AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಹಳ ಹಿಂದೆಯೇ ನಿವೃತ್ತಿಯ ಮನಸ್ಸು ಮಾಡಿದ್ದರು ಅಣ್ಣಾವ್ರು ಆದರೆ ಸಾಧ್ಯವಾಗಲಿಲ್ಲ

Dr Rajkumar: 1954ರಲ್ಲಿ ‘ಬೇಡರ ಕಣ್ಣಪ್ಪ’ ಸಿನಿಮಾ ಮೂಲಕ ನಾಯಕ ನಟನಾಗಿ ನಟಿಸಲು ಆರಂಭಿಸಿದ ರಾಜ್​ಕುಮಾರ್ ಅವರು 2000 ರಲ್ಲಿ ಬಿಡುಗಡೆ ಆದ ‘ಶಬ್ದವೇಧಿ’ ಸಿನಿಮಾದ ವರೆಗೂ ಸಹ ಸ್ಟಾರ್ ನಟನಾಗಿಯೇ ಉಳಿದುಕೊಂಡಿದ್ದರು. ಕೋಟ್ಯಂತರ ಸಿನಿಮಾ ಪ್ರೇಮಿಗಳನ್ನು ರಂಜಿಸಿದರು. ಆದರೆ ಡಾ ರಾಜ್​​ಕುಮಾರ್ ಅವರಿಗೆ ಒಂದು ಹಂತದಲ್ಲಿ ನಿವೃತ್ತಿಯ ಮನಸ್ಸಾಗಿತ್ತು. ಅವರು ಬಹುವಾಗಿ ಪ್ರೀತಿಸುತ್ತಿದ್ದ ನಟನೆಯಿಂದ ಹಿಂದೆ ಸರಿಯುವ ಮನಸ್ಸು ಮಾಡಿದ್ದರು. ಕೊನೆಯ ಸಿನಿಮಾನಲ್ಲಿ ನಟಿಸುವ ಹಲವು ವರ್ಷಗಳ ಹಿಂದೆಯೇ ಅವರು ನಿವೃತ್ತಿ ಪಡೆಯುವ ಆಸೆಯಾಗಿತ್ತು. ಆದರೆ ಅದು ಅವರ ಆಪ್ತರ ಕಾರಣದಿಂದಾಗಿ ಸಾಧ್ಯವಾಗಲಿಲ್ಲ.

ಬಹಳ ಹಿಂದೆಯೇ ನಿವೃತ್ತಿಯ ಮನಸ್ಸು ಮಾಡಿದ್ದರು ಅಣ್ಣಾವ್ರು ಆದರೆ ಸಾಧ್ಯವಾಗಲಿಲ್ಲ
Dr Rajkumar
ಮಂಜುನಾಥ ಸಿ.
|

Updated on:Feb 27, 2026 | 7:49 AM

Share

ಐದು ದಶಕಗಳ ಕಾಲ ಬೆಳ್ಳಿ ಪರದೆಯ ಮೇಲೆ ರಾರಾಜಿಸಿದ, ಈಗಲೂ ಸಹ ಕನ್ನಡಿಗರ ಮನಸ್ಸುಗಳಲ್ಲಿ ಅಚ್ಚಳಿಯದೆ ನೆಲೆಸಿರುವ ನಟ ಡಾ ರಾಜ್​​ಕುಮಾರ್ (Dr Rajkumar). 1954ರಲ್ಲಿ ‘ಬೇಡರ ಕಣ್ಣಪ್ಪ’ ಸಿನಿಮಾ ಮೂಲಕ ನಾಯಕ ನಟನಾಗಿ ನಟಿಸಲು ಆರಂಭಿಸಿದ ರಾಜ್​ಕುಮಾರ್ ಅವರು 2000 ರಲ್ಲಿ ಬಿಡುಗಡೆ ಆದ ‘ಶಬ್ದವೇಧಿ’ ಸಿನಿಮಾದ ವರೆಗೂ ಸಹ ಸ್ಟಾರ್ ನಟನಾಗಿಯೇ ಉಳಿದುಕೊಂಡಿದ್ದರು. ಕೋಟ್ಯಂತರ ಸಿನಿಮಾ ಪ್ರೇಮಿಗಳನ್ನು ರಂಜಿಸಿದರು. ಆದರೆ ಡಾ ರಾಜ್​​ಕುಮಾರ್ ಅವರಿಗೆ ಒಂದು ಹಂತದಲ್ಲಿ ನಿವೃತ್ತಿಯ ಮನಸ್ಸಾಗಿತ್ತು. ಅವರು ಬಹುವಾಗಿ ಪ್ರೀತಿಸುತ್ತಿದ್ದ ನಟನೆಯಿಂದ ಹಿಂದೆ ಸರಿಯುವ ಮನಸ್ಸು ಮಾಡಿದ್ದರು. ಕೊನೆಯ ಸಿನಿಮಾನಲ್ಲಿ ನಟಿಸುವ ಹಲವು ವರ್ಷಗಳ ಹಿಂದೆಯೇ ಅವರು ನಿವೃತ್ತಿ ಪಡೆಯುವ ಆಸೆಯಾಗಿತ್ತು. ಆದರೆ ಅದು ಅವರ ಆಪ್ತರ ಕಾರಣದಿಂದಾಗಿ ಸಾಧ್ಯವಾಗಲಿಲ್ಲ.

ಡಾ ರಾಜ್​​ಕುಮಾರ್ ಅವರು ‘ಶಬ್ದವೇಧಿ’ ಸಿನಿಮಾನಲ್ಲಿ ನಟಿಸಿದಾಗ ಅವರಿಗೆ 71 ವರ್ಷ ವಯಸ್ಸು. ಆದರೂ ಸಹ ಆ ಆಕ್ಷನ್ ಥ್ರಿಲ್ಲರ್ ಸಿನಿಮಾನಲ್ಲಿ ಅದ್ಭುತವಾಗಿ ನಟಿಸಿದ್ದಲ್ಲದೆ ಸಿನಿಮಾವನ್ನು ಸೂಪರ್ ಹಿಟ್ ಆಗುವಂತೆ ಮಾಡಿದ್ದರು. ಅಣ್ಣಾವ್ರು ಎಷ್ಟೇ ಅದ್ಭುತ ನಟನಾಗಿದ್ದರೂ, ನಟನೆಯನ್ನು ಅಪಾರವಾಗಿ ಪ್ರೀತಿಸಿದ್ದರೂ ಸಹ ಒಂದು ಹಂತದ ಬಳಿಕ ಅವರ ಮಾನಸಿಕ ಉತ್ಸಾಹಕ್ಕೆ ದೇಹ ಜೊತೆಗೊಡುತ್ತಿರಲಿಲ್ಲ. ಹಾಗಾಗಿ ಅವರು ನಿವೃತ್ತಿಯ ಮನಸ್ಸು ಮಾಡಿದ್ದರು. ಅದೂ ‘ಶಬ್ದವೇಧಿ’ ಸಿನಿಮಾ ಬಡುವ ಬಹಳ ಮುಂಚೆಯೇ ನಿವೃತ್ತಿಯ ಬಗ್ಗೆ ಆಲೋಚಿಸಿದ್ದರು.

ರಾಜ್​ಕುಮಾರ್ ಅವರು 90ರ ದಶಕದಲ್ಲಿ ಖ್ಯಾತ ಚಿತ್ರಸಾಹಿತಿ ಚಿ ಉದಯಶಂಕರ್ ಅವರಿಗೆ ಒಂದು ಸಂದರ್ಶನ ನೀಡಿದ್ದರು. ಸಂದರ್ಶನದಲ್ಲಿ ಅವರು ತಮ್ಮ ನಿವೃತ್ತಿಯ ಬಗ್ಗೆ ಮಾತನಾಡಿದ್ದರು. ಉದಯಶಂಕರ್ ಅವರು, ಆಗಷ್ಟೆ ಬಿಡುಗಡೆ ಆಗಿದ್ದ ‘ಜೀವನ ಚೈತ್ರ’ ಸಿನಿಮಾದ ನಟನೆಯ ಬಗ್ಗೆ ಪ್ರಶ್ನೆ ಕೇಳಿದರು. ಅದಕ್ಕೆ ಉತ್ತರಿಸುತ್ತಾ ಮಾತನಾಡಿದ ರಾಜ್​​ಕುಮಾರ್ ಅವರು, ‘ನನಗೆ ಅದರ ರಹಸ್ಯವೆಲ್ಲ ಗೊತ್ತಿಲ್ಲ, ಹೇಗೋ ಜನರ ಅಪೇಕ್ಷೆ ನನ್ನ ಬಗ್ಗೆ, ನನ್ನ ನಟನೆ ಬಗ್ಗೆ ಇದೆ, ಜನರ ಅಪೇಕ್ಷೆ, ಪ್ರೀತಿ, ಗೌರವಗಳು ಇರುವಾಗಲೇ ಮೆಲ್ಲಗೆ ಪರದೆಯ ಹಿಂದೆ ಸರಿದುಬಿಡುವುದು ಉತ್ತಮ ಎಂದುಕೊಂಡಿದ್ದೆ’ ಎಂದಿದ್ದರು.

ಇದನ್ನೂ ಓದಿ:ಶೆಟ್ಟಿ ಗ್ಯಾಂಗ್ ಬಿಟ್ಟು ಕನ್ನಡದ ಕೆಲವರಿಗೆ ಮಾತ್ರ ಮದುವೆ ಆಹ್ವಾನ ನೀಡಿದ ರಶ್ಮಿಕಾ

‘ಆದರೆ ನೀವುಗಳು, ಇನ್ನೂ ಕೆಲವು ಆಪ್ತರು ನನ್ನ ಹುರಿದುಂಬಿಸಿ ಮತ್ತೆ ನಟಿಸುವಂತೆ ಮಾಡಿದಿರಿ. ನಿಮ್ಮಗಳ ಒತ್ತಾಸೆ ಮತ್ತು ಪ್ರೇಕ್ಷಕರ ಪ್ರಭುಗಳ ಒತ್ತಾಸೆಯಿಂದ ನಾನು ನಟಿಸಿದೆ. ಆದರೆ ಈ ಬಾರಿ (ಜೀವನ ಚೈತ್ರ ಸಿನಿಮಾ ಸಮಯದಲ್ಲಿ) ನಟಿಸುವಾಗ ಹೆಚ್ಚೇ ಭಯ ಆಗಿತ್ತು. ಏಕೆಂದರೆ ಎರಡು ವರ್ಷಗಳ ಕಾಲ ನಾನು ಕ್ಯಾಮೆರ ಎದುರು ನಿಂತಿರಲಿಲ್ಲ, ಹಾಗಾಗಿ ತುಸು ಹೆಚ್ಚೇ ಭಯ ಆಯ್ತು, ಆದರೆ ವೃತ್ತಿ ಬದುಕಿನ ಆರಂಭದಿಂದಲೂ ನನ್ನನ್ನು ಮುಂದೂಡಿಕೊಂಡು ಬರುತ್ತಿರುವ ಶಕ್ತಿಯೊಂದು ಈ ಸಿನಿಮಾದಲ್ಲಿಯೂ ನನಗೆ ಶಕ್ತಿ ತುಂಬಿ ನಟಿಸುವಂತೆ ಮಾಡಿತು’ ಎಂದಿದ್ದರು.

ಅಂದಹಾಗೆ ‘ಜೀವನ ಚೈತ್ರ’ ಸಿನಿಮಾ ಬಿಡುಗಡೆ ಆಗಿದ್ದು 1992 ರಲ್ಲಿ. ಆಗಲೇ ಅಣ್ಣಾವ್ರು ನಿವೃತ್ತಿಯ ಮನಸ್ಸು ಮಾಡಿದ್ದರು. ‘ಜೀವನ ಚೈತ್ರ’ ಸಿನಿಮಾನಲ್ಲಿ ನಟಿಸುವುದಕ್ಕೆ ಮುಂಚೆ ಬರೋಬ್ಬರಿ ಎರಡು ವರ್ಷ ಅವರು ಯಾವುದೇ ಸಿನಿಮಾನಲ್ಲಿ ನಟಿಸಿರಲಿಲ್ಲ. ‘ಜೀವನ ಚೈತ್ರ’ ಸಿನಿಮಾನಲ್ಲಿ ನಟಿಸಿದ ಬಳಿಕ ಅಣ್ಣಾವ್ರು ನಾಯಕನಾಗಿ ನಟಿಸಿದ್ದು ಮೂರೇ ಸಿನಿಮಾಗಳಲ್ಲಿ 1993 ರಲ್ಲಿ ಬಿಡುಗಡೆ ಆದ ‘ಆಕಸ್ಮಿಕ’, 1994ರಲ್ಲಿ ಬಿಡುಗಡೆ ಆದ ‘ಒಡಹುಟ್ಟಿದವರು’ ಮತ್ತು 2000 ರಲ್ಲಿ ಬಿಡುಗಡೆ ಆದ ಅವರ ಕೊನೆಯ ಸಿನಿಮಾ ‘ಶಬ್ದವೇಧಿ’.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:08 pm, Thu, 26 February 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ