ಟಾಲಿವುಡ್​ ಸ್ಟಾರ್​ ನಟನ ಸಿನಿಮಾಗೆ ಮತ್ತೆ ಹೀರೋಯಿನ್​ ಆಗಲಿದ್ದಾರೆ ರಶ್ಮಿಕಾ

ಈ ಸಿನಿಮಾ ಸಾಕಷ್ಟು ಎಂಟರ್​ಟೇನ್​ಮೆಂಟ್​ನಿಂದ ಕೂಡಿರಲಿದೆಯಂತೆ. ಈ ಚಿತ್ರದ ಭಾಗವಾಗೋಕೆ ರಶ್ಮಿಕಾಗೆ ಆಫರ್​ ನೀಡಲಾಗಿದೆ. ಒಂದು ಹಂತದ ಮಾತುಕತೆ ಕೂಡ ನಡೆದಿದೆ ಎನ್ನುಲಾಗುತ್ತಿದೆ.

ಟಾಲಿವುಡ್​ ಸ್ಟಾರ್​ ನಟನ ಸಿನಿಮಾಗೆ ಮತ್ತೆ ಹೀರೋಯಿನ್​ ಆಗಲಿದ್ದಾರೆ ರಶ್ಮಿಕಾ
ರಶ್ಮಿಕಾ ಮಂದಣ್ಣ
Follow us
ರಾಜೇಶ್ ದುಗ್ಗುಮನೆ
|

Updated on: Jun 20, 2021 | 9:36 PM

ನಟಿ ರಶ್ಮಿಕಾ ಮಂದಣ್ಣ ಟಾಲಿವುಡ್​ನಲ್ಲಿ ಸಾಕಷ್ಟು ಬೇಡಿಕೆ ಹೊಂದಿದ್ದಾರೆ. ಅವರ ಕಾಲ್​ಶೀಟ್​ ಪಡೆಯೋಕೆ ನಿರ್ಮಾಪಕರು ಸಾಲಿನಲ್ಲಿ ನಿಂತಿದ್ದಾರೆ. ಆದರೆ, ರಶ್ಮಿಕಾ ಕಥೆ, ಪಾತ್ರಗಳನ್ನು ನೋಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಈಗ ಕೇಳಿ ಬರುತ್ತಿರುವ ಲೇಟೆಸ್ಟ್​ ಮಾಹಿತಿ ಎಂದರೆ, ತೆಲುಗು ಸ್ಟಾರ್​ ನಿರ್ದೇಶಕನ ಸಿನಿಮಾಗೆ ರಶ್ಮಿಕಾ ಮತ್ತೆ ನಾಯಕಿ ಆಗುತ್ತಿದ್ದಾರೆ.

ಕೃಷ್ಣ ಚೈತನ್ಯ ನಿರ್ದೇಶನದ ‘ಪವರ್ ಪೇಟಾ’ ಸಿನಿಮಾದಲ್ಲಿ ನಿತಿನ್ ನಟಿಸಬೇಕಿತ್ತು. ಈ ಸಿನಿಮಾ ಎರಡು ಪಾರ್ಟ್​​ಗಳಲ್ಲಿ ತೆರೆಗೆ ಬರಲಿದೆ ಎನ್ನಲಾಗಿತ್ತು. ಆದರೆ, ಬಜೆಟ್​ ಹಾಗೂ ಕೊರೊನಾದಿಂದ ಎದುರಾದ ಸಮಸ್ಯೆಯಿಂದ ನಿತಿನ್​ ಈ ಸಿನಿಮಾದಿಂದ ಹಿಂದೆ ಸರಿದಿದ್ದಾರೆ. ಈಗ ಅವರು ವಕ್ಕಂತಂ ವಂಶಿ​ ವಂಶಿ ಜತೆ ಕೈ ಜೋಡಿಸುತ್ತಿದ್ದಾರೆ.

ಈ ಸಿನಿಮಾ ಸಾಕಷ್ಟು ಎಂಟರ್​ಟೇನ್​ಮೆಂಟ್​ನಿಂದ ಕೂಡಿರಲಿದೆಯಂತೆ. ಈ ಚಿತ್ರದ ಭಾಗವಾಗೋಕೆ ರಶ್ಮಿಕಾಗೆ ಆಫರ್​ ನೀಡಲಾಗಿದೆ. ಒಂದು ಹಂತದ ಮಾತುಕತೆ ಕೂಡ ನಡೆದಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಶೀಘ್ರವೇ ಘೋಷಣೆ ಆಗಲಿದೆಯಂತೆ.

ನಿತೀನ್​-ರಶ್ಮಿಕಾ ಈ ಮೊದಲು ‘ಭೀಷ್ಮ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್​ ಪಡೆದುಕೊಂಡಿತ್ತು. ರಾಸಾಯನಿಕ ಮುಕ್ತ ಕೃಷಿ ವಿಚಾರವನ್ನು ಇಟ್ಟುಕೊಂಡು ಸಿನಿಮಾದ ಕಥೆ ಹೆಣೆಯಲಾಗಿತ್ತು.

ಕನ್ನಡ ಚಿತ್ರರಂಗದಿಂದ ಬದುಕು ಆರಂಭಿಸಿದ ರಶ್ಮಿಕಾ ಮಂದಣ್ಣ ನಂತರ ಕಾಲಿಟ್ಟಿದ್ದು ಟಾಲಿವುಡ್​ಗೆ. ರಶ್ಮಿಕಾಗೆ ಅಲ್ಲಿ ಅಪಾರ ಖ್ಯಾತಿ ಸಿಕ್ಕಿತ್ತು. ಕಾಲಿವುಡ್​ಗೂ ಎಂಟ್ರಿಕೊಟ್ಟಿದ್ದ ರಶ್ಮಿಕಾ ನಂತರ ಬಾಲಿವುಡ್​ ಆಫರ್​ ಗಿಟ್ಟಿಸಿಕೊಂಡರು. ‘ಮಿಷನ್​ ಮಜ್ನು’ ಚಿತ್ರದಲ್ಲಿ ಸಿದ್ಧಾರ್ಥ್​ ಮಲ್ಹೋತ್ರಗೆ ಜತೆಯಾಗಿ ರಶ್ಮಿಕಾ ಕಾಣಿಸಿಕೊಳ್ಳುತ್ತಿದ್ದಾರೆ. ‘ಗುಡ್​ ಬೈ’ ಚಿತ್ರದಲ್ಲಿ ಅಮಿತಾಭ್​ ಬಚ್ಚನ್​ಗೆ ಮಗಳಾಗಿ ರಶ್ಮಿಕಾ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲು ಅರ್ಜುನ್​ ನಟನೆಯ ‘ಪುಷ್ಪ’ ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಮುಖಕ್ಕೆ ಮುತ್ತಿಟ್ಟ ಔರಾ; ರಾತ್ರೋರಾತ್ರಿ ವೈರಲ್​ ಆಯ್ತು ಫೋಟೋ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ