AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾ ಕಿರಿಕ್​ಗಳಿಗೆ ಕಡಿವಾಣ ಹಾಕಲು ಕೇಂದ್ರದ ಹೊಸ ಪ್ಲ್ಯಾನ್​; ಸೆನ್ಸಾರ್​ಶಿಪ್​ನಲ್ಲಿ ಹೆಚ್ಚಲಿದೆ ಸರ್ಕಾರದ ಹಸ್ತಕ್ಷೇಪ?

ಒಮ್ಮೆ ಸೆನ್ಸಾರ್​ ಪ್ರಮಾಣಪತ್ರ ನೀಡಿದ ಬಳಿಕ ಅದನ್ನು ಮತ್ತೆ ಪ್ರಶ್ನಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇಲ್ಲ. ಆದರೆ ಸಿನಿಮಾಟೋಗ್ರಾಫ್​ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಆ ಅಧಿಕಾರವನ್ನು ಕೇಂದ್ರ ಸರ್ಕಾರ ಪಡೆದುಕೊಳ್ಳಲು ಆಲೋಚಿಸಿದೆ.

ಸಿನಿಮಾ ಕಿರಿಕ್​ಗಳಿಗೆ ಕಡಿವಾಣ ಹಾಕಲು ಕೇಂದ್ರದ ಹೊಸ ಪ್ಲ್ಯಾನ್​; ಸೆನ್ಸಾರ್​ಶಿಪ್​ನಲ್ಲಿ ಹೆಚ್ಚಲಿದೆ ಸರ್ಕಾರದ ಹಸ್ತಕ್ಷೇಪ?
ಸೆನ್ಸಾರ್​ ಬೋರ್ಡ್​​
ಮದನ್​ ಕುಮಾರ್​
|

Updated on: Jun 21, 2021 | 12:52 PM

Share

ಇಂದಿನ ಕಾಲಕ್ಕೆ ತಕ್ಕಂತೆ ಸಿನಿಮಾ ಸೆನ್ಸಾರ್​ಶಿಪ್​ನಲ್ಲಿ ಕೆಲವು ಬದಲಾವಣೆಗಳನ್ನು ತರುವುದು ಅನಿವಾರ್ಯ ಎಂಬ ಅಭಿಪ್ರಾಯ ಆಗಾಗ ಕೇಳಿಬರುತ್ತಲೇ ಇದೆ. ಆ ಸಂಬಂಧ ಸಿನಿಮಾಟೋಗ್ರಾಫ್​ ಕಾಯ್ದೆಗೆ ಕೆಲವು ತಿದ್ದುಪಡಿ ತರಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಈ ಬಗ್ಗೆ ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಲಾಗಿದೆ. ತಿದ್ದುಪಡಿಯ ಕರಡು ಪ್ರತಿಯಲ್ಲಿ ಕೆಲವು ಮುಖ್ಯ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. ಸೆನ್ಸಾರ್​ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪ, ಪ್ರೇಕ್ಷಕರ ವಯಸ್ಸಿಗೆ ಅನುಗುಣವಾಗಿ ಸೆನ್ಸಾರ್​ ಪ್ರಮಾಣಪತ್ರದಲ್ಲಿ ಹೆಚ್ಚಿನ ವರ್ಗೀಕರಣ, ಪೈರಸಿ ತಡಗೆ ಕಠಿಣ ಕ್ರಮ ಮುಂತಾದವು ಇದರಲ್ಲಿ ಪ್ರಮುಖ ಅಂಶಗಳಾಗಿವೆ.

ಸದ್ಯದ ಕಾನೂನಿನ ಪ್ರಕಾರ, ಒಮ್ಮೆ ಸೆನ್ಸಾರ್​ ಮಂಡಳಿ ಸದಸ್ಯರು ಸಿನಿಮಾಗೆ ಸೆನ್ಸಾರ್​ ಪ್ರಮಾಣಪತ್ರ ನೀಡಿದ ಬಳಿಕ ಅದನ್ನು ಮತ್ತೆ ಪ್ರಶ್ನಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇಲ್ಲ. ಆದರೆ ಸಿನಿಮಾಟೋಗ್ರಾಫ್​ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಆ ಅಧಿಕಾರವನ್ನು ಕೇಂದ್ರ ಸರ್ಕಾರ ಪಡೆದುಕೊಳ್ಳಲು ಆಲೋಚಿಸಿದೆ. ಒಮ್ಮೆ ಸೆನ್ಸಾರ್​ ಆದ ಚಿತ್ರವು ರಿಲೀಸ್​ ಆದ ಬಳಿಕ ಜನರಿಂದ ತೀವ್ರ ಆಕ್ಷೇಪಕ್ಕೆ ಗುರಿಯಾದರೆ ಅಂತಹ ಸಿನಿಮಾವನ್ನು ಮತ್ತೊಮ್ಮೆ ಮರು ಸೆನ್ಸಾರ್​ ಮಾಡಲು ಆದೇಶಿಸುವ ಅಧಿಕಾರವನ್ನು ಕೇಂದ್ರ ಸರ್ಕಾರ ಪಡೆದುಕೊಳ್ಳಲಿದೆ.

ಇತ್ತೀಚಿನ ದಿನಗಳಲ್ಲಿ ‘ಪೊಗರು’ ಸಿನಿಮಾ ರಿಲೀಸ್​ ಆದ ಬಳಿಕ ಬ್ರಾಹ್ಮಣ ಸಮುದಾಯದ ಜನರಿಂದ ಭಾರಿ ವಿರೋಧ ಎದುರಿಸಿತ್ತು. ಈ ಹಿಂದೆ ಕೂಡ ಅಂಥ ಘಟನೆಗಳು ನಡೆದ ಅನೇಕ ಉದಾಹರಣೆಗಳಿವೆ. ಈ ರೀತಿ ಸಂದರ್ಭಗಳನ್ನು ನಿಭಾಯಿಸಲು ಕೇಂದ್ರ ಸರ್ಕಾರ ಹೊಸ ತಿದ್ದುಪಡಿಯ ಮೂಲಕ ಮಾರ್ಗಗಳನ್ನು ಕಂಡುಕೊಳ್ಳಲು ಉದ್ದೇಶಿಸಿದೆ.

ಇಷ್ಟು ದಿನ ಯು, ಯು/ಎ ಮತ್ತು ಎ ಪ್ರಮಾಣಪತ್ರಗಳನ್ನು ನೀಡಲಾಗುತ್ತಿತ್ತು. ಯು ಎಂದರೆ ಸಾರ್ವತ್ರಿಕವಾಗಿ ಎಲ್ಲರೂ ವೀಕ್ಷಿಸಬಹುದು. ಯು/ಎ ಎಂದರೆ ಮಕ್ಕಳ ವೀಕ್ಷಣೆಗೆ ಪಾಲಕರ ಸಲಹೆ ಅಗತ್ಯ, ಎ ಎಂದರೆ ವಯಸ್ಕರು ಮಾತ್ರ ವೀಕ್ಷಿಸಬಹುದಾದ ಸಿನಿಮಾ. ಇದರ ಜೊತೆಗೆ ಈಗ ವೀಕ್ಷಕರ ವಯಸ್ಸಿನ ಆಧಾರದ ಮೇಲೆ ಇನ್ನಷ್ಟು ವರ್ಗೀಕರಣ ಮಾಡಲು ತೀರ್ಮಾನಿಸಲಾಗಿದೆ.

ಯು/ಎ7+ (7 ವರ್ಷ ಮೇಲ್ಪಟ್ಟವರು ವೀಕ್ಷಿಸಬಹುದು), ಯು/ಎ13+ (13 ವರ್ಷ ಮೇಲ್ಪಟ್ಟವರು ವೀಕ್ಷಿಸಬಹುದು) ಹಾಗೂ ಯು/ಎ16+ (16 ವರ್ಷ ಮೇಲ್ಪಟ್ಟವರು ವೀಕ್ಷಿಸಬಹುದು) ಎಂಬ ವರ್ಗೀಕರಣವನ್ನು ಸೇರಿಸಲು ನಿರ್ಧರಿಸಲಾಗಿದೆ. ಈ ಎಲ್ಲ ವರ್ಗೀಕರಣಗಳನ್ನು ಓಟಿಟಿ ಸಿನಿಮಾ ಮತ್ತು ವೆಬ್​ ಸಿರೀಸ್​ಗಳಿಗೂ ಅನ್ವಯಿಸಲು ಚಿಂತಿಸಲಾಗಿದೆ.

ಪೈರಸಿ ತಡೆಗೆ ಹೆಚ್ಚು ಕಠಿಣ ಕ್ರಮಗಳನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ. ಪೈರಸಿ ಮಾಡುವವರಿಗೆ ಮೂರು ವರ್ಷ ಜೈಲು ಶಿಕ್ಷೆ ಮತ್ತು ಮೂರು ಲಕ್ಷಕ್ಕೂ ಅಧಿಕ ದಂಡ ವಿಧಿಸುವ ಬಗ್ಗೆ ಸಿನಿಮಾಟೋಗ್ರಾಫ್​ ಕಾಯ್ದೆಯಲ್ಲಿ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಜುಲೈ 2ರವರೆಗೂ ಈ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಲಾಗುತ್ತದೆ.

ಇದನ್ನೂ ಓದಿ:

Roberrt: ‘ರಾಬರ್ಟ್​’ ಚಿತ್ರಕ್ಕೆ U/A ಪ್ರಮಾಣಪತ್ರ! ‘ಪೊಗರು’ ಕಿರಿಕ್​ ನಂತರ ದರ್ಶನ್​ ಚಿತ್ರದಲ್ಲಿ ಸೆನ್ಸಾರ್​ ಮಂಡಳಿ ಕಣ್ಣಿಟ್ಟ ಅಂಶಗಳೇನು?

ಪೊಗರು ಸುದ್ದಿಗೋಷ್ಠಿ; ನಮ್ಮಿಂದಾದ ತಪ್ಪು ಸರಿಪಡಿಸಿಕೊಂಡಿದ್ದೇವೆ, ಕತ್ತರಿ ಹಾಕಿದ ನಂತರ ಚಿತ್ರದ ಅವಧಿ 8 ನಿಮಿಷ ಕಡಿಮೆಯಾಗಿದೆ

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?
ಬೆಂಗಳೂರಿನಲ್ಲಿ ಭಾರಿ ಮಳೆ, ಕೆಆರ್ ಮಾರುಕಟ್ಟೆಯಲ್ಲಿ ಭಾರಿ ಅವಾಂತರ
ಬೆಂಗಳೂರಿನಲ್ಲಿ ಭಾರಿ ಮಳೆ, ಕೆಆರ್ ಮಾರುಕಟ್ಟೆಯಲ್ಲಿ ಭಾರಿ ಅವಾಂತರ
ಮಳೆಗೆ ಕೆಸರು ಗದ್ದೆಯಂತಾದ ಶಿಡ್ಲಘಟ್ಟದ ರಸ್ತೆ: ಜನರ ಪರದಾಟ
ಮಳೆಗೆ ಕೆಸರು ಗದ್ದೆಯಂತಾದ ಶಿಡ್ಲಘಟ್ಟದ ರಸ್ತೆ: ಜನರ ಪರದಾಟ
ಲಷ್ಕರ್ ಟಾಪ್ ಕಮಾಂಡರ್ ಫೌಜಿ ಮೂಸಾ ಎನ್‌ಕೌಂಟರ್‌ನಲ್ಲಿ ಹತ
ಲಷ್ಕರ್ ಟಾಪ್ ಕಮಾಂಡರ್ ಫೌಜಿ ಮೂಸಾ ಎನ್‌ಕೌಂಟರ್‌ನಲ್ಲಿ ಹತ