AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುದೀಪ್​ ನಟನೆಯ ‘ವಿಕ್ರಾಂತ್​ ರೋಣ’ ಸಿನಿಮಾದ ಪೋಸ್ಟರ್​ ಕದ್ದ ಬಾಲಿವುಡ್; ಸೋಶಿಯಲ್​ ಮೀಡಿಯಾದಲ್ಲಿ ಟ್ರೋಲ್​

‘ವಿಕ್ರಾಂತ್ ರೋಣ’ ಚಿತ್ರಕ್ಕಾಗಿ ಸುದೀಪ್​ ಭಿನ್ನ ಅವತಾರ ತಾಳಿದ್ದಾರೆ. ‘ರಂಗಿತರಂಗ’ ಖ್ಯಾತಿಯ ನಿರ್ದೇಶಕ ಅನೂಪ್​ ಭಂಡಾರಿ ಅವರು ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಈ ಕಾರಣಕ್ಕೆ ಚಿತ್ರದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ.

ಸುದೀಪ್​ ನಟನೆಯ 'ವಿಕ್ರಾಂತ್​ ರೋಣ’ ಸಿನಿಮಾದ ಪೋಸ್ಟರ್​ ಕದ್ದ ಬಾಲಿವುಡ್; ಸೋಶಿಯಲ್​ ಮೀಡಿಯಾದಲ್ಲಿ ಟ್ರೋಲ್​
ಸುದೀಪ್​ ನಟನೆಯ ವಿಕ್ರಾಂತ್​ ರೋಣ ಸಿನಿಮಾದ ಪೋಸ್ಟರ್​ ಕದ್ದ ಬಾಲಿವುಡ್; ಸೋಶಿಯಲ್​ ಮೀಡಿಯಾದಲ್ಲಿ ಟ್ರೋಲ್​
ರಾಜೇಶ್ ದುಗ್ಗುಮನೆ
|

Updated on:Jul 09, 2021 | 7:01 PM

Share

ಸುದೀಪ್​ ನಟನೆಯ ‘ವಿಕ್ರಾಂತ್​ ರೋಣ’ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಕೇವಲ ಸ್ಯಾಂಡಲ್​ವುಡ್​ಗೆ ಸೀಮಿತವಾಗದೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ರಿಲೀಸ್​ ಆಗುತ್ತಿದೆ. ಈ ಮಧ್ಯೆ, ಬಾಲಿವುಡ್​ ಮಂದಿ ಈ​ ಸಿನಿಮಾದ ಪೋಸ್ಟರ್​ ಕಾಪಿ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ.

‘ವಿಕ್ರಾಂತ್ ರೋಣ’ ಚಿತ್ರಕ್ಕಾಗಿ ಸುದೀಪ್​ ಭಿನ್ನ ಅವತಾರ ತಾಳಿದ್ದಾರೆ. ‘ರಂಗಿತರಂಗ’ ಖ್ಯಾತಿಯ ನಿರ್ದೇಶಕ ಅನೂಪ್​ ಭಂಡಾರಿ ಅವರು ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಈ ಕಾರಣಕ್ಕೆ ಚಿತ್ರದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಕೆಲ ತಿಂಗಳ ಹಿಂದೆ ರಿಲೀಸ್​ ಆಗಿದ್ದ ಸಿನಿಮಾ ಪೋಸ್ಟರ್​ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈಗ ಈ ಪೋಸ್ಟರ್​ಅನ್ನು ಕಾಪಿ ಮಾಡುವ ಕೆಲಸವನ್ನು ಬಾಲಿವುಡ್ ಮಂದಿ ಮಾಡಿದ್ದಾರೆ.

ಪವನ್​ ಕೃಪಲಾನಿ ನಿರ್ದೇಶನ ಮಾಡಿರುವ ಹಿಂದಿಯ ‘ಭೂತ್​ ಪೊಲೀಸ್​’ ತಂಡ ನಿತ್ಯ ಹೊಸ ಪೋಸ್ಟರ್​ಗಳನ್ನು ರಿಲೀಸ್ ಮಾಡುತ್ತಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಸೈಫ್​ ಫಸ್ಟ್​ ಲುಕ್​ ವಿವಾದಕ್ಕೆ ತುತ್ತಾಗಿತ್ತು. ಹಿಂದೂ ಸಂತರನ್ನು ಬಳಕೆ ಮಾಡಿಕೊಂಡಿದ್ದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈಗ ಚಿತ್ರದ ಯಾಮಿ ಗೌತಮ್​ ಹಾಗೂ ಜಾಕ್ವಲೀನ್​ ಫರ್ನಾಂಡೀಸ್ ಲುಕ್​ ಅನಾವರಣಗೊಂಡಿದೆ. ‘ವಿಕ್ರಾಂತ್ ರೋಣ’ ಚಿತ್ರದ ಪೋಸ್ಟರ್​ಗೂ ಇದಕ್ಕೂ ಸಾಮ್ಯತೆ ಇದೆ.

‘ವಿಕ್ರಾಂತ್ ರೋಣ’ ಸಿನಿಮಾದ ಪೋಸ್ಟರ್​ನಲ್ಲಿ ಸುದೀಪ್​ ಗುಹೆಯ ಬಳಿ ಬಲಗೈನಲ್ಲಿ ಪಂಜು ಹಾಗೂ ಎಡಗೈನಲ್ಲಿ ಛಾಟಿ ಹಿಡಿದು ನಿಂತಿದ್ದಾರೆ. ಯಾಮಿ ಗೌತಮ್​ ಲುಕ್​ನಲ್ಲಿ ಛಾಟಿ ಒಂದನ್ನು ಬಿಟ್ಟು ಉಳಿದೆಲ್ಲವೂ ಒಂದೇ ತೆರನಾಗಿದೆ. ಇನ್ನು, ಜಾಕ್ವಲೀನ್​ ಫರ್ನಾಂಡೀಸ್ ಪೋಸ್ಟರ್​ನಲ್ಲಿ ಕೈಯಲ್ಲಿ ಹಿಡಿದಿರುವ ಛಾಟಿ ವಿಕ್ರಾಂತ್​ ರೋಣ ಚಿತ್ರದಲ್ಲಿ ಬಳಕೆಯಾದ ಛಾಟಿ ರೀತಿಯಲ್ಲೇ ಇದೆ.

ಈ ವಿಚಾರದ ಬಗ್ಗೆ ಈಗ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಅನೇಕರು ಬಾಲಿವುಡ್​ ಮಂದಿ ನಮ್ಮ ಪೋಸ್ಟರ್​ ಕಾಪಿ ಮಾಡಿದ್ದಾರೆ ಎನ್ನುತ್ತಿದ್ದಾರೆ. ಇನ್ನೂ ಕೆಲವರು, ಬಾಲಿವುಡ್​ನವರು ಸ್ಯಾಂಡಲ್​​ವುಡ್​ನವರನ್ನು ಅನುಸರಿಸುವಂತಾಯಿತು ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಶಾಲಿನಿ ಮಂಜುನಾಥ್​ ಮತ್ತು ಅಲಂಕಾರ್ ಪಾಂಡಿಯನ್​ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಅದ್ದೂರಿ ಬಜೆಟ್​ನಲ್ಲಿ ಚಿತ್ರ ಮೂಡಿಬರುತ್ತಿದೆ. ವಿಲಿಯಮ್​ ಡೇವಿಡ್​ ಛಾಯಾಗ್ರಹಣ, ಅಜನೀಶ್​ ಲೋಕನಾಥ್​ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಈಗಾಗಲೇ ಬಿಡುಗಡೆ ಆಗಿರುವ ಪೋಸ್ಟರ್​ ಮತ್ತು ಟೀಸರ್​ಗಳು ಸಿಕ್ಕಾಪಟ್ಟೆ ಕೌತುಕ ಮೂಡಿಸಿವೆ. ಸುದೀಪ್​ ಜೊತೆ ನೀತಾ ಅಶೋಕ್​, ನಿರೂಪ್​ ಭಂಡಾರಿ ಮುಂತಾದವರು ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ.

‘ಭೂತ್​ ಪೊಲೀಸ್​’ ಚಿತ್ರದಲ್ಲಿ ಅರ್ಜುನ್​ ಕಪೂರ್​, ಜಾಕ್ವಲೀನ್​ ಫರ್ನಾಂಡೀಸ್​, ಯಾಮಿ ಗೌತಮ್​ ಮುಂತಾದವರು ನಟಿಸುತ್ತಿದ್ದಾರೆ.

ಇದನ್ನೂ ಓದಿ: ಮತ್ತೆ ಹಿಂದೂಗಳ ಭಾವನೆಗೆ ಧಕ್ಕೆ ತಂದ ಸೈಫ್​ ಅಲಿ ಖಾನ್​; ಈ ಪೋಸ್ಟರ್​ನಲ್ಲಿ ಇರುವ ವಿವಾದ ಏನು?

‘ವಿಕ್ರಾಂತ್​ ರೋಣ’ ಬಜೆಟ್​ ಎಷ್ಟು? ನಂಬರ್​ ಹೇಳುವ ಬದಲು ನಿರ್ದೇಶಕರು ಹೇಳಿದ್ದೇ ಬೇರೆ​

Published On - 6:59 pm, Fri, 9 July 21

ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ, ಅಭಿಷೇಕ
ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ, ಅಭಿಷೇಕ
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
ನ್ಯೂಇಯರ್​ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ
ನ್ಯೂಇಯರ್​ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ