ಬಿಗ್ ಬಾಸ್ ಎರಡನೇ ಇನ್ನಿಂಗ್ಸ್ಗೆ ದಿನಾಂಕ ಫಿಕ್ಸ್; ಜೂ.23ರ ಮೊದಲ ಸಂಚಿಕೆಯಲ್ಲಿ ಏನಿರಲಿದೆ ವಿಶೇಷ?
Bigg Boss Kannada Season 8: ‘ಅರ್ಧಕ್ಕೆ ನಿಂತಿದ್ದ ಕನಸು ಮುಂದುವರಿಯುತ್ತಾ ಅಥವಾ ಹೊಸ ಕನಸು ಶುರು ಆಗತ್ತಾ’ ಎಂದು ಕೌತುಕದ ಪ್ರಶ್ನೆಯನ್ನು ಪ್ರೋಮೋದಲ್ಲಿ ಕೇಳಲಾಗಿದೆ. ಅಂದರೆ ಈ ಎರಡನೇ ಸೀಸನ್ನಲ್ಲಿ ಹಳೇ ಸ್ಪರ್ಧಿಗಳ ಜೊತೆಗೆ ಹೊಸ ಸ್ಪರ್ಧಿಗಳು ಬಂದರೂ ಅಚ್ಚರಿ ಏನಿಲ್ಲ.
ಕೊರೊನಾ ವೈರಸ್ ಎರಡನೇ ಅಲೆಯ ಹಾವಳಿಯಿಂದಾಗಿ ‘ಬಿಗ್ ಬಾಸ್ ಕನ್ನಡ ಸೀಸನ್ 8’ ಅರ್ಥಕ್ಕೆ ನಿಂತಾಗ ಪ್ರೇಕ್ಷಕರಿಗೆ ಬೇಸರ ಆಗಿತ್ತು. ಆ ಸಂದರ್ಭದಲ್ಲಿ ಸ್ಪರ್ಧಿಸುತ್ತಿದ್ದ ಎಲ್ಲ 12 ಮಂದಿಗೂ ಆ ನಿರ್ಧಾರ ಶಾಕ್ ನೀಡಿತ್ತು. ಬಹುತೇಕರು ಕಣ್ಣೀರು ಹಾಕುತ್ತ ದೊಡ್ಮನೆಯಿಂದ ಹೊರಬಂದಿದ್ದರು. ಆದರೆ ಅದೇ ಆಟವನ್ನು ಮತ್ತೆ ಆರಂಭಿಸಲು ತೀರ್ಮಾನಿಸಲಾಗಿದೆ ಎಂಬ ಸುದ್ದಿ ಕೆಲವೇ ದಿನಗಳ ಹಿಂದೆ ಹೊರಬಿತ್ತು. ಅದನ್ನು ಎರಡನೇ ಇನ್ನಿಂಗ್ಸ್ ಎಂದು ಕಲರ್ಸ್ ಕನ್ನಡ ವಾಹಿನಿ ಕರೆದಿದೆ. ಈಗ ಆ ಎರಡನೇ ಇನ್ನಿಂಗ್ಸ್ ಆರಂಭಕ್ಕೆ ದಿನಾಂಕ ಕೂಡ ನಿಗದಿ ಆಗಿದೆ. ಇದೇ ಬುಧವಾರದಿಂದ (ಜೂ.23) ಹೊಸ ಎಪಿಸೋಡ್ಗಳು ಪ್ರಸಾರ ಆಗಲಿವೆ.
ಕಲರ್ಸ್ ಕನ್ನಡ ವಾಹಿನಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ಹೊಸ ಪ್ರೋಮೋ ಹಂಚಿಕೊಳ್ಳುವ ಮೂಲಕ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ. ‘ಅರ್ಧಕ್ಕೆ ನಿಂತಿದ್ದ ಕನಸು ಮುಂದುವರಿಯುತ್ತಾ ಅಥವಾ ಹೊಸ ಕನಸು ಶುರು ಆಗತ್ತಾ’ ಎಂದು ಕೌತುಕದ ಪ್ರಶ್ನೆಯನ್ನು ಈ ಪ್ರೋಮೋದಲ್ಲಿ ಕೇಳಲಾಗಿದೆ. ಅಂದರೆ ಈ ಎರಡನೇ ಇನ್ನಿಂಗ್ಸ್ನಲ್ಲಿ ಹಳೇ ಸ್ಪರ್ಧಿಗಳ ಜೊತೆಗೆ ಹೊಸ ಸ್ಪರ್ಧಿಗಳು ಬಂದರೂ ಅಚ್ಚರಿ ಏನಿಲ್ಲ. ಅಲ್ಲದೆ, ಬೇರೆ ಇನ್ನೊಂದಿಷ್ಟು ಹೊಸ ಟ್ವಿಸ್ಟ್ಗಳು ಇರುವುದು ಕೂಡ ಖಂಡಿತ.
ಬಿಗ್ ಬಾಸ್ ಅರ್ಧಕ್ಕೆ ಅಂತ್ಯವಾಗುವಾಗ ಸುದೀಪ್ ಅವರು ಅನಾರೋಗ್ಯದಿಂದ ಆಗಷ್ಟೇ ಚೇತರಿಸಿಕೊಳ್ಳುತ್ತಿದ್ದರು. ಹಾಗಾಗಿ ಆ ಕೊನೇ ಸಂಚಿಕೆಗಳಲ್ಲಿ ಅವರು ಕಾಣಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಬುಧವಾರ ಎರಡನೇ ಇನ್ನಿಂಗ್ಸ್ನ ಮಹಾ ಸಂಚಿಕೆಗೆ ಸಕಲ ತಯಾರಿ ನಡೆದಿದ್ದು, ಅಂದು ಸುದೀಪ್ ಕೂಡ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಇದನ್ನು ಮಹಾ ಸಂಚಿಕೆ ಎಂದು ವಾಹಿನಿ ಕರೆದಿದೆ. ಹಾಗಾಗಿ ಮಸ್ತ್ ಮನರಂಜನೆ ಖಂಡಿತಾ ಇರಲಿದೆ ಎನ್ನಬಹುದು.
ಬಿಗ್ ಬಾಸ್ ಸೆಕೆಂಡ್ ಇನಿಂಗ್ಸ್ | ಮೊದಲ ದಿನದ ಮಹಾಸಂಚಿಕೆ, ಬುಧವಾರ ಸಂಜೆ 6#BBK8 #ಬಿಗ್ಬಾಸ್ಕನ್ನಡ8 #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/Wj8vkaY6MK
— Colors Kannada (@ColorsKannada) June 21, 2021
ಮಂಜು ಪಾವಗಡ, ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್, ಪ್ರಿಯಾಂಕಾ ತಿಮ್ಮೇಶ್, ದಿವ್ಯಾ ಸುರೇಶ್, ಅರವಿಂದ್ ಕೆ.ಪಿ., ದಿವ್ಯಾ ಉರುಡುಗ, ನಿಧಿ ಸುಬ್ಬಯ್ಯ, ಶುಭಾ ಪೂಂಜಾ, ರಘು ಗೌಡ, ವೈಷ್ಣವಿ ಗೌಡ, ಶಮಂತ್ ಬ್ರೋ ಗೌಡ ಈಗಾಗಲೇ ತಮ್ಮ ಸೂಟ್ಕೇಸ್ ಪ್ಯಾಕ್ ಮಾಡಿಕೊಂಡು ಹೋಟೆಲ್ಗಳಲ್ಲಿ ಕ್ವಾರಂಟೈನ್ ಆಗಿದ್ದಾರೆ.
ಇದನ್ನೂ ಓದಿ:
ಬಿಗ್ ಬಾಸ್ ಹೊಸ ಸೀಸನ್ನಲ್ಲಿ ರವಿಚಂದ್ರನ್ ಸಿನಿಮಾ ನಾಯಕಿ? ಕೇಳಿಬರ್ತಿದೆ ಸ್ಟಾರ್ ನಟಿ ಹೆಸರು
ಬಿಗ್ ಬಾಸ್ ಮನೆ ಒಳಗೆ ಹೋಗಲಿದ್ದಾರೆ ಸುಶಾಂತ್ ಸಿಂಗ್ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ?