AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿತ್ಯ ಭವಿಷ್ಯ : ಇಂದು ಈ ರಾಶಿಯವರ ಮೇಲೆ ಹೆಚ್ಚಿನವ ಕಣ್ಣು ಇರುವುದು…

ಈ ನಿತ್ಯ ಭವಿಷ್ಯವು ಸೆಪ್ಟೆಂಬರ್ 29, 2026 ರಂದು 12 ರಾಶಿಗಳ ದಿನದ ಭವಿಷ್ಯವನ್ನು ನೀಡುತ್ತದೆ. ಮೇಷದಿಂದ ಮೀನದವರೆಗೆ, ಪ್ರತಿಯೊಂದು ರಾಶಿಗೂ ಆರ್ಥಿಕ, ವೃತ್ತಿ, ವೈಯಕ್ತಿಕ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಪ್ರಮುಖ ಒಳನೋಟಗಳನ್ನು ಇಲ್ಲಿ ಪಡೆಯಿರಿ. ನಿಮ್ಮ ದಿನವನ್ನು ಯೋಜಿಸಲು, ಶುಭ-ಅಶುಭ ಕಾಲಗಳನ್ನು ತಿಳಿಯಲು ಮತ್ತು ಸವಾಲುಗಳನ್ನು ಎದುರಿಸಲು ಇದು ನಿಮಗೆ ಸಹಾಯ ಮಾಡುತ್ತದೆ. ಇಂದಿನ ಗ್ರಹಗಳ ಚಲನೆಯ ಆಧಾರದ ಮೇಲೆ ನಿಮ್ಮ ದಿನ ಹೇಗಿರಲಿದೆ ಎಂದು ತಿಳಿಯಿರಿ.

ನಿತ್ಯ ಭವಿಷ್ಯ : ಇಂದು ಈ ರಾಶಿಯವರ ಮೇಲೆ ಹೆಚ್ಚಿನವ ಕಣ್ಣು ಇರುವುದು...
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on:Sep 29, 2026 | 3:48 AM

Share

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಭಾದ್ರಪದ ಮಾಸದ ಕೃಷ್ಣ ಪಕ್ಷದ ತೃತೀಯಾ ತಿಥಿಯ ಮಂಗಳವಾರದಂದು ಅಧಿಕಾರ ಪ್ರತಿಷ್ಠಾಪನೆ, ಪರರೊಂದಿಗೆ ತುಲನೆ, ದುಷ್ಟರಿಂದ ಭಯ, ಬಾಯಿ ಚಪಲ, ಬಡ್ಡಿ ವ್ಯವಹಾರ, ಧೈರ್ಯದ ಕೊರತೆ, ಸ್ನೇಹ ಸಂಧಾನ ವಿಫಲ ಎಲ್ಲವೂ ಈ ದಿನದ ವಿಶೇಷ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಭಾದ್ರಪದ, ಸೌರ ಮಾಸ : ಕನ್ಯಾ, ಮಹಾನಕ್ಷತ್ರ : ಹಸ್ತ, ವಾರ : ಸೋಮ, ಪಕ್ಷ : ಕೃಷ್ಣ, ತಿಥಿ : ತೃತೀಯಾ, ನಿತ್ಯನಕ್ಷತ್ರ : ಭರಣೀ, ಯೋಗ : ವ್ಯಾಘಾತ, ಕರಣ : ಭದ್ರ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 09 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:10 – 16:40, ಯಮಗಂಡ ಕಾಲ 09:10 – 10:40, ಗುಳಿಕ ಕಾಲ 12:10 – 03:40

ಮೇಷ ರಾಶಿ : ಸ್ವಂತ ಉದ್ಯಮವನ್ನು ನಡೆಸುತ್ತಿದ್ದರೆ ಇಂದು ನಿಮಗೆ ಒಳ್ಳೆಯ ಲಾಭದ ನಿರೀಕ್ಷೆಯನ್ನು ಮಾಡಬಹುದು. ಸಾರ್ವಜನಿಕ ವಲಯದಲ್ಲಿ ನೀವು ಗುರುತಿಸಿಕೊಳ್ಳಲು ಬಯಸುವಿರಿ. ರಪ್ತು ವ್ಯವಹಾರವನ್ನು ಇಂದು ಸುಗಮವಾಗಿ ನಡೆಸುವಿರಿ. ಸ್ತ್ರೀಯ ಕಾರಣದಿಂದ ನಿಮಗೆ ಲಾಭಗಳು ಆಗಲಿದೆ. ವಾಹನ ಖರೀದಿಗೆ ಬೇಕಾದ ವ್ಯವಸ್ಥೆಯನ್ನು ಇಂದು ಮಾಡಿಕೊಳ್ಳಲಿದ್ದೀರಿ. ಮಾತಿನಂತೆ ಕೃತಿಯೂ ಇರಬೇಕಾಗುವುದು. ಯಾರ ಮಾತನ್ನೂ ಆಲಿಸುವ ವ್ಯವಧಾನ ಇಂದು ಇರದು. ಹಿರಿಯರ ಪ್ರೀತಿಗೆ ಪಾತ್ರರಾಗುವಿರಿ.

ವೃಷಭ ರಾಶಿ : ಆರ್ಥಿಕವಾಗಿ ಯಾವುದೇ ಪ್ರಮುಖ ಸಮಸ್ಯೆಗಳಿಲ್ಲ, ಆದರೆ ನಿರ್ಲಕ್ಷಿಸಬಹುದಾದ ವಿಷಯಗಳು ನಿಮ್ಮ ಮನಸ್ಸನ್ನು ತುಂಬಿಕೊಳ್ಳುತ್ತವೆ. ಶತ್ರುಗಳ ಬಾಧೆಯು ನಿಮಗೆ ಚಿಂತೆಯನ್ನು ಉಂಟುಮಾಡೀತು. ನಿಮ್ಮಷ್ಟಕ್ಕೆ ನೀವಿರಲು ಬಯಸುವಿರಿ. ಹಿಂದಿನಿಂದ ಮಾತನಾಡಿಕೊಳ್ಳುವರಿಗೆ ನೆಲೆಯನ್ನು ಕೊಡುವುದು ಬೇಡ. ಸಿಗದೇ ದುಃಖಿಸಬೇಕಾದೀತು. ಎಲ್ಲದಕ್ಕೂ ದೈವವನ್ನು ದೂರುತ್ತ ಆಲಸ್ಯದಿಂದ ಇರುವುದು ಬೇಡ.‌ ಬಂಧುಗಳ ವಿಚಾರದಲ್ಲಿ ನಿಮಗೆ ಪೂರ್ಣವಾದ ನಂಬಿಕೆ ಇರದು.

ಮಿಥುನ ರಾಶಿ : ಸರ್ಕಾರದ ಅಧಿಕಾರಿಗಳಿಂದ ತೊಂದರೆಯಾಗುವ ಸಾಧ್ಯತೆ ಇದೆ. ಭಾವನೆಗಳಿಂದ ಯಾರನ್ನೂ ಸುಲಭವಾಗಿ ಬಗ್ಗಿಸಲಾಗದು. ಹಣಕಾಸಿನ ವಿಚಾರದಲ್ಲಿ ನಿಮಗೆ ಸಂಕಷ್ಟವು ಬರಬಹುದು. ಹಣಕಾಸಿಗೆ ಸಂಬಂಧಿಸಿದಂತೆ ಕೆಲವರನ್ನು ದೂರಮಾಡಿಕೊಳ್ಳುವಿರಿ. ಖಾಸಗಿಯ ಸಮಾರಂಭದಲ್ಲಿ ಭಾಗವಹಿಸುವಿರಿ. ವ್ಯಾವಹಾರಿಕವಾಗಿ ಮೋಸ ಹೋಗುವ ಸಾಧ್ಯತೆ ಇದೆ. ನಿಮಗೆ ಒತ್ತಡದ ಕೆಲಸವು ಬಂದು ಮನೆಯ ಕೆಲಸವು ಮರೆಯಾಗಬಹುದು. ನಿಮ್ಮ ಬಗ್ಗೆ ಪ್ರಶಂಸೆಯ ಮಾತುಗಳನ್ನು ನೀವು ಕೇಳಲು ಸಂಕೋಚಪಡುವಿರಿ.

ಕರ್ಕಾಟಕ ರಾಶಿ : ಸಂಕೀರ್ಣವಾದ ಜೀವನವನ್ನು ಆಶಾವಾದದಿಂದ ಸರಳವಾಗಬಹುದು. ಅಗತ್ಯವಿದ್ದಾಗ ಮಾತ್ರ ಮಾತನಾಡಿ, ಅನಗತ್ಯ ಒತ್ತಡದಿಂದ ಕುಗ್ಗಿ ಹೋಗುವಿರಿ. ಭೂಮಿಯ ವ್ಯವಹಾರವನ್ನು ಮಾಡಲು ಬಹಳ ಉತ್ಸಾವಿರಲಿದ್ದು ಪಾಲುದಾರಿಕೆಯಲ್ಲಿ ಇನ್ನೊಬ್ಬರ ಜೊತೆ ಸೇರಿ ಮಾಡುವಿರಿ. ನೀವು ಶುಭವಾರ್ತೆಯ ನಿರೀಕ್ಷೆಯಲ್ಲಿ ಇರುವಿರಿ. ಮಕ್ಕಳ ಭವಿಷ್ಯವನ್ನು ನಿರೂಪಿಸಲು ನಿಮಗೆ ಒದ್ದಾಟವಾಗಬಹುದು. ನಿಮ್ಮ ಜೊತೆ ಉದ್ಯೋಗದ ವೃದ್ಧಿಗೆ ಸಂಬಂಧಿಸಿದ ಮಾತುಕತೆಗಳು ನಡೆಯುವುದು.

ಸಿಂಹ ರಾಶಿ : ಕೆಲಸದಲ್ಲಿ ಒತ್ತಡ ಹೆಚ್ಚಾಗಬಹುದು. ಒಪ್ಪಿಕೊಂಡ ಕೆಲಸದಿಂದ‌ ನಿಮಗೆ ಕಿರಿಕಿರಿಯಾದೀತು. ನಿಮಗೆ ಖಾಸಗಿ ಸಂಸ್ಥೆಯೊಂದನ್ನು ಮುನ್ನಡೆಸುವ ಜವಾಬ್ದಾರಿಯು ಸಿಗಬಹುದು. ಇನ್ನೊಬ್ಬರ ನೋವಿಗೆ ಸ್ಪಂದಿಸುವುದು ನಿಮಗೆ ಆಗದು. ನೀವು ತೆಗೆದುಕೊಂಡ ತೀರ್ಮಾನವನ್ನು ಇತರರು ಬದಲಿಸಿದ್ದು ನಿಮ್ಮ ಕೋಪಕ್ಕೆ ಕಾರಣವಾಗಲಿದೆ. ಖಾಸಗಿಯ ಸಮಯವನ್ನು ಯಾರಿಗೂ ಕೊಡುವುದು ಬೇಡ. ನಿಮ್ಮ ಬಗ್ಗೆ ಅಧಿಕರ ದುರುಪಯೋಗದ ಆರೋಪವು ಬರಬಹುದು.

ಕನ್ಯಾ ರಾಶಿ : ನಿಮ್ಮ ಸಂಗಾತಿಯ ಜೊತೆ ನಿಮ್ಮ ಆಂತರಿಕ ಆಲೋಚನೆಗಳನ್ನು ಹಂಚುವಿರಿ. ಭಾವೀ ಸಂಗಾತಿಯ ಜೊತೆ ಸುತ್ತಾಡಿ ಅರ್ಥಮಾಡಿಕೊಳ್ಳುವಿರಿ. ಭೂಮಿಯ ವಿಚಾರದಲ್ಲಿ ನಿಮಗೆ ನಷ್ಟವಾಗಬಹುದು. ಮನಸ್ಸಿನ ನಿಯಂತ್ರಣವನ್ನು ಸಾಧಿಸುವ ಅವಶ್ಯಕತೆ ಇದೆ. ಮಕ್ಕಳು ಹಣದ ದುರುಪಯೋಗ ಮಾಡುವ ಸಾಧ್ಯತೆ ಇದೆ. ಇಂದು ನಿಮ್ಮ ಜೀವನಕ್ಕೆ ಸಂಬಂಧಿಸಿದ ಕೆಲವು ನಿರ್ಧಾರವನ್ನು ತೆಗೆದುಕೊಳ್ಳಬೇಕಾದೀತು. ಹೇಳಿಕೊಳ್ಳುವಷ್ಟು ಸುಲಭವಾಗಿ ಯಾವುದನ್ನೂ ಬದಲಿಸಲಾಗದು.

ತುಲಾ ರಾಶಿ : ವ್ಯವಸ್ಥೆಯ ಮುಖ್ಯಸ್ಥರಾದವರಿಗೆ ಜವಾಬ್ದಾರಿಯನ್ನು ಮುನ್ನಡೆಸುವುದು ಕಷ್ಟವಾಗುವುದು. ನಿಮ್ಮ ವಿರೋಧಿಗಳು ಹೆಚ್ಚಾಗುವ ಸಾಧ್ಯತೆ ಇದೆ. ಇಂದು ನಿಮಗೆ ಒತ್ತಡವನ್ನು ನಿಭಾಯಿಸುವುದು ಕಷ್ಟವಸಲಾದೀತು. ಕಷ್ಟದಲ್ಲಿ ಇರುವವರಿಗೆ ಕರುಣೆ ತೋರಿಸುವಿರಿ. ನಿಮಗೆ ಇಷ್ಟವಾಗದ ವ್ಯವಹಾರವು ನಿಮ್ಮ ಬಳಿಗೆ ಬರುತ್ತಲೇ ಇರುವುದು. ಅನಾರೋಗ್ಯವು ತುರ್ತು ಚಿಕಿತ್ಸೆ ಮಾಡುವತನಕ ಕರೆದುಕೊಂಡು ಹೋಗುವುದು. ಭೂಮಿಯ ವಿಚಾರದಲ್ಲಿ ನಷ್ಟವಾಗಿ ತೊಂದರೆ ಪಡುವಿರಿ.

ವೃಶ್ಚಿಕ ರಾಶಿ : ನೀವು ಹೂಡಿಕೆದಾರರಾಗಿದ್ದರೆ, ನಿಮ್ಮ ಹೂಡಿಕೆಯಿಂದ ಗಮನಾರ್ಹ ಲಾಭವಿದೆ. ದೀರ್ಘಕಾಲದಿಂದ ಉಳಿದಿರುವ ಸಾಲಗಳು ಕೂಡಾ ಮುಕ್ತಾಯವಾಗುವುದು. ಇಂದು ಯಾರನ್ನು ಒಲಿಸಿಕೊಳ್ಳುವುದೂ ನಿಮಗೆ ಸುಲಭವಲ್ಲ. ರಾಜಕಾರಣಿಗಳಿಗೆ ಹೆಚ್ಚಿನ ಬೆಂಬಲವು ಸಿಗಲಿದ್ದು ಜನರ ಕಾರ್ಯವನ್ನು ಮಾಡಲು ಇಚ್ಛೆಪಡುವಿರಿ. ಸ್ನೇಹಿತರ ಸಲಹೆಗಳು ನಿಮ್ಮ ಉದ್ಯಮಕ್ಕೆ ಸಹಕಾರಿಯಲಿದೆ. ಸಮಾಲೋಚನೆಯಿಂದ ಬಗೆಹರಿಯುವುದನ್ನು ಸರಿಮಾಡಿಕೊಳ್ಳಿ. ವಿದ್ಯಾಭ್ಯಾಸವನ್ನು ಹೆಚ್ಚು ಮಾಡಬೇಕಾಗಿ ಬರಬಹುದು.

ಧನು ರಾಶಿ : ನೀವು ಸಂಪೂರ್ಣ ಜೀವಂತಿಕೆಯ ಭಾವನೆ ಹೊಂದಿದ್ದು, ಅತ್ಯಂತ ಉತ್ಸಾಹದಲ್ಲಿರುವುದರಿಂದ ಅದು ಅರ್ಥವಿಲ್ಲದ ಚಟುವಟಿಕೆಗಳು ಅಥವಾ ಕೆಲಸಗಳಾದರೂ ನೀವು ತಲೆ ಕೆಡಿಸಿಕೊಳ್ಳುವುದಿಲ್ಲ. ಅಧಿಕ ಕೃಷಿ ಉತ್ಪನ್ನದಿಂದ ಸಾರ್ಥಕತೆ ಬರಲಿದೆ. ಸಜ್ಜನರ ಸಹವಾಸವನ್ನು ಇಷ್ಟಪಡುವಿರಿ. ಸಂಗಾತಿಯ ಮಾತುಗಳನ್ನು ವಿರೋಧಿಸುವಿರಿ. ಇನ್ನೊಬ್ಬರಿಗೆ ಚುಚ್ಚಿ ಮಾತನಾಡಲಿದ್ದೀರಿ. ಸುಲಭವಾಗಿ ಸಿಗುವುದನ್ನು ಬಿಟ್ಟುಕೊಡುವಿರಿ. ನಿಮ್ಮ ಪ್ರಯಾಣದಿಂದ ಇಂದು ತುಂಬಾ ಪ್ರಯೋಜನ ಆಗದು.

ಮಕರ ರಾಶಿ : ನೀವು ಹಳೆಯ ನೆನಪುಗಳ ಮನಸ್ಥಿತಿಯಲ್ಲಿರುತ್ತೀರಿ. ಬೌದ್ಧಿಕ ಅನ್ವೇಷಣೆಗಳು ನಿಮ್ಮನ್ನು ಆಕರ್ಷಿಸುತ್ತವೆ. ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳಿ. ಭೂಮಿಯ ಕ್ರಯ ಮತ್ತು ವಿಕ್ರಯದಲ್ಲಿ ನಷ್ಟವನ್ನು ಅನುಭವಿಸಬೇಕಾಗಬಹುದು. ನಕಾರಾತ್ಮಕ ಶಕ್ತಿಗಳಿಗೆ ಬೆಂಬಲವನ್ನು ನೀಡುವಿರಿ. ಅತಿಯಾದ ಕೆಲಸದ ಕಾರಣ ನಿಮಗಾದ ಮಾನಸಿಕ‌ ಒತ್ತಡಕ್ಕೆ ವಿಶ್ರಾಂತಿ ಅವಶ್ಯಕವಾದೀತು. ಎಲ್ಲ ಜವಾಬ್ದಾರಿಗಳೂ ನಿಮಗೆ ಬೇಕು ಎಂಬ ದುರಾಸೆ ಬೇಡ.

ಕುಂಭ ರಾಶಿ : ವಿಷಯ ಎಷ್ಟೇ ದೊಡ್ಡದಾಗಿದ್ದರೂ, ನಿಮ್ಮ ಸಾಮರ್ಥ್ಯ, ನಿಮ್ಮ ವ್ಯವಹಾರ ಕುಶಲತೆ ನಿಮ್ಮನ್ನು ಮುನ್ನಡೆಸುತ್ತದೆ. ಗಮನ ಕೇಂದ್ರೀಕರಿಸಿ ಹಾಗೂ ಎಚ್ಚರದಿಂದಿರಿ. ಶಾಂತವಾಗಿ ಹಾಗೂ ಸೂಕ್ಷ್ಮವಾಗಿ ವ್ಯವಹರಿಸಿ. ಆಹಾರದ ಮಾರಾಟಗಾರರಿಗೆ ಲಾಭ ಹೆಚ್ಚು. ಆಲಂಕಾರಿಕ ವಸ್ತುಗಳ ಬಗ್ಗೆ ಹೆಚ್ಚು ಮೋಹವಿರುವುದು. ಹೂಡಿಕೆಯಲ್ಲಿ ಜಾಗರೂಕತೆ ಇರಲಿ. ಇಂದಿನ ಆದಾಯವು ಮಧ್ಯಮಕ್ಕಿಂತ ಚೆನ್ನಾಗಿ ಇರುವುದು. ಚಂಚಲ ಮನಸ್ಸು ಸಹಜವಾದುದನ್ನು ಗುರುತಿಸಲಾರದು.

ಮೀನ ರಾಶಿ : ಬದ್ಧತೆಗಳನ್ನು ಭವಿಷ್ಯಕ್ಕೆ ಭದ್ರತೆಯಾಗಿ ಕಾಣುತ್ತೀರಿ. ಸೌಲಭ್ಯಗಳನ್ನು ನೀವು ಪಡೆದುಕೊಳ್ಳಲಿದ್ದೀರಿ. ಗೌರವಗಳು ನಿಮಗೆ ಸಿಗಬಹುದು. ಕೆಲವು ವಿಚಾರವು ನಿಮಗೆ ಗೊತ್ತಾಗದೇ ಇರುವುದು ಬೇಸರ ತರಿಸಬಹುದು. ಉಚಿತವಾಗಿ ಸಿಗುವುದನ್ನು ಅಪೇಕ್ಷಿಸುವಿರಿ. ಸ್ತ್ರೀಯರಿಗೆ ಕೆಲವು ಲಾಭಗಳು ಆಗಬಹುದು. ನಿಮ್ಮ ನೇರ ನುಡಿಗಳೇ ಇಂದು ನಿಮಗೆ ತೊಂದರೆ ತರುವುದು. ಇಂದು ನಿಮ್ಮ ತಲೆಯಲ್ಲಿ ಅಪೂರ್ಣ ಕಾರ್ಯಗಳೇ ತುಂಬಿರುವುದು.

– ಲೋಹಿತ್ ಹೆಬ್ಬಾರ್ – 8762924271 (what’s app only)

Published On - 3:47 am, Tue, 29 September 26

Follow Us
ಲೋಹಿತ ಹೆಬ್ಬಾರ್​, ಇಡುವಾಣಿ
ಲೋಹಿತ ಹೆಬ್ಬಾರ್​, ಇಡುವಾಣಿ

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More