‘ಸಲಗ’ ಮತ್ತು ‘ಭಜರಂಗಿ 2’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ

ಕೊವಿಡ್​ ಪ್ರಕರಣ ಕಡಿಮೆ ಆದ ಹಿನ್ನೆಲೆಯಲ್ಲಿ ಚಿತ್ರಮಂದಿರಗಳನ್ನು ತೆರೆಯಲಾಗಿದೆ. ಇದಾದ ಬೆನ್ನಲ್ಲೇ  ಕನ್ನಡದ ಎರಡು ದೊಡ್ಡ ಚಿತ್ರಗಳು ರಿಲೀಸ್ ಡೇಟ್ ಪ್ರಕಟ ಮಾಡಿವೆ.

‘ಸಲಗ’ ಮತ್ತು ‘ಭಜರಂಗಿ 2’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
‘ಸಲಗ’ ಮತ್ತು ‘ಭಜರಂಗಿ 2’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ

ದೇಶಾದ್ಯಂತ ಕಾಣಿಸಿಕೊಂಡಿದ್ದ ಕೊರೊನಾ ಎರಡನೇ ಅಲೆ ಸಾಕಷ್ಟು ತೊಂದರೆ ತಂದಿದೆ. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಜಾರಿಗೆ ತಂದಿದ್ದ ಲಾಕ್​ಡೌನ್​ನಿಂದ ಚಿತ್ರಮಂದಿರಗಳು ಮುಚ್ಚಲ್ಪಟ್ಟಿದ್ದವು. ಈಗ ಕೊವಿಡ್​ ಪ್ರಕರಣ ಕಡಿಮೆ ಆದ ಹಿನ್ನೆಲೆಯಲ್ಲಿ ಚಿತ್ರಮಂದಿರಗಳನ್ನು ತೆರೆಯಲಾಗಿದೆ. ಇದಾದ ಬೆನ್ನಲ್ಲೇ  ಕನ್ನಡದ ಎರಡು ದೊಡ್ಡ ಚಿತ್ರಗಳು ರಿಲೀಸ್ ಡೇಟ್ ಪ್ರಕಟ ಮಾಡಿವೆ.

‘ಸಲಗ’ ಸಿನಿಮಾ ಸ್ಯಾಂಡಲ್​ವುಡ್​ನ ನಿರೀಕ್ಷಿತ ಚಿತ್ರಗಳಲ್ಲಿ ಒಂದು. ಇಷ್ಟು ದಿನ ನಾಯಕ ನಟನಾಗಿ ಗುರುತಿಸಿಕೊಂಡಿದ್ದ ದುನಿಯಾ ವಿಜಯ್​ ಇದೇ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್​ ತೊಟ್ಟಿದ್ದಾರೆ. ಈ ಚಿತ್ರ ಏಪ್ರಿಲ್​ 15ಕ್ಕೆ ಎಂಟ್ರಿ ಕೊಡಬೇಕಿತ್ತು. ಆದರೆ, ಕೊವಿಡ್​ನಿಂದ ಅದು ಸಾಧ್ಯವಾಗಿಲ್ಲ. ಈಗ ಸಲಗ ತಂಡ ಸಿನಿಮಾ ರಿಲೀಸ್​ ಡೇಟ್​ ಅನೌನ್ಸ್​ ಮಾಡಿದೆ.

ಆಗಸ್ಟ್ 20 ದುನಿಯಾ ವಿಜಯ್ ನಟನೆಯ ‘ಸಲಗ’ ರಿಲೀಸ್ ಆಗುತ್ತಿದೆ. ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಈ ಚಿತ್ರ ತೆರೆಗೆ ಬರುತ್ತಿದೆ. ಲಾಕ್​ಡೌನ್​ ನಂತರ ಸ್ಯಾಂಡಲ್​ವುಡ್​ನಲ್ಲಿ  ತೆರೆಕಾಣುತ್ತಿರುವ ಮೊದಲ ಬಿಗ್​ ಬಜೆಟ್​ ಚಿತ್ರ ಇದಾಗಿದೆ.

ಇನ್ನು,  ಗಣೇಶ ಚತುರ್ಥಿ ಪ್ರಯುಕ್ತ ಸೆಪ್ಟೆಂಬರ್‌ 10ರಂದು ಶಿವರಾಜ್ ಕುಮಾರ್ ನಟನೆಯ ‘ಭಜರಂಗಿ 2’ ಚಿತ್ರ ರಿಲೀಸ್​ ಆಗುತ್ತಿದೆ. ನಿರ್ದೇಶಕ ಹರ್ಷ ಹಾಗೂ ನಟ ಶಿವರಾಜ್​ಕುಮಾರ್​ ಕಾಂಬಿನೇಷನ್​ನಲ್ಲಿ ಬಂದ ಭಜರಂಗಿ ಚಿತ್ರ ದೊಡ್ಡಮಟ್ಟದಲ್ಲಿ ಹಿಟ್​ ಆಗಿತ್ತು. ಇದೇ ಕಾಂಬಿನೇಷನ್​ನಲ್ಲಿ  ‘ಭಜರಂಗಿ 2’ ಸಿದ್ಧಗೊಂಡಿದೆ.  ಈ ಮೊದಲು ಮೇ 14ಕ್ಕೆ ‘ ಭಜರಂಗಿ 2’ ತೆರೆಗೆ ತರೋಕೆ ಪ್ಲ್ಯಾನ್​ ನಡೆದಿತ್ತು. ಸದ್ಯ, ಈ ವಿಚಾರ ಅಭಿಮಾನಿಗಳಿಗೆ ಸಾಕಷ್ಟು ಖುಷಿ ನೀಡಿದೆ.

ಸುದೀಪ್​ ನಟನೆಯ ‘ಕೋಟಿಗೊಬ್ಬ 3’ಹಾಗೂ ‘ವಿಕ್ರಾಂತ್ ರೋಣ’, ಯಶ್​ ಅಭಿನಯದ ಯಶ್​ ‘ಕೆಜಿಎಫ್​ ಚಾಪ್ಟರ್​ 2’ ಚಿತ್ರಗಳ ದಿನಾಂಕ ಪ್ರಕಟ ಬಾಕಿ ಇದೆ. ಈ ಬಗ್ಗೆ ಶೀಘ್ರವೆ ಘೋಷಣೆ ಆಗಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Shiva Rajkumar Birthday: ಶಿವರಾಜ್​ಕುಮಾರ್​ ಜನ್ಮದಿನ; ಅವರ ಬಗ್ಗೆ ಎಷ್ಟು ಗೊತ್ತಿದೆ ನಿಮಗೆ?

‘ಅಮ್ಮನಿಗೆ ಸಲಗ ನೋಡೋಕೆ ಆಗಲ್ಲ’; ತಾಯಿ ಆರೋಗ್ಯ ನೆನೆದು ಭಾವುಕರಾದ ದುನಿಯಾ ವಿಜಯ್