ದಿವ್ಯಾ ಉರುಡುಗ ಮಾಡಿದ ತಪ್ಪಿಗೆ ಮನೆ ಮಂದಿಗೆ ಶಿಕ್ಷೆ ನೀಡಿದ ಬಿಗ್​ ಬಾಸ್​

ಪ್ರತಿ ವಾರ ಓರ್ವ ಸ್ಪರ್ಧಿಯನ್ನು ಬಿಗ್​ ಬಾಸ್​ ಮನೆಯಲ್ಲಿ ಕಳಪೆ ಹಾಗೂ ಅತ್ಯುತ್ತಮ ಎನ್ನುವ ಆಯ್ಕೆ ನೀಡಲಾಗುತ್ತದೆ. ಈ ಬಾರಿ ಪ್ರಶಾಂತ್​ ಅವರನ್ನು ಕಳಪೆ ಎಂದು ಮನೆಯವರು ನಿರ್ಧರಿಸಿದರು.

ದಿವ್ಯಾ ಉರುಡುಗ ಮಾಡಿದ ತಪ್ಪಿಗೆ ಮನೆ ಮಂದಿಗೆ ಶಿಕ್ಷೆ ನೀಡಿದ ಬಿಗ್​ ಬಾಸ್​
ದಿವ್ಯಾ ಉರುಡುಗ
Follow us
TV9 Web
| Updated By: ಆಯೇಷಾ ಬಾನು

Updated on: Jul 11, 2021 | 8:03 AM

ಬಿಗ್​ ಬಾಸ್​ ಮನೆಯಲ್ಲಿ ತಪ್ಪು ಮಾಡೋದು ಒಬ್ಬರಾದರೂ ಶಿಕ್ಷೆ ಮಾತ್ರ ಎಲ್ಲರಿಗೂ ಸಿಗುತ್ತದೆ. ಇದು ಈ ಮೊದಲು ಅನೇಕ ಬಾರಿ ಆಗಿದೆ. ಈಗ ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ ಉರುಡುಗ ಮಾಡಿದ ತಪ್ಪಿಗೆ ಮನೆ ಮಂದಿ ಎಲ್ಲರೂ ಶಿಕ್ಷೆ ಪಡೆದಿದ್ದಾರೆ. ಈ ವಿಚಾರದಲ್ಲಿ ಕೆಲವರು ದಿವ್ಯಾ ಬಗ್ಗೆ ಬೇಸರ ಹೊರ ಹಾಕಿದ್ದಾರೆ.

ಪ್ರತಿ ವಾರ ಓರ್ವ ಸ್ಪರ್ಧಿಯನ್ನು ಬಿಗ್​ ಬಾಸ್​ ಮನೆಯಲ್ಲಿ ಕಳಪೆ ಹಾಗೂ ಅತ್ಯುತ್ತಮ ಎನ್ನುವ ಆಯ್ಕೆ ನೀಡಲಾಗುತ್ತದೆ. ಈ ಬಾರಿ ಪ್ರಶಾಂತ್​ ಅವರನ್ನು ಕಳಪೆ ಎಂದು ಮನೆಯವರು ನಿರ್ಧರಿಸಿದರು. ಅವರು ವಿನಾಕಾರಣ ಜಗಳವಾಡುತ್ತಾರೆ ಎಂಬ ಕಾರಣವನ್ನು ನೀಡಲಾಯಿತು. ಅವರನ್ನು ಮನೆಯವರು ಜೈಲಿಗೂ ಕೂಡ ಕಳುಹಿಸಿದರು.

ಬಿಗ್​ ಬಾಸ್​ ನಿಯಮದ ಪ್ರಕಾರ ಕಳಪೆ ಪಟ್ಟ ಪಡೆದು ಜೈಲಿಗೆ ಹೋದ ಸ್ಪರ್ಧಿ ಅಡುಗೆಗೆ ತರಕಾರಿ ಕತ್ತರಿಸಿಕೊಡಬೇಕು. ಆದರೆ, ದಿವ್ಯಾ ಉರುಡುಗೆ ಇದು ನೆನಪಿಲ್ಲದೆ ತಾವೇ ಕತ್ತರಿಸಿ ಬಿಟ್ಟರು. ಕತ್ತರಿಸಿ ಆದ ನಂತರದಲ್ಲಿ ಈ ಬಗ್ಗೆ ಅವರಿಗೆ ಇದು ಅರಿವಾಗಿದೆ. ಬಿಗ್​ ಬಾಸ್ ನನ್ನ ಕಡೆಯಿಂದ ತಪ್ಪಾಗಿದೆ ಎಂದು ಕ್ಯಾಮೆರಾ ಎದುರು ನಿಂತು ಅವರು ಕೇಳಿಕೊಂಡರು.

ಇದಾದ ಬೆನ್ನಲ್ಲೇ ಬಿಗ್​ ಬಾಸ್ ಮನೆಯಿಂದ ಆದೇಶವೊಂದು ಬಂತು. ಇದನ್ನು ಕೇಳಿ ಬಿಗ್​ ಬಾಸ್​ ಮನೆಯವರು ಶಾಕ್​ಗೆ ಒಳಗಾದರು. ‘ದಿವ್ಯಾ ಕತ್ತರಿಸಿದ ನುಗ್ಗೇಕಾಯಿ, ಆಲೂಗಡ್ಡೆ, ಕ್ಯಾರೆಟ್​ ಜತೆಗೆ ಫ್ರಿಡ್ಜ್​ನಲ್ಲಿರುವ​ ನುಗ್ಗೇಕಾಯಿ, ಆಲೂಗಡ್ಡೆ, ಕ್ಯಾರೆಟ್ ಕೂಡ ಸ್ಟೋರೂಮ್​ಗೆ ಇಡಬೇಕು’ ಎನ್ನುವ ಆದೇಶವನ್ನು ಬಿಗ್ ಬಾಸ್​ ಮಾಡಿದರು. ಈ ಮೂಲಕ ಆ ತರಕಾರಿಗಳನ್ನು ಬಳಸುವುದರಿಂದ ಮನೆಯವರು ವಂಚಿತರಾದರು.

ನಂತರ, ರೆಫ್ರಿಜರೇಟರ್​ನಲ್ಲಿದ್ದ ಬೀನ್ಸ್​, ಟೊಮ್ಯಾಟೋವನ್ನು ಪ್ರಶಾಂತ್​ಗೆ ಕತ್ತರಿಸೋಕೆ ನೀಡಿದರು. ‘ನಾನು ಕತ್ತರಿಸೋದಿಲ್ಲ. ನನ್ನ ಪಾಲಿಂದನ್ನು ನೀವೆ ಕತ್ತರಿಸಿದ್ದೀರಿ’ ಎಂದು ಪ್ರಶಾಂತ್​ ಅವಾಜ್​ ಹಾಕಿದರು. ನಂತರ ಸ್ವಲ್ಪ ಸತಾಯಿಸಿ ತರಕಾರಿ ಕತ್ತರಿಸಿದರು.

ಇದನ್ನೂ ಓದಿ: Divya Uruduga: ಕನ್ನಡ ಬಿಗ್​ ಬಾಸ್​ ಸೀಸನ್​ 8ರಲ್ಲಿ ಹೊಸ ದಾಖಲೆ ಬರೆದ ದಿವ್ಯಾ ಉರುಡುಗ

ಅರವಿಂದ್ ಗೆಲ್ಲಿಸೋಕೆ ಚಕ್ರವರ್ತಿಗೆ ಅನ್ಯಾಯ ಮಾಡಿದ್ರಾ ದಿವ್ಯಾ ಉರುಡುಗ? ಬಿಗ್​ ಬಾಸ್​ ಮನೆಯಲ್ಲಿ ಹೀಗೊಂದು ಪ್ರಶ್ನೆ

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?