ಮಾಜಿ ಸಂಸದ LR ಶಿವರಾಮೇಗೌಡ ಪುತ್ರನಿಗೆ ISD ನೋಟಿಸ್​

ಆಂತರಿಕ ಭದ್ರತಾ ವಿಭಾಗದಿಂದ ಮಾಜಿ ಸಂಸದ LR ಶಿವರಾಮೇಗೌಡ ಪುತ್ರ ಚೇತನ್‌ ಗೌಡಗೆ ನೋಟಿಸ್ ನೀಡಲಾಗಿದೆ. ಚೇತನ್ ಗೌಡಗೆ ವಿಚಾರಣೆಗೆ ಹಾಜರಾಗುವಂತೆ ISD ನೋಟಿಸ್ ನೀಡಿದೆ.

  • Updated On - 10:12 am, Tue, 9 February 21 Edited By: Apurva Kumar
ಮಾಜಿ ಸಂಸದ LR ಶಿವರಾಮೇಗೌಡ ಪುತ್ರನಿಗೆ ISD ನೋಟಿಸ್​

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕಿರುತೆರೆ ನಟರಾದ ಅಭಿಷೇಕ್ ದಾಸ್​ ಮತ್ತು ಗೀತಾಭಾರತಿ ಭಟ್​ ಶಾಂತಿನಗರದಲ್ಲಿರುವ ISD ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದರು.

ಇದೀಗ, ತನಿಖೆ ಮುಂದುವರೆದಿದ್ದು ಆಂತರಿಕ ಭದ್ರತಾ ವಿಭಾಗದಿಂದ ಮಾಜಿ ಸಂಸದ LR ಶಿವರಾಮೇಗೌಡ ಪುತ್ರ ಚೇತನ್‌ ಗೌಡಗೆ ನೋಟಿಸ್ ನೀಡಲಾಗಿದೆ. ಚೇತನ್ ಗೌಡಗೆ ನಾಳೆ ವಿಚಾರಣೆಗೆ ಹಾಜರಾಗುವಂತೆ ISD ನೋಟಿಸ್ ನೀಡಿದೆ.