ್ಲದೆ, ರಿಯಲ್​ ಲೈಫ್​ನಲ್ಲಿಯೂ ಅವರು ಜೋಡಿಯಾಗಲಿ ಎಂದು ಆಸೆಪಟ್ಟ ಅಭಿಮಾನಿಗಳು ಹಲವರಿದ್ದಾರೆ. ಅದೇನೇ ಇರಲಿ, ಈಗ ಇವರಿಬ್ಬರು ಹಿಂದಿಯಲ್ಲಿ ಒಂದು ಮೈಲಿಗಲ್ಲು ಮುಟ್ಟಿದ್ದಾರೆ. ಏನದು? ವಿಜಯ್​ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೊತೆಯಾಗಿ ನಟಿಸಿದ್ದ ‘ಡಿಯರ್​ ಕಾಮ್ರೇಡ್​’ ಸಿನಿಮಾದ ಹಿಂದಿ ವರ್ಷನ್​ ಯೂಟ್ಯೂಬ್​ನಲ್ಲಿ 250 ಮಿಲಿಯನ್ (25 ಕೋಟಿ)​ ವೀಕ್ಷಣೆ ಕಂಡಿದೆ.

2019ರ ಜುಲೈ 26ರಂದು ಡಿಯರ್​ ಕಾಮ್ರೇಡ್​ ಸಿನಿಮಾ ತೆರೆಕಂಡಿತ್ತು. ಭರತ್ ಕಮ್ಮ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದರು. ತೆಲುಗಿನಲ್ಲಿ ತಯಾರಾದ ಈ ಸಿನಿಮಾ ಕನ್ನಡ, ಮಲಯಾಳಂ ಮತ್ತು ತಮಿಳಿಗೂ ಡಬ್​ ಆಗಿ ರಿಲೀಸ್​ ಆಗಿತ್ತು. ಚಿತ್ರಮಂದಿರದಲ್ಲಿ ಹೇಳಿಕೊಳ್ಳುವಷ್ಟು ಯಶಸ್ಸನ್ನು ‘ಡಿಯರ್​ ಕಾಮ್ರೇಡ್​’ ಪಡೆದುಕೊಳ್ಳಲಿಲ್ಲ. ಬಳಿಕ 2020ರ ಜ.19ರಂದು ಈ ಚಿತ್ರದ ಹಿಂದಿ ಅವತರಣಿಕೆಯನ್ನು ಯೂಟ್ಯೂಬ್​ನಲ್ಲಿ ಬಿಡುಗಡೆ ಮಾಡಲಾಗಿತ್ತು. ಈವರೆಗೆ ಬರೋಬ್ಬರಿ 250 ಮಿಲಿಯನ್​ ಬಾರಿ ವೀಕ್ಷಣೆ ಕಂಡಿರುವುದು ರಶ್ಮಿಕಾ ಸಂತಸಕ್ಕೆ ಕಾರಣ ಆಗಿದೆ.

‘ಈ ಚಿತ್ರಕ್ಕೆ ಅಂತಹ ಸಾಮರ್ಥ್ಯ ಇದೆ. ಇದು ಜನರ ಕಥೆಯುಳ್ಳ ಸಿನಿಮಾ. ದೇಶಾದ್ಯಂತ ಜನರು ಈ ಸಿನಿಮಾಗೆ ತೋರಿಸುತ್ತಿರುವ ಪ್ರೀತಿ ನೋಡಿ ಖುಷಿ ಆಗುತ್ತದೆ. ನಟಯಾಗಿ ಮತ್ತು ವ್ಯಕ್ತಿಯಾಗಿ ನನಗೆ ಡಿಯರ್​ ಕಾಮ್ರೇಡ್​ ಸಿನಿಮಾದಿಂದ ಬಹಳಷ್ಟು ಸಿಕ್ಕಿದೆ. ಈ ಸಿನಿಮಾ ನನ್ನ ಪಾಲಿಗೆ ನಿಜಕ್ಕೂ ಸ್ಪೆಷಲ್​. ತಂಡದ ಸದಸ್ಯರು, ಅವರ ತಯಾರಿ, ಶೂಟಿಂಗ್​ ಅನುಭವ ಇದನ್ನೆಲ್ಲ ನಾನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ’ ಎಂದು ರಶ್ಮಿಕಾ ಹೇಳಿದ್ದಾರೆ.

ಡಿಯರ್​ ಕಾಮ್ರೇಡ್​ ಚಿತ್ರದ ಹಿಂದಿ ವರ್ಷನ್ ಅನ್ನು ಜನರು ಈ ಪರಿ ಮುಗಿಬಿದ್ದು ನೋಡಿದ್ದಾರೆ ಎಂದರೆ ಅವರಿಗೆ ರಶ್ಮಿಕಾ ಬಗ್ಗೆ ಇರುವ ಕ್ರೇಜ್​ ಎಂಥದ್ದು ಎಂಬುದು ಗೊತ್ತಾಗುತ್ತದೆ. ಈಗ ನೇರವಾಗಿ ರಶ್ಮಿಕಾ ಬಾಲಿವುಡ್​ಗೆ ಕಾಲಿಡುತ್ತಿದ್ದಾರೆ. ‘ಮಿಷನ್​ ಮಜ್ನು’ ಸಿನಿಮಾದಲ್ಲಿ ಸಿದ್ಧಾರ್ಥ್​ ಮಲ್ಹೋತ್ರಾ ಜೊತೆ ಅವರು ತೆರೆಹಂಚಿಕೊಳ್ಳುತ್ತಿದ್ದಾರೆ. ಅದು ಅವರ ಮೊದಲ ಹಿಂದಿ ಚಿತ್ರ. ಇದಲ್ಲದೆ, ‘ಗುಡ್​ ಬೈ’ ಚಿತ್ರದಲ್ಲಿ ನಟಿಸುತ್ತಿದ್ದ, ಅದರಲ್ಲಿ ಅಮಿತಾಭ್​ ಬಚ್ಚನ್​ಗೆ ಮಗಳಾಗಿ ಅಭಿನಯಿಸುವ ಅವಕಾಶ ರಶ್ಮಿಕಾಗೆ ಸಿಕ್ಕಿದೆ.

ಇದನ್ನೂ ಓದಿ:

ರಶ್ಮಿಕಾ ಮಂದಣ್ಣ ಮುಖಕ್ಕೆ ಮುತ್ತಿಟ್ಟ ಔರಾ; ರಾತ್ರೋರಾತ್ರಿ ವೈರಲ್​ ಆಯ್ತು ಫೋಟೋ

ರಶ್ಮಿಕಾ ಬಗ್ಗೆ ಕೆಟ್ಟ ಕಮೆಂಟ್​ಗಳ ಸುರಿಮಳೆ; ರಕ್ಷಿತ್​ ಶೆಟ್ಟಿ ಪ್ರತಿಕ್ರಿಯೆಗೆ ಭೇಷ್​ ಎನ್ನಲೇಬೇಕು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada