ಹೊಸ ಮನೆಗೆ ಯಶ್​-ರಾಧಿಕಾ ಪಂಡಿತ್​ ದಂಪತಿ ಗೃಹ ಪ್ರವೇಶ ; ಹೇಗಿದೆ ನೋಡಿ ಅವರ ನಿವಾಸ

ಪ್ರೆಸ್ಟೀಜ್​ ಗಾಲ್ಫ್​ ಅಪಾರ್ಟ್​​ಮೆಂಟ್​​ನಲ್ಲಿ ಯಶ್‌ ಹೊಸ ಅಪಾರ್ಟ್​ಮೆಂಟ್​ ಖರೀದಿ ಮಾಡಿದ್ದರು. ಇಷ್ಟು ದಿನ ಮನೆಯ ವಿನ್ಯಾಸ ಕೆಲಸಗಳು ನಡೆಯುತ್ತಿತ್ತು. ಈಗ ಅವೆಲ್ಲವೂ ಪೂರ್ಣಗೊಂಡಿದ್ದು, ಇಂದು ಗೃಹ ಪ್ರವೇಶದ ಕಾರ್ಯಗಳು ನಡೆದಿವೆ.

ಹೊಸ ಮನೆಗೆ ಯಶ್​-ರಾಧಿಕಾ ಪಂಡಿತ್​ ದಂಪತಿ ಗೃಹ ಪ್ರವೇಶ ; ಹೇಗಿದೆ ನೋಡಿ ಅವರ ನಿವಾಸ
ಯಶ್​-ರಾಧಿಕಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jul 01, 2021 | 8:17 PM

ರಾಕಿಂಗ್​ ಸ್ಟಾರ್​ ಯಶ್​ ಹಾಗೂ ರಾಧಿಕಾ ಪಂಡಿತ್​ ಅವರ ಕನಸಿನ ಮನೆಯ ಗೃಹ ಪ್ರವೇಶ ಇಂದು (ಜುಲೈ 1) ನೆರವೇರಿದೆ. ಕೊವಿಡ್ ಇರುವ ಕಾರಣ ಕೇವಲ ಆಪ್ತರ ಸಮ್ಮುಖದಲ್ಲಿ​ ಗೃಹ ಪ್ರವೇಶದ ಕಾರ್ಯಗಳನ್ನು ಯಶ್-ರಾಧಿಕಾ ದಂಪತಿ ಪೂರ್ಣಗೊಳಿಸಿದ್ದಾರೆ. ಸದ್ಯ, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ.

ಪ್ರೆಸ್ಟೀಜ್​ ಗಾಲ್ಫ್​ ಅಪಾರ್ಟ್​​ಮೆಂಟ್​​ನಲ್ಲಿ ಯಶ್‌ ಹೊಸ ಮನೆ​ ಖರೀದಿ ಮಾಡಿದ್ದರು. ಇಷ್ಟು ದಿನ ಮನೆಯ ವಿನ್ಯಾಸ ಕೆಲಸಗಳು ನಡೆಯುತ್ತಿತ್ತು. ಈಗ ಅವೆಲ್ಲವೂ ಪೂರ್ಣಗೊಂಡಿದ್ದು, ಇಂದು ಗೃಹ ಪ್ರವೇಶದ ಕಾರ್ಯಗಳು ನಡೆದಿವೆ. ಸಿಂಪಲ್​ ಆಗಿ ಮನೆಯ ಕಾರ್ಯಗಳನ್ನು ಪೂರ್ಣಗೊಳಿಸಲಾಗಿದೆ ಅನ್ನೋದು ವಿಶೇಷ. ಯಶ್​ ಮನೆಯ ಫೋಟೋಗಳು, ಗೃಹ ಪ್ರವೇಶ ಕಾರ್ಯಕ್ರಮದ ಚಿತ್ರಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ.

ರಾಧಿಕಾ ಕೇಸರಿ ಬಣ್ಣದ ಸೀರೆ ಉಟ್ಟರೆ, ಯಶ್​ ಪಂಚೆ ಹಾಗೂ ಶರ್ಟ್​ ತೊಟ್ಟಿದ್ದಾರೆ. ಯಶ್​ ಗಡ್ಡ ಹಾಗೂ ಕೂದಲಿಗೆ ಇನ್ನೂ ಕತ್ತರಿ ಹಾಕಿಲ್ಲ. ಹೀಗಾಗಿ, ಅವರ ಲುಕ್​ ಅಭಿಮಾನಿಗಳಿಗೆ ಸಾಕಷ್ಟು ಇಷ್ಟವಾಗುತ್ತಿದೆ.

ಸಿನಿಮಾ ವಿಚಾರಕ್ಕೆ ಬರೋದಾದರೆ ಯಶ್​ ‘ಕೆಜಿಎಫ್​ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಸಿನಿಮಾ ಜುಲೈನಲ್ಲಿ ತೆರೆಗೆ ಬರಬೇಕಿತ್ತು. ಆದರೆ, ಕೊವಿಡ್ ಕಾರಣದಿಂದ ಸಿನಿಮಾ ರಿಲೀಸ್​ ದಿನಾಂಕ ಮುಂದೂಡಲ್ಪಟ್ಟಿದೆ. ಸೆಪ್ಟೆಂಬರ್ 9ಕ್ಕೆ ಚಿತ್ರ ರಿಲೀಸ್​ ಆಗಲಿದೆ ಎನ್ನುವ ಮಾಹಿತಿ ಇದೆಯಾದರೂ ಈ ಬಗ್ಗೆ ಅಧಿಕೃತ ಘೋಷಣೆ ಆಗಿಲ್ಲ. ಇನ್ನು, ರಾಧಿಕಾ ಪಂಡಿತ್​ ಮಕ್ಕಳ ಲಾಲನೆ ಪಾಲನೆಯಲ್ಲಿ ತೊಡಗಿಕೊಂಡಿದ್ದಾರೆ.

ಇದನ್ನೂ ಓದಿ:  Radhika Pandit: ರಾಕಿಂಗ್​ ಸ್ಟಾರ್​ ಯಶ್ ಬಗ್ಗೆ ವಿಶೇಷ ಮಾತುಗಳನ್ನು ಆಡಿದ ರಾಧಿಕಾ ಪಂಡಿತ್​

ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಪುಷ್ಪ, ಕೆಜಿಎಫ್​ 2; ಯಶ್​-ಅಲ್ಲು ಅರ್ಜುನ್​ ನಡುವೆ​ ಭಾರಿ ಪೈಪೋಟಿ

Published On - 8:11 pm, Thu, 1 July 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ