AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡ ಬಿಗ್​ ಬಾಸ್​ನ ಈ ವಾರದ ಎಲಿಮಿನೇಷನ್​ನಲ್ಲಿ ಪ್ರಮುಖ ಕ್ಯಾಂಡಿಡೇಟ್​ ಔಟ್​?

ಈ ಬಾರಿ ಬಿಗ್​ ಬಾಸ್​ ಮನೆಯಲ್ಲಿ ಆ ರೀತಿ ಇರಲಿಲ್ಲ. ಮನೆಯಲ್ಲಿ ಎರಡು ಟೀಂ ಮಾಡಿ 10 ಟಾಸ್ಕ್​ಗಳನ್ನು ನೀಡಲಾಗಿತ್ತು. 4  ದಿನಗಳ ಕಾಲ ನಡೆದ ಟಾಸ್ಕ್​ನಲ್ಲಿ ಸೋತ ತಂಡದ ಸದಸ್ಯರು ನಾಮಿನೇಟ್​ ಆಗಿದ್ದಾರೆ.

ಕನ್ನಡ ಬಿಗ್​ ಬಾಸ್​ನ ಈ ವಾರದ ಎಲಿಮಿನೇಷನ್​ನಲ್ಲಿ ಪ್ರಮುಖ ಕ್ಯಾಂಡಿಡೇಟ್​ ಔಟ್​?
ಕಿಚ್ಚ ಸುದೀಪ್​
TV9 Web
| Edited By: |

Updated on: Jul 17, 2021 | 2:33 PM

Share

ಕನ್ನಡ ಬಿಗ್​ ಬಾಸ್​ ಸೀಸನ್​ 8ರ ಎರಡನೇ ಇನ್ನಿಂಗ್ಸ್​ನ ಮೂರನೇ ಎಲಿಮಿನೇಷನ್​ ಈ ವಾರ ನಡೆಯುತ್ತಿದೆ. ನಾಲ್ಕು ಸ್ಪರ್ಧಿಗಳು ಈ ವಾರದ ನಾಮಿನೇಷನ್​ ಲಿಸ್ಟ್​ನಲ್ಲಿದ್ದಾರೆ. ಇವರಲ್ಲಿ ಒಬ್ಬರು ಈ ವಾರ ಮನೆಯಿಂದ ಹೊರ ಹೋಗಲಿದ್ದಾರೆ. ಈ ಮೂಲಕ ಮನೆಯ ಸ್ಪರ್ಧಿಗಳ ಸಂಖ್ಯೆ ಒಂಭತ್ತಕ್ಕೆ ಇಳಿಕೆ ಆಗಲಿದೆ. ಈ ವಾರ ಬಿಗ್​ ಬಾಸ್​ ಮನೆಯಿಂದ ಯಾರು ಹೊರ ಹೋಗುತ್ತಾರೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಈ ವಾರ ಬಿಗ್​ ಬಾಸ್​ ನಾಮಿನೇಷನ್​ಗೆ ಬೇರೆ ರೀತಿಯ ಮಾರ್ಗ ಅನುಸರಿಸಲಾಗಿತ್ತು. ಪ್ರತಿವಾರ ಸ್ಪರ್ಧಿಗಳಿಗೆ ನಾಮಿನೇಷನ್​ ಮಾಡುವ ಆಯ್ಕೆಯನ್ನು ನೀಡಲಾಗುತ್ತದೆ. ಯಾರಿಗೆ ಯಾವ ಸ್ಪರ್ಧಿ ಇಷ್ಟವಿಲ್ಲವೋ ಅವರನ್ನು ನಾಮಿನೇಟ್​ ಮಾಡುತ್ತಾರೆ. ಈ ಬಾರಿ ಬಿಗ್​ ಬಾಸ್​ ಮನೆಯಲ್ಲಿ ಆ ರೀತಿ ಇರಲಿಲ್ಲ. ಮನೆಯಲ್ಲಿ ಎರಡು ಟೀಂ ಮಾಡಿ 10 ಟಾಸ್ಕ್​ಗಳನ್ನು ನೀಡಲಾಗಿತ್ತು. 4  ದಿನಗಳ ಕಾಲ ನಡೆದ ಟಾಸ್ಕ್​ನಲ್ಲಿ ಸೋತ ತಂಡದ ಸದಸ್ಯರು ನಾಮಿನೇಟ್​ ಆಗಿದ್ದಾರೆ.

ಈ ಬಾರಿ ಸೋತ ತಂಡದಲ್ಲಿದ್ದ ಪ್ರಶಾಂತ್ ಸಂಬರಗಿ​, ಪ್ರಿಯಾಂಕಾ ತಿಮ್ಮೇಶ್​, ವೈಷ್ಣವಿ ಗೌಡ, ಶುಭಾ ಪೂಂಜಾ ನಾಮಿನೇಷನ್​ ಪಟ್ಟಿಯಲ್ಲಿದ್ದಾರೆ. ಈ ನಾಲ್ವರು ಕ್ಯಾಂಡಿಡೇಟ್​ಗಳು ಬಿಗ್​ ಬಾಸ್​ ಮನೆಯಲ್ಲಿ ಪ್ರಮುಖರು ಎನಿಸಿಕೊಂಡಿದ್ದಾರೆ. ಇವರಲ್ಲಿ ಒಬ್ಬರು ಈ ವಾರ ಔಟ್​ ಆಗುತ್ತಿದ್ದಾರೆ.

ವೈಷ್ಣವಿ ಗೌಡ ಬಿಗ್ ಬಾಸ್​ ಮನೆಯಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಟಾಪ್​ 5 ಲಿಸ್ಟ್​ನಲ್ಲಿ ಅವರನ್ನು ನೋಡಬೇಕು ಎನ್ನುವುದು ಅಭಿಮಾನಿಗಳ ಇಚ್ಛೆ. ಹೀಗಾಗಿ, ಅವರಿಗೆ ಹೆಚ್ಚು ವೋಟ್​ ಬಿದ್ದೇ ಬೀಳುತ್ತದೆ. ಹೀಗಾಗಿ, ಈ ವಾರ ಮನೆಯಿಂದ ಹೊರ ಹೋಗುವ ಸಾಧ್ಯತೆ ಕಡಿಮೆ. ಇನ್ನು, ಶುಭಾ ಪೂಂಜಾ ಸ್ಯಾಂಡಲ್​ವುಡ್​ನಲ್ಲಿ ಗುರುತಿಸಿಕೊಂಡವರು. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಈ ಕಾರಣಕ್ಕೆ ಅವರಿಗೆ ಹೆಚ್ಚಿನ ವೋಟ್​ ಬೀಳುವ ಸಾಧ್ಯತೆ ಇದೆ.

ಪ್ರಶಾಂತ್​ ಸಂಬರಗಿ ಇತ್ತೀಚೆಗೆ ತುಂಬಾನೇ ಬದಲಾಗಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳ ಜತೆ ಬೆರೆಯುತ್ತಿದ್ದಾರೆ. ಹೀಗಾಗಿ, ಅವರು ಈ ವಾರ ಸೇವ್​ ಆಗಬಹುದು. ಕೊನೆಯಲ್ಲಿ ಉಳಿದು ಕೊಂಡಿದ್ದು ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿ ಪಡೆದ ಪ್ರಿಯಾಂಕಾ ತಿಮ್ಮೇಶ್​. ಇವರು ಈ ವಾರ ಬಿಗ್​ ಬಾಸ್​ ಮನೆಯಿಂದ ಹೊರಹೋಗಬಹುದು ಎನ್ನುವ ಮಾತು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡಿದೆ.

ಇದನ್ನೂ ಓದಿ: Bigg Boss Kannada: ಈ ವಾರದ​ ಎಲಿಮಿನೇಷನ್​ಗೆ ಟ್ವಿಸ್ಟ್​ ಕೊಟ್ಟ ಬಿಗ್ ಬಾಸ್​

Bigg Boss Kannada: ಮಂಜು ಪಾವಗಡ ಜಾತಕದಲ್ಲಿದ್ದ ವಿಚಾರ ಬಿಗ್​ ಬಾಸ್​ ಮನೆಯಲ್ಲಿ ನಿಜವಾಯ್ತು

Follow Us
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!
ಸಲೂನ್‌ನಲ್ಲಿ ಶಿಸ್ತಿನಿಂದ ಕೇಶ ವಿನ್ಯಾಸ ಮಾಡಿಸಿಕೊಂಡ ಮಂಗ!
ಸಲೂನ್‌ನಲ್ಲಿ ಶಿಸ್ತಿನಿಂದ ಕೇಶ ವಿನ್ಯಾಸ ಮಾಡಿಸಿಕೊಂಡ ಮಂಗ!
ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಕದ್ದು ಮನೆಗೆ ಬೆಂಕಿ ಹಚ್ಚಿದ ಕಳ್ಳರು!
ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಕದ್ದು ಮನೆಗೆ ಬೆಂಕಿ ಹಚ್ಚಿದ ಕಳ್ಳರು!