ವಿದೇಶಕ್ಕೆ ಹೋದಾಗ ರಾಹುಲ್​ ಗಾಂಧಿ ವಿಚಾರದಲ್ಲಿ ಮಾಡಿದ್ದ ದೊಡ್ಡ ತಪ್ಪಿನ ಬಗ್ಗೆ ಬಾಯ್ಬಿಟ್ಟ ರಮ್ಯಾ

Ramya: ರಮ್ಯಾ ಮಾಡಿದ ಆ ಒಂದು ತಪ್ಪಿನಿಂದಾಗಿ ರಾಹುಲ್​ ಗಾಂಧಿ ಸಿಕ್ಕಾಪಟ್ಟೆ ಟ್ರೋಲ್​ಗೆ ಒಳಗಾಗಿದ್ದರು. ಹಾಗಾಗಿ ರಮ್ಯಾ ರಾಜೀನಾಮೆ ನೀಡಲು ಮುಂದಾಗಿದ್ದರು. ಆ ಬಗ್ಗೆ ಇಲ್ಲಿದೆ ವಿವರ...

ವಿದೇಶಕ್ಕೆ ಹೋದಾಗ ರಾಹುಲ್​ ಗಾಂಧಿ ವಿಚಾರದಲ್ಲಿ ಮಾಡಿದ್ದ ದೊಡ್ಡ ತಪ್ಪಿನ ಬಗ್ಗೆ ಬಾಯ್ಬಿಟ್ಟ ರಮ್ಯಾ
ರಾಹುಲ್​ ಗಾಂಧಿ, ರಮ್ಯಾ
Follow us
TV9 Web
| Updated By: ಮದನ್​ ಕುಮಾರ್​

Updated on: Jun 29, 2021 | 1:45 PM

ನಟಿ ರಮ್ಯಾ ಈಗ ಸಿನಿಮಾದಲ್ಲೂ ಇಲ್ಲ, ರಾಜಕೀಯದಲ್ಲೂ ಇಲ್ಲ. ಆದರೂ ಅವರು ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇದ್ದಾರೆ. ತಮ್ಮ ಸಿನಿಮಾ ಮತ್ತು ರಾಜಕೀಯ ಬದುಕಿನ ಹಲವು ವಿಚಾರಗಳನ್ನು ಆಗಾಗ ಶೇರ್​ ಮಾಡಿಕೊಳ್ಳುತ್ತ ಇರುತ್ತಾರೆ. ಈಗ ಅವರು ತಾವು ಮಾಡಿದ ಒಂದು ದೊಡ್ಡ ತಪ್ಪಿನ ಬಗ್ಗೆ ಬಾಯಿ ಬಿಟ್ಟಿದ್ದಾರೆ. ರಾಹುಲ್​ ಗಾಂಧಿ ವಿಚಾರದಲ್ಲಿ ತಮ್ಮಿಂದ ಆದ ಒಂದು ಅಚಾತುರ್ಯವನ್ನು ಜಗಜ್ಜಾಹೀರು ಮಾಡಿದ್ದಾರೆ. ಆ ತಪ್ಪಿನಿಂದಾಗಿ ಜಗತ್ತಿನ ಎದುರು ರಾಹುಲ್​ ಗಾಂಧಿ ಟ್ರೋಲ್​ ಆಗಿದ್ದರು.

ಬಹಳ ಹಿಂದೆ ನಡೆದ ಘಟನೆಯನ್ನೀಗ ರಮ್ಯಾ ನೆನಪಿಸಿಕೊಂಡಿದ್ದಾರೆ. ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಈ ಬಗ್ಗೆ ವಿವರವಾಗಿ ಬರೆದುಕೊಂಡಿದ್ದಾರೆ. ‘ಆಗ ನಾನು ಕಾಂಗ್ರೆಸ್​ ಸೋಷಿಯಲ್​ ಮೀಡಿಯಾ ವಿಭಾಗದ ಮುಖ್ಯಸ್ಥಳಾಗಿದ್ದೆ. ಆಗ ನಡೆದ ಘಟನೆಯನ್ನು ನೀವು ನೆನಪಿಸಿಕೊಳ್ಳಬಹುದು. ಆದರೆ ಅದರ ಹಿಂದೆ ಇರುವ ಸತ್ಯದ ಬಗ್ಗೆ ನಿಮಗೆ ಗೊತ್ತಿಲ್ಲ. ಆ ಬಗ್ಗೆ ಇಲ್ಲಿದೆ ಪೂರ್ಣ ವಿವರ’ ಎಂದು ರಮ್ಯಾ ಬರಹ ಆರಂಭಿಸಿದ್ದಾರೆ.

‘ಕಾಂಗ್ರೆಸ್​ನ ಕೆಲವು ಮಾಜಿ ಸಂಸದರು, ಅಂದಿನ ಕಾಂಗ್ರೆಸ್ ಅಧ್ಯಕ್ಷ ರಾಹುಲ್​ ಗಾಂಧಿ ಜೊತೆ ಜರ್ಮನಿ ಪ್ರವಾಸಕ್ಕೆ ತೆರಳಿದ್ದರು. ಅಂಥ ಪ್ರವಾಸಗಳು ತುಂಬ ಗಡಿಬಿಡಿಯಿಂದ ಕೂಡಿರುತ್ತಿದ್ದವು. ಒಂದು ದಿನ ಪ್ಲ್ಯಾನ್​ ಪ್ರಕಾರ, ಬರ್ಲಿನ್​ನ ಒಂದು ಮ್ಯೂಸಿಯಂಗೆ ಭೇಟಿ ನೀಡಿದೆವು. ಅಲ್ಲಿನ ರಾಜಕಾರಣಿಗಳು ನಮಗೆ ಅವರ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ತೋರಿಸುತ್ತಿದ್ದರು. ಆಗ ನಾನು ರಾಹುಲ್​ ಗಾಂಧಿಯವರ ಕೆಲವು ಫೋಟೋಗಳನ್ನು ಕ್ಲಿಕ್​ ಮಾಡಿ, ಇಂಡಿಯಾದಲ್ಲಿರುವ ನನ್ನ ಟೀಮ್​ಗೆ ಕಳಿಸಿದೆ. ಬೇಡದ ಕಾರಣಕ್ಕಾಗಿ ಆ ಫೋಟೋಗಳು ವೈರಲ್​ ಆಗಿಬಿಟ್ಟವು’ ಎಂದು ರಮ್ಯಾ ಬರೆದುಕೊಂಡಿದ್ದಾರೆ.

ರಮ್ಯಾ ಕಳಿಸಿದ ಆ ಫೋಟೋಗಳು ಟ್ರೋಲ್​ಗೆ ಒಳಗಾದವು. ಆ ಫೋಟೋಗಳನ್ನೇ ಇಟ್ಟುಕೊಂಡು ರಾಹುಲ್​ ಗಾಂಧಿ ಮತ್ತು ಕಾಂಗ್ರೆಸ್​ ಪಕ್ಷವನ್ನು ಟೀಕಿಸುವಂತಹ ನೂರಾರು ಮೀಮ್​ಗಳು ತಯಾರಾದವು. ಇದರಿಂದ ರಮ್ಯಾ ಅವರಿಗೆ ತೀವ್ರ ಬೇಸರ ಆಗಿತ್ತು. ‘ನಾನು ರಾಹುಲ್​ ಗಾಂಧಿ ಬಳಿ ಹೋಗಿ ಕ್ಷಮೆ ಕೇಳಿದೆ. ರಾಜೀನಾಮೆ ಕೂಡ ನೀಡಿದೆ. ಅವರು ಸ್ವೀಕರಿಸಲಿಲ್ಲ. ಪರವಾಗಿಲ್ಲ, ಮುಂದಿನ ಬಾರಿ ಪೋಸ್ಟ್​ ಮಾಡುವಾಗ ಎಚ್ಚರದಿಂದಿರಿ ಎಂದಷ್ಟೇ ಹೇಳಿದರು. ನಾನು ಅಳುತ್ತಿದ್ದೆ’ ಎನ್ನುವ ಮೂಲಕ ರಾಹುಲ್​ ಗಾಂಧಿ ಅವರ ಗುಣವನ್ನು ರಮ್ಯಾ ಹೊಗಳಿದ್ದಾರೆ.

ಇದನ್ನೂ ಓದಿ:

Pranitha Marriage: ಪ್ರಣಿತಾ ಮದುವೆ ಬಳಿಕ ರಮ್ಯಾ ಕಡೆಗೆ ಪ್ರಶ್ನೆ ಎಸೆದ ಅಭಿಮಾನಿಗಳು​; ಏನಿದು ಲಿಂಕ್​?

Ramya Divya Spandana: ರಕ್ಷಿತ್​ ಶೆಟ್ಟಿ ಜೊತೆ ರಮ್ಯಾ ಮದುವೆ ಆಗ್ಬೇಕು; ಫ್ಯಾನ್ಸ್​ ಬಯಕೆಗೆ ಉತ್ತರ ಕೊಟ್ಟ ಸ್ಯಾಂಡಲ್​ವುಡ್​ ಕ್ವೀನ್​

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್