AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡೇಕೇರ್ ಸೆಂಟರ್‌ಗೆ ನುಗ್ಗಿ ಮಕ್ಕಳ ಮೇಲೆ ಗುಂಡು ಹಾರಿಸುತ್ತೇನೆ: ಎಐ ಚಾಟ್‌ಬಾಟ್ ಕ್ಲೌಡ್‌ಗೆ ಬೆದರಿಕೆ ಹಾಕಿದ್ದ ಆಸ್ಟ್ರೇಲಿಯಾದ ವ್ಯಕ್ತಿ ಅರೆಸ್ಟ್

ಎಐ ಚಾಟ್‌ಬಾಟ್ 'ಕ್ಲೌಡ್' ಮೂಲಕ ಡೇಕೇರ್ ಮೇಲೆ ಗುಂಡು ಹಾರಿಸುವ ಬೆದರಿಕೆ ಹಾಕಿದ್ದ ಆಸ್ಟ್ರೇಲಿಯಾದ ವ್ಯಕ್ತಿಯನ್ನು ಇಂಟರ್‌ಪೋಲ್ ಸುಳಿವಿನ ಆಧಾರದ ಮೇಲೆ ಬಂಧಿಸಲಾಗಿದೆ. ಈ ಘಟನೆ ಎಐ ಕಂಪನಿಗಳು ಬಳಕೆದಾರರ ಸಂಭಾಷಣೆಗಳನ್ನು ಹೇಗೆ ನಿಗಾ ವಹಿಸುತ್ತವೆ ಮತ್ತು ಸುರಕ್ಷತಾ ನಿಯಮಗಳನ್ನು ಹೇಗೆ ಅನ್ವಯಿಸುತ್ತವೆ ಎಂಬ ಬಗ್ಗೆ ಚರ್ಚೆಗೆ ಕಾರಣವಾಗಿದೆ. ನ್ಯಾಯಾಲಯ ಜಾಮೀನು ನಿರಾಕರಿಸಿ, ಮಾನಸಿಕ ಆರೋಗ್ಯ ತಪಾಸಣೆಗೆ ಆದೇಶಿಸಿದೆ.

ಡೇಕೇರ್ ಸೆಂಟರ್‌ಗೆ ನುಗ್ಗಿ ಮಕ್ಕಳ ಮೇಲೆ ಗುಂಡು ಹಾರಿಸುತ್ತೇನೆ: ಎಐ ಚಾಟ್‌ಬಾಟ್ ಕ್ಲೌಡ್‌ಗೆ ಬೆದರಿಕೆ ಹಾಕಿದ್ದ ಆಸ್ಟ್ರೇಲಿಯಾದ ವ್ಯಕ್ತಿ ಅರೆಸ್ಟ್
ಬಂಧನ
ನಯನಾ ರಾಜೀವ್
|

Updated on: Oct 23, 2026 | 12:15 PM

Share

ಸಿಡ್ನಿ, ಅಕ್ಟೋಬರ್ 23: ಆಂಥ್ರೊಪಿಕ್ ಕಂಪನಿಯ ಜನಪ್ರಿಯ ಕೃತಕ ಬುದ್ಧಿಮತ್ತೆ (AI) ಚಾಟ್‌ಬಾಟ್ ‘ಕ್ಲೌಡ್’ ಜೊತೆಗಿನ ಧ್ವನಿ ಸಂಭಾಷಣೆಯಲ್ಲಿ, ಮಕ್ಕಳ ಆರೈಕೆ ಕೇಂದ್ರದ ಮೇಲೆ ಸಾಮೂಹಿಕ ಗುಂಡಿನ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದ 29 ವರ್ಷದ ಡೇವಿಡ್ ಲ್ಯಾನ್ ಠಾಕ್ರೆ ಎಂಬಾತನನ್ನು ಆಸ್ಟ್ರೇಲಿಯಾ ಪೊಲೀಸರು ಬಂಧಿಸಿದ್ದಾರೆ. ಜಾಗತಿಕ ತನಿಖಾ ಸಂಸ್ಥೆ ಇಂಟರ್‌ಪೋಲ್ ನೀಡಿದ ಮಹತ್ವದ ಸುಳಿವಿನ ಆಧಾರದ ಮೇಲೆ ಸಿಡ್ನಿ ಪೊಲೀಸರು ಅಕ್ಟೋಬರ್ 18 ರಂದು ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಘಟನೆಯು ಎಐ ಕಂಪನಿಗಳು ಬಳಕೆದಾರರ ಖಾಸಗಿ ಸಂಭಾಷಣೆಗಳನ್ನು ಹೇಗೆ ನಿಗಾ ವಹಿಸುತ್ತವೆ ಮತ್ತು ಸುರಕ್ಷತೆಯ ನಿಯಮಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಆರೋಪಿ ಚಾಟ್‌ಬಾಟ್‌ಗೆ ಹೇಳಿದ್ದೇನು? ನ್ಯಾಯಾಲಯಕ್ಕೆ ಸಲ್ಲಿಸಲಾದ ಪೊಲೀಸ್ ದಾಖಲೆಗಳ ಪ್ರಕಾರ, ಆರೋಪಿ ಠಾಕ್ರೆ ಕ್ಲೌಡ್‌ನ ‘ವಾಯ್ಸ್ ಮೋಡ್’ ಮೂಲಕ ಮಾತನಾಡುತ್ತಿದ್ದಾಗ ಈ ಬೆದರಿಕೆ ಹಾಕಿದ್ದಾನೆ. “ನಾನು ಈಗಲೇ  ವೆಸ್ಟ್‌ಫೀಲ್ಡ್ ಶಾಪಿಂಗ್ ಮಾಲ್ ಬಳಿ ಹೋಗಿ, ಸಮೀಪದ ಡೇಕೇರ್ ಕೇಂದ್ರದಲ್ಲಿರುವ  ಮಕ್ಕಳ ಮೇಲೆ ಗುಂಡಿನ ದಾಳಿ ನಡೆಸುತ್ತೇನೆ” ಎಂದು ಆತ ಹೇಳಿದ್ದ ಎನ್ನಲಾಗಿದೆ.

ಆತ ದಕ್ಷಿಣ ಸಿಡ್ನಿಯ ಹರ್ಸ್ಟ್‌ವಿಲ್ಲೆಯಲ್ಲಿರುವ ತನ್ನ ಮನೆಯ ಸಮೀಪದ ಮಕ್ಕಳ ಕೇಂದ್ರವನ್ನು ಗುರಿಯಾಗಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಅಪರಾಧ ಅಥವಾ ಗಂಭೀರ ಬೆದರಿಕೆ ಹಾಕಲು ಸಂವಹನ ಸೇವೆಯನ್ನು ದುರುಪಯೋಗಪಡಿಸಿಕೊಂಡ ಆರೋಪವನ್ನು ಆತನ ಮೇಲೆ ಹೊರಿಸಲಾಗಿದೆ.

ನ್ಯಾಯಾಲಯದಲ್ಲಿ ನಡೆದ ವಾದ-ಪ್ರತಿವಾದ “ಒಂದು ವೇಳೆ ಆರೋಪಿಗೆ ಜಾಮೀನು ನೀಡಿದರೆ ಸಾರ್ವಜನಿಕ ಸುರಕ್ಷತೆಗೆ ಗಂಭೀರ ಅಪಾಯವಿದೆ. ಆತ ಮಕ್ಕಳ ಕೇಂದ್ರದ ಮೇಲೆ ದಾಳಿ ನಡೆಸಿದರೆ ಅದರ ಪರಿಣಾಮ ಅತ್ಯಂತ ಭೀಕರ ಹಾಗೂ ವಿನಾಶಕಾರಿಯಾಗಿರುತ್ತದೆ” ಎಂದು ಸರ್ಕಾರಿ ಪರ ವಕೀಲರು ಜಾಮೀನಿಗೆ ಪ್ರಬಲ ವಿರೋಧ ವ್ಯಕ್ತಪಡಿಸಿದರು.

ಠಾಕ್ರೆ ಅವರ ಪರ ವಕೀಲ ಡ್ಯಾನಿಲೊ ರಾಜ್‌ಕೋವಿಕ್ ವಾದಿಸಿ, “ತಮ್ಮ ಕಕ್ಷಿದಾರರಿಗೆ ಕಿವಿಯ ಸೋಂಕಿನ ಸಮಸ್ಯೆ ಇತ್ತು. ಅದಕ್ಕೆ ಪರಿಹಾರ ಕೇಳಲು ಕ್ಲೌಡ್ ಜೊತೆ ಮಾತನಾಡುತ್ತಿದ್ದಾಗ ಸರಿಯಾದ ಉತ್ತರ ಸಿಗದೆ ತೀವ್ರ ಹತಾಶೆಯಿಂದ ಈ ಮಾತುಗಳನ್ನು ಆಡಿದ್ದಾರೆಯೇ ಹೊರತು, ನಿಜವಾಗಿ ಯಾವುದೇ ದುರುದ್ದೇಶ ಇರಲಿಲ್ಲ” ಎಂದು ಸಮರ್ಥಿಸಿಕೊಂಡರು. ನ್ಯಾಯಾಲಯವು ಆರೋಪಿಗೆ ಜಾಮೀನು ನೀಡಲು ನಿರಾಕರಿಸಿದ್ದು, ಆತನ ಮಾನಸಿಕ ಆರೋಗ್ಯ ತಪಾಸಣೆ ಮುಗಿಯುವವರೆಗೆ ನ್ಯಾಯಾಂಗ ಬಂಧನದಲ್ಲಿಡಲು ಆದೇಶಿಸಿದೆ.

ಇದನ್ನೂ ಓದಿ: ವಿಧಾನಸೌಧ ಸ್ಫೋಟದ ಎಐ ರೀಲ್ಸ್​​​​ ಸೃಷ್ಟಿಸಿದ್ದ ಬಿಹಾರ ಮೂಲದ ಹಜರತ್ ಅಲಿ ಬಂಧನ

ಎಐ ಗೌಪ್ಯತೆ ಮತ್ತು ಇಂಟರ್‌ಪೋಲ್ ತನಿಖೆಯ ಚರ್ಚೆ ಆಂಥ್ರೊಪಿಕ್ ಸೇರಿದಂತೆ ಪ್ರಮುಖ ಎಐ ಕಂಪನಿಗಳು ಭಯೋತ್ಪಾದನೆ, ಸಾಮೂಹಿಕ ಹತ್ಯೆ ಅಥವಾ ಮಕ್ಕಳ ಮೇಲಿನ ದೌರ್ಜನ್ಯದಂತಹ ಮಾತುಕತೆಗಳನ್ನು ತಕ್ಷಣವೇ ಪತ್ತೆಹಚ್ಚುವ ಸ್ವಯಂಚಾಲಿತ ‘ಟ್ರಿಗ್ಗರ್’ ವ್ಯವಸ್ಥೆಯನ್ನು ಹೊಂದಿವೆ. ಸಾರ್ವಜನಿಕ ಜೀವಕ್ಕೆ ಅಪಾಯವಿರುವ ತುರ್ತು ಸಂದರ್ಭಗಳಲ್ಲಿ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಮಾಹಿತಿ ಹಂಚಿಕೊಳ್ಳಲು ಅವುಗಳ ಗೌಪ್ಯತಾ ನೀತಿಯಲ್ಲಿ ಅವಕಾಶವಿದೆ.

ಕ್ಲೌಡ್‌ನಲ್ಲಿ ನಡೆದ ಈ ಸಂಭಾಷಣೆಯನ್ನು ಸ್ವತಃ ಆಂಥ್ರೊಪಿಕ್ ಸಂಸ್ಥೆಯೇ ಪತ್ತೆಹಚ್ಚಿ ಇಂಟರ್‌ಪೋಲ್‌ಗೆ ವರ್ಗಾಯಿಸಿತೇ ಅಥವಾ ಭದ್ರತಾ ಏಜೆನ್ಸಿಗಳು ಈ ಮಾಹಿತಿಯನ್ನು ಹೇಗೆ ಮೊದಲೇ ಪಡೆದುಕೊಂಡವು ಎಂಬುದು ಸದ್ಯಕ್ಕೆ ಅಧಿಕೃತವಾಗಿ ಸ್ಪಷ್ಟವಾಗಿಲ್ಲ. ಘಟನೆಯ ಬೆನ್ನಲ್ಲೇ ಆರೋಪಿಯ ಕ್ಲೌಡ್ ಖಾತೆಯನ್ನು ಆಂಥ್ರೊಪಿಕ್ ಅಮಾನತುಗೊಳಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಅಂಬೇಡ್ಕರ್ ಕಾಲೇಜು ಮತಗಟ್ಟೆ ಬಳಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಗಲಾಟೆ!
ಅಂಬೇಡ್ಕರ್ ಕಾಲೇಜು ಮತಗಟ್ಟೆ ಬಳಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಗಲಾಟೆ!
ಸ್ಟಿಂಗ್ ಆಪರೇಷನ್ ಪ್ರಕರಣ ಸಂಬಂಧ  ಹಿರಿಯ ಪತ್ರಕರ್ತನಿಗೆ ಸಿಸಿಬಿ ಗ್ರಿಲ್​​
ಸ್ಟಿಂಗ್ ಆಪರೇಷನ್ ಪ್ರಕರಣ ಸಂಬಂಧ  ಹಿರಿಯ ಪತ್ರಕರ್ತನಿಗೆ ಸಿಸಿಬಿ ಗ್ರಿಲ್​​
ಕೆಎಸ್ಒಯು ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಂದ ಹಣ ಪಡೆದು ಮಾಸ್ ಕಾಪಿ!
ಕೆಎಸ್ಒಯು ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಂದ ಹಣ ಪಡೆದು ಮಾಸ್ ಕಾಪಿ!
ಕರ್ನಾಟಕ ಸ್ಟಿಂಗ್ ಸಮರ ಹೈಕಮಾಂಡ್ ಅಂಗಳಕ್ಕೆ
ಕರ್ನಾಟಕ ಸ್ಟಿಂಗ್ ಸಮರ ಹೈಕಮಾಂಡ್ ಅಂಗಳಕ್ಕೆ
ಗಾಳಿಯಲ್ಲಿ ಗುಂಡು ಹಾರಿಸಿದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಜೀವನ್!
ಗಾಳಿಯಲ್ಲಿ ಗುಂಡು ಹಾರಿಸಿದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಜೀವನ್!
ಅಂಗಡಿಗಳ ಮೇಲೆ ಪೊಲೀಸರ ಹಠಾತ್ ದಾಳಿ: 500ಕ್ಕೂ ಹೆಚ್ಚು ರೋಲ್‌ ಮಾಂಜಾ ದಾರ ವಶ
ಅಂಗಡಿಗಳ ಮೇಲೆ ಪೊಲೀಸರ ಹಠಾತ್ ದಾಳಿ: 500ಕ್ಕೂ ಹೆಚ್ಚು ರೋಲ್‌ ಮಾಂಜಾ ದಾರ ವಶ
4 ಎಮ್​ಎಲ್ಸಿ ಸ್ಥಾನಗಳಿಗೆ ಇಂದು ಮತದಾನ ಆರಂಭ
4 ಎಮ್​ಎಲ್ಸಿ ಸ್ಥಾನಗಳಿಗೆ ಇಂದು ಮತದಾನ ಆರಂಭ
ಆಸಿಯಾ-ಸೌಂದರ್ಯಾ ಪೈಕಿ ಯಾರಾಗ್ತಾರೆ ಮುಂದಿನ ಕ್ಯಾಪ್ಟನ್?
ಆಸಿಯಾ-ಸೌಂದರ್ಯಾ ಪೈಕಿ ಯಾರಾಗ್ತಾರೆ ಮುಂದಿನ ಕ್ಯಾಪ್ಟನ್?
ಅಬ್ಬಾ, ಗೊತ್ತೇ ಇಲ್ಲದೆ ತಲೆದಿಂಬಿನಡಿ ಸೇರಿತ್ತು ಭಾರಿ ಗಾತ್ರದ ನಾಗರ ಹಾವು!
ಅಬ್ಬಾ, ಗೊತ್ತೇ ಇಲ್ಲದೆ ತಲೆದಿಂಬಿನಡಿ ಸೇರಿತ್ತು ಭಾರಿ ಗಾತ್ರದ ನಾಗರ ಹಾವು!
ಮೋದಿ ಭೇಟಿ ಬಳಿಕ ಬೆಂಗಳೂರಿಗೆ ಆಗಮಿಸಿದ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್
ಮೋದಿ ಭೇಟಿ ಬಳಿಕ ಬೆಂಗಳೂರಿಗೆ ಆಗಮಿಸಿದ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್