AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

420 ಕೋಟಿ ರೂ. ಮೌಲ್ಯದ ವಜ್ರದ ಒಳ ಉಡುಪು ಧರಿಸಿ ರ‍್ಯಾಂಪ್ ಮೇಲೆ ಮಿಂಚಿದ ಮಾಡೆಲ್!

2026ರ ವಿಕ್ಟೋರಿಯಾಸ್​​​​​​ ಸೀಕ್ರೆಟ್ ಫ್ಯಾಷನ್ ಶೋ ಅದ್ಧೂರಿಯಾಗಿ ನಡೆದಿದೆ. ಈ ವರ್ಷದ ಪ್ರಮುಖ ಆಕರ್ಷಣೆಯೆಂದರೆ ಕೈಲೀ ಜೆನ್ನರ್ ಧರಿಸಿದ್ದ 420 ಕೋಟಿ ರೂ. ಮೌಲ್ಯದ ವಜ್ರದ ಫ್ಯಾಂಟಸಿ ಬ್ರಾ. 4,410 ವಜ್ರಗಳಿಂದ ಅಲಂಕೃತವಾದ ಈ ಒಳಉಡುಪು ಪ್ರತಿಷ್ಠಿತ ಜಾವಕೋಬ್ ಆ್ಯಂಡ್ ಕಂಪನಿ ಸಹಯೋಗದಲ್ಲಿ ರೂಪುಗೊಂಡಿದೆ. ಈ ಒಳ ಉಡುಪು ವಿನ್ಯಾಸಗೊಳಿಸಲು 15 ಕುಶಲಕರ್ಮಿಗಳು 1,000 ಗಂಟೆಗಳ ಕಾಲ ಪರಿಶ್ರಮಪಟ್ಟಿದ್ದಾರೆ ಎಂದು ವರದಿಯಾಗಿದೆ.

420 ಕೋಟಿ ರೂ. ಮೌಲ್ಯದ ವಜ್ರದ ಒಳ ಉಡುಪು ಧರಿಸಿ ರ‍್ಯಾಂಪ್ ಮೇಲೆ ಮಿಂಚಿದ ಮಾಡೆಲ್!
ಕೈಲಿ ಜೆನ್ನರ್Image Credit source: instagram/jacobandco
ಅಕ್ಷತಾ ವರ್ಕಾಡಿ
|

Updated on:Oct 23, 2026 | 12:14 PM

Share

ವಿಶ್ವದ ಅತ್ಯಂತ ಪ್ರಸಿದ್ಧ ಫ್ಯಾಷನ್ ಕಾರ್ಯಕ್ರಮಗಳಲ್ಲಿ ಒಂದಾದ ವಿಕ್ಟೋರಿಯಾಸ್ ಸೀಕ್ರೆಟ್ ಫ್ಯಾಷನ್ ಶೋ (Victoria’s Secret Fashion Show) ಇತ್ತೀಚಿಗಷ್ಟೇ ಅದ್ಧೂರಿಯಾಗಿ ನಡೆದಿದೆ. ಈ ಫ್ಯಾಷನ್ ಈವೆಂಟ್​​ನಲ್ಲಿ ವಿಶ್ವದ ಖ್ಯಾತ ಸೂಪರ್‌ ಮಾಡೆಲ್​​ಗಳು ​​​​ಭಾಗಿಯಾಗಿದ್ದು,  ಖ್ಯಾತ ರೂಪದರ್ಶಿ ಕೈಲೀ ಜೆನ್ನರ್ ಎಲ್ಲರ ಗಮನಸೆಳೆದಿದ್ದಾರೆ. ಅತ್ಯಂತ ದುಬಾರಿ ಅಂದರೆ ಸಂಪೂರ್ಣವಾಗಿ ವಜ್ರದಿಂದ ವಿನ್ಯಾಸಗೊಳಿಸಿದ ಒಳ ಉಡುಪು ಧರಿಸಿ ರ್ಯಾಂಪ್​​ ವ್ಯಾಕ್​​ ಮಾಡುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ.

4,410 ವಜ್ರಗಳಿಂದ ಕಂಗೊಳಿಸಿದ ಫ್ಯಾಂಟಸಿ ಬ್ರಾ:

ಅಮೆರಿಕದ ಖ್ಯಾತ ಉದ್ಯಮಿ ಹಾಗೂ ಸೌಂದರ್ಯ ಉತ್ಪನ್ನಗಳ ಬ್ರ್ಯಾಂಡ್ ‘ಕೈಲಿ ಕಾಸ್ಮೆಟಿಕ್ಸ್‌’ ಸಂಸ್ಥಾಪಕಿ ಕೈಲಿ ಜೆನ್ನರ್ (Kylie Jenner) ಸರಿಸುಮಾರು 4,410 ವಜ್ರಗಳಿಂದ ತಯಾರಿಸಿದ ಅಂದರೆ ಬರೋಬ್ಬರಿ 420 ಕೋಟಿ ರೂಪಾಯಿ ಮೌಲ್ಯದ ಒಳಉಡುಪಿನಲ್ಲಿ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದಾರೆ. ಈ ದುಬಾರಿ ಉಡುಪನ್ನು ಪ್ರಸಿದ್ಧ ಐಷಾರಾಮಿ ಆಭರಣ ಸಂಸ್ಥೆ ‘ಜಾವಕೋಬ್ ಆ್ಯಂಡ್​ ಕಂಪನಿ’ (Jacob & Co.) ಸಹಯೋಗದಲ್ಲಿ ರೂಪಿಸಲಾಗಿದೆ. 4,410 ನೈಸರ್ಗಿಕ ವಜ್ರಗಳ ಜೊತೆಗೆ ಮಧ್ಯಭಾಗದಲ್ಲಿ ಅಳವಡಿಸಿರುವ 75.54 ಕ್ಯಾರೆಟ್ ತೂಕದ ಹಳದಿ ವಜ್ರವು ಈ ವಿನ್ಯಾಸದ ಪ್ರಮುಖ ಆಕರ್ಷಣೆಯಾಗಿದೆ. ಈ ಉಡುಪು ವಿನ್ಯಾಸಗೊಳಿಸಲು 15 ಕುಶಲಕರ್ಮಿಗಳು 1,000 ಗಂಟೆಗಳ ಪರಿಶ್ರಮಪಟ್ಟಿದ್ದಾರೆ.

View this post on Instagram

A post shared by JACOB & CO. (@jacobandco)

ಏನಿದು ವಿಕ್ಟೋರಿಯಾಸ್ ಸೀಕ್ರೆಟ್ ಫ್ಯಾಶನ್​ ಶೋ ?

ವಿಕ್ಟೋರಿಯಾಸ್ ಸೀಕ್ರೆಟ್ ಫ್ಯಾಷನ್ ಶೋ (Victoria’s Secret Fashion Show) ವಿಶ್ವದ ಅತ್ಯಂತ ಪ್ರಸಿದ್ಧ ಫ್ಯಾಷನ್ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಅಮೆರಿಕದ ಐಷಾರಾಮಿ ಒಳ ಉಡುಪುಗಳ ಬ್ರ್ಯಾಂಡ್ ವಿಕ್ಟೋರಿಯಾಸ್ ಸೀಕ್ರೆಟ್ ಆಯೋಜಿಸುವ ಈ ಶೋನಲ್ಲಿ ವಿಶ್ವದ ಖ್ಯಾತ ಸೂಪರ್‌ಮೋಡೆಲ್‌ಗಳು ಆಕರ್ಷಕ ಉಡುಪುಗಳು, ವಿನೂತನ ವಿನ್ಯಾಸಗಳು ಮತ್ತು ಭವ್ಯವಾದ ರೆಕ್ಕೆಗಳೊಂದಿಗೆ ರನ್‌ವೇ ಮೇಲೆ ಹೆಜ್ಜೆ ಹಾಕುತ್ತಾರೆ. 1995ರಲ್ಲಿ ಆರಂಭವಾದ ಈ ಫ್ಯಾಷನ್ ಶೋ ಸಂಗೀತ, ಮನರಂಜನೆ ಮತ್ತು ಫ್ಯಾಷನ್‌ನ ಅದ್ಧೂರಿ ಸಂಯೋಜನೆಯಾಗಿ ಜಾಗತಿಕ ಮನ್ನಣೆ ಗಳಿಸಿದೆ. ಹೈಡಿ ಕ್ಲುಮ್, ಟೈರಾ ಬ್ಯಾಂಕ್ಸ್, ಗಿಸೆಲ್ ಬಂಡ್‌ಚೆನ್ ಮತ್ತು ಅಡ್ರಿಯಾನಾ ಲಿಮಾ ಸೇರಿದಂತೆ ಅನೇಕ ಪ್ರಸಿದ್ಧ ಮಾಡೆಲ್‌ಗಳು ಈ ವೇದಿಕೆಯಲ್ಲಿ ಮಿಂಚಿದ್ದಾರೆ. ವಜ್ರಗಳು ಹಾಗೂ ಅಮೂಲ್ಯ ರತ್ನಗಳಿಂದ ಅಲಂಕರಿಸಲಾದ ‘ಫ್ಯಾಂಟಸಿ ಬ್ರಾ’ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಕೆಲವು ವರ್ಷಗಳ ವಿರಾಮದ ಬಳಿಕ 2024ರಲ್ಲಿ ಮತ್ತೆ ಮರಳಿದ ಈ ಶೋ, ಫ್ಯಾಷನ್ ಜಗತ್ತಿನಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:10 pm, Fri, 23 October 26

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More