ದರ್ಶನ್​ ವಿವಾದ: ಫ್ಯಾನ್ಸ್​ ಇಟ್ಟ ಬೇಡಿಕೆಗೆ ಒಂದೇ ಮಾತಲ್ಲಿ ಉತ್ತರಿಸಿದ ಜಗ್ಗೇಶ್​

ಒಂದಷ್ಟು ದಿನಗಳ ಕಾಲ ಸೋಷಿಯಲ್​ ಮೀಡಿಯಾದಿಂದ ದೂರ ಉಳಿದುಕೊಂಡಿದ್ದ ಜಗ್ಗೇಶ್​ ಈಗ ಮತ್ತೆ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಅವರು ಇನ್​ಸ್ಟಾಗ್ರಾಮ್​ನಲ್ಲಿ ಒಂದು ವಿಡಿಯೋ ಹಂಚಿಕೊಂಡರು.

ದರ್ಶನ್​ ವಿವಾದ: ಫ್ಯಾನ್ಸ್​ ಇಟ್ಟ ಬೇಡಿಕೆಗೆ ಒಂದೇ ಮಾತಲ್ಲಿ ಉತ್ತರಿಸಿದ ಜಗ್ಗೇಶ್​
ಜಗ್ಗೇಶ್​, ದರ್ಶನ್​

ಹಲವು ಕಾರಣಗಳಿಂದಾಗಿ ನಟ ದರ್ಶನ್​ (Darshan) ಹೆಸರು ವಿವಾದದ ಕೇಂದ್ರ ಬಿಂದು ಆಗಿದೆ. 25 ಕೋಟಿ ರೂ. ವಂಚನೆಯ ಹುನ್ನಾರದಿಂದ ಶುರುವಾಗಿ, ಸಪ್ಲೈಯರ್ ಮೇಲಿನ ಹಲ್ಲೆ (Darshan Assault Case) ತನಕ ಸಾಗಿಬಂದ ಈ ವಿವಾದದ ಬಗ್ಗೆ ಅನೇಕರು ಮಾತನಾಡಿದ್ದಾರೆ. ಇಂದ್ರಜಿತ್ ಲಂಕೇಶ್​ ಸೇರಿದಂತೆ ಕೆಲವರು ದರ್ಶನ್​ ವಿರುದ್ಧ ಗುಡುಗಿದ್ದರೆ, ಅನೇಕ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ದರ್ಶನ್​ ಪರವಾಗಿ ಬ್ಯಾಟ್​ ಬೀಸುತ್ತಿದ್ದಾರೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ಜೋರಾಗಿದ್ದು, ನಟ ಜಗ್ಗೇಶ್​ (Jaggesh) ಅವರಿಗೂ ಕೆಲವು ಅಭಿಮಾನಿಗಳು ಪ್ರಶ್ನೆಯೊಂದನ್ನು ಕೇಳಿದ್ದಾರೆ.

ಒಂದಷ್ಟು ದಿನಗಳ ಕಾಲ ಸೋಷಿಯಲ್​ ಮೀಡಿಯಾದಿಂದ ದೂರ ಉಳಿದುಕೊಂಡಿದ್ದ ಜಗ್ಗೇಶ್​ ಈಗ ಮತ್ತೆ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಅವರು ಇನ್​ಸ್ಟಾಗ್ರಾಮ್​ನಲ್ಲಿ ಒಂದು ವಿಡಿಯೋ ಹಂಚಿಕೊಂಡರು. ಈ ಚುಟುಕು ವಿಡಿಯೋದಲ್ಲಿ ಅವರು ತಮ್ಮ ಸಿನಿಮಾ ಪ್ಲ್ಯಾನ್​ಗಳ ಬಗ್ಗೆ ಕಿರು ಮಾಹಿತಿ ನೀಡಿದರು. ಅದಕ್ಕೆ ಕಮೆಂಟ್​ ಮಾಡಿದ ಅಭಿಮಾನಿಯೊಬ್ಬರು ದರ್ಶನ್​ ವಿಚಾರ ಎಳೆದುತಂದರು.

‘ಪ್ಲೀಸ್​ ಸರ್, ಡಿ ಬಾಸ್​ ಪರವಾಗಿ ಹೇಳಿಕೆ ನೀಡಿ. ನಿಮ್ಮ ನಡುವೆ ಮನಸ್ತಾಪ ಇದ್ದರೂ ಅಭಿಮಾನಿಗಳ ಸಲುವಾಗಿ ಡಿ ಬಾಸ್​ ಜೊತೆ ಕೈ ಜೋಡಿಸಿ’ ಎಂಬ ಕಮೆಂಟ್ ಅಭಿಮಾನಿಗಳಿಂದ ಬಂದಿದೆ. ಅದಕ್ಕೆ ಒಂದೇ ಮಾತಿನಲ್ಲಿ ಜಗ್ಗೇಶ್​ ಉತ್ತರ ನೀಡಿದ್ದಾರೆ. ‘ನನಗೂ ದರ್ಶನ್​ಗೂ ಯಾವ ಮನಸ್ತಾಪವೂ ಇಲ್ಲ. ಆತ ನನ್ನ ಕಲಾಬಂಧು’ ಎಂದು ‘ನವರಸ ನಾಯಕ’ ಪ್ರತಿಕ್ರಿಯಿಸಿದ್ದಾರೆ.​

ಕೆಲವೇ ತಿಂಗಳ ಹಿಂದೆ ದರ್ಶನ್​ ಅಭಿಮಾನಿಗಳ ಬಗ್ಗೆ ಜಗ್ಗೇಶ್​ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್​ ವೈರಲ್​ ಆಗಿತ್ತು. ಅದನ್ನು ಕೇಳಿಸಿಕೊಂಡು ಗರಂ ಆಗಿದ್ದ ಡಿ ಬಾಸ್​ ಅಭಿಮಾನಿಗಳು ಜಗ್ಗೇಶ್ ಅವರನ್ನು ಮುತ್ತಿಗೆ ಹಾಕಿ ತರಾಟೆಗೆ ತೆಗೆದುಕೊಂಡಿದ್ದರು. ಆ ಹಿನ್ನೆಲೆಯಲ್ಲಿ ಜಗ್ಗೇಶ್​ ಮತ್ತು ದರ್ಶನ್​ ನಡುವೆ ಮನಸ್ತಾಪ ಇನ್ನೂ ಮುಂದುವರಿಯುತ್ತಿರಬಹುದು ಎಂಬುದು ಕೆಲವರು ಅನುಮಾನವಾಗಿತ್ತು. ಅದಕ್ಕೆ ಈ ಕಮೆಂಟ್​ ಮೂಲಕ ಜಗ್ಗೇಶ್​ ತೆರೆ ಎಳೆದಿದ್ದಾರೆ.

ಕಳೆದ ಕೆಲವು ದಿನಗಳಿಂದ ಜಗ್ಗೇಶ್​ ಅವರು ನಾಲ್ಕು ಒಳ್ಳೆಯ ಸ್ಕ್ರಿಪ್ಟ್​ಗಳನ್ನು ಕೇಳಿದ್ದಾರೆ. ಆ ಪೈಕಿ ಎರಡಕ್ಕೆ ಗ್ರೀನ್​ ಸಿಗ್ನಲ್​ ನೀಡಿದ್ದು, ಇನ್ನೆರಡು ಸ್ಕ್ರಿಪ್ಟ್​ಗಳ ಮಾತುಕತೆ ನಡೆಯುತ್ತಿದೆ ಎಂದು ಅವರು​ ಮಾಹಿತಿ ನೀಡಿದ್ದಾರೆ. ವಿಜಯ್​ ಪ್ರಸಾದ್​ ನಿರ್ದೇಶನದ ‘ತೋತಾಪುರಿ’ ಸಿನಿಮಾ ಕೆಲಸಗಳಲ್ಲಿ ಅವರು ತೊಡಗಿಕೊಂಡಿದ್ದಾರೆ.

ಇದನ್ನೂ ಓದಿ:

‘ದುರ್ಯೋಧನನ ಪಾತ್ರದಿಂದಲೇ ನಟ ದರ್ಶನ್​​ಗೆ ಅಹಂ ಭಾವ ಹೆಚ್ಚಾಗಿದೆ’; ಹೀಗೊಂದು ನಂಬಿಕೆ

ಅಪಘಾತದಲ್ಲಿ ನಟ ಜಗ್ಗೇಶ್​ ಮಗ ಯತಿರಾಜ್​​ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜು; ಇಲ್ಲಿವೆ ಫೋಟೋಗಳು

Read Full Article

Click on your DTH Provider to Add TV9 Kannada