ಬಿಗ್​ ಬಾಸ್​ ಸ್ಪರ್ಧಿ ಜೊತೆ ಫೋಟೋಗಾಗಿ ಮಹಡಿಯಿಂದ ಜಿಗಿದ ಹುಡುಗಿ; ಮುಂದೇನಾಯ್ತು?

ಬಿಗ್​ ಬಾಸ್​ ಸ್ಪರ್ಧಿ ಜೊತೆ ಫೋಟೋಗಾಗಿ ಮಹಡಿಯಿಂದ ಜಿಗಿದ ಹುಡುಗಿ; ಮುಂದೇನಾಯ್ತು?
ಪಾರಸ್​ ಛಾಬ್ರಾ

ಆ ಅಭಿಮಾನಿಯನ್ನು ನಾನು ಎಂದಿಗೂ ಮರೆಯುವುದಿಲ್ಲ. ಅದು ಮರೆಯಲಾರದ ಮತ್ತು ಶಾಕಿಂಗ್​ ಘಟನೆ ಆಗಿತ್ತು. ನಮ್ಮನ್ನು ಜನರು ಎಷ್ಟು ಪ್ರೀತಿಸುತ್ತಾರೆ ಎಂಬುದಕ್ಕೆ ಆ ಘಟನೆಯೇ ಸಾಕ್ಷಿ ಎಂದು ಪಾರಸ್​ ಛಾಬ್ರಾ ಹೇಳಿದ್ದಾರೆ.

Madan Kumar

|

Jun 03, 2021 | 9:31 AM

ಕಿರುತೆರೆಯ ಜನಪ್ರಿಯ ಶೋಗಳಲ್ಲಿ ಒಂದಾದ ಬಿಗ್​ ಬಾಸ್​ಗೆ ಅಪಾರ ಪ್ರೇಕ್ಷಕವರ್ಗ ಇದೆ. ಈ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ದೊಡ್ಡ ಮಟ್ಟದ ಖ್ಯಾತಿ ಸಿಗುತ್ತದೆ. ಸಿಕ್ಕಾಪಟ್ಟೆ ಅಭಿಮಾನಿಗಳು ಕೂಡ ಹುಟ್ಟಿಕೊಳ್ಳುತ್ತಾರೆ. ಅದರಲ್ಲೂ ಕೆಲವರ ಅಭಿಮಾನ ಮಿತಿ ಮೀರುವುದುಂಟು. ತಮ್ಮ ನೆಚ್ಚಿನ ಸ್ಪರ್ಧಿಗಾಗಿ ಅವರು ಏನು ಮಾಡಲು ಬೇಕಾದರೂ ಸಿದ್ಧರಿರುತ್ತಾರೆ. ಹಿಂದಿ ಬಿಗ್​ ಬಾಸ್​ 13ರ ಸ್ಪರ್ಧಿ ಪಾರಸ್​ ಛಾಬ್ರಾ ವಿಚಾರದಲ್ಲಿ ಹೀಗೆಯೇ ಆಗಿತ್ತು. ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಹುಡುಗಿಯೊಬ್ಬಳು ಮೊದಲ ಮಹಡಿಯಿಂದ ಹಾರಿದ್ದಳು ಎಂಬ ವಿಷಯ ಈಗ ಗೊತ್ತಾಗಿದೆ.

ಮಾಧ್ಯಮವೊಂದಕ್ಕೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಪಾರಸ್​ ಛಾಬ್ರಾ ಅವರು ಈ ವಿಚಾರ ಬಾಯಿ ಬಿಟ್ಟಿದ್ದಾರೆ. ಹಿಂದಿಯ ಹಲವು ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿದ ಬಳಿಕ ಅವರಿಗೆ ಅಪಾರ ಜನಪ್ರಿಯತೆ ಸಿಕ್ಕಿತ್ತು. ಮಹಿಳಾಭಿಮಾನಿಗಳ ಸಂಖ್ಯೆಯೂ ಜಾಸ್ತಿ ಆಗಿತ್ತು. ಬಳಿಕ ಅವರು ಎಲ್ಲೇ ಹೋದರೂ ಜನರು ಮುತ್ತಿಕೊಳ್ಳಲು ಆರಂಭಿಸಿದ್ದರು. ಅದೇ ರೀತಿ ಒಮ್ಮೆ ಹುಡುಗಿಯೊಬ್ಬಳು ಅತಿರೇಕದ ಅಭಿಮಾನ ಪ್ರದರ್ಶನ ಮಾಡಿದ್ದಳು ಎಂಬ ವಿಷಯವನ್ನು ಪಾರಸ್​ ಛಾಬ್ರಾ ವಿವರಿಸಿದ್ದಾರೆ.

‘ಒಂದು ರಿಯಾಲಿಟಿ ಶೋಗಾಗಿ ಆಡಿಷನ್​ ನೀಡಲು ದೆಹಲಿಗೆ ಹೋಗಿದ್ದೆ. ಅಲ್ಲಿ ನನ್ನನ್ನು ನೋಡುತ್ತಿದ್ದಂತೆಯೇ ಹುಡುಗಿಯೊಬ್ಬಳು ಮೊದಲನೇ ಮಹಡಿಯಿಂದ ಜಿಗಿದುಬಿಟ್ಟಳು. ಅವಳು ನನ್ನ ದೊಡ್ಡ ಫ್ಯಾನ್​ ಆಗಿದ್ದಳು. ಆಕೆಗೆ ನನ್ನ ಜೊತೆ ಫೋಟೋ ತೆಗೆದುಕೊಳ್ಳಬೇಕಿತ್ತು. ಅವಳಿಗೆ ಎಲ್ಲಿ ಪೆಟ್ಟಾಗತ್ತದೋ, ಏನಾದರೂ ಅನಾಹುತ ಆಗಿಬಿಟ್ಟರೆ ಏನು ಗತಿ ಎಂದು ನಾನು ಚಿಂತಿಸುತ್ತಿದ್ದೆ. ಪುಣ್ಯಕ್ಕೆ ಏನೂ ತೊಂದರೆ ಆಗಲಿಲ್ಲ. ಆಕೆ ಬಂದು ಫೋಟೋ ಕ್ಲಿಕ್ಕಿಸಿಕೊಂಡು ಹೋದಳು’ ಎಂದಿದ್ದಾರೆ ಪಾರಸ್​ ಛಾಬ್ರಾ.

‘ಆ ಅಭಿಮಾನಿಯನ್ನು ನಾನು ಎಂದಿಗೂ ಮರೆಯುವುದಿಲ್ಲ. ಅದು ಮರೆಯಲಾರದ ಮತ್ತು ಶಾಕಿಂಗ್​ ಘಟನೆ ಆಗಿತ್ತು. ನಮ್ಮನ್ನು ಜನರು ಎಷ್ಟು ಪ್ರೀತಿಸುತ್ತಾರೆ ಎಂಬುದಕ್ಕೆ ಆ ಘಟನೆಯೇ ಸಾಕ್ಷಿ. ಅವರು ನಮಗಾಗಿ ಏನು ಮಾಡಲು ಬೇಕಾದರೂ ಸಿದ್ಧರಿರುತ್ತಾರೆ. ಒಂದೇ ಒಂದು ಫೋಟೋ ಸಲುವಾಗಿ ಮೊದಲ ಮಹಡಿಯಿಂದ ಜಿಗಿಯುವಷ್ಟು ಧೈರ್ಯ ಆಕೆಗೆ ಎಲ್ಲಿಂದ ಬಂತು ಎಂಬುದನ್ನು ಊಹೆ ಮಾಡಿಕೊಳ್ಳಲು ಸಾಧ್ಯವಿಲ್ಲ’ ಎಂದು ಪಾರಸ್​ ಛಾಬ್ರಾ ಹೇಳಿದ್ದಾರೆ.

ಇದನ್ನೂ ಓದಿ:

ಬಿಗ್​ ಬಾಸ್​ ಮನೆ ಒಳಗೆ ಹೋಗಲಿದ್ದಾರೆ ಸುಶಾಂತ್​ ಸಿಂಗ್​ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ?

ಪ್ರಭಾಸ್​ ಸಿನಿಮಾದಲ್ಲಿ ಬಿಗ್​ ಬಾಸ್​ ಸ್ಪರ್ಧಿಗೆ ಅವಕಾಶ? ಜೋರಾಗಿ ಹಬ್ಬಿದ್ದ ಗಾಸಿಪ್​ನ ಅಸಲಿಯತ್ತು ಇಲ್ಲಿದೆ

Follow us on

Related Stories

Most Read Stories

Click on your DTH Provider to Add TV9 Kannada