AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಪುಷ್ಪ, ಕೆಜಿಎಫ್​ 2; ಯಶ್​-ಅಲ್ಲು ಅರ್ಜುನ್​ ನಡುವೆ​ ಭಾರಿ ಪೈಪೋಟಿ

Most Anticipated Indian Movies: ‘ಪುಷ್ಪ’ ಮತ್ತು ‘ಕೆಜಿಎಫ್ 2’ ಚಿತ್ರಗಳಿಗೆ ಕೊನೇ ಹಂತದ ಕೆಲಸಗಳು ನಡೆಯುತ್ತಿವೆ. ಪುಷ್ಪ ಚಿತ್ರಕ್ಕೆ ಸುಕುಮಾರ್​ ನಿರ್ದೇಶನ ಮಾಡುತ್ತಿದ್ದರೆ, ಪ್ರಶಾಂತ್​ ನೀಲ್​ ಬತ್ತಳಿಕೆಯಿಂದ ‘ಕೆಜಿಎಫ್​ 2’ ಮೂಡಿಬರುತ್ತಿದೆ.

ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಪುಷ್ಪ, ಕೆಜಿಎಫ್​ 2; ಯಶ್​-ಅಲ್ಲು ಅರ್ಜುನ್​ ನಡುವೆ​ ಭಾರಿ ಪೈಪೋಟಿ
ಅಲ್ಲು ಅರ್ಜುನ್​, ಯಶ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jun 28, 2021 | 5:40 PM

ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್​ ಚಿತ್ರಗಳಿಗೆ ತೀವ್ರ ಪೈಪೋಟಿ ನೀಡುತ್ತಿವೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ದಕ್ಷಿಣದ ಸಿನಿಮಾಗಳು ಜಾಗತಿಕವಾಗಿಯೂ ಸೌಂಡು ಮಾಡುತ್ತಿವೆ. ಭಾರತದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಹಿಂದಿ ಸಿನಿಮಾಗಳನ್ನು ಹಿಂದಿಕ್ಕಿ ದಕ್ಷಿಣ ಭಾರತದ ಚಿತ್ರಗಳು ಮುನ್ನುಗ್ಗುತ್ತಿರುವುದು ವಿಶೇಷ. ಐಎಂಡಿಬಿ (ಇಂಟರ್​ನೆಟ್​ ಮೂವೀ ಡೇಟಾಬೇಸ್​) ವೆಬ್​ಸೈಟ್​ ಪ್ರಕಟಿಸಿರುವ ಪಟ್ಟಿಯಲ್ಲಿ ‘ಪುಷ್ಪ’ ಚಿತ್ರ ಮೊದಲ ಸ್ಥಾನದಲ್ಲಿದೆ. ‘ಕೆಜಿಎಫ್​: ಚಾಪ್ಟರ್​ 2’ ಚಿತ್ರಕ್ಕೆ ಎರಡನೇ ಸ್ಥಾನ ಸಿಕ್ಕಿದೆ. 3ನೇ ಸ್ಥಾನದಲ್ಲಿ ಪ್ರಭಾಸ್​ ನಟನೆಯ ‘ರಾಧೆ ಶ್ಯಾಮ್​’ ಇದೆ.

ನಂ.1 ಪಟ್ಟದಲ್ಲಿ ಇರುವ ‘ಪುಷ್ಪ’ ಚಿತ್ರ ಮೂಲ ತೆಲುಗಿನಲ್ಲಿ ತಯಾರಾದರೂ ಹಲವು ಭಾಷೆಗಳಿಗೆ ಡಬ್​ ಆಗಿ ಬಿಡುಗಡೆ ಆಗಲಿದೆ. ನಂ.2 ಪಟ್ಟ ಗಿಟ್ಟಿಸಿರುವ ‘ಕೆಜಿಎಫ್​: ಚಾಪ್ಟರ್ 2’ ಸಿನಿಮಾ ಕನ್ನಡದಲ್ಲಿ ಸಿದ್ಧಗೊಂಡು ಹಲವು ಭಾಷೆಗಳಿಗೆ ಡಬ್​ ಆಗುತ್ತಿದೆ. ಬಹುಕೋಟಿ ಬಜೆಟ್​ನಲ್ಲಿ ನಿರ್ಮಾಣ ಆಗುತ್ತಿರುವ ಈ ಸಿನಿಮಾಗಳ ಮೇಲೆ ಸಿನಿಪ್ರಿಯರು ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಬಹುನಿರೀಕ್ಷಿತ ಭಾರತೀಯ ಸಿನಿಮಾಗಳ ಪಟ್ಟಿಯ 3ನೇ ಸ್ಥಾನದಲ್ಲಿ ಪ್ರಭಾಸ್​ ಮತ್ತು ಪೂಜಾ ಹೆಗ್ಡೆ ನಟನೆಯ ‘ರಾಧೆ ಶ್ಯಾಮ್​’ ಚಿತ್ರವಿದೆ. 4ನೇ ಸ್ಥಾನದಲ್ಲಿ ಮಾಲಿವುಡ್​ನ ‘ಮರಕ್ಕರ್​’ ಚಿತ್ರವಿದೆ. ಮೋಹನ್​ ಲಾಲ್​ ಅವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೀಗೆ ಟಾಪ್​ 4 ಸ್ಥಾನಗಳನ್ನು ದಕ್ಷಿಣ ಭಾರತದ ಚಿತ್ರಗಳು ಆಕ್ರಮಿಸಿಕೊಂಡಿವೆ. ಇನ್ನುಳಿದ ಸ್ಥಾನಗಳಲ್ಲಿ ಬಾಲಿವುಡ್​ ಸಿನಿಮಾಗಳಿವೆ.

5ನೇ ಸ್ಥಾನದಲ್ಲಿ ಹಸೀನ್​ ದಿಲ್ರುಬಾ, 6ರಲ್ಲಿ ತೂಫಾನ್​, 7ರಲ್ಲಿ ಕರ್ಮ, 8ರಲ್ಲಿ ಗಂಗೂಬಾಯಿ ಕಾಠಿಯಾವಾಡಿ, 9ರಲ್ಲಿ ಅತರಂಗಿ ರೇ ಹಾಗೂ 10ನೇ ಸ್ಥಾನದಲ್ಲಿ ಬೆಲ್​ ಬಾಟಂ ಸಿನಿಮಾ ಇದೆ. ಸದ್ಯ ಕೊರೊನಾ ವೈರಸ್​ ಹಾವಳಿಯಿಂದಾಗಿ ದೇಶದ ಬಹುತೇಕ ಕಡೆಗಳಲ್ಲಿ ಚಿತ್ರಮಂದಿರಗಳನ್ನು ಮುಚ್ಚಲಾಗಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಸಿಗಲಿದೆ. ಆಗ ರಿಲೀಸ್​ ಆಗಲು ಹಲವು ಸ್ಟಾರ್​ ಸಿನಿಮಾಗಳು ಕಾದಿವೆ.

ಸದ್ಯ ‘ಪುಷ್ಪ’ ಮತ್ತು ‘ಕೆಜಿಎಫ್ 2’ ಚಿತ್ರಗಳಿಗೆ ಕೊನೇ ಹಂತದ ಕೆಲಸಗಳು ನಡೆಯುತ್ತಿವೆ. ಪುಷ್ಪ ಚಿತ್ರಕ್ಕೆ ಸುಕುಮಾರ್​ ನಿರ್ದೇಶನ ಮಾಡುತ್ತಿದ್ದರೆ, ಪ್ರಶಾಂತ್​ ನೀಲ್​ ಬತ್ತಳಿಕೆಯಿಂದ ‘ಕೆಜಿಎಫ್​ 2’ ಮೂಡಿಬರುತ್ತಿದೆ.

ಇದನ್ನೂ ಓದಿ:

KGF Chapter 2: ಕೆಜಿಎಫ್ 2 ಹೊಸ ರಿಲೀಸ್ ಡೇಟ್ ಬಗ್ಗೆ ಹರಿದಾಡುತ್ತಿದೆ ಗುಸುಗುಸು

‘ಪುಷ್ಪ ಸಿನಿಮಾ 10 ಕೆಜಿಎಫ್​ಗೆ ಸಮ’; ಅಲ್ಲು ಅರ್ಜುನ್​ ಚಿತ್ರಕ್ಕೆ ಸಿಕ್ತು ಹೊಸ ಮೆಚ್ಚುಗೆ

Published On - 5:19 pm, Mon, 28 June 21

ವೇಗದ ಶತಕ ಸಿಡಿಸಿ ಹೆಡ್ ದಾಖಲೆ ಮುರಿದ ಕ್ಲಾಸೆನ್
ವೇಗದ ಶತಕ ಸಿಡಿಸಿ ಹೆಡ್ ದಾಖಲೆ ಮುರಿದ ಕ್ಲಾಸೆನ್
ಉಡುಪಿ: ಬೈಕ್​ಗೆ ನಾಯಿ ಕಟ್ಟಿ ಎಳೆದೊಯ್ದ ವ್ಯಕ್ತಿ, ವಿಡಿಯೋ ವೈರಲ್
ಉಡುಪಿ: ಬೈಕ್​ಗೆ ನಾಯಿ ಕಟ್ಟಿ ಎಳೆದೊಯ್ದ ವ್ಯಕ್ತಿ, ವಿಡಿಯೋ ವೈರಲ್
ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ