AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Divya Spandana: ಭಾರತದ ಕೊವಿಡ್​ ವ್ಯಾಕ್ಸಿನ್​ ಹಾಕಿಸಿಕೊಳ್ಳಲ್ಲ ಎಂದ ನಟಿ ರಮ್ಯಾ

ಭಾರತದಲ್ಲಿ ಕೊವಿಡ್​ ಲಸಿಕೆ ನೀಡುವ ಕಾರ್ಯ ಈಗಾಗಲೇ ಆರಂಭಗೊಂಡಿದೆ. ಕೊವ್ಯಾಕ್ಸಿನ್​ ಸೇರಿ ಕೆಲ ಲಸಿಕೆಗಳು ಲಭ್ಯವಿದೆ. ನಟಿ ರಮ್ಯಾಗೆ ಇವುಗಳ ಮೇಲೆ ಆಸಕ್ತಿ ಇಲ್ಲ.

Divya Spandana: ಭಾರತದ ಕೊವಿಡ್​ ವ್ಯಾಕ್ಸಿನ್​ ಹಾಕಿಸಿಕೊಳ್ಳಲ್ಲ ಎಂದ ನಟಿ ರಮ್ಯಾ
ರಮ್ಯಾ
TV9 Web
| Edited By: |

Updated on: Jul 10, 2021 | 3:15 PM

Share

ಕೊವಿಡ್​ ಎರಡನೇ ಅಲೆ ಕಾಣಿಸಿಕೊಂಡ ನಂತರದಲ್ಲಿ ಕೊರೊನಾ ವ್ಯಾಕ್ಸಿನ್​ ಪ್ರಕ್ರಿಯೆ ಭರದಿಂದ ಸಾಗಿದೆ. ಎಲ್ಲರೂ ಲಸಿಕೆ ಪಡೆಯೋಕೆ ಹೆಚ್ಚು ಉತ್ಸಾಹ ತೋರುತ್ತಿದ್ದಾರೆ. ಇನ್ನು, ಸೆಲೆಬ್ರಿಟಿಗಳು ಕೊವಿಡ್​ ಲಸಿಕೆ ತೆಗೆದುಕೊಂಡ ನಂತರದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಈ ಮಧ್ಯೆ, ನಟಿ ರಮ್ಯಾ ತಾವು ಲಸಿಕೆ ಪಡೆಯೋದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಕಾರಣ ಅಮೆರಿಕ ಲಸಿಕೆ.

ನಟಿ ರಮ್ಯಾ ಅವರು ಕಾಮಿಡಿಯನ್ ಸೋನು ವೇಣುಗೋಪಾಲ್​ ಜತೆ ಲೈವ್​ ಬಂದಿದ್ದರು. ಈ ವೇಳೆ ಸಾಕಷ್ಟು ವಿಚಾರಗಳ ಬಗ್ಗೆ ಇಬ್ಬರೂ ಮಾತನಾಡಿದ್ದಾರೆ. ಆಗ, ರಮ್ಯಾಗೆ ಸೋನು  ನೀವು ವ್ಯಾಕ್ಸಿನ್​ ಹಾಕಿಸಿಕೊಂಡಿರಾ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ರಮ್ಯಾ ಕಡೆಯಿಂದ ಇಲ್ಲ ಎನ್ನುವ ಉತ್ತರ ಬಂತು. ಇದು ಸಾಕಷ್ಟು ಜನರಿಗೆ ಅಚ್ಚರಿ ಮೂಡಿಸಿತು. ಅಂದಹಾಗೆ, ರಮ್ಯಾ ಲಸಿಕೆ ಹಾಕಿಸಿಕೊಳ್ಳದೆ ಇರೋದಕ್ಕೆ ಕಾರಣ ಕೂಡ ಇದೆ.

ಭಾರತದಲ್ಲಿ ಕೊವಿಡ್​ ಲಸಿಕೆ ನೀಡುವ ಕಾರ್ಯ ಈಗಾಗಲೇ ಆರಂಭಗೊಂಡಿದೆ. ಕೊವ್ಯಾಕ್ಸಿನ್​ ಸೇರಿ ಕೆಲ ಲಸಿಕೆಗಳು ಲಭ್ಯವಿದೆ. ನಟಿ ರಮ್ಯಾಗೆ ಇವುಗಳ ಮೇಲೆ ಆಸಕ್ತಿ ಇಲ್ಲ. ಅಮೆರಿಕ ಮೂಲದ ಕಂಪೆನಿ ಸಿದ್ಧಪಡಿಸುತ್ತಿರುವ ಮಾಡೆರ್ನಾ ಲಸಿಕೆ ತೆಗೆದುಕೊಳ್ಳಬೇಕು ಎಂದುಕೊಂಡಿದ್ದೇನೆ. ಇದರ ತುರ್ತು ಬಳಕೆಗೆ ವಿಶ್ವಸಂಸ್ಥೆ ಒಪ್ಪಿಗೆ ಸೂಚಿಸಿದೆ ಎಂದು ರಮ್ಯಾ ಹೇಳಿದ್ದಾರೆ. ಇನ್ನು, ಭಾರತದಲ್ಲಿ ಸಿದ್ಧವಾಗುತ್ತಿರುವ ಯಾವ ಲಸಿಕೆ ತೆಗೆದುಕೊಳ್ಳಬೇಕು ಎನ್ನುವ ಬಗ್ಗೆ ರಮ್ಯಾಗೆ ಗೊಂದಲ ಇದೆಯಂತೆ.

ಭಾರತದಲ್ಲಿ ಈಗಾಗಲೇ ಅನೇಕ ಸೆಲೆಬ್ರಿಟಿಗಳು ಲಸಿಕೆ ಪಡೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡು ಅಭಿಮಾನಿಗಳ ಬಳಿ ಲಸಿಕೆ ಪಡೆಯುವಂತೆ ಕೋರುತ್ತಿದ್ದಾರೆ. ಆದರೆ, ನಟಿ ರಮ್ಯಾ ಮಾತ್ರ ಈ ವಿಚಾರದಲ್ಲಿ ಬೇರೆ ಮಾರ್ಗ ಅನುಸರಿಸಿದ್ದಾರೆ.

ಸಿನಿಮಾಟೋಗ್ರಾಫ್​ ಕಾಯ್ದೆಗೆ ಕೆಲವು ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಸೆನ್ಸಾರ್​ಶಿಪ್​ನಲ್ಲಿ ಬದಲಾವಣೆ ತರುವುದು ಈ ನಿಯಮದ ಮುಖ್ಯ ಉದ್ದೇಶ. ಈ ಬಗ್ಗೆ ಸಲಹೆ ನೀಡಲು ಸಾರ್ವಜನಿಕರಿಗೆ ಕೇಂದ್ರ ಸರ್ಕಾರ ಮುಕ್ತ ಅವಕಾಶ ನೀಡಿದೆ. ರಮ್ಯಾ ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ‘ನಾವು ನೋಡುವ ವಿಚಾರದ ಮೇಲೆ ಕೇಂದ್ರ ಸರ್ಕಾರ ಏಕೆ ಹಸ್ತಕ್ಷೇಪ ಮಾಡುತ್ತಿದೆ? ಕೇಂದ್ರದವರು ಎಲ್ಲಾ ಕಡೆಗಳಲ್ಲೂ ಇದ್ದಾರೆ. ನಮ್ಮ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದ್ದಾರೆ. ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್​​ಸಿ) ಈಗಾಗಲೇ ಎಲ್ಲವನ್ನೂ ರೆಗ್ಯೂಲೇಟ್​ ಮಾಡುತ್ತಿದೆ’ ಎಂದು ರಮ್ಯಾ ಪ್ರಶ್ನೆ ಮಾಡಿದ್ದರು.

ಇದನ್ನೂ ಓದಿ: ಸಿನಿಮಾ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ಬಂದ ಕೇಂದ್ರದ ವಿರುದ್ಧ ಕಿಡಿಕಾರಿದ ನಟಿ ರಮ್ಯಾ

ಸುಮಲತಾದು ಕಠೋರ ಹೃದಯ; ನಟಿ ರಮ್ಯಾಗೆ ಆದ ಸ್ಥಿತಿ ಸುಮಲತಾಗೂ ಆಗುತ್ತೆ: ಎಲ್. ಆರ್. ಶಿವರಾಮೇಗೌಡ ಭವಿಷ್ಯ