Sumalatha Ambareesh: ಪತಿ ಅಂಬರೀಶ್​ರನ್ನು ನೆನೆದು ಟಿವಿ9 ಸ್ಟುಡಿಯೋದಲ್ಲಿ ಸುಮಲತಾ ಅಂಬರೀಶ್ ಕಣ್ಣೀರು

ರಾಜಕೀಯವಾಗಿ ಏನೇ ಆರೋಪಗಳನ್ನು ಎದುರಿಸಬಹುದು. ಆದರೆ ವೈಯಕ್ತಿಕವಾಗಿ ನಿಂದನೆ ಮಾಡುವುದು ಒಪ್ಪತಕ್ಕದ್ದಲ್ಲ ಎಂದಿರುವ ಸುಮಲತಾ ಅಂಬರೀಷ್, ಪತಿ ಅಂಬರೀಷ್ ಅವರನ್ನು ನೆನೆದು ಟಿವಿ9 ಸ್ಟುಡಿಯೋದಲ್ಲಿ ಕಣ್ಣೀರಿಟ್ಟಿದ್ದಾರೆ.

Sumalatha Ambareesh: ಪತಿ ಅಂಬರೀಶ್​ರನ್ನು ನೆನೆದು ಟಿವಿ9 ಸ್ಟುಡಿಯೋದಲ್ಲಿ ಸುಮಲತಾ ಅಂಬರೀಶ್ ಕಣ್ಣೀರು
ಟಿವಿ9 ಸ್ಟುಡಿಯೊದಲ್ಲಿ ಸುಮಲತಾ ಅಂಬರೀಶ್
Follow us
TV9 Web
| Updated By: shivaprasad.hs

Updated on: Jul 09, 2021 | 6:02 PM

ಬೆಂಗಳೂರು: ಪತಿ ಅಂಬರೀಶ್​ ಅವರನ್ನು ನೆನೆದು ಪತ್ನಿ ಸುಮಲತಾ ಅಂಬರೀಶ್ ಅವರು ಟಿವಿ9 ಸ್ಟುಡಿಯೋದಲ್ಲಿ ಕಣ್ಣೀರಿಟ್ಟಿದ್ದಾರೆ. ಅಂಬರೀಶ್ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ಕೊಂಡೊಯ್ದ ವಿಚಾರಕ್ಕೆ ಸಂಬಂಧಪಟ್ಟಂತೆ, ಪದೇ ಪದೇ ಈ ವಿಚಾರ ಏಕೆ ಪ್ರಸ್ತಾಪ ಮಾಡುತ್ತೀರಿ? ಕುಮಾರಸ್ವಾಮಿಯವರ ಈ ಹೇಳಿಕೆಗಳಿಂದ ಮನಸ್ಸಿಗೆ ನೋವಾಗಿದೆ ಎಂದು ಅವರು ದುಃಖ ವ್ಯಕ್ತಪಡಿಸಿದ್ದಾರೆ.

ಕುಮಾರಸ್ವಾಮಿಯವರು ರಾಜಕಾರಣದಲ್ಲಿ ಒಂದು ಡಿಗ್ನಿಟಿ ಇಟ್ಟುಕೊಂಡಿದ್ದಾರೆ. ಆದರೆ ಇವರ ವಿರುದ್ಧ ಯಾರೂ ಸ್ಪರ್ಧೆ ಮಾಡಬಾರದಾ? ಇಷ್ಟಲ್ಲದೇ ಹೆಣ್ಣುಮಕ್ಕಳ ಬಗ್ಗೆ ಅಗೌರವದಿಂದ ಮಾತನಾಡುತ್ತೀರಿ ಎಂದು ಕುಮಾರಸ್ವಾಮಿಯವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ನಾನು ಇದುವರೆಗೆ ಯಾರ ವಿರುದ್ಧವೂ ವೈಯಕ್ತಿಕ ಆರೋಪಗಳನ್ನು ಮಾಡಿಲ್ಲ. ಯಾವ ಸಿದ್ಧಾಂತಗಳ ಹಂಗೂ ನನಗಿಲ್ಲ ಎಂದು ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ನಮ್ಮನ್ನು ವಿನಾಕಾರಣ ಟೀಕಿಸುವವರ ಮಟ್ಟವೇ ಬೇರೆ. ನಾವು ಅವರ ಮಟ್ಟಕ್ಕೆ ಇಳಿಯಬಾರದು ಎಂದು ಮಗನಿಗೆ ಹೇಳುತ್ತಾ ಅವನನ್ನು ಸಮಾಧಾನಪಡಿಸುತ್ತಿರುತ್ತೇನೆ. ಅವರು ರಾಜಕೀಯವಾಗಿ ನಮ್ಮನ್ನು ಎಷ್ಟೇ ಟೀಕಿಸಲಿ. ಆದರೆ ವೈಯಕ್ತಿಕವಾಗಿ ಅಂಬರೀಶ್ ವಿಚಾರಕ್ಕೆ ಕುರಿತಂತೆ ಇನ್ನೊಮ್ಮೆ ಮಾತನಾಡಿದರೆ ಅವರು ಮನುಷ್ಯರೇ ಅಲ್ಲ ಎಂದು ನಾನು ಹೇಳುತ್ತೇನೆ ಎಂದು ಸುಮಲತಾ ಅವರು ಪ್ರತಿಕ್ರಿಯಿಸಿದ್ದಾರೆ.

ಸಂಪೂರ್ಣ ಸಂದರ್ಶನ ಇಲ್ಲಿದೆ:

ಅಂಬರೀಶ್​ ಅವರಿಗೆ ನನ್ನ ಬಳಿ ಕ್ರಷರ್ ಇತ್ತೆಂದೇ ಗೊತ್ತಿರಲಿಲ್ಲ: ಅಂಬಿ ಆಪ್ತ ಲಿಂಗರಾಜು ಸ್ಪಷ್ಟನೆ

ಈ ಮೊದಲು ಶ್ರೀರಂಗಪಟ್ಟಣದಲ್ಲಿ ಕ್ರಷರ್ ನಡೆಸುತ್ತಿದ್ದ ಅಂಬಿ ಆಪ್ತ ಲಿಂಗರಾಜು ಅವರು ಟಿವಿ9ಗೆ ಸ್ಪಷ್ಟನೆ ನೀಡಿದ್ದಾರೆ. ಅಂಬರೀಶ್​ ಅವರಿಗೆ ಜಲ್ಲಿ ಉದ್ಯಮ ಮಾಡುವ ಅಗತ್ಯವಿರಲಿಲ್ಲ. ದಾಖಲೆಗಳ ಪ್ರಕಾರ ನನ್ನ ಹಾಗೂ ನನ್ನ ಪತ್ನಿ ಹೆಸರಿನಲ್ಲಿಯೇ ಕ್ರಷರ್ ಇದೆ. ಅದರಲ್ಲಿ ನಷ್ಟವಾದ ಕಾರಣ ಆ ಕ್ರಷರ್​ ಈಗ ನಿಲ್ಲಿಸಿದೆ. ಪ್ರಶ್ನೆ ಇರುವುದು ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ. ಇದರ ಬಗ್ಗೆ ಮಾತನಾಡುವುದು ಬಿಟ್ಟು, ಅಂಬಿ ಹೆಸರನ್ನು ಅದಕ್ಕೆ ತಳಕು ಹಾಕಬಾರದು ಎಂದು ಲಿಂಗರಾಜು ಅವರು ತಿಳಿಸಿದ್ದಾರೆ. ನಾನು ಈ ಹಿಂದೆಯೂ ಅಂಬಿ ಹಿಂಬಾಲಕ, ಮುಂದೆಯೂ ಅವರ ಅಭಿಮಾನಿ ಎಂದು ಲಿಂಗರಾಜು ಹೇಳಿದ್ದಾರೆ.

ಇದನ್ನೂ ಓದಿ: ಅಂಬರೀಶ್ ಹೆಸರು ಹೇಳೋಕೂ ಯೋಗ್ಯತೆ ಇಲ್ಲದವರು; ಸ್ಮಾರಕ ಸಂಬಂಧ ಭೇಟಿ ಮಾಡಿದಾಗ ಮುಖಕ್ಕೆ ಪೇಪರ್ ಎಸೆದಿದ್ದನ್ನು ನೆನಪಿಸಿಕೊಳ್ಳಲಿ: ಸುಮಲತಾ

ಇದನ್ನೂ ಓದಿ: ಪದೇ ಪದೇ ನನ್ನ ತಂದೆಯ ಸಾವಿನ ವಿಚಾರ ತರಬೇಡಿ: ಅಭಿಷೇಕ್ ಅಂಬರೀಶ್ ಎಚ್.ಡಿ.ಕುಮಾರಸ್ವಾಮಿಗೆ ಮನವಿ

(Sumalatha Ambareesh getting emotional on Ambareesh issue at TV9 studio)

ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ