- TV9 Kannada Photo gallery Cricket photos ndia vs Sri Lanka: Chandimal Out of 2nd Test After Concussion Rule, SL Under Pressure
IND vs SL: ಮೊದಲ ಟೆಸ್ಟ್ ಸೋತ ಶ್ರೀಲಂಕಾಕ್ಕೆ ಮತ್ತೊಂದು ಆಘಾತ
India vs Sri Lanka Test: ಭಾರತದ ವಿರುದ್ಧದ ಮೊದಲ ಟೆಸ್ಟ್ ಸೋತ ಶ್ರೀಲಂಕಾ, 2ನೇ ಪಂದ್ಯ ಗೆಲ್ಲಲು ಭಾರೀ ಒತ್ತಡದಲ್ಲಿದೆ. ಈ ಮಧ್ಯೆ, ಸ್ಟಾರ್ ಬ್ಯಾಟ್ಸ್‌ಮನ್ ದಿನೇಶ್ ಚಾಂಡಿಮಲ್ ತಲೆಗೆ ಗಾಯಗೊಂಡಿದ್ದರಿಂದ ಐಸಿಸಿ ಕನ್ಕಷನ್ ನಿಯಮದ ಪ್ರಕಾರ 2ನೇ ಟೆಸ್ಟ್‌ನಿಂದ ಹೊರಬಿದ್ದಿದ್ದಾರೆ. ಇದು ಲಂಕಾ ತಂಡಕ್ಕೆ ದೊಡ್ಡ ಆಘಾತ ನೀಡಿದ್ದು, ಸರಣಿ ಉಳಿಸಿಕೊಳ್ಳುವ ಅವರ ಆಸೆಗೆ ಹಿನ್ನಡೆಯಾಗಿದೆ.
Updated on: Aug 19, 2026 | 7:12 PM

ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆತಿಥೇಯ ಶ್ರೀಲಂಕಾವನ್ನು ಏಕಪಕ್ಷೀಯವಾಗಿ ಬರೋಬ್ಬರಿ 165 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿತು. ತವರಿನಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಹೀನಾಯವಾಗಿ ಸೋತಿರುವ ಶ್ರೀಲಂಕಾಕ್ಕೆ ಈಗ ಸರಣಿಯನ್ನು ಕಳೆದುಕೊಳ್ಳುವ ಅಪಾಯ ಎದುರಾಗಿದೆ(PC-PTI).

ಇಂತಹ ಪರಿಸ್ಥಿತಿಯಲ್ಲಿ ಶ್ರೀಲಂಕಾ ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ತಂಡ ಗೆಲ್ಲಬೇಕೆಂದರೆ ತಂಡದಲ್ಲಿರುವ ಅನುಭವಿ ಬ್ಯಾಟ್ಸ್ಮನ್ಗಳು ತಮ್ಮ ಲಯಕ್ಕೆ ಮರಳಬೇಕಿದೆ. ಈ ನಡುವೆ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದ್ದು ಸ್ಟಾರ್ ಬ್ಯಾಟ್ಸ್‌ಮನ್ ದಿನೇಶ್ ಚಾಂಡಿಮಲ್ ಎರಡನೇ ಟೆಸ್ಟ್‌ನಿಂದ ಹೊರಬೀಳುವ ಸಾಧ್ಯತೆ ಇದೆ(PC-PTI).

ಕ್ರಿಕ್ಇನ್ಫೋ ವರದಿಯ ಪ್ರಕಾರ, ಅನುಭವಿ ಬ್ಯಾಟ್ಸ್‌ಮನ್ ದಿನೇಶ್ ಚಾಂಡಿಮಲ್ ಎರಡನೇ ಟೆಸ್ಟ್‌ನಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಗಾಲೆ ಟೆಸ್ಟ್‌ನಲ್ಲಿ ಭಾರತದ ಎರಡನೇ ಇನ್ನಿಂಗ್ಸ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ಚಾಂಡಿಮಲ್ ಗಾಯಗೊಂಡರು. ಇದರಿಂದಾಗಿಅವರು ಆಸ್ಪತ್ರೆಗೆ ದಾಖಲಾಗಬೇಕಾಯಿತು(PC-PTI).

ಹೀಗಾಗಿ ನಾಲ್ಕನೇ ದಿನದಾಟದಂದು ಚಾಂಡಿಮಲ್ ಬದಲಿಗೆ ಪಸಿಂದು ಸೂರ್ಯಬಂಢಾರ ಅವರನ್ನು ಬದಲಿ ಆಟಗಾರನಾಗಿ ತಂಡದಲ್ಲಿ ಆಡಿಸಲಾಯಿತು. ಇದರರ್ಥ ಚಾಂಡಿಮಲ್ ಗಾಯದಿಂದ ಚೇತರಿಸಿಕೊಂಡಿದ್ದರೂ ಆಗಸ್ಟ್ 23 ರಂದು ಪ್ರಾರಂಭವಾಗುವ ಎರಡನೇ ಟೆಸ್ಟ್‌ನಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಇದಕ್ಕೆ ಕಾರಣ ಐಸಿಸಿ ನಿಯಮ(PC-PTI).

ಪಂದ್ಯದ ವೇಳೆ ತಲೆಗೆ ಪೆಟ್ಟು ಬಿದ್ದ ಕಾರಣ ಬದಲಾಯಿಸಲ್ಪಟ್ಟ ಆಟಗಾರ ಮುಂದಿನ ಏಳು ದಿನ ಆಡುವಂತಿಲ್ಲ ಎಂದು ಐಸಿಸಿ ನಿಯಮವಿದೆ.. ಆಗಸ್ಟ್ 18 ರಂದು ಚಾಂಡಿಮಲ್ ಗಾಯಗೊಂಡು ಪಂದ್ಯದಿಂದ ಹೊರಬಿದ್ದರು. ಪರಿಣಾಮವಾಗಿ, ಮುಂದಿನ ಪಂದ್ಯವು ಏಳು ದಿನಗಳ ಮೊದಲು ಆರಂಭವಾಗಲಿದ್ದು, ಚಾಂಡಿಮಲ್ ಆಡಲು ಸಾಧ್ಯವಾಗುವುದಿಲ್ಲ(PC-PTI).




