ರಾಧಿಕಾ ಪಂಡಿತ್​ ಹಂಚಿಕೊಂಡ್ರು ಮಗುವಿನ ಹೊಸ ಫೋಟೋ; ಆಯ್ರಾ ಸ್ಮೈಲ್​ ಹೇಗಿದೆ ನೋಡಿ

ಯಶ್​-ರಾಧಿಕಾ ಮೊದಲು ಮಗು ಆಯ್ರಾ. ಆಯ್ರಾ ಜನಿಸದ ನಂತರದಲ್ಲಿ ಸಾಕಷ್ಟು ಫೇಮ್​ ಸೃಷ್ಟಿಸಿಕೊಂಡಿದ್ದಾಳೆ. ಯಶ್​ ಮೊದಲ ಮಗು ಎನ್ನುವ ಕಾರಣಕ್ಕೆ ಸೋಶಿಯಲ್​ ಮೀಡಿಯಾದಲ್ಲಿ ಸೇನ್ಸೇಶನ್​ ಸೃಷ್ಟಿ ಮಾಡಿದ್ದಾಳೆ.

ರಾಧಿಕಾ ಪಂಡಿತ್​ ಹಂಚಿಕೊಂಡ್ರು ಮಗುವಿನ ಹೊಸ ಫೋಟೋ; ಆಯ್ರಾ ಸ್ಮೈಲ್​ ಹೇಗಿದೆ ನೋಡಿ
ರಾಧಿಕಾ ಪಂಡಿತ್​ ಹಂಚಿಕೊಂಡ್ರು ಮಗುವಿನ ಹೊಸ ಫೋಟೋ; ಆಯ್ರಾ ಸ್ಮೈಲ್​ ಹೇಗಿದೆ ನೋಡಿ
Follow us
| Updated By: ರಾಜೇಶ್ ದುಗ್ಗುಮನೆ

Updated on: Jul 09, 2021 | 9:02 PM

ನಟಿ ರಾಧಿಕಾ ಪಂಡಿತ್​ ಚಿತ್ರರಂಗದಿಂದ ದೂರವೇ ಉಳಿದರೂ ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟಿವ್​ ಆಗಿದ್ದಾರೆ. ಮಕ್ಕಳ ಪಾಲನೆಯಲ್ಲಿ ತೊಡಗಿರುವ ಅವರು ಅಭಿಮಾನಿಗಳನ್ನು ಮರೆತಿಲ್ಲ. ಆಗೊಂದು ಈಗೊಂದು ಪೋಸ್ಟ್​ ಹಾಕುವ ಮೂಲಕ ಅಭಿಮಾನಿಗಳ ಜತೆ ರಾಧಿಕಾ ಪಂಡಿತ್​ ಸಂಪರ್ಕದಲ್ಲಿದ್ದಾರೆ. ಈಗ ಅವರು ಆಯ್ರಾಳ ಬಗ್ಗೆ ಹೊಸ ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟರ್​ನಲ್ಲಿ ಆಯ್ರಾ ಅವರ ಲುಕ್​ ಅಭಿಮಾನಿಗಳಿಗೆ ಇಷ್ಟವಾಗಿದೆ.

ಯಶ್​-ರಾಧಿಕಾ ಮೊದಲು ಮಗು ಆಯ್ರಾ. ಆಯ್ರಾ ಸಾಕಷ್ಟು ಫೇಮ್​ ಸೃಷ್ಟಿಸಿಕೊಂಡಿದ್ದಾಳೆ. ಯಶ್​ ಮೊದಲ ಮಗು ಎನ್ನುವ ಕಾರಣಕ್ಕೆ ಸೋಶಿಯಲ್​ ಮೀಡಿಯಾದಲ್ಲಿ ಸೇನ್ಸೇಶನ್​ ಸೃಷ್ಟಿ ಮಾಡಿದ್ದಾಳೆ. ಇವಳಿಗೆ ಯಶಿಕಾ ಎಂದು ನಾಮಕರಣ ಮಾಡಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದ್ದರು.

ಜನಿಸಿದಾಗಿನಿಂದ ಇಲ್ಲಿಯವರೆಗೂ ಆಯ್ರಾಳ ಜನಪ್ರಿಯತೆಯ ಕೊಂಚವೂ ಕಡಿಮೆ ಆಗಿಲ್ಲ. ದಿನ ಕಳೆದಂತೆ ಅವರ ಖ್ಯಾತಿ ಹೆಚ್ಚುತ್ತಲೇ ಇದೆ. ಆಯ್ರಾ ನಿತ್ಯ ಏನು ಮಾಡುತ್ತಾಳೆ? ಆಯ್ರಾ ಹೇರ್​ಸ್ಟೈಲ್​, ಅವಳು ಹಾಕುವ ಬಟ್ಟೆ ಬಗ್ಗೆ ಅಭಿಮಾನಿಗಳು ಕುತೂಹಲ ಇಟ್ಟುಕೊಂಡಿದ್ದಾರೆ. ಈಗ ಆಯ್ರಾಳ ​ ಹೊಸ ಫೋಟೋವನ್ನು ರಾಧಿಕಾ ಪಂಡಿತ್ ಹಂಚಿಕೊಂಡು ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ.

ರಾಧಿಕಾ ಪಂಡಿತ್​ ಚಿತ್ರರಂಗಕ್ಕೆ ಮರಳೋದು ಯಾವಾಗ ಎನ್ನುವ ಪ್ರಶ್ನೆಗಳನ್ನು ಅಭಿಮಾನಿಗಳು ಕೇಳುತ್ತಿದ್ದಾರೆ. ‘ಆದಿ ಲಕ್ಷ್ಮೀ ಪುರಾಣ’ ಚಿತ್ರವೇ ಕೊನೆ. ಅದಾದ ನಂತರದಲ್ಲಿ ಅವರು ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಆದಷ್ಟು ಬೇಗ ಅವರನ್ನು ತೆರೆಮೇಲೆ ನೋಡಬೇಕು ಎಂಬುದು ಅಭಿಮಾನಿಗಳ ಕನಸು. ಆದರೆ, ಈ ಬಗ್ಗೆ ಅವರು ಎಲ್ಲಿಯೂ ಹೇಳಿಕೊಂಡಿಲ್ಲ.

ಇನ್ನು, ಯಶ್​ ಕೆಜಿಎಫ್​ 2 ಸಿನಿಮಾದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಜುಲೈ 16ರಂದು ಚಿತ್ರ ತೆರೆಗೆ ಬರಬೇಕಿತ್ತು. ಆದರೆ, ಕೊವಿಡ್​ ಕಾರಣದಿಂದ ಸಿನಿಮಾ ರಿಲೀಸ್​ ದಿನಾಂಕ ಮುಂದೂಡಲ್ಪಟ್ಟಿರುವ ಬಗ್ಗೆ ಚಿತ್ರತಂಡ ಇತ್ತೀಚೆಗೆ ಘೋಷಣೆ ಮಾಡಿತ್ತು. ಇನ್ನು, ನರ್ತನ್​ ನಿರ್ದೇಶನದ ಮುಂದಿನ ಚಿತ್ರದಲ್ಲಿ ಯಶ್​ ನೌಕಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.

ಇದನ್ನೂ ಓದಿ: ಹೊಸ ಮನೆಗೆ ಯಶ್​-ರಾಧಿಕಾ ಪಂಡಿತ್​ ದಂಪತಿ ಗೃಹ ಪ್ರವೇಶ ; ಹೇಗಿದೆ ನೋಡಿ ಅವರ ನಿವಾಸ

ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ
ಇಡಿ ವಿಚಾರಣೆ ಬೆನ್ನಲ್ಲೇ ದೇವರ ಮೊರೆ ಹೋದ ತಮನ್ನಾ
ಇಡಿ ವಿಚಾರಣೆ ಬೆನ್ನಲ್ಲೇ ದೇವರ ಮೊರೆ ಹೋದ ತಮನ್ನಾ
ರೆಡ್ಡಿ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಹೋದರ ಸೋಮಶೇಖರ್ ರೆಡ್ಡಿ ಭಾಗಿ
ರೆಡ್ಡಿ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಹೋದರ ಸೋಮಶೇಖರ್ ರೆಡ್ಡಿ ಭಾಗಿ
ಸರ್ಕಾರ ಅಸ್ಥಿರಗೊಳಿಸಲು ಇಡಿ ಬಳಕೆ: ಕೇಂದ್ರದ ವಿರುದ್ಧ ಡಿಕೆಸು ವಾಗ್ದಾಳಿ
ಸರ್ಕಾರ ಅಸ್ಥಿರಗೊಳಿಸಲು ಇಡಿ ಬಳಕೆ: ಕೇಂದ್ರದ ವಿರುದ್ಧ ಡಿಕೆಸು ವಾಗ್ದಾಳಿ
ಉದ್ಯೋಗ/ಶಿಕ್ಷಣದಲ್ಲಿ ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಬೇಕು: ಶ್ರೀಗಳು
ಉದ್ಯೋಗ/ಶಿಕ್ಷಣದಲ್ಲಿ ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಬೇಕು: ಶ್ರೀಗಳು
ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಸುಪರ್ದಿಗೆ ಬಿಟ್ಟಿದ್ದು: ಸಚಿವ
ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಸುಪರ್ದಿಗೆ ಬಿಟ್ಟಿದ್ದು: ಸಚಿವ