AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಮಲತಾದು ಕಠೋರ ಹೃದಯ; ನಟಿ ರಮ್ಯಾಗೆ ಆದ ಸ್ಥಿತಿ ಸುಮಲತಾಗೂ ಆಗುತ್ತೆ: ಎಲ್. ಆರ್. ಶಿವರಾಮೇಗೌಡ ಭವಿಷ್ಯ

LR Shivarame Gowda: ಅಂಬರೀಷ್ ಮಂಡ್ಯ ಜಿಲ್ಲೆಗೆ ಯಾವುದೇ ಕೆಲಸವನ್ನು ಮಾಡಿಲ್ಲ. ಆದರೂ ಅಂಬರೀಷ್​ ಬಗ್ಗೆ ಮಂಡ್ಯದ ಜನರಿಗೆ ಅಭಿಮಾನವಿತ್ತು. ಮಂಡ್ಯದಲ್ಲಿ ನಟಿ ರಮ್ಯಾಗೆ ಆದ ಸ್ಥಿತಿ ಸುಮಲತಾಗೂ ಆಗುತ್ತೆ ಎಂದು ಎಲ್​.ಆರ್​. ಶಿವರಾಮೇಗೌಡ ಭವಿಷ್ಯ ನುಡಿದರು.

ಸುಮಲತಾದು ಕಠೋರ ಹೃದಯ; ನಟಿ ರಮ್ಯಾಗೆ ಆದ ಸ್ಥಿತಿ ಸುಮಲತಾಗೂ ಆಗುತ್ತೆ: ಎಲ್. ಆರ್.  ಶಿವರಾಮೇಗೌಡ ಭವಿಷ್ಯ
ಎಲ್. ಆರ್. ಶಿವರಾಮೇಗೌಡ
TV9 Web
| Edited By: |

Updated on:Jul 09, 2021 | 9:14 PM

Share

ಮಂಡ್ಯ: ಕೆಆರ್​ಎಸ್ ಅಣೆಕಟ್ಟೆಯಲ್ಲಿ ಬಿರುಕು ಬಿಟ್ಟಿದೆ ಎಂಬ ವಿವಾದ ಹಾಗೂ ತದನಂತರದಲ್ಲಿ ಕಾವೇರಿ ಕಣಿವೆ ಭಾಗದಲ್ಲಿ ​​ಅಕ್ರಮ ಗಣಿಗಾರಿಕೆ ನಡೆದಿದೆ ಎಂಬ ಆರೋಪಗಳ ಸಮ್ಮುಖದಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಷ್​ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ನಡುವೆ ಆರೋಪ-ಪ್ರತ್ಯಾರೋಪಗಳು ತಾರಕ್ಕಕ್ಕೆ ಏರಿವೆ. ಈ ಮಧ್ಯೆ, ಆ ಭಾಗದ ಮತ್ತೊಬ್ಬ ಪ್ರಭಾವಿ ರಾಜಕಾರಣಿ, ಮಾಜಿ ಸಂಸದ ಎಲ್​.ಆರ್​. ಶಿವರಾಮೇಗೌಡ ಅವರು ಪ್ರಕರಣದಲ್ಲಿ ಮಧ್ಯೆ ಪ್ರವೇಶಿಸಿದ್ದಾರೆ.

ಅಂಬರೀಷ್ ಸಾವಿನ ಲಾಭ ಪಡೆದುಕೊಂಡವರು ಸುಮಲತಾ. ಅಂಬರೀಷ್ ಬದುಕಿದ್ದಾಗ ಮನೆಗೆ ಹೋದಾಗ ನೀರು ಕೊಡಲಿಲ್ಲ. ಕ್ಷೇತ್ರದ ಜನರಿಗೆ ಒಂದು ಲೋಟ ನೀರನ್ನ ಕೊಡಲಿಲ್ಲ. ಅಂಬಿದು ತಾಯಿ ಹೃದಯ; ಸಮಲತಾದು ಕಠೋರ ಹೃದಯ ಎಂದು ಟಿವಿ9 ಜೊತೆ ಮಾತನಾಡುತ್ತಾ ಮಾಜಿ ಸಂಸದ ಎಲ್​.ಆರ್. ಶಿವರಾಮೇಗೌಡ ವ್ಯಾಖ್ಯಾನಿಸಿದ್ದಾರೆ.

ಅಂಬರೀಷ್ ಮಂಡ್ಯ ಜಿಲ್ಲೆಗೆ ಯಾವುದೇ ಕೆಲಸವನ್ನು ಮಾಡಿಲ್ಲ. ಆದರೂ ಅಂಬರೀಷ್​ ಬಗ್ಗೆ ಮಂಡ್ಯದ ಜನರಿಗೆ ಅಭಿಮಾನವಿತ್ತು. ಆಕಸ್ಮಿಕವಾಗಿ ಸುಮಲತಾ ಮಂಡ್ಯ ಕ್ಷೇತ್ರದ ಸಂಸದೆ ಆಗಿದ್ದಾರೆ. ಮಂಡ್ಯದಲ್ಲಿ ನಟಿ ರಮ್ಯಾಗೆ ಆದ ಸ್ಥಿತಿ ಸುಮಲತಾಗೂ ಆಗುತ್ತೆ ಎಂದು ಎಲ್​.ಆರ್​. ಶಿವರಾಮೇಗೌಡ ಭವಿಷ್ಯ ನುಡಿದರು.

ಅಕ್ರಮ ಗಣಿಗಾರಿಕೆ ಮಾಡುತ್ತಿರುವವರು ಅಂಬರೀಷ್ ಶಿಷ್ಯಂದಿರು. ಇವತ್ತು ಅದು ಅಕ್ರಮವಾಗಿದೆ ಅಂತಾದ್ರೆ ಅಂಬರೀಷ್ ಕಾಲದಲ್ಲೂ ಅದು ಅಕ್ರಮವೇ ಆಗಿತ್ತು ಎಂದು ಶಿವರಾಮೇಗೌಡ ಹೇಳಿದರು.

ಇದನ್ನೂ ಓದಿ:

ನಾಗಮಂಗಲ ಟಿಕೆಟ್ ನಂದೇ, ಮುಂದಿನ ಶಾಸಕ ನಾನೇ.. ಶಾಸಕ ಸುರೇಶ್‌ಗೌಡ ವಿರುದ್ಧ ತೊಡೆತಟ್ಟಿದ ಶಿವರಾಮೇಗೌಡ

ಮಾಜಿ ಸಂಸದ LR ಶಿವರಾಮೇಗೌಡ ಪುತ್ರನಿಗೆ ISD ನೋಟಿಸ್​ (Former MP LR Shivarame Gowda criticises Sumalatha Ambareesh)

Published On - 5:07 pm, Fri, 9 July 21

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್