ಮತ್ತೆ ಒಂದಾಗಿ ನಾಗಚೈತನ್ಯ ಜೊತೆ ಸೆಲ್ಫಿಗೆ ಭರ್ಜರಿ ಪೋಸ್ ನೀಡಿದ ಆಮೀರ್ ಖಾನ್, ಕಿರಣ್ ರಾವ್: ಸಂತಸಕ್ಕೆ ಕಾರಣ ಗೊತ್ತಾ?

Aamir Khan Kiran Rao: ಇತ್ತೀಚೆಗಷ್ಟೇ ದಾಂಪತ್ಯದಿಂದ ಬೇರ್ಪಟ್ಟಿರುವ ಆಮೀರ್ ಖಾನ್ ಹಾಗೂ ಕಿರಣ್ ರಾವ್ ಜಂಟಿಯಾಗಿ ನಿರ್ಮಿಸುತ್ತಿರುವ 'ಲಾಲ್ ಸಿಂಗ್ ಛಡ್ಡಾ' ಚಿತ್ರದ ಸೆಟ್​ನಲ್ಲಿ ಭರ್ಜರಿ ಪೋಸ್ ಕೊಟ್ಟಿದ್ದಾರೆ.

ಮತ್ತೆ ಒಂದಾಗಿ ನಾಗಚೈತನ್ಯ ಜೊತೆ ಸೆಲ್ಫಿಗೆ ಭರ್ಜರಿ ಪೋಸ್ ನೀಡಿದ ಆಮೀರ್ ಖಾನ್, ಕಿರಣ್ ರಾವ್: ಸಂತಸಕ್ಕೆ ಕಾರಣ ಗೊತ್ತಾ?
ಲಾಲ್ ಸಿಂಗ್ ಛಡ್ಡಾ ಚಿತ್ರದ ಸೆಟ್​ನಲ್ಲಿ (ಎಡದಿಂದ) ನಾಗಚೈತನ್ಯ, ಆಮೀರ್ ಖಾನ್, ಕಿರಣ್ ರಾವ್ ಮತ್ತು ನಿರ್ದೇಶಕ ಅದ್ವೈತ್ ಚಂದನ್
Follow us
TV9 Web
| Updated By: Digi Tech Desk

Updated on:Jul 10, 2021 | 3:11 PM

ಆಮೀರ್ ಖಾನ್ (Aamir Khan) ಮತ್ತು ಕಿರಣ್ ರಾವ್ ಅವರು ಹದಿನೈದು ವರ್ಷಗಳ ದಾಂಪತ್ಯದಿಂದ ಕೆಲ ದಿನಗಳ ಹಿಂದಷ್ಟೇ ಬೇರ್ಪಟ್ಟಿದ್ದರು. ಇದೀಗ ‘ಲಾಲ್ ಸಿಂಗ್ ಛಡ್ಡಾ’ (Laal Singh Chaddha) ಚಿತ್ರದ ಶೂಟಿಂಗ್​ ಸೆಟ್​ನಲ್ಲಿ ಅವರು ತೆಲುಗಿನ ಸ್ಟಾರ್ ನಟ ನಾಗಚೈತನ್ಯ (Naga Chaitanya) ಅವರೊಂದಿಗೆ ಭರ್ಜರಿ ಪೋಸ್ ಕೊಟ್ಟಿದ್ದಾರೆ. 34 ವರ್ಷದ ನಾಗಚೈತನ್ಯ ಅವರು ‘ಲಾಲ್ ಸಿಂಗ್ ಛಡ್ಡಾ’ ಚಿತ್ರದಲ್ಲಿ ಆಮೀರ್ ಖಾನ್ ಅವರೊಂದಿಗೆ ತೆರೆಯನ್ನು ಹಂಚಿಕೊಳ್ಳುತ್ತಿದ್ದಾರೆ. ‘ಲಾಲ್ ಸಿಂಗ್ ಛಡ್ಡಾ’ ಚಿತ್ರವನ್ನು ಆಮೀರ್ ಖಾನ್ ಪ್ರೊಡಕ್ಷನ್ ಹೌಸ್ ಅಡಿಯಲ್ಲಿ ಆಮೀರ್ ಖಾನ್ ಹಾಗೂ ಕಿರಣ್ ರಾವ್ (Kiran Rao) ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.

ಚಿತ್ರದಲ್ಲಿ ಆಮೀರ್ ಖಾನ್​, ಕಿರಣ್ ರಾವ್, ನಾಗಚೈತನ್ಯರೊಂದಿಗೆ ನಿರ್ದೇಶಕ ಅದ್ವೈತ್ ಚಂದನ್ ಅವರೂ ಪೋಸ್ ಕೊಟ್ಟಿದ್ದಾರೆ. ಇದೇ ಚಿತ್ರವನ್ನು ಆಮೀರ್ ಖಾನ್ ಹಾಗೂ ಕಿರಣ್ ರಾವ್ ತಮ್ಮ ವೈಯಕ್ತಿಕ ಖಾತೆಗಳಲ್ಲೂ ಹಂಚಿಕೊಂಡಿದ್ದಾರೆ. ಆಮೀರ್ ಖಾನ್ ಪ್ರೊಡಕ್ಷನ್ಸ್​ನ ಅಧಿಕೃತ ಖಾತೆಯಲ್ಲಿ, ‘ಸ್ವಾಗತ ಬಾಲ, ಎಲ್ಲರ ಹೃದಯವನ್ನು ಕದಿಯುವ ಚೋರ, ಈಗಾಗಲೇ ನಮ್ಮ ಹೃದಯವನ್ನು ಕದ್ದಿದ್ದೀಯಾ, ಪ್ರೀತಿಯಿಂದ ಆಮೀರ್ ಹಾಗೂ ಕಿರಣ್’ (“Welcome Bala, stealer of hearts, you have already stolen ours. Love, Kiran and Aamir”) ಎಂದು ಬರೆದು ಚಿತ್ರವನ್ನು ಹಂಚಿಕೊಳ್ಳಲಾಗಿದೆ.

‘ಲಾಲ್ ಸಿಂಗ್ ಛಡ್ಡಾ’ ಚಿತ್ರವು ಹಾಲಿವುಡ್​ನ ಸಾರ್ವಕಾಲಿಕ ಯಶಸ್ವೀ ಚಿತ್ರಗಳಲ್ಲೊಂದಾದ ‘ಫಾರೆಸ್ಟ್ ಗಂಪ್’ ಚಿತ್ರದ ಅಧಿಕೃತ ರಿಮೇಕ್. ಲಾಲ್ ಸಿಂಗ್ ಛಡ್ಡಾನ ಜೀವನವು ಭಾರತದ ಪ್ರಮುಖ ಘಟನೆಗಳಿಗೆ ಹೇಗೆ ಸಂಬಂಧ ಹೊಂದಿರುತ್ತದೆ ಎಂಬುದನ್ನು ತೆಳು ಹಾಸ್ಯದ ಮುಖಾಂತರ ಚಿತ್ರವು ಪ್ರಸ್ತುತಪಡಿಸಲಿದೆ. ದೇಶದ ಸುಮಾರು ನೂರಕ್ಕೂ ಅಧಿಕ ಪ್ರದೇಶಗಳಲ್ಲಿ ಚಿತ್ರೀಕರಣವಾಗುತ್ತಿರುವ ಈ ಚಿತ್ರದಲ್ಲಿ ದೇಶದ ಬಹಳಷ್ಟು ಸ್ಟಾರ್ ನಟರು ಬಣ್ಣ ಹಚ್ಚುತ್ತಿದ್ದಾರೆ. ಅತುಲ್ ಕುಲಕರ್ಣಿ ಅವರ ಹತ್ತು ವರ್ಷದ ಪರಿಶ್ರಮದಿಂದಾಗಿ ಚಿತ್ರಕತೆ ಸಿದ್ಧವಾಗಿದೆ. ಚಿತ್ರದ ರಿಮೇಕ್​ ಹಕ್ಕುಗಳನ್ನು ಪಡೆಯಲೂ ಅಷ್ಟೇ ಸಮಯ ವ್ಯಯಿಸಲಾಗಿದೆ ಎಂಬ ಮಾಹಿತಿ ಇದೆ. ಈ ಮೊದಲು 2020ರ ಕ್ರಿಸ್​ಮಸ್​ಗೆ ಚಿತ್ರ ಬಿಡುಗಡೆಗೊಳಿಸುವ ಯೋಜನೆ ಹಾಕಿಕೊಳ್ಳಲಾಗಿತ್ತು. ಕರೊನಾ ಕಾರಣದಿಂದಾಗಿ ಅದು ಸುಮಾರು ಒಂದು ವರ್ಷ ಮುಂದೂಡಲ್ಪಟ್ಟಿದೆ. ಆದ್ದರಿಂದ 2021ರ ಕ್ರಿಸ್​ಮಸ್​ಗೆ ಚಿತ್ರ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

ನಾಗಚೈತನ್ಯ ಅವರು ಹಂಚಿಕೊಂಡಿರುವ ಚಿತ್ರ:

ಆಮೀರ್ ಖಾನ್ ಪ್ರೊಡಕ್ಷನ್ಸ್ ಹಂಚಿಕೊಂಡಿರುವ ಚಿತ್ರ:

ಇದನ್ನೂ ಓದಿ: Aamir Khan: ಸೌರವ್ ಗಂಗೂಲಿ ಮನೆಯ ಗಾರ್ಡ್​ಗಳು ಆಮೀರ್ ಖಾನ್​ರನ್ನು ಒಳ ಬಿಡದೇ ಹೊರ ಕಳಿಸಿದ ಕತೆ ನಿಮಗೆ ಗೊತ್ತಾ?

ಇದನ್ನೂ ಓದಿ: ಸುದೀಪ್​ ನಟನೆಯ ‘ವಿಕ್ರಾಂತ್​ ರೋಣ’ ಸಿನಿಮಾದ ಪೋಸ್ಟರ್​ ಕದ್ದ ಬಾಲಿವುಡ್; ಸೋಶಿಯಲ್​ ಮೀಡಿಯಾದಲ್ಲಿ ಟ್ರೋಲ್​

(Aamir Khan and Kiran Rao poses with big smile along with costar Nagachaitanya in Laal Singh Chadda set)

Published On - 12:48 pm, Sat, 10 July 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ