ಬಿಗ್​ ಬಾಸ್​ ಹೊಸ ಸೀಸನ್​ನಲ್ಲಿ ರವಿಚಂದ್ರನ್​ ಸಿನಿಮಾ ನಾಯಕಿ? ಕೇಳಿಬರ್ತಿದೆ ಸ್ಟಾರ್ ನಟಿ ಹೆಸರು

ಬಿಗ್​ ಬಾಸ್​ ಹೊಸ ಸೀಸನ್​ನಲ್ಲಿ ರವಿಚಂದ್ರನ್​ ಸಿನಿಮಾ ನಾಯಕಿ? ಕೇಳಿಬರ್ತಿದೆ ಸ್ಟಾರ್ ನಟಿ ಹೆಸರು
ರವಿಚಂದ್ರನ್​, ಭೂಮಿಕಾ ಚಾವ್ಲಾ, ಬಿಗ್​ ಬಾಸ್​

Bigg Boss: ಇಂದ್ರಜಿತ್​ ಲಂಕೇಶ್​ ನಿರ್ದೇಶನ ಮಾಡಿದ್ದ ಲವ್​ ಯೂ ಆಲಿಯಾ ಸಿನಿಮಾದಲ್ಲಿ ಭೂಮಿಕಾ ಚಾವ್ಲಾ ಬಣ್ಣ ಹಚ್ಚಿದ್ದರು. ಆ ಚಿತ್ರದಲ್ಲಿ ಅವರು ರವಿಚಂದ್ರನ್​ಗೆ ಜೋಡಿಯಾಗಿ ಅಭಿನಯಿಸಿದ್ದರು.

Madan Kumar

|

Jun 05, 2021 | 12:46 PM

ಈ ವರ್ಷ ಕೊರೊನಾ ವೈರಸ್​ ಹಾವಳಿ ಹೆಚ್ಚಾಗಿದ್ದರಿಂದ ‘ಬಿಗ್​ ಬಾಸ್​ ಕನ್ನಡ ಸೀಸನ್​ 8’ ಅರ್ಧಕ್ಕೆ ನಿಲ್ಲಬೇಕಾಯಿತು. ಮಲಯಾಂಳ ಬಿಗ್​ ಬಾಸ್​ ಕಾರ್ಯಕ್ರಮಕ್ಕೂ ಅದೇ ಪರಿಸ್ಥಿತಿ ಬಂತು. ಎಲ್ಲ ಭಾಷೆಯಲ್ಲೂ ಈ ರಿಯಾಲಿಟಿ ಶೋಗೆ ದೊಡ್ಡ ಪ್ರೇಕ್ಷಕ ವರ್ಗವಿದೆ. ಹಿಂದಿಯಲ್ಲಿ ಈಗಾಗಲೇ ಯಶಸ್ವಿಯಾಗಿ 14 ಸೀಸನ್​ಗಳನ್ನು ಮುಗಿಸಲಾಗಿದೆ. ಈಗ 15ನೇ ಆವೃತ್ತಿಗೆ ಸಿದ್ಧತೆಗಳು ನಡೆಯುತ್ತಿವೆ. ಹೊಸ ಸೀಸನ್​ನಲ್ಲಿ ಯಾರೆಲ್ಲ ಭಾಗವಹಿಸಬಹುದು ಎಂಬ ಬಗ್ಗೆ ಈಗಾಗಲೇ ಗುಗುಸಗು ಕೇಳಿಬರಲಾರಂಭಿಸಿದೆ.

ಬಾಲಿವುಡ್​ ಸ್ಟಾರ್​ ನಟ ಸಲ್ಮಾನ್​ ಖಾನ್​ ನಡೆಸಿಕೊಡುವ ಈ ಶೋನಲ್ಲಿ ಸ್ಪರ್ಧಿಸಲು ಈಗಾಗಲೇ ಹಲವು ಸೆಲೆಬ್ರಿಟಿಗಳಿಗೆ ಆಫರ್​ ಮಾಡಲಾಗುತ್ತಿದೆ. ಕೆಲವೇ ದಿನಗಳ ಹಿಂದೆ ಸುಶಾಂತ್​ ಸಿಂಗ್​ ರಜಪೂತ್​ ಪ್ರೇಯಸಿ ರಿಯಾ ಚಕ್ರವರ್ತಿಯ ಹೆಸರು ಹೇಳಿಬಂದಿತ್ತು. ಈಗ ಅನುಭವಿ ನಟಿ ಭೂಮಿಕಾ ಚಾವ್ಲಾ ಬಗ್ಗೆ ಕೂಡ ಸುದ್ದಿ ಹರಿದಾಡುತ್ತಿದೆ. ಬಿಗ್​ ಬಾಸ್​ ಹಿಂದಿ ಸೀಸನ್​ 15ರಲ್ಲಿ ಭೂಮಿಕಾ ಚಾವ್ಲಾ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಬಿಗ್​ ಬಾಸ್​ ಆಯೋಜಕರು ಈಗಾಗಲೇ ಅವರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.

2000ನೇ ಇಸವಿಯಲ್ಲಿ ಟಾಲಿವುಡ್​ನಿಂದ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಭೂಮಿಕಾ ಚಾವ್ಲಾ ಅವರು ನಂತರ ತಮಿಳು, ಹಿಂದಿಯಲ್ಲೂ ಫೇಮಸ್​ ಆದರು. ಸಲ್ಮಾನ್​ ಖಾನ್​ ನಟನೆಯ ‘ತೆರೆ ನಾಮ್​’ ಸಿನಿಮಾದಲ್ಲಿ ಅವರು ನಾಯಕಿ ಆಗಿದ್ದರು. ಆ ಚಿತ್ರದಿಂದ ಅವರ ಜನಪ್ರಿಯತೆ ದುಪ್ಪಟ್ಟಾಯಿತು. ಈಗ ಸಲ್ಲು ನಡೆಸಿಕೊಡುವ ಶೋನಲ್ಲಿ ಅವರು ಕಂಟೆಸ್ಟೆಂಟ್​ ಆಗಿ ಭಾಗವಹಿಸಿದರೆ ಶೋ ಮೆರುಗು ಹೆಚ್ಚುವುದು ಗ್ಯಾರಂಟಿ.

ಇಂದ್ರಜಿತ್​ ಲಂಕೇಶ್​ ನಿರ್ದೇಶನ ಮಾಡಿದ್ದ ‘ಲವ್​ ಯೂ ಆಲಿಯಾ’ ಸಿನಿಮಾದಲ್ಲಿ ಭೂಮಿಕಾ ಚಾವ್ಲಾ ಬಣ್ಣ ಹಚ್ಚಿದ್ದರು. ಆ ಚಿತ್ರದಲ್ಲಿ ಅವರು ರವಿಚಂದ್ರನ್​ಗೆ ಜೋಡಿಯಾಗಿ ಅಭಿನಯಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಪೋಷಕ ಪಾತ್ರಗಳನ್ನು ಮಾಡುತ್ತಿರುವ ಅವರು ಬಿಗ್​ ಬಾಸ್​ಗೆ ಆಗಮಿಸಿದರೆ ಚೆನ್ನಾಗಿರುತ್ತದೆ ಎಂಬ ಅಭಿಪ್ರಾಯ ನೆಟ್ಟಿಗರಿಂದ ವ್ಯಕ್ತವಾಗಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಪ್ರತಿ ಸೀಸನ್​ನಲ್ಲೂ ಘಟಾನುಘಟಿಗಳನ್ನು ಕರೆದುಕೊಂಡು ಬರಬೇಕು ಎಂದು ಬಿಗ್​ ಬಾಸ್​ ಆಯೋಜಕರು ಪ್ರಯತ್ನ ನಡೆಸುತ್ತಾರೆ. ಕಳೆದ ವರ್ಷ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳ ನಡುವೆಯೇ ಹಿಂದಿ ಬಿಗ್​ ಬಾಸ್​ ನಡೆದಿತ್ತು. ಈಗ ಸದ್ಯ ಎರಡನೇ ಅಲೆ ಕಾಟ ಕೊಡುತ್ತಿರುವುದರಿಂದ ಎಲ್ಲ ರಿಯಾಲಿಟಿ ಶೋ, ಸಿನಿಮಾ, ಧಾರಾವಾಹಿ ಶೂಟಿಂಗ್​ಗೆ ಬ್ರೇಕ್​ ಹಾಕಲಾಗಿದೆ.

ಇದನ್ನೂ ಓದಿ:

ಬಿಗ್​ ಬಾಸ್​ ಸ್ಪರ್ಧಿ ಜೊತೆ ಫೋಟೋಗಾಗಿ ಮಹಡಿಯಿಂದ ಜಿಗಿದ ಹುಡುಗಿ; ಮುಂದೇನಾಯ್ತು?

ಪ್ರಭಾಸ್​ ಸಿನಿಮಾದಲ್ಲಿ ಬಿಗ್​ ಬಾಸ್​ ಸ್ಪರ್ಧಿಗೆ ಅವಕಾಶ? ಜೋರಾಗಿ ಹಬ್ಬಿದ್ದ ಗಾಸಿಪ್​ನ ಅಸಲಿಯತ್ತು ಇಲ್ಲಿದೆ

Follow us on

Related Stories

Most Read Stories

Click on your DTH Provider to Add TV9 Kannada