AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vinod Prabhakar: ‘ನನ್ನ ಮಾರ್ಕೆಟ್ ನನಗೆ ಗೊತ್ತಿದೆ’ ಅಂತ ವಿನೋದ್ ಪ್ರಭಾಕರ್ ಹೇಳಿದ್ದೇಕೆ?

ಒಂದು ಚಿತ್ರದ ಯಶಸ್ಸು ಹಲವು ಅಪಪ್ರಚಾರಕ್ಕೆ ಗುರಿ ಮಾಡುತ್ತದೆ ಎಂಬುದನ್ನು ಸ್ಯಾಂಡಲ್​ವುಡ್​ನ ಪ್ರತಿಭಾವಂತ ಯುವ ನಟ ವಿನೋದ್ ಪ್ರಭಾಕರ್ ಮನಗಂಡಿದ್ದಾರೆ. ಆ ಕುರಿತು ಪ್ರತಿಕ್ರಿಯಿಸಿರುವ ಅವರು ಹಲವು ವಿಚಾರಗಳನ್ನು ತೆರೆದಿಟ್ಟಿದ್ದಾರೆ.

Vinod Prabhakar: 'ನನ್ನ ಮಾರ್ಕೆಟ್ ನನಗೆ ಗೊತ್ತಿದೆ' ಅಂತ ವಿನೋದ್ ಪ್ರಭಾಕರ್ ಹೇಳಿದ್ದೇಕೆ?
ರಾಬರ್ಟ್ ಚಿತ್ರದ ರಾಘವ ಪಾತ್ರದಲ್ಲಿ ವಿನೋದ್ ಪ್ರಭಾಕರ್ (ಎಡ), ವಿನೋದ್ ಪ್ರಭಾಕರ್ (ಬಲ)
TV9 Web
| Updated By: shivaprasad.hs|

Updated on:Jul 10, 2021 | 2:46 PM

Share

‘ರಾಬರ್ಟ್’ ಚಿತ್ರದಲ್ಲಿ ದರ್ಶನ್ ಜೊತೆ ತೆರೆ ಮೇಲೆ ಕಾಣಿಸಿಕೊಂಡು ಎಲ್ಲರಿಂದ ಮೆಚ್ಚುಗೆ ಪಡೆದಿದ್ದ ವಿನೋದ್ ಪ್ರಭಾಕರ್ (Vinod Prabhakar) ಅವರು, ತಮ್ಮ ಕುರಿತು ಎದ್ದಿರುವ ಅಪಪ್ರಚಾರಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಅವರ ಹೊಸ ಚಿತ್ರ ‘ವರದ’ದ ಮೋಷನ್ ಪೋಸ್ಟರ್ ಬಿಡುಗಡೆಯ ಸಂದರ್ಭದಲ್ಲಿ ಮಾತನಾಡಿದ ಅವರು, ‘ನನ್ನ ಸಂಭಾವನೆ ಏರಿಕೆಯಾಗಿದೆ, ಕೋಟಿ ಡಿಮ್ಯಾಂಡ್ ಮಾಡುತ್ತಾ ಇದ್ದಾರೆ’ ಎಂದೆಲ್ಲಾ ಅಪಪ್ರಚಾರ ಮಾಡುತ್ತಿದ್ದಾರೆ. ನನ್ನ ಮಾರ್ಕೆಟ್ ನನಗೆ ಗೊತ್ತದೆ. ನಾನು ಡಿಮ್ಯಾಂಡ್ ಮಾಡುವುದು ಒಳ್ಳೆಯ ಕತೆ ಹಾಗೂ ಒಳ್ಳೆಯ ಪಾತ್ರಕ್ಕೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

ನಿರ್ಮಾಪಕರಿಗೆ ಹೆಚ್ಚು ಬಜೆಟ್ ಹಾಕಬೇಡಿ ಎಂದು ಹೇಳುವವನು ನಾನು. ಉದಾಹರಣೆಗೆ, ಹತ್ತು ಕೋಟಿ ಹಾಕಿ ಮಾಡಿದ ಚಿತ್ರ 5.5ಕೋಟಿ ಗಳಿಕೆ ಮಾಡಿತು ಎಂದುಕೊಳ್ಳಿ, ಆಗ ಹೊರಗೆ 10ಕೋಟಿಯೂ ನಷ್ಟವಾಯಿತು ಎಂದೇ ಪ್ರಚಾರವಾಗುತ್ತದೆ. ಅದಕ್ಕೇ ನಾನು 5 ಕೋಟಿ ಹಾಕಿ ಸಿನಿಮಾ ಮಾಡಿ ಎನ್ನುತ್ತೇನೆ, 5.5ಕೋಟಿ ಕಮಾಯಿ ಮಾಡಿದರೂ ಆ ನಿರ್ಮಾಪಕ ಸೇಫ್ ಆಗುತ್ತಾನೆ. ಹಾಗಾದಾಗ ಆತ ಇನ್ನೂ ಹೆಚ್ಚು ಚಿತ್ರ ನಿರ್ಮಾಣ ಮಾಡುತ್ತಾನೆ. ನಾನು ಯಾವತ್ತಿಗೂ ನಿರ್ಮಾಪಕರನ್ನು ಸೇಫ್ ಮಾಡಲು ಪ್ರಯತ್ನಿಸುತ್ತೇನೆ. ಇದನ್ನೆಲ್ಲಾ ಬಿಟ್ಟು ಅಪಪ್ರಚಾರ ಮಾಡಿ ನನ್ನ ತಟ್ಟೆಯಲ್ಲಿರುವ ಅನ್ನವನ್ನು ಏಕೆ ಕಸಿಯುತ್ತೀರಿ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ವರದ ಚಿತ್ರದಲ್ಲಿ ತಂದೆ- ಮಗನ ಬಾಂಧವ್ಯದ ಕುರಿತು ಕತೆಯಿದೆ. ಸದ್ಯದಲ್ಲೇ ಚಿತ್ರದ ಟೀಸರ್, ಟ್ರೇಲರ್ ಬಿಡುಗಡೆಯಾಗಲಿದೆ. ಆಗ ಚಿತ್ರದ ಕುರಿತು ಇನ್ನಷ್ಟು ಮಾಹಿತಿ ಹಂಚಿಕೊಳ್ಳುವುದಾಗಿ ಅವರು ತಿಳಿಸಿದರು. ವರದ ಚಿತ್ರದಲ್ಲಿ ವಿನೋದ್ ಪ್ರಭಾಕರ್ ತಂದೆಯ ಪಾತ್ರದಲ್ಲಿ ಖ್ಯಾತ ನಟ ಚರಣ್ ರಾಜ್ ನಟಿಸಿದ್ದಾರೆ. ನಾಯಕಿಯಾಗಿ ಅಮಿತಾ ನಟಿಸಿದ್ದಾರೆ. ಚಿತ್ರಕ್ಕೆ ಪ್ರದೀಪ್ ವರ್ಮ ಸಂಗೀತ ನೀಡಿದ್ದು, ಜೈ ಆನಂದ್ ಛಾಯಾಗ್ರಹಣ ಮಾಡಿದ್ದಾರೆ. ಚಿತ್ರವು ಬಿಡುಗಡೆಗೆ ತಯಾರಾಗುತ್ತಿದೆ ಎಂದು ಚಿತ್ರ ತಂಡವು ತಿಳಿಸಿದೆ.

ವರದ ಚಿತ್ರದ ಮೋಷನ್ ಪೋಸ್ಟರ್ ಇಲ್ಲಿದೆ:

ಇದನ್ನೂ ಓದಿ: ಮತ್ತೆ ಒಂದಾಗಿ ನಾಗಚೈತನ್ಯ ಜೊತೆ ಸೆಲ್ಫಿಗೆ ಭರ್ಜರಿ ಪೋಸ್ ನೀಡಿದ ಆಮೀರ್ ಖಾನ್, ಕಿರಣ್ ರಾವ್: ಸಂತಸಕ್ಕೆ ಕಾರಣ ಗೊತ್ತಾ?

ಇದನ್ನೂ ಓದಿ: IPL 2022 ರಲ್ಲಿ ಧೋನಿ ಆಡದಿದ್ರೆ ನಾನೂ ಕಣಕ್ಕಿಳಿಯಲ್ಲ ಎಂದ CSKಯ ಸ್ಟಾರ್ ಆಟಗಾರ

(Sandalwood actor Vinod Prabhakar requests to not spread any rumours regarding his payments)

Published On - 2:33 pm, Sat, 10 July 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ