Darshan: ಪ್ರಾಣಿಗಳನ್ನು ದತ್ತು ಪಡೆಯೋದು ಹೇಗೆ? ದರ್ಶನ್ ವಿಶೇಷ ಮನವಿಯಲ್ಲಿದೆ ಸಂಪೂರ್ಣ ಮಾಹಿತಿ
Challenging Star Darshan: ಕೊವಿಡ್ನಿಂದ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಹೀಗಾಗಿ, ಪ್ರವಾಸಿ ಸ್ಥಳಗಳು, ಝೂಗಳು ಕ್ಲೋಸ್ ಆಗಿವೆ. ಹೀಗಾಗಿ ಝೂಗಳಿಗೆ ಯಾವುದೇ ಆದಾಯ ಬರುತ್ತಿಲ್ಲ. ಇದರಿಂದ ಅಲ್ಲಿರುವ ಪ್ರಾಣಿಗಳ ನಿರ್ವಹಣೆ ಕಷ್ಟವಾಗುತ್ತಿದೆ.
ನಟ ದರ್ಶನ್ಗೆ ವನ್ಯಜೀವಿಗಳ ಮೇಲೆ ಅಪಾರ ಪ್ರೀತಿ ಇದೆ. ಮೈಸೂರು ಝೂನಲ್ಲಿ ಅವರು ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ಪ್ರೀತಿ ಮೆರೆದಿದ್ದಾರೆ. ಈಗ ದರ್ಶನ್ ಜನರ ಬಳಿ ವಿಶೇಷ ಮನವಿ ಒಂದನ್ನು ಮಾಡಿದ್ದಾರೆ. ಝೂಗಳಲ್ಲಿನ ಪ್ರಾಣಿಗಳನ್ನ ದತ್ತು ಪಡೆಯುವಂತೆ ನಟ ದರ್ಶನ್ ಕೋರಿಕೊಂಡಿದ್ದಾರೆ.
ಕೊವಿಡ್ನಿಂದ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಹೀಗಾಗಿ, ಪ್ರವಾಸಿ ಸ್ಥಳಗಳು, ಝೂಗಳು ಕ್ಲೋಸ್ ಆಗಿವೆ. ಹೀಗಾಗಿ ಝೂಗಳಿಗೆ ಯಾವುದೇ ಆದಾಯ ಬರುತ್ತಿಲ್ಲ. ಇದರಿಂದ ಅಲ್ಲಿರುವ ಪ್ರಾಣಿಗಳ ನಿರ್ವಹಣೆ ಕಷ್ಟವಾಗುತ್ತಿದೆ. ಇದು ದರ್ಶನ್ ಗಮನಕ್ಕೆ ಬಂದಿದೆ. ಕರ್ನಾಟಕದಲ್ಲಿ 9 ಝೂಗಳಿವೆ. ಎಲ್ಲಾ ಪ್ರಾಣಿ ಸಂಗ್ರಹಾಲಯದ ಪರಿಸ್ಥಿತಿಯೂ ಒಂದೇ ರೀತಿ ಇದೆ. ಹಾಗಾಗಿ ನಿಮ್ಮ ಕೈಲಾದ ಪ್ರಾಣಿಗಳನ್ನ ದತ್ತು ಪಡೆಯಿರಿ ಎಂದು ದರ್ಶನ್ ಮನವಿ ಮಾಡಿದ್ದಾರೆ.
ಈ ಬಗ್ಗೆ ವಿಶೇಷ ವಿಡಿಯೋ ಮಾಡಿರುವ ಡಿ ಬಾಸ್, ಕೊವಿಡ್ನಿಂದ ಮಾನವರಿಗೆ ತೊಂದರೆ ಆಗಿದೆ. ಅದರ ಜತೆಗೆ ಪ್ರಾಣಿ ಸಂಕುಲಕ್ಕೂ ಸಮಸ್ಯೆ ಆಗಿದೆ. ನಮ್ಮ ರಾಜ್ಯದಲ್ಲಿ 9 ಝೂಗಳು ಇವೆ. ಹೀಗಾಗಿ, ಬೇರೆ ದೇಶದಿಂದ ಎಲ್ಲರೂ ಇಲ್ಲಿಗೆ ಬರ್ತಾರೆ. ಅವರು ನೀಡುವ ಟಿಕೆಟ್ ಹಣದಿಂದ ಝೂ ನಿರ್ವಹಣೆ ಆಗುತ್ತಿತ್ತು. ಆದರೆ, ಈಗ ಈ ಪ್ರಕ್ರಿಯೆ ನಿಂತಿದೆ. ಹೀಗಾಗಿ, ಪ್ರಾಣಿಗಳ ನಿರ್ವಹಣೆ, ಅವರನ್ನು ನೋಡಿಕೊಳ್ಳೋರಿಗೆ ಸಂಬಳ ನೀಡೋದು ಕಷ್ಟವಾಗುತ್ತಿದೆ ಎಂದಿದ್ದಾರೆ.
ಎಲ್ಲರೂ ಮನೆಯಲ್ಲಿ ಪ್ರಾಣಿ ಸಾಕಲು ಆಗುವುದಿಲ್ಲ. ಆದರೆ, ಅದನ್ನು ನಿರ್ವಹಣೆ ಮಾಡಲು ಅವಕಾಶ ಇದೆ. ಲವ್ಬರ್ಡ್ಗೆ 1 ಸಾವಿರ, ಹುಲಿಗೆ 1 ಲಕ್ಷ, ಆನೆಗೆ 1.70 ಲಕ್ಷ ರೂಪಾಯಿ ನೀಡಿ ದತ್ತು ಪಡೆದರೆ ಒಂದು ವರ್ಷಗಳ ಕಾಲ ಅವುಗಳ ನಿರ್ವಹಣೆ ನಿಮ್ಮ ಹೆಸರಲ್ಲಾಗುತ್ತದೆ. ಝೂ ಆಫ್ ಕರ್ನಾಟಕ ಆ್ಯಪ್ ಮೂಲಕ ಪ್ರಾಣಿಗಳನ್ನು ದತ್ತು ಪಡೆಯೋದು ಹೇಗೆ ಎಂದು ತಿಳಿದುಕೊಳ್ಳಬಹುದು. ಹತ್ತಿರದ ಝೂಗೆ ಭೇಟಿ ನೀಡಿದರೂ ಇದನ್ನು ಮಾಡೋಕೆ ಸಾಧ್ಯ. ಇದೊಂದು ಒಳ್ಳೆಯ ಕಾರ್ಯಕ್ಕೆ ಕೈ ಜೋಡಿಸಿ ಎಂದು ದರ್ಶನ್ ಕರೆ ನೀಡಿದ್ದಾರೆ.
ಇದನ್ನೂ ಓದಿ: ಕೊವಿಡ್ ಸೋಂಕಿತರಿಗೆ ನೆರವಾದ ಡಿ-ಬಾಸ್; ಆಮ್ಲಜನಕ ನೀಡೋ ಕಾಯಕಕ್ಕೆ ಕೈ ಜೋಡಿಸಿದ ದರ್ಶನ್