ಕುಟುಂಬದವರ ಸುದ್ದಿಗೆ ಬಂದ ಶಮಂತ್​ಗೆ ಸರಿಯಾಗೇ ತಿರುಗೇಟು ನೀಡಿದ ವೈಷ್ಣವಿ ಗೌಡ

ಅಲ್ಲಿಯೇ ಇದ್ದ ರಘು ಅವರು, ವೈಷ್ಣವಿ ಅವರನ್ನು ಸಮಾಧಾನ ಮಾಡೋಕೆ ಬಂದರು. ಆದರೆ, ವೈಷ್ಣವಿ ಇದಕ್ಕೆ ತಲೆಕೆಡಿಸಿಕೊಳ್ಳಲಿಲ್ಲ. ‘ದಯವಿಟ್ಟು ಇರಿಟೇಟ್​​ ಮಾಡಬೇಡಿ. ನನ್ನನ್ನು ನನ್ನಷ್ಟಕ್ಕೆ ಬಿಟ್ಟುಬಿಡಿ’ ಎಂದರು.

ಕುಟುಂಬದವರ ಸುದ್ದಿಗೆ ಬಂದ ಶಮಂತ್​ಗೆ ಸರಿಯಾಗೇ ತಿರುಗೇಟು ನೀಡಿದ ವೈಷ್ಣವಿ ಗೌಡ
ಬ್ರೋ ಗೌಡ- ವೈಷ್ಣವಿ ಗೌಡ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jun 28, 2021 | 5:34 PM

ವೈಷ್ಣವಿ ಗೌಡ ಬಿಗ್​ ಬಾಸ್ ಮನೆಯಲ್ಲಿ ಯಾರ ತಂಟೆಗೂ ತಾವಾಗಿಯೇ ಹೋಗುವುದಿಲ್ಲ. ಅವರು ಕೋಪ ಮಾಡಿಕೊಂಡು ಜಗಳ ಮಾಡಿದ್ದು ತುಂಬಾನೇ ಕಡಿಮೆ. ಬಿಗ್​ ಬಾಸ್​ ಸೀಸನ್​ 8 ಮೊದಲ ಇನ್ನಿಂಗ್ಸ್​ನಲ್ಲಿ ವೈಷ್ಣವಿ ತಮಗೆ ಬೇರೆಯವರಿಂದ ನೋವಾದರೂ ಅದನ್ನು ತಾವೇ ನುಂಗಿಕೊಳ್ಳುತ್ತಿದ್ದರು. ಆದರೆ, ಈಗ ಅವರು ಹಾಗಿಲ್ಲ. ಬದಲಾಗಿದ್ದಾರೆ. ನೋವಾದರೆ ಆ ಬಗ್ಗೆ ನೇರವಾಗಿಯ ಹೇಳುತ್ತಿದ್ದಾರೆ. ಪರಿಣಾಮ ಶಮಂತ್​ ಹಾಗೂ ವೈಷ್ಣವಿ ನಡುವೆ ಜಗಳ ನಡೆದಿದೆ. ‘ಯೆಷ್ಟು ಚಂದ ಇವಳು, ಯಾವ ರಾಣಿ ಮಗಳು..’ ಎಂದು ವೈಷ್ಣವಿ ಮಧುರವಾಗಿ ಹಾಡುತ್ತಿದ್ದರು. ಈ ವೇಳೆ ಅಲ್ಲೇ ಇದ್ದ ಶಮಂತ್​, ಪ್ರಾಸ ಕೂಡುತ್ತದೆ ಎಂದು ‘ಡವ್​ರಾಣಿ ಮಗಳು’ ಎಂದರು. ಇದು ವೈಷ್ಣವಿಗೆ ಬೇಸರ ತರಿಸಿದೆ. ಇದಕ್ಕೆ ನಾನಾ ಅರ್ಥ ಕಲ್ಪಿಸಿಕೊಂಡು ಅವರು ಶಮಂತ್​ ವಿರುದ್ಧ ವಾದಕ್ಕೆ ಇಳಿದರು.

‘ನೀವು ನನಗೆ ಏನು ಬೇಕಿದ್ದರೂ ಹೇಳಿ. ನನ್ನ ಕುಟುಂಬದ ಬಗ್ಗೆ ಮಾತ್ರ ಮಾತನಾಡಬೇಡಿ’ ಎಂದು ಎಚ್ಚರಿಕೆ ನೀಡಿದರು. ಆಗ ಶಮಂತ್​, ನಾನೆಲ್ಲಿ ನಿಮ್ಮ ಕುಟುಂಬದ ಬಗ್ಗೆ ಮಾತನಾಡಿದೆ? ಎನೋ ಪ್ರಾಸ ಕೂಡುತ್ತದೆ ಎನ್ನುವ ಕಾರಣಕ್ಕೆ ಆ ರೀತಿ ಹೇಳಿದೆ ಅಷ್ಟೆ. ಅದನ್ನು ನಾನು ಹೇಳಿದ್ದು ರಘು ಅವರಿಗೆ’ ಎಂದರು. ಆದರೆ ವೈಷ್ಣವಿ ತಣ್ಣಗಾಗಲಿಲ್ಲ. ಇಬ್ಬರ ನಡುವೆ ವಾಗ್ವಾದ ಜೋರಾಗುತ್ತಾ ಹೋಯಿತು.

ಅಲ್ಲಿಯೇ ಇದ್ದ ರಘು ಅವರು, ವೈಷ್ಣವಿ ಅವರನ್ನು ಸಮಾಧಾನ ಮಾಡೋಕೆ ಬಂದರು. ಆದರೆ, ವೈಷ್ಣವಿ ಇದಕ್ಕೆ ತಲೆಕೆಡಿಸಿಕೊಳ್ಳಲಿಲ್ಲ. ‘ದಯವಿಟ್ಟು ಇರಿಟೇಟ್​​ ಮಾಡಬೇಡಿ. ನನ್ನನ್ನು ನನ್ನಷ್ಟಕ್ಕೆ ಬಿಟ್ಟುಬಿಡಿ’ ಎಂದರು. ಈ ಮಾತನ್ನು ಕೇಳಿದ ನಂತರದಲ್ಲಿ ವೈಷ್ಣವಿ ಎಷ್ಟು ಸಿಟ್ಟಾಗಿದ್ದಾರೆ ಎಂಬುದು ಮನೆಯವರೆಲ್ಲರಿಗೂ ಗೊತ್ತಾಯಿತು.

ಕೆಲ ಸಮಯ ಬಿಟ್ಟು ವೈಷ್ಣವಿ ಬಳಿ ತೆರಳಿದ ಶಮಂತ್ ಸಮಾಧಾನ ಮಾಡೋಕೆ ಮುಂದಾದರು. ಆಗಲೂ ವೈಷ್ಣವಿ ‘ನನ್ನ ಬಗ್ಗೆ ಮಾತನಾಡಿ, ಕುಟುಂಬದ ಬಗ್ಗೆ ಮಾತ್ರ ಮಾತನಾಡಬೇಡಿ’ ಎಂದರು. ‘ನನ್ನ ಮಾತಿನ ಅರ್ಥ ಆ ರೀತಿ ಅಲ್ಲವಾಗಿತ್ತು’ ಎಂದು ಪರಿಪರಿಯಾಗಿ ಹೇಳಿಕೊಳ್ಳೋಕೆ ಶಮಂತ್​ ಪ್ರಯತ್ನಿಸಿದರು. ಆದರೂ ಪ್ರಯೋಜನವಾಗಿಲ್ಲ.

ಇದನ್ನೂ ಓದಿ:

ನಟಿಯರ ಜೊತೆ ಬಿಗ್​ ಬಾಸ್​ ಸ್ಪರ್ಧಿಯ ಡ್ರಗ್ಸ್​ ಪಾರ್ಟಿ; ಪೊಲೀಸರ ಬಲೆಗೆ ಬಿದ್ದ 22 ಮಂದಿ

ಚಂದ್ರಚೂಡ್​ ಮಾಜಿ ಪತ್ನಿ ಶ್ರುತಿ ವಿಚಾರ ಕೆದಕಿದ ಮಂಜು; ಬಿಗ್​ ಬಾಸ್​ನಲ್ಲಿ ನಡೆಯಿತು ಯುದ್ಧ

Published On - 4:24 pm, Mon, 28 June 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ