ದರ್ಶನ್ ಗಲಾಟೆ: ಸಂದೇಶ್ ಹೋಟೆಲ್​ನ ಸೆಕ್ಯುರಿಟಿ ಗಾರ್ಡ್ ತೆರೆದಿಟ್ಟರು ಸ್ಫೋಟಕ ವಿಚಾರ!

ನಟ ದರ್ಶನ್ ಅವರು ಸಂದೇಶ್ ದಿ ಪ್ರಿನ್ಸ್​ ಹೋಟೆಲ್​ನಲ್ಲಿ ಗಲಾಟೆ ನಡೆಸಿದ್ದರು ಎನ್ನುವ ಆರೋಪಕ್ಕೆ ಸಂಬಂಧಪಟ್ಟಂತೆ ದಿನಕ್ಕೊಂದು ತಿರುವುಗಳು ಲಭ್ಯವಾಗುತ್ತಿವೆ. ಇದೀಗ ಹೋಟೆಲ್​ನ ವಾಚ್​ಮನ್ ಮಾತನಾಡಿದ್ದು ಹಲವು ವಿಚಾರಗಳನ್ನು ತೆರೆದಿಟ್ಟಿದ್ದಾರೆ.

TV9kannada Web Team

| Edited By: shivaprasad.hs

Jul 17, 2021 | 11:29 AM

ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್​ನಲ್ಲಿ ದರ್ಶನ್ ಗಲಾಟೆ ನಡೆಸಿದ್ದಾರೆ. ಅಲ್ಲಿನ ಸೆಕ್ಯುರಿಟಿ ಗಾರ್ಡ್​ಗೆ ಅವಾಚ್ಯವಾಗಿ ಬೈದಿದ್ದಾರೆ. ಜೊತೆಗೆ 50 ಸಾವಿರ ರೂ.ಗಳನ್ನು ಎಸೆದು ನಾನಿನ್ನು ಈ ಹೊಟೆಲ್​ಗೆ ಕಾಲಿಡುವುದಿಲ್ಲ ಎಂದು ಹೇಳಿದ್ದರು ಎಂದು ಸೆಕ್ಯುರಿಟಿ ಗಾರ್ಡ್​ ಒಬ್ಬರು ತಿಳಿಸಿದ್ದಾರೆ. ದುಡ್ಡನ್ನು ಆಯ್ದುಕೊಳ್ಳಲು ಹೋದ ಹೌಸ್ ಕೀಪರ್​ಗೂ ಅವಾಚ್ಯವಾಗಿ ಬೈದಿದ್ದಾರೆ. ಈ ಘಟನೆಯಿಂದ ಹೊಟಲ್​ನ ಸಿಬ್ಬಂದಿಗಳೆಲ್ಲಾ ಕೆಲಸ ಬಿಡುವ ಯೋಚನೆಯಲ್ಲಿದ್ದರು. ಆಗ ಸಂಸ್ಥೆಯ ಎಂಡಿ ಸಮಾಧಾನಪಡಿಸಿದ್ದರಿಂದ ಸಿಬ್ಬಂದಿ ಹೊಟೆಲ್​ನಲ್ಲಿ ಮುಂದುವರೆದಿದ್ದರು ಎಂದು ಸೆಕ್ಯುರಿಟಿ ಗಾರ್ಡ್ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಕೊನೆಗೆ ಬಂದ ಹೊಟೆಲ್​ನ ಹಿರಿಯ ಎಂಡಿ ದರ್ಶನ್​ ಅವರನ್ನು ತರಾಟೆಗೆ ತೆಗೆದುಕೊಂಡರು. ನಮ್ಮ ಸಿಬ್ಬಂದಿಯ ಮೇಲೆ ಕೈಮಾಡಿದ್ದೀಯಲ್ಲಾ, ಇನ್ನು ಇಲ್ಲಿಗೆ ಬರಬೇಡ ಎಂದು ಎಚ್ಚರಿಕೆ ನೀಡಿ ಕಳಿಸಿದ್ದರು ಎಂದು ಸೆಕ್ಯುರಿಟಿ ತಿಳಿಸಿದ್ದಾರೆ. ಆ ವಿಡಿಯೊ ಇಲ್ಲಿದೆ.

(Security Guard of Sandesh The Prince Hotel reveals truth about Darshan controversy)

Follow us on

Click on your DTH Provider to Add TV9 Kannada