ಅನಂತ್ ನಾಗ್​ ಬಗ್ಗೆ ಯಶ್​ ವಿಶೇಷ ಮಾತು; ಪದ್ಮ ಪ್ರಶಸ್ತಿ ಒತ್ತಾಯಕ್ಕೆ ರಾಕಿಂಗ್​ ಸ್ಟಾರ್​ ಧ್ವನಿ

‘ಪೀಪಲ್ಸ್​ ಪದ್ಮ’ ಅಭಿಯಾನದಲ್ಲಿ ನಟ ಅನಂತ್​ ನಾಗ್​ ಅವರ ಹೆಸರನ್ನು ಅನೇಕರು ಸೂಚಿಸುತ್ತಿದ್ದಾರೆ. ಯಶ್​, ರಿಷಬ್​ ಶೆಟ್ಟಿ, ರಕ್ಷಿತ್​ ಶೆಟ್ಟಿ, ಪುನೀತ್​ ರಾಜ್​ಕುಮಾರ್​ ಸೇರಿದಂತೆ ಅನೇಕರು ಈ ಅಭಿಯಾನದಲ್ಲಿ ಭಾಗಿ ಆಗಿದ್ದಾರೆ.

ಅನಂತ್ ನಾಗ್​ ಬಗ್ಗೆ ಯಶ್​ ವಿಶೇಷ ಮಾತು; ಪದ್ಮ ಪ್ರಶಸ್ತಿ ಒತ್ತಾಯಕ್ಕೆ ರಾಕಿಂಗ್​ ಸ್ಟಾರ್​ ಧ್ವನಿ
ಯಶ್​, ಅನಂತ್​ ನಾಗ್​
TV9kannada Web Team

| Edited By: Apurva Kumar Balegere

Jul 21, 2021 | 12:29 PM

ಚಂದನವನದ ಹಿರಿಯ ನಟ ಅನಂತ್​ ನಾಗ್ (Anant Nag)​ ಅವರಿಗೆ ಪದ್ಮ ಪ್ರಶಸ್ತಿ (Padma Award) ಸಿಗಬೇಕು ಎನ್ನುವ ಒತ್ತಾಯ ಜೋರಾಗಿ ಕೇಳಿಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಅನೇಕರು ಧ್ವನಿ ಎತ್ತುತ್ತಿದ್ದಾರೆ. ಅಪಾರ ಅಭಿಮಾನಿಗಳು, ಸೆಲೆಬ್ರಿಟಿಗಳು ಟ್ವೀಟ್​ ಮಾಡುವ ಮೂಲಕ ಅಭಿಯಾನ ಮಾಡುತ್ತಿದ್ದಾರೆ. ಈಗ ರಾಕಿಂಗ್​ ಸ್ಟಾರ್​ ಯಶ್​ (Yash) ಕೂಡ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅನಂತ್​ ನಾಗ್​ ಅವರಿಗೆ ಪದ್ಮ ಪ್ರಶಸ್ತಿ ಸಿಗಬೇಕು ಎಂಬ ಕೂಗಿಗೆ ಯಶ್​ ದನಿ ಸೇರಿಸಿದ್ದಾರೆ.

‘ನಟನೆ ಎಂದರೆ ವರ್ತಿಸುವುದು. ಒಮ್ಮೆ ಅನಂತ್​ ನಾಗ್​ ಇದನ್ನು ಹೇಳಿದ್ದರು. ಆ ಮಾತು ನನ್ನಲ್ಲಿ ಉಳಿದುಕೊಂಡಿದೆ. ನಾನು ಬೆಳೆಯುವಾಗ ಅವರ ಕಾಮಿಡಿ ಸಿನಿಮಾಗಳನ್ನು ನೋಡಿ ನಕ್ಕಿದ್ದೇನೆ. ಸಿನಿಮಾದಲ್ಲಿ ಅವರು ಅತ್ತಾಗ ನನ್ನ ಕಣ್ಣುಗಳು ತೇವ ಆಗಿವೆ. ಹಾರರ್​ ಸಿನಿಮಾಗಳಲ್ಲಿ ನಮ್ಮನ್ನು ಅವರು ಭಯಪಡಿಸಿದಾಗ ನಾನು ಬೆಚ್ಚಿ ಬಿದ್ದಿದ್ದೇನೆ’ ಎನ್ನುವ ಮೂಲಕ ಅನಂತ್​ ನಾಗ್​ ಬಗ್ಗೆ ಯಶ್​ ಬರಹ ಆರಂಭಿಸಿದ್ದಾರೆ.

‘ಯಾವ ಪಾತ್ರವನ್ನಾದರೂ ಜೀವಿಸಬಲ್ಲ ಇಂಥ ಮೋಡಿಗಾರನ ಜೊತೆ ನಟಿಸಬೇಕು ಎಂದು ನಾನು ಮೊದಲಿನಿಂದಲೂ ಬಯಸುತ್ತಿದ್ದೆ. ಎವರ್​ಗ್ರೀನ್​ ಎಂಬ ಪದವೇ ಅವರಾಗಿದ್ದಾರೆ. ಯಾಕೆಂದರೆ, ಅವರ ಹಳೇ ಸಿನಿಮಾಗಳನ್ನು ಇಂದು ನೋಡಿದಾಗ ಯಾವುದೂ ಔಟ್​ಡೇಟೆಡ್​ ಎನಿಸಿಲ್ಲ. ಅವರ ನಟನೆ ಮತ್ತು ಸೃಜನಶೀಲತೆ ಕೂಡ ಹಾಗೆಯೇ ಇದೆ. ನನ್ನ ವೃತ್ತಿಜೀವನದ ಆರಂಭದಿಂದಲೂ ಇಂಥ ಅದ್ಭುತ ನಟನ ಜೊತೆ ಅಭಿನಯಿಸುವ ಅವಕಾಶ ನನಗೆ ಸಿಕ್ಕಿತ್ತು. ಯಾವುದೇ ವಿಷಯದ ಬಗ್ಗೆ ಅವರ ಜ್ಞಾನ ಅಪಾರ. ನನಗೆ ಅವರು ಸದಾ ಸ್ಫೂರ್ತಿ’ ಎಂದು ಯಶ್​ ಹೇಳಿದ್ದಾರೆ.

‘ಅನಂತ್ ನಾಗ್​ ಅವರು ಕರ್ನಾಟಕದ ಹೆಮ್ಮೆ. ಅವರು ಕೇವಲ ನಟರಲ್ಲ. ಭಾರತೀಯ ಸಿನಿಮಾರಂಗದ ದೊಡ್ಡ ಮೇಧಾವಿ. ಪದ್ಮ ಪ್ರಶಸ್ತಿಗೆ ಅವರಿಗಿಂತ ಇನ್ಯಾರು ಉತ್ತಮರು?’ ಎಂದು ಯಶ್​ ಪೋಸ್ಟ್​ ಮಾಡಿದ್ದಾರೆ. ಕನ್ನಡ ಚಿತ್ರರಂಗದ ನಟ/ನಿರ್ದೇಶಕರಾದ ರಿಷಬ್​ ಶೆಟ್ಟಿ, ರಕ್ಷಿತ್​ ಶೆಟ್ಟಿ, ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಸೇರಿದಂತೆ ಅನೇಕರು ಈ ಅಭಿಯಾನದಲ್ಲಿ ಭಾಗಿ ಆಗಿದ್ದಾರೆ.

‘ಕೆಜಿಎಫ್​ ಚಾಪ್ಟರ್​ 1’ ಸಿನಿಮಾದಲ್ಲಿ ಅನಂತ್​ ನಾಗ್​ ಪಾತ್ರ ಗಮನ ಸೆಳೆದಿತ್ತು. ಆದರೆ ಎರಡನೇ ಚಾಪ್ಟರ್​ನಲ್ಲಿ ಅವರ ಪಾತ್ರದ ಬಗ್ಗೆ ಕೆಲವು ಗುಸುಗುಸು ಕೇಳಿಬಂದಿದೆ. ಅನಂತ್​ ನಾಗ್​ ನಿಭಾಯಿಸಿದ್ದ ಪಾತ್ರದ ಗೆಟಪ್​ ಧರಿಸಿಯೇ ಪ್ರಕಾಶ್​ ರಾಜ್​ ಅವರು ‘ಕೆಜಿಎಫ್​: ಚಾಪ್ಟರ್​ 2’ ಚಿತ್ರತಂಡಕ್ಕೆ ಎಂಟ್ರಿ ನೀಡಿರುವುದರಿಂದ ಅಭಿಮಾನಿಗಳಲ್ಲಿ ತೀವ್ರ ಕೌತುಕ ಮೂಡಿದೆ. ಚಿತ್ರ ಬಿಡುಗಡೆ ಆದ ನಂತರವೇ ಈ ಕುತೂಹಲಕ್ಕೆ ತೆರೆ ಬೀಳಬೇಕಿದೆ.

ಇದನ್ನೂ ಓದಿ:

‘ಪ್ರಶಸ್ತಿಗಿಂತ ಜನರ ಪ್ರೀತಿ ದೊಡ್ಡದು’; AnanthnagForPadma ಆಂದೋಲನದ ಬಗ್ಗೆ ಅನಂತ್​ನಾಗ್​ ಪ್ರತಿಕ್ರಿಯೆ

ರವಿಚಂದ್ರನ್​ ‘ದೃಶ್ಯ 2’ ಶೂಟಿಂಗ್​ ಶುರು; ಚಿತ್ರತಂಡಕ್ಕೆ ಹೊಸ ಎಂಟ್ರಿ ಅನಂತ್​ ನಾಗ್​​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada