‘72 ದಿನಗಳ ಕಾಲ ನೋಡಿದ ಕೆಪಿ ಹೀಗೆ ಇರಲಿಲ್ಲ’; ಚಕ್ರವರ್ತಿ ಪ್ರಭಾವಕ್ಕೊಳಗಾದ ಅರವಿಂದ್​ಗೆ ಸುದೀಪ್​ ಎಚ್ಚರಿಕೆ

ಬಿಗ್​ ಬಾಸ್​ ಮನೆಯಲ್ಲಿ ಅರವಿಂದ್ ಹಾಗೂ ಪ್ರಶಾಂತ್​ ನಡುವೆ ಆದ ಜಗಳದ ವಿಚಾರವನ್ನು ಸುದೀಪ್​ ಪ್ರಸ್ತಾಪ ಮಾಡಿದರು. ಈ ವೇಳೆ ಹೇಳೋಕೆ ಏನಾದ್ರೂ ಇದೆಯಾ? ಎಂದು ಅರವಿಂದ್​ಗೆ ಸುದೀಪ್​ ಕೇಳಿದರು.

‘72 ದಿನಗಳ ಕಾಲ ನೋಡಿದ ಕೆಪಿ ಹೀಗೆ ಇರಲಿಲ್ಲ’; ಚಕ್ರವರ್ತಿ ಪ್ರಭಾವಕ್ಕೊಳಗಾದ ಅರವಿಂದ್​ಗೆ ಸುದೀಪ್​ ಎಚ್ಚರಿಕೆ
ಅರವಿಂದ್ ಕೆಪಿ
Follow us
| Updated By: ರಾಜೇಶ್ ದುಗ್ಗುಮನೆ

Updated on: Jul 11, 2021 | 12:34 PM

ಬಿಗ್ ಬಾಸ್​ ಮನೆಯಲ್ಲಿ ಕಿಚ್ಚ ಸುದೀಪ್​ ಜುಲೈ 10 ಎಪಿಸೋಡ್​ನಲ್ಲಿ ಎಲ್ಲಾ ಸ್ಪರ್ಧಿಗಳು ಕ್ಲಾಸ್​ ತೆಗೆದುಕೊಂಡಿದ್ದಾರೆ. ಈ ವಾರ ತಪ್ಪು ಮಾಡಿದ ಎಲ್ಲಾ ಸ್ಪರ್ಧಿಗಳಿಗೆ ಸುದೀಪ್​ ಮಾತಿನ ಏಟು ಕೊಟ್ಟಿದ್ದಾರೆ. ಈ ಮಧ್ಯೆ, ಚಕ್ರವರ್ತಿ ಜತೆ ಸೇರಿ ಅರವಿಂದ್​ ದಾರಿ ತಪ್ಪಿದ್ದಾರೆ ಎಂಬುದನ್ನು ಸುದೀಪ್​ ಪರೋಕ್ಷವಾಗಿ ಹೇಳಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಅರವಿಂದ್ ಹಾಗೂ ಪ್ರಶಾಂತ್​ ನಡುವೆ ಆದ ಜಗಳದ ವಿಚಾರವನ್ನು ಸುದೀಪ್​ ಪ್ರಸ್ತಾಪ ಮಾಡಿದರು. ಈ ವೇಳೆ ಹೇಳೋಕೆ ಏನಾದ್ರೂ ಇದೆಯಾ? ಎಂದು ಅರವಿಂದ್​ಗೆ ಸುದೀಪ್​ ಕೇಳಿದರು. ಇದಕ್ಕೆ ಉತ್ತರಿಸಿದ ಅರವಿಂದ್​, ‘ನಾನು ಪ್ರವೋಕ್​ ಮಾಡಿದೆ ಎಂದು ನನಗೆ ಅನ್ನಿಸಿತು. ಅಷ್ಟೆಲ್ಲ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಫೀಲ್ ಆಯಿತು’ ಎಂದರು ಅರವಿಂದ್.

ಇದೇ ಪ್ರಶ್ನೆಯನ್ನು ಪ್ರಶಾಂತ್​ಗೆ ಕೇಳಿದರು ಸುದೀಪ್​. ‘ಹಿಂದಿನ ರಾತ್ರಿ ದಿವ್ಯಾ ಉರುಡಗ ಬಳಿ ಹೋಗಿ ನಾನು ಕ್ಷಮೆ ಕೇಳಿದ್ದೆ. ಅವಾಗಲೇ ಚಾಪ್ಟರ್​ ಕ್ಲೋಸ್​ ಆಗಿತ್ತು. ಕ್ಷಮಿಸಿ ಎಂದು ಅವರ ಬಳಿ ಹೇಳಿದ್ದೆ. ಕ್ಯಾಪ್ಟನ್ಸಿ ಮುಗಿದಾಗ ದಿವ್ಯಾಗೆ ನಾನು ಗುಡ್​ ಜಾಬ್​ ಎಂದೆ. ಆದಾಗ್ಯೂ ಅರವಿಂದ್​ ಪ್ರವೋಕ್​ ಮಾಡಿದ್ರು’ ಎಂದು ಬೇಸರ ಹೊರ ಹಾಕಿದರು ಪ್ರಶಾಂತ್​.

ಇಷ್ಟೆಲ್ಲ ಆದಮೇಲೆ ನಿಮಗೆ ಸಾರಿ ಕೇಳಬೇಕು ಎಂದು ಅನಿಸಿಲ್ಲವೇ ಎಂದು ಪ್ರಶಾಂತ್ ಅವರನ್ನು ಸುದೀಪ್​ ಕೇಳಿದರು. ‘ನಾನು ಅಷ್ಟಾಗಿ ಟೆಂಪರ್​ ಕಳೆದುಕೊಳ್ಳುವುದಿಲ್ಲ. ಆದರೆ, ಆದಿನ ನಾನು ನಿಜಕ್ಕೂ ನಿಯಂತ್ರಣ​ ಕಳೆದುಕೊಂಡಿದ್ದೆ. ಇದಕ್ಕೆ ಕ್ಷಮೆ ಕೂಡ ಕೇಳಿದೆ’ ಎಂಬ ಉತ್ತರ ಪ್ರಶಾಂತ್​ ಕಡೆಯಿಂದ ಬಂತು.

ನೀವು ಕ್ಷಮೆ ಕೇಳಿದ್ರಾ ಎಂಬ ಸುದೀಪ್​ ಪ್ರಶ್ನೆಗೆ ಉತ್ತರಿಸಿದ ಅರವಿಂದ್​, ಸಾರಿ ಕೇಳಿಲ್ಲ ಎಂದರು. ‘ನಿಮ್ಮ ಮೇಲೆ ಏನು ಪ್ರಭಾವ ಬೀರಿತು? ದಿವ್ಯಾ ಮತ್ತು ಪ್ರಶಾಂತ್​ ನಡುವೆ ಒಪ್ಪಂದ ಇತ್ತು. ಆದರೆ, ನೀವು ಅದನ್ನು ಉಲ್ಲಂಘಿಸಿದ್ದೀರಿ​. ನೇರವಾಗಿ ಮಾತನಾಡಿ, ಸ್ವಂತ ಬುದ್ಧಿ ಇಲ್ಲವಾ? ಎಂದು ನೀವೇ ಕೇಳ್ತಿರಿ. ಈಗ ನೀವು ಅದನ್ನೇ ಮಾಡಿದ್ದೀರಿ. ಇದು ನಿಮ್ಮ ವ್ಯಕ್ತಿತ್ವಕ್ಕೆ ಸರಿ ಕಾಣುತ್ತಿದಯೇ? 72 ದಿನಗಳ ಹಿಂದೆ ನೋಡಿದ ಕೆಪಿ ಹೀಗೆ ಇರಲಿಲ್ಲ. ಈಗೆ ಯಾಕೆ ಹೀಗಾದ್ರಿ?’ ಎಂದು ಸುದೀಪ್​ ಪ್ರಶ್ನಿಸಿದರು. ಈ ವೇಳೆ ನಾನು ಪ್ರಭಾವಕ್ಕೆ ಒಳಗಾಗಿದ್ದು ಹೌದು ಎಂದು ಅರವಿಂದ್​ ಒಪ್ಪಿಕೊಂಡರು.

ಇದನ್ನೂ ಓದಿ: ಅವಾಚ್ಯ ಶಬ್ದಗಳನ್ನು ಬಳಸಿದ ಚಕ್ರವರ್ತಿ ಚಂದ್ರಚೂಡ್​ಗೆ ಸುದೀಪ್​ ಹೇಳಿದ್ದೇನು?

ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್