Tata Sky Binge: ಟಾಟಾ ಸ್ಕೈ Bingeಯಲ್ಲಿ ಸಿಗಲಿದೆ ಹತ್ತು ಒಟಿಟಿ ಕಂಟೆಂಟ್ ಒಂದೇ ಕಡೆಗೆ; ಪ್ಲಾನ್ ಮತ್ತಿತರ ಮಾಹಿತಿ ಇಲ್ಲಿದೆ
Tata Sky Binge ಆ್ಯಪ್ ಬಗ್ಗೆ ನಿಮಗೆ ಗೊತ್ತಾ? ಇದು ಆ ಸಂಸ್ಥೆಯ ಮೊದಲ ಒಟಿಟಿ ಪ್ರಯತ್ನ. 10 ವಿವಿಧ ಒಟಿಟಿ ಕಂಟೆಂಟ್ಗಳು ಇಲ್ಲಿ ಒಂದೇ ಕಡೆ ಸಿಗುತ್ತದೆ. ಎರಡು ಪ್ಲಾನ್ಗಳಿದ್ದು, ಇದರ ಬಳಕೆ ಮತ್ತಿತರ ವಿವರಗಳು ಇಲ್ಲಿವೆ.
ಟಾಟಾ ಸ್ಕೈನಿಂದ “Tata Sky Binge” ಆ್ಯಪ್ ಪರಿಚಯಿಸಲಾಗುತ್ತಿದೆ. ಇದು ಮೊಬೈಲ್ ಫೋನ್ ಬಳಸುವವರಿಗಾಗಿ ಇರುವಂಥ ಆ್ಯಪ್ ಆಗಿದೆ. ಇದರ ಹೊಸ ಪ್ಲಾನ್ 149 ರೂಪಾಯಿಯಿಂದ ಶುರುವಾಗುತ್ತದೆ. ಈ ಪ್ಲಾನ್ ಜತೆಗೆ ಒಟಿಟಿ ಅಪ್ಲಿಕೇಷನ್ ಚಂದಾದಾರರು ಕೂಡ ಆಗಬಹುದು. Tata Sky Binge ಮೊಬೈಲ್ ಆ್ಯಪ್ ಎರಡು ಪ್ಲಾನ್ಗಳನ್ನು ಪರಿಚಯಿಸಿದೆ. ಅದರಲ್ಲಿ ಒಂದು ರೂ. 299ರ ಪ್ಲಾನ್, ಮತ್ತೊಂದು ರೂ. 149ರ ಪ್ಲಾನ್. ಈ ಪೈಕಿ 299 ರೂಪಾಯಿಯ ಪ್ಲಾನ್ನಲ್ಲಿ 10 ಒಟಿಟಿ ಅಪ್ಲಿಕೇಷನ್ಗಳನ್ನು 1 ಟೀವಿ ಸ್ಕ್ರೀನ್ (ಇದು ಅಮೆಜಾನ್ ಫೈರ್ ಟಿವಿ ಸ್ಟಿಕ್- ಟಾಟಾ ಸ್ಕೈ ಎಡಿಷನ್ ಅಥವಾ Binge+ ಎಸ್ಟಿಬಿ ಮೂಲಕ) ಮತ್ತು 3 ಮೊಬೈಲ್ ಸ್ಕ್ರೀನ್ನಲ್ಲಿ ನೋಡಬಹುದು. ಇನ್ನು 149ರ ಮೊಬೈಲ್ ಓನ್ಲಿ ಪ್ಲಾನ್ ಮೂಲಕ Binge ಸೇವೆಯನ್ನು ಮೂರು ಮೊಬೈಲ್ ಸ್ಕ್ರೀನ್ನಲ್ಲಿ ನೀಡುತ್ತದೆ. 7 ಒಟಿಟಿ ಆ್ಯಪ್ಗಳ ಕಂಟೆಂಟ್ಗಳನ್ನು ನೀಡುತ್ತದೆ. ಎಲ್ಲ ಹೊಸ Binge ಬಳಕೆದಾರರು ಯಾರು ಹೊಸದಾಗಿ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡುತ್ತಾರೋ ಅವರಿಗೆ ಏಳು ದಿನಗಳ ಉಚಿತ ಟ್ರಯಲ್ ದೊರೆಯುತ್ತದೆ.
ವೈಶಿಷ್ಟ್ಯ ಏನು? ಟಾಟಾ ಸ್ಕೈ Binge ಮೊಬೈಲ್ ಆ್ಯಪ್ ಇದೆಯಲ್ಲಾ ಹಲವು ಸ್ಟ್ರೀಮಿಂಗ್ ಸರ್ವೀಸ್ಗಳ ಮೂಲಕ ಕಂಟೆಂಟ್ಗಳನ್ನು ವಿಭಾಗ ಮಾಡುತ್ತದೆ. ಹೊಸ ಬಿಡುಗಡೆ, ಜನಪ್ರಿಯ ಸಿನಿಮಾಗಳು, ಈಗ ಟ್ರೆಂಡಿಂಗ್ ಮುಂತಾದ ರೀತಿಯಲ್ಲಿ ವಿಭಾಗ ಮಾಡಿ, ಹುಡುಕುವುದಕ್ಕೆ ಸಲೀಸು ಮಾಡಿಕೊಡುತ್ತದೆ. ಕಂಟೆಂಟ್ ಭಾಷೆ, ಆ್ಯಪ್ ರೇಲ್ಸ್ ಮುಂತಾದವುಗಳ ಮೂಲಕವೂ ವಿಭಾಗ ಮಾಡಲಾಗುತ್ತದೆ. ಸ್ಕ್ರೀನ್ನ ಅಡಿಯಲ್ಲಿ ಇರುವ ಟ್ಯಾಬ್ ಬಾರ್ ಹೋಮ್ ಸ್ಕ್ರೀನ್ಗೆ, ಸರ್ಚ್ ಹಾಗೂ ವಾಚ್ಲಿಸ್ಟ್ಗೆ ಸಂಪರ್ಕ ನೀಡುತ್ತದೆ.
ಟಾಟಾ ಸ್ಕೈ Binge 10 ಒಟಿಟಿ ಅಪ್ಲಿಕೇಷನ್ಗಳಿಂದ ಕಂಟೆಂಟ್ಗಳನ್ನು ಒಗ್ಗೂಡಿಸುತ್ತದೆ. ಒಂದೇ ಸಬ್ಸ್ಕ್ರಿಪ್ಷನ್ ಮತ್ತು ಯೂನಿಫೈಡ್ ಇಂಟರ್ಫೇಸ್ನಲ್ಲಿ ಸಹಭಾಗಿ ಆ್ಯಪ್ಗಳನ್ನು ಬಳಸಲು ಅನುವು ಮಾಡಿಕೊಡುತ್ತದೆ. ಡಿಸ್ನಿ+ ಹಾಟ್ಸ್ಟಾರ್ ಪ್ರೀಮಿಯಂ, ಝೀ5, ಸನ್ನೆಕ್ಸ್ಟ್, ಹಂಗಾಮ ಪ್ಲೇ, ಎರೋಸ್ ನೌ, ಶಿಮಾರೂಮೀ, ವೂಟ್ ಸೆಲೆಕ್ಟ್, ವೂಟ್ ಕಿಡ್ಸ್, ಸೋನಿLIV ಮತ್ತು ಕ್ಯೂರಿಯಾಸಿಟಿಸ್ಟ್ರೀಮ್ ನೋಡಬಹುದು. ಹೆಚ್ಚುವರಿ ಪ್ರೈಮ್ ಸಬ್ಸ್ಕ್ರಿಪ್ಷನ್ ಜತೆಗೆ ದೊಡ್ಡ ತೆರೆಯ ಮೇಲೆ ಅಮೆಜಾನ್ ಪ್ರೈಮ್ ವಿಡಿಯೋ ನೋಡಬಹುದು.
ಈ ಬಿಡುಗಡೆ ಬಗ್ಗೆ ಟಾಟಾ ಸ್ಕೈ ಮುಖ್ಯ ಕಂಟೆಂಟ್ ಮತ್ತು ವಾಣಿಜ್ಯ ಅಧಿಕಾರಿ ಪಲ್ಲವಿ ಪುರಿ ಮಾತನಾಡಿ, ಈ ಆ್ಯಪ್ ಬಿಡುಗಡೆ ಮೂಲಕ ದೊಡ್ಡ ಸಂಖ್ಯೆಯಲ್ಲಿ ಇರುವ ಪ್ರೇಕ್ಷಕರಿಗೆ ನಮ್ಮ ಉತ್ಪನ್ನವನ್ನು ತಲುಪಿಸಲು ಯತ್ನಿಸುತ್ತಿದ್ದೇವೆ. ನಮ್ಮ ಚಂದಾದಾರರು ತಮ್ಮ ಇಷ್ಟದ ಒಟಿಟಿ ಕಂಟೆಂಟ್ ಅನ್ನು ದೊಡ್ಡ ಹಾಗೂ ಸಣ್ಣ ತೆರೆ, ಮನೆ ಅಥವಾ ಎಲ್ಲಿ ಹೋಗುತ್ತಾರೋ ಅಲ್ಲಿ, ಯೂನಿಫೈಡ್ ಇಂಟರ್ಫೇಸ್, ಒಂದು ಸಬ್ಸ್ಕ್ರಿಪ್ಷನ್ ಮತ್ತು ಸೈನ್ ಆನ್ನಲ್ಲಿ ನೋಡಬಹುದು ಎಂದಿದ್ದಾರೆ. ಮುಂದುವರಿದು, ಅಮೆಜಾನ್ ಫೈರ್ ಟಿವಿ ಸ್ಟಿಕ್ನಲ್ಲಿ ಟಾಟಾ ಸ್ಕೈ Binge ಎಂಬುದು ಒಟಿಟಿಯಲ್ಲಿ ಟಾಟಾ ಸ್ಕೈನ ಮೊದಲ ಹೆಜ್ಜೆ. ಮುಂದಿನ ಹೆಜ್ಜೆಯಾಗಿ ಆಂಡ್ರಾಯಿಡ್ ಟಿವಿ ಸೆಟ್ ಟಾಪ್ ಬಾಕ್ಸ್ ಪರಿಚಯಿಸುವ ಉದ್ದೇಶ ಇದೆ. ಟಾಟಾ ಸ್ಕೈ Binge ಮೊಬೈಲ್ ಅಪ್ಲಿಕೇಷನ್ನಲ್ಲೂ ದೊರಕಿಸುವ ಮೂಲಕ ಯಾರಿಗೆ ತಮ್ಮ ವೈಯಕ್ತಿಕ ಸಾಧನದಲ್ಲಿ ಅಥವಾ ತಾವು ಹೋದ ಕಡೆಯಲ್ಲಿ ಒಟಿಟಿ ಕಂಟೆಂಟ್ ಸಿಗಬೇಕು ಅಂದುಕೊಳ್ಳುತ್ತಾರೋ ಅಂಥವರಿಗೂ ಒದಗಿಸದಂತಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Amazon Prime: ಅಮೆಜಾನ್ ಪ್ರೈಮ್ನಿಂದ ಭರ್ಜರಿ ಆಫರ್; ಶೇ 50ರಷ್ಟು ರಿಯಾಯಿತಿ ಜತೆ ಸಿಗುತ್ತದೆ ಸಬ್ಸ್ಕ್ರಿಪ್ಷನ್
(Tata Sky Binge OTT platform introduced. Here is the details of plans, features)