AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಂಚನೆ ಪ್ರಕರಣದ ಮೂಲ ಅರಿಯಲು ಕೈ ಜೋಡಿಸಿದರಾ ದರ್ಶನ್- ಉಮಾಪತಿ?

Darshan: ದರ್ಶನ್ ಅವರಿಗೆ 25ಕೋಟಿ ವಂಚನೆಗೆ ಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸತ್ಯಾಂಶವನ್ನು ತಿಳಿಯುವುದಕ್ಕಾಗಿ ಈರ್ವರೂ ಒಂದಾಗಿದ್ದಾರೆ ಎನ್ನುತ್ತಿವೆ ಮೂಲಗಳು.

ವಂಚನೆ ಪ್ರಕರಣದ ಮೂಲ ಅರಿಯಲು ಕೈ ಜೋಡಿಸಿದರಾ ದರ್ಶನ್- ಉಮಾಪತಿ?
ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ (ಫೈಲ್ ಚಿತ್ರ)
TV9 Web
| Updated By: shivaprasad.hs|

Updated on: Jul 20, 2021 | 2:58 PM

Share

ಬೆಂಗಳೂರು: ನಟ ದರ್ಶನ್ ಮತ್ತು ನಿರ್ದೇಶಕ, ಪತ್ರಕರ್ತ ಇಂದ್ರಜಿತ್ ಲಂಕೇಶ್ ಅವರ ಆರೋಪ ಪ್ರತ್ಯಾರೋಪಗಳಿಂದಾಗಿ ಅರುಣಾ ಕುಮಾರಿ ವಂಚನೆಗೆ ಯತ್ನಿಸಿದ ಪ್ರಕರಣ ಬದಿಗೆ ಸರಿಯಿತು. ಇತ್ತೀಚೆಗೆ ಆ ಬಗ್ಗೆ ಹೇಳಿಕೆ ನೀಡಿದ್ದ ಉಮಾಪತಿ, ಸಂಪೂರ್ಣ ಸತ್ಯಾಸತ್ಯತೆ ಹೊರಬರುವ ತನಕ ಪ್ರಕರಣದಿಂದ ಹಿಂದೆ ಸರಿಯುವುದಿಲ್ಲ ಎಂದಿದ್ದರು. ಈಗ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ 25 ಕೋಟಿ ರೂ. ಲೋನ್ ವಂಚನೆ ಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಚುರುಕುಗೊಳಿಸಲು ಮನವಿ ನೀಡುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.  ಇಂದು ಉಮಾಪತಿ ತಮ್ಮ ವಕೀಲರನ್ನು ಭೇಟಿಯಾಗಲಿದ್ದು, ಅವರ ಬಳಿ ಚರ್ಚಿಸಲಿದ್ದಾರೆ. ನಂತರ ವಕೀಲರು ತನಿಖೆಯನ್ನು ಚುರುಕುಗೊಳಿಸುವಂತೆ ಮನವಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಅರುಣಾ ಕುಮಾರಿ ವಂಚಿಸಲು ಪ್ರಯತ್ನಪಡುವುದಕ್ಕೆ ಕಾರಣವೇನು ಎಂಬುದನ್ನು ತಿಳಿಯಲು ನಟ ದರ್ಶನ್  ಹಾಗೂ ಉಮಾಪತಿ ಈರ್ವರೂ ಪ್ರಯತ್ನಿಸುತ್ತಿದ್ದಾರೆ. ಲೋನ್ ರಿಕವರಿ ಕೇಸ್ ಪ್ರಕರಣದ ಹಿಂದಿನ ಮಾಸ್ಟರ್ ಮೈಂಡ್ ಯಾರು ಮತ್ತು ಅದರಲ್ಲಿ ಯಾರಿದ್ದಾರೆ ಎಂಬ ಸತ್ಯವನ್ನು ತಿಳಿಯುವುದಕ್ಕಾಗಿ ಪ್ರಕರಣದ ತನಿಖೆ ಚುರುಕುಗೊಳಿಸಬೇಕು. ಅದಕ್ಕಾಗಿ ಉಮಾಪತಿಯವರು ತಮ್ಮ ವಕೀಲರ ಮೂಲಕ ತನಿಖೆ ಚುರುಕುಗೊಳಿಸಲು ಪೊಲೀಸರಿಗೆ ಮನವಿ ಮಾಡಲಿದ್ದಾರೆ. ಈ ಕುರಿತು ದರ್ಶನ್ ಮತ್ತು ಉಮಾಪತಿ ನಡುವೆ ನಿನ್ನೆ ಫೋನ್ ಕರೆಗಳ ಮೂಲಕ ಮಾತುಕತೆಯೂ ನಡೆದಿದೆ ಎನ್ನಲಾಗಿದೆ. ದರ್ಶನ್ ಅವರೂ ಸಹ ಈ ಹಿಂದೆ ಅರುಣಾ ಕುಮಾರಿ ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ಹೊರಬರಬೇಕು ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಹಾಗೆಯೇ ದರ್ಶನ್ ವಿರುದ್ಧ ಉಮಾಪತಿ ದೂರು ನೀಡುವುದೂ ಕೂಡಾ ಸುಳ್ಳು ಸುದ್ದಿ ಎಂಬ ಮಾಹಿತಿ ಬಂದಿದೆ. ಇಡೀ ಘಟನೆಯ ಸತ್ಯಾಂಶ ಹೊರಬಂದ ನಂತರವೇ ಇಬ್ಬರೂ ಒಂದಾಗಿ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಈರ್ವರೂ ಮೌನ ವಹಿಸಬಹುದು ಎನ್ನುತ್ತಿವೆ ಮೂಲಗಳು. ಒಟ್ಟಾರೆಯಾಗಿ ಪ್ರಕರಣಕ್ಕೆ ಒಂದು ಅಂತ್ಯ ಕಾಣಿಸಬೇಕೆಂದೇ ಉಮಾಪತಿ ಹಾಗೂ ದರ್ಶನ್​ ಒಟ್ಟಾಗಿ ಹೆಜ್ಜೆ ಹಾಕುತ್ತಿದ್ದು, ವಂಚನೆ ಪ್ರಕರಣದ ಮೂಲ ಅರಿಯಲು ಹೊರಟಿದ್ದಾರೆ ಎಂಬ ಸಂಗತಿ ಈಗ ಎಲ್ಲೆಡೆಯಿಂದ ಕೇಳಿಬರುತ್ತಿದೆ.

ಇದನ್ನೂ ಓದಿ:

ದರ್ಶನ್ ಹಲ್ಲೆ ಆರೋಪ ಪ್ರಕರಣ: ಪೊಲೀಸರಿಗೆ ಇನ್ನೂ ಸಿಗದ ಭದ್ರತಾ ಸಿಬ್ಬಂದಿ ಪ್ರಕಾಶ್

ಹೆಚ್.ಡಿ.ಕುಮಾರಸ್ವಾಮಿ, ಇಂದ್ರಜಿತ್ ಲಂಕೇಶ್ ಇರುವ ಫೋಟೋ ವೈರಲ್; ಅವಾಚ್ಯ ಪದ ಬಳಸಿದ ಟ್ರೋಲ್ ಮಗ ಪೇಜ್ ಅಡ್ಮಿನ್ ವಿರುದ್ಧ ದೂರು

ಇಂದ್ರಜಿತ್ ಲಂಕೇಶ್ ಸುದ್ದಿಗೋಷ್ಠಿ: ದರ್ಶನ್ ಹಿಂಬಾಲಕರು, ರೌಡಿಗಳು ಬೆದರಿಕೆ ಹಾಕ್ತಿದಾರೆ, ಇವರಿಗೆ ಪಾಠ ಕಲಿಸುತ್ತೇನೆ; ಇಂದ್ರಜಿತ್ ಎಚ್ಚರಿಕೆ

(Is Actor Darshan and Producer Umapathy Srinivasa Gowda compromise to find the truth behind loan fraud case?)