ಈ ವಾರ ಬಿಗ್​ ಬಾಸ್​ ಮನೆಯಿಂದ ಎಲಿಮಿನೇಟ್​ ಆಗೋರು ಯಾರು?; ಇಬ್ಬರ ಮೇಲೆ ತೂಗುಗತ್ತಿ

ಈ ವಾರ ಚಕ್ರವರ್ತಿ ಚಂದ್ರಚೂಡ್​, ಮಂಜು ಪಾವಗಡ, ಪ್ರಿಯಾಂಕಾ ತಿಮ್ಮೇಶ್​, ದಿವ್ಯಾ ಸುರೇಶ್​, ಪ್ರಶಾಂತ್ ಸಂಬರಗಿ​, ರಘು ಗೌಡ, ಶಮಂತ್ ಬ್ರೋ ಗೌಡ,​ ವೈಷ್ಣವಿ, ಅರವಿಂದ್ ಕೆ.ಪಿ ಮೇಲೆ ಎಲಿಮಿನೇಷನ್​ ತೂಗುಗತ್ತಿ ತೂಗುತ್ತಿದೆ.

ಈ ವಾರ ಬಿಗ್​ ಬಾಸ್​ ಮನೆಯಿಂದ ಎಲಿಮಿನೇಟ್​ ಆಗೋರು ಯಾರು?; ಇಬ್ಬರ ಮೇಲೆ ತೂಗುಗತ್ತಿ
ಬಿಗ್​ ಬಾಸ್​ ಕನ್ನಡ
Follow us
| Updated By: ರಾಜೇಶ್ ದುಗ್ಗುಮನೆ

Updated on:Jul 11, 2021 | 10:19 PM

ಬಿಗ್​ ಬಾಸ್​ ಎರಡನೇ ಇನ್ನಿಂಗ್ಸ್​ನ ಎರಡನೇ ಎಲಿಮಿನೇಷನ್​ ಈ ವಾರ ನಡೆಯಲಿದೆ. ಕಳೆದ ವಾರ ನಿಧಿ ಸುಬ್ಬಯ್ಯ ಎಲಿಮಿನೇಟ್​ ಆಗಿದ್ದರು. ಈ ವಾರ ಯಾರು ಎಲಿಮಿನೇಟ್​ ಆಗುತ್ತಾರೆ ಎನ್ನುವ ಲೆಕ್ಕಾಚಾರ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ. ಅಷ್ಟಕ್ಕೂ ಈ ವಾರ ಎಲಿಮಿನೇಟ್​ ಆಗೋ ಸ್ಪರ್ಧಿ ಯಾರು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಈ ವಾರ ಚಕ್ರವರ್ತಿ ಚಂದ್ರಚೂಡ್​, ಮಂಜು ಪಾವಗಡ, ಪ್ರಿಯಾಂಕಾ ತಿಮ್ಮೇಶ್​, ದಿವ್ಯಾ ಸುರೇಶ್​, ಪ್ರಶಾಂತ್ ಸಂಬರಗಿ​, ರಘು ಗೌಡ, ಶಮಂತ್ ಬ್ರೋ ಗೌಡ,​ ವೈಷ್ಣವಿ, ಅರವಿಂದ್ ಕೆ.ಪಿ ಮೇಲೆ ಎಲಿಮಿನೇಷನ್​ ತೂಗುಗತ್ತಿ ತೂಗುತ್ತಿದೆ. ಇವರಲ್ಲಿ ಒಬ್ಬರು ಈ ವಾರ ಮನೆಯಿಂದ ಹೊರ ಹೋಗುವುದು ಖಚಿತವಾಗಿದೆ.

ಮನೆಯಲ್ಲಿ ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿರುವ ಮಂಜು ಪಾವಗಡ ಎಂಟರ್​ಟೇನ್​ಮೆಂಟ್​ ನೀಡುತ್ತಿದ್ದಾರೆ. ಅರವಿಂದ್ ಕೆ.ಪಿ. ಕೂಡ ಸ್ಟ್ರಾಂಗ್​ ಎನಿಸಿಕೊಂಡಿದ್ದಾರೆ. ಹೀಗಾಗಿ, ಇಬ್ಬರೂ ಈ ವಾರ ಮುಂದುವರಿಯೋದು ಖಚಿತ. ಪ್ರಶಾಂತ್ ಸಂಬರಗಿ ಈ ವಾರ ದೊಡ್ಡ ಮಟ್ಟದಲ್ಲಿ ಕೂಗಾಡಿ ಎಲ್ಲರ ಗಮನವನ್ನು ತಮ್ಮೆಡೆ ಸೆಳೆದುಕೊಂಡಿದ್ದಾರೆ. ಶುಭಾ ಪೂಂಜಾ, ಶಮಂತ್, ದಿವ್ಯಾ ಸುರೇಶ್, ವೈಷ್ಣವಿ ಎಂದಿನಂತೆ ತಮ್ಮ ಆಟ ಆಡುತ್ತಿದ್ದಾರೆ.

ಚಕ್ರವರ್ತಿ ಮನೆಯ ವಾತಾವರಣ ಹಾಳು ಮಾಡುತ್ತಿದ್ದಾರೆ, ಅವರಲ್ಲಿ ಕೋಪ ಜಾಸ್ತಿ ಎಂಬಿತ್ಯಾದಿ ಆರೋಪಗಳು ನಾಮಿನೇಷನ್​ ವೇಳೆ ಕೇಳಿ ಬಂದಿದ್ದವು. ಆದರೆ, ಈ ವಾರ ಪ್ರಶಾಂತ್​ ಸಂಬರಗಿ ಸಹವಾಸ ಬಿಟ್ಟಿದ್ದಾರೆ ಚಕ್ರರ್ತಿ. ಇದು ಚಕ್ರವರ್ತಿಗೆ ಪ್ಲಸ್​ ಪಾಯಿಂಟ್​ ಆಗಬಹುದು.

ಉಳಿದಿದ್ದು ಪ್ರಿಯಾಂಕಾ ತಿಮ್ಮೇಶ್​ ಹಾಗೂ ರಘು. ಇಬ್ಬರೂ ಬಿಗ್​ ಬಾಸ್ ಮನೆಯಲ್ಲಿ ಸ್ವಲ್ಪ ಡಲ್​ ಆಗಿ ಕಾಣುತ್ತಿದ್ದಾರೆ. ಟಾಸ್ಕ್​ ನಡೆಯುವ ವೇಳೆ ರಘು ಅಷ್ಟು ಆ್ಯಕ್ಟೀವ್​ ಆಗಿ ಕಾಣಲಿಲ್ಲ. ಹೀಗಾಗಿ ಇಬ್ಬರಲ್ಲಿ ಒಬ್ಬರು ಮನೆಯಿಂದ ಹೊರ ಹೋಗುವುದು ಖಚಿತ ಎನ್ನಲಾಗಿತ್ತು. ಈಗ ರಘು ಎಲಿಮಿನೇಟ್​ ಆಗಿರೋದು ಖಚಿತವಾಗಿದೆ.

ಇದನ್ನೂ ಓದಿ: ಪ್ರಶಾಂತ್​-ಅರವಿಂದ್ ಕೈ ಮಿಲಾಯಿಸಿಕೊಳ್ಳುವುದನ್ನು ತಪ್ಪಿಸಿದ ಮನೆ ಮಂದಿ; ಬಿಗ್​ ಬಾಸ್​ ಮನೆಯಲ್ಲಿ ದೊಡ್ಡ ಜಗಳ

ಚಕ್ರವರ್ತಿ-ಪ್ರಶಾಂತ್​ ಜಗಳದಲ್ಲಿ ಕೇಳಿದ್ದು ಕೇವಲ ಬೀಪ್​ ಶಬ್ದಗಳು

Published On - 2:31 pm, Sat, 10 July 21

ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್