ಅವಾಚ್ಯ ಶಬ್ದಗಳನ್ನು ಬಳಸಿದ ಚಕ್ರವರ್ತಿ ಚಂದ್ರಚೂಡ್​ಗೆ ಸುದೀಪ್​ ಹೇಳಿದ್ದೇನು?

ಈ ವಾರದ ಎಪಿಸೋಡ್​ನಲ್ಲಿ ಪ್ರಶಾಂತ್ ಸಂಬರಗಿ ಮುಂದೊಂದು ಹಿಂದೊಂದು ಮಾಡುತ್ತಾರೆ ಎಂದು ಚಕ್ರವರ್ತಿ ಆರೋಪಿಸಿದರು. ಇಬ್ಬರ ಜಗಳ ತಾರಕಕ್ಕೇರಿತ್ತು.

ಅವಾಚ್ಯ ಶಬ್ದಗಳನ್ನು ಬಳಸಿದ ಚಕ್ರವರ್ತಿ ಚಂದ್ರಚೂಡ್​ಗೆ ಸುದೀಪ್​ ಹೇಳಿದ್ದೇನು?
ಅಶ್ಲೀಲ ಸನ್ನೆ ಮಾಡಿ ಸಮತೋಲನದ ನೆಪ ಹೇಳಿದ ಚಕ್ರವರ್ತಿಗೆ ಸುದೀಪ್ ಸಖತ್​ ಕ್ಲಾಸ್​
Follow us
| Updated By: ರಾಜೇಶ್ ದುಗ್ಗುಮನೆ

Updated on: Jul 10, 2021 | 10:32 PM

ಚಕ್ರವರ್ತಿ ಚಂದ್ರಚೂಡ್​ ಈ ವಾರ ಮಿತಿಮೀರಿ ಮಾತನಾಡಿದ್ದರು. ಪ್ರಶಾಂತ್​ ಸಂಬರಗಿ-ವೈಷ್ಣವಿ ಗೌಡ ಬಗ್ಗೆ ಸುಳ್ಳು ಹೇಳಿ ಸಿಕ್ಕಿ ಬಿದ್ದಿದ್ದರು. ಇದಾದ ನಂತರದಲ್ಲಿ ಉಂಟಾದ ಜಗಳದಲ್ಲಿ ಅವರು ಕೆಟ್ಟ ಶಬ್ದಗಳನ್ನು ಬಳಕೆ ಮಾಡಿದ್ದರು. ಇದಕ್ಕೆ ಸುದೀಪ್​ ಅಸಮಾಧಾನಗೊಂಡಿದ್ದಾರೆ. ವೀಕೆಂಡ್​ನಲ್ಲಿ ನಡೆದ ಪಂಚಾಯ್ತಿಯಲ್ಲಿ ಸರಿಯಾಗಿ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಈ ವಾರದ ಎಪಿಸೋಡ್​ನಲ್ಲಿ ಪ್ರಶಾಂತ್ ಸಂಬರಗಿ ಮುಂದೊಂದು ಹಿಂದೊಂದು ಮಾಡುತ್ತಾರೆ ಎಂದು ಚಕ್ರವರ್ತಿ ಆರೋಪಿಸಿದರು. ಇಬ್ಬರ ಜಗಳ ತಾರಕಕ್ಕೇರಿತ್ತು. ‘ಪ್ರಶಾಂತ್ ಸರ್​ ನಾನು ನಿಮ್ಮೊಂದಿಗೆ ಇನ್ನು ಮಾತನ್ನೇ ಆಡುವುದಿಲ್ಲ. ನೀನು ಮಾಡಿರೋದು ತಪ್ಪಾದ ಕೆಲಸ. ಗೆಳೆಯರ ನಡುವೆ ನಡೆದ ಮಾತನ್ನು ಮೂರನೇಯವನಿಗೆ ಹೇಳೋದು ದ್ರೋಹದ ಕೆಲಸ’ ಎಂದು ಹೇಳುವ ಮೂಲಕ ಪ್ರಶಾಂತ್​ ಜತೆ ಮಾತನಾಡುವುದಿಲ್ಲ ಎಂದರು ಚಕ್ರವರ್ತಿ. ಈ ವೇಳೆ ಕೆಲ ಸಮಯಗಳ ಕಾಲ ಇಬ್ಬರು ನಡುವೆ ಬಳಕೆ ಆದ ಶಬ್ದಗಳಿಗೆ ಬಿಗ್​ ಬಾಸ್​ ಬೀಪ್​ ಹಾಕಿದ್ದರು. ಈ ವಿಚಾರವನ್ನು ಸುದೀಪ್​ ಪ್ರಸ್ತಾಪಿಸಿದ್ದಾರೆ.

‘ಹೋದವಾರ ಒಂದು ಮಾತು ಹೇಳಿದ್ರಿ. ನಿಮ್ಮ ಕಣ್ಣಲ್ಲಿ ಬೀಳಲ್ಲ ಅಂದಿದ್ರಿ. ಈಗ ನನ್ನ ಕಣ್ಣಲ್ಲಿ ಸುಳ್ಳು ಹೇಳಿದ್ರಿ. ವೈಷ್ಣವಿ ವಿಚಾರದಲ್ಲಿ ನೀವು ಸುಳ್ಳು ಹೇಳಿದ್ರಿ. ನನ್ನ ಕಣ್ಣಲ್ಲೇ ಕಣ್ಣಿಟ್ಟು ಸುಳ್ಳು ಹೇಳಿದ್ರಿ. ತಪ್ಪನ್ನು ಮಾಡಿದ್ರೆ ತಪ್ಪಲ್ಲ ಅಂತ ಹೇಳ್ತೀರಾ. ಶನಿವಾರ ಎಲ್ಲವೂ ಕ್ಲಿಪ್​ಗಳನ್ನು ಇಟ್ಟುಕೊಂಡು ಬರ್ಲಾ? ಈ ರೀತಿ ಮಾಡೋದ್ರಿಂದ ನನಗೆ ಲಾಭನಷ್ಟ ಎರಡೂ ಇಲ್ಲ’ ಎಂದು ಚಕ್ರವರ್ತಿಗೆ ಪ್ರಶ್ನಿಸದರು ಸುದೀಪ್​.

ಇನ್ನು, ಚಕ್ರವರ್ತಿ ಅವಾಚ್ಯ ಶಬ್ದಗಳನ್ನು ಬಳಕೆ ಮಾಡಿದ್ದಕ್ಕೆ ಸುದೀಪ್​ ಕ್ಲಾಸ್​ ತೆಗೆದುಕೊಂಡರು. ‘ಅದೆಷ್ಟು ಬಾರಿ ಬೀಪ್​ ಬಳಕೆ ಮಾಡಬೇಕು. ಈ ಕಾರ್ಯಕ್ರಮವನ್ನು ಮನೆಯವರೆಲ್ಲರೂ ಕುಳಿತು ನೋಡಬೇಕು. ಆದರೆ, ನೀವು ಕೆಟ್ಟ ಶಬ್ದ ಬಳಕೆ ಮಾಡಿದ್ದು ಸರಿಯಿಲ್ಲ. ನಿಮ್ಮ ಜ್ಞಾನಕ್ಕೆ ಇನ್ನೊಂದಷ್ಟು ಜನರು ಕಲಿಯಿರಿ ಎಂದೆ. ಅದಾದ ನಂತರ ಬಂದ ಭಾಷೆ ಏನು? ನಿಮ್ಮ ಭಾಷೆ ಬಗ್ಗೆ ನಿಜಕ್ಕೂ ಬೇಜಾರಾಗುತ್ತಿದೆ’ ಎಂದು ಚಕ್ರವರ್ತಿಗೆ ಹೇಳಿದರು ಸುದೀಪ್​.

ಇದನ್ನೂ ಓದಿ: ಪ್ರಶಾಂತ್​-ಅರವಿಂದ್ ಕೈ ಮಿಲಾಯಿಸಿಕೊಳ್ಳುವುದನ್ನು ತಪ್ಪಿಸಿದ ಮನೆ ಮಂದಿ; ಬಿಗ್​ ಬಾಸ್​ ಮನೆಯಲ್ಲಿ ದೊಡ್ಡ ಜಗಳ

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ