AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sunny leone: ಪೆಟ್ರೋಲ್ ಬೆಲೆಯಿಂದ ತತ್ತರಿಸಿರುವ ಜನರಿಗೆ ಆರೋಗ್ಯದ ಪಾಠ ಹೇಳಿದ ಸನ್ನಿ ಲಿಯೋನ್

ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯವಾಗಿರುವ ಸನ್ನಿ ಲಿಯೋನ್ ಇದೀಗ ಸೈಕಲ್​ನೊಂದಿಗೆ ನಿಂತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ತಮ್ಮ ಅಭಿಮಾನಿಗಳಿಗೆ ಎರಡು ಕಿವಿ ಮಾತನ್ನು ಹೇಳಿದ್ದಾರೆ. ಅದೇನದು ಎಂದು ತಿಳಿಯಲು ಮುಂದೆ ಓದಿ.

Sunny leone: ಪೆಟ್ರೋಲ್ ಬೆಲೆಯಿಂದ ತತ್ತರಿಸಿರುವ ಜನರಿಗೆ ಆರೋಗ್ಯದ ಪಾಠ ಹೇಳಿದ ಸನ್ನಿ ಲಿಯೋನ್
ಇನ್ಸ್ಟಾಗ್ರಾಂನಲ್ಲಿ ಸನ್ನಿ ಲಿಯೋನ್ ಹಂಚಿಕೊಂಡಿರುವ ಚಿತ್ರ
TV9 Web
| Edited By: |

Updated on: Jul 10, 2021 | 11:43 AM

Share

ಪಡ್ಡೆ ಹುಡುಗರ ನಿದ್ದೆ ಗೆಡಿಸುವ ಸನ್ನಿ ಲಿಯೋನ್ ಈಗ ಉತ್ತಮ ಆರೋಗ್ಯಕ್ಕೆ ಟಿಪ್ಸ್ ಕೊಟ್ಟಿದ್ದಾರೆ. ತಮ್ಮ ಅಭಿನಯದಿಂದ ಎಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೋ ಅದಕ್ಕಿಂತಲೂ ಹೆಚ್ಚು ಅಭಿಮಾನಿಗಳನ್ನು ಈ ನಟಿ ತಮ್ಮ ಸುಂದರ ವ್ಯಕ್ತಿತ್ವದಿಂದ ಸಂಪಾದಿಸಿದ್ದಾರೆ. ಹಾಗಿದ್ದ ಮೇಲೆ ಅವರ ಅಭಿಮಾನಿ ವರ್ಗ ಈ ಹೆಲ್ತ್ ಟಿಪ್ಸ್​ ಬಗ್ಗೆ ಗಮನಕೊಡಲೇಬೇಕು.

ಸಾಮಾಜಿಕ ಜಾಲತಾಣದಲ್ಲಿ ಉತ್ತಮ ವಿಚಾರಗಳನ್ನು ಸನ್ನಿ ಸತತವಾಗಿ ಹಂಚಿಕೊಳ್ಳುತ್ತಿರುತ್ತಾರೆ. ಅದಕ್ಕಾಗಿ ಅವರು ಅನುಸರಿಸುವ ಮಾದರಿಯೂ ಭಿನ್ನ. ತಮ್ಮ ಚಿತ್ರವನ್ನು ಹಂಚಿಕೊಂಡರೂ ವರ್ತಮಾನದ ಆಗುಹೋಗುಗಳಿಗೆ ಸ್ಪಂದಿಸುವಂತೆಯೇ ಚಿತ್ರಕ್ಕೆ ಅಡಿ ಬರಹವನ್ನು ನೀಡಿರುತ್ತಾರೆ. ಇದೇ ಮಾದರಿಯಲ್ಲಿ ಶುಕ್ರವಾರ ಅವರು ಒಂದು ಚಿತ್ರವನ್ನು ಹಂಚಿಕೊಂಡಿದ್ದಾರೆ.

ಅದು ನೂರು ರೂ.ಗಳನ್ನು ಕೊನೆಗೂ ದಾಟಿದ ಮೇಲೆ, ನೀವು ನಿಮ್ಮ ಆರೋಗ್ಯದೆಡೆಗೆ ಕಾಳಜಿ ತೆಗೆದುಕೊಳ್ಳಲೇಬೇಕು, ಸೈಕಲಿಂಗ್ ಅನ್ನೋದು ಈಗ ಹೊಸ ಫ್ಯಾಶನ್ (Cycling is the new GLAM) ಎಂದು ಅವರು ಬರೆದುಕೊಂಡಿದ್ದಾರೆ. ಆ ಮೂಲಕ ಪೆಟ್ರೋಲ್ ಬೆಲೆ ಹೆಚ್ಚಾಗಿದೆ. ಈಗ ಪರಿಸರ ಸ್ನೇಹಿ ವಾಹನ ಬಳಸುವುದು ಆರ್ಥಿಕ ದೃಷ್ಟಿಯಿಂದಲೂ, ಆರೋಗ್ಯದ ದೃಷ್ಟಿಯಿಂದಲೂ ಬಹಳ ಒಳ್ಳೆಯದು ಎಂಬುದು ಅವರ ಅನಿಸಿಕೆ. ಜೊತೆಗೆ ಸೈಕಲಿಂಗ್ ಮಾಡೋದಕ್ಕೆ ಹಿಂಜರಿಕೆ ಬೇಡ. ಅದೀಗ ಹೊಸ ಫ್ಯಾಶನ್ ಎಂದು ಎಲ್ಲರಿಗೆ ಧೈರ್ಯ ತುಂಬಿದ್ದಾರೆ.

ಸನ್ನಿ ಲಿಯೋನ್ ಅವರು ಚಿತ್ರದಲ್ಲಿ ಕೆಂಪು ಬಣ್ಣದ ದಿರಿಸನ್ನು ಧರಿಸಿದ್ದು ಅದಕ್ಕೆ ಹೊದುವಂತೆ ಕೆಂಪು ಬಣ್ಣದ್ದೇ ಹೀಲ್ಸ್​ ಅನ್ನು ಧರಿಸಿ, ಸೈಕಲ್​ನೊಂದಿಗೆ ನಿಂತಿದ್ದಾರೆ. ಈ ಮೊದಲೂ ಸಹ ಸನ್ನಿ ಲಿಯೋನ್ ತಮ್ಮ ಸೈಕಲ್​ನೆಡೆಗಿನ ಪ್ರೇಮವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೊರಹಾಕಿದ್ದರು.

ಸಿನಿಮಾ ವಿಚಾರಕ್ಕೆ ಬಂದರೆ, ಸನ್ನಿ ಮಲಯಾಳಂನಲ್ಲಿ ಅದೃಷ್ಟ ಪರೀಕ್ಷೆಗೆ ತಯಾರಾಗಿದ್ದಾರೆ. ಅಲ್ಲಿ ಅವರು ಸೈಕಲಾಜಿಕಲ್- ಥ್ರಿಲ್ಲರ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಕ್ರಮ್ ಭಟ್ ನಿರ್ದೇಶನದ ‘ಅನಾಮಿಕ’ ವೆಬ್​ ಸೀರೀಸ್​ನಲ್ಲೂ ಅವರು ನಟಿಸುತ್ತಿದ್ದಾರೆ. ಇದರೊಂದಿಗೆ ರಂಗೀಲಾ ಹಾಗೂ ತಮಿಳಿನ ವೀರಮ್ಮದೇವಿ ಚಿತ್ರದಲ್ಲೂ ಬಣ್ಣ ಹಚ್ಚಲಿದ್ದಾರೆ.

ಬಿಗ್​ಬಾಸ್ ಐದನೇ ಸೀಸನ್ ಮುಖಾಂತರ ಭಾರತದ ಮನರಂಜನಾ ಕ್ಷೇತ್ರಕ್ಕೆ ಕಾಲಿಟ್ಟ ಅವರು ನಂತರ, ಹಲವಾರು ಚಿತ್ರಗಳು ಹಾಗೂ ವೆಬ್​ ಸೀರೀಸ್​ಗಳಲ್ಲಿ ಬಣ್ಣ ಹಚ್ಚಿದ್ದಾರೆ. ಕನ್ನಡದಲ್ಲಿ ನಿರ್ದೇಶಕ, ನಟ ಜೋಗಿ ಪ್ರೇಮ್ ಜೊತೆಗೆ ‘ಡಿಕೆ’ ಚಿತ್ರದಲ್ಲಿ ‘ಬಾಗಿಲು ತೆರೆಯೇ ಸೇಸಮ್ಮಾ’ ಹಾಡಿಗೆ ಹೆಜ್ಜೆ ಹಾಕಿ ಚಿತ್ರ ಪ್ರೇಮಿಗಳ ಮನಸ್ಸನ್ನು ಸೂರೆಗೊಂಡಿದ್ದರು.

(Sunny Leone posts two photos with bicycle and says its time to concentrate on health)