‘ದರ್ಶನ್​-ಇಂದ್ರಜಿತ್​ರನ್ನು ಐದು ವರ್ಷ ಚಿತ್ರರಂಗದಿಂದ ಬ್ಯಾನ್​ ಮಾಡಿ’; ಕೇಳಿ ಬಂತು ಹೊಸ ಆಗ್ರಹ

ಸುದ್ದಿಗೋಷ್ಠಿ ನಡೆಸುವಾಗ ಇಂದ್ರಜಿತ್​ ಹಾಗೂ ದರ್ಶನ್​ ಇಬ್ಬರೂ ಅವಾಚ್ಯ ಶಬ್ದಗಳ ಬಳಕೆ ಮಾಡಿದ್ದರು. ಇನ್ನು, ದರ್ಶನ್​ ಅವರದ್ದು ಎನ್ನಲಾದ ಆಡಿಯೋ ಒಂದು ವೈರಲ್​ ಆಗಿತ್ತು. ಈ ಆಡಿಯೋದಲ್ಲಿ ಅತೀ ಕೆಟ್ಟ ಶಬ್ದಗಳಿಂದ ದರ್ಶನ್​ ಮಾಧ್ಯಮಗಳಿಗೆ ಬೈದಿದ್ದರು.

‘ದರ್ಶನ್​-ಇಂದ್ರಜಿತ್​ರನ್ನು ಐದು ವರ್ಷ ಚಿತ್ರರಂಗದಿಂದ ಬ್ಯಾನ್​ ಮಾಡಿ’; ಕೇಳಿ ಬಂತು ಹೊಸ ಆಗ್ರಹ
ಇಂದ್ರಜಿತ್​ ಲಂಕೇಶ್​-ದರ್ಶನ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 20, 2021 | 3:17 PM

ನಟ ದರ್ಶನ್​ ಹಾಗೂ ನಿರ್ದೇಶಕ ಇಂದ್ರಜಿತ್​ ಲಂಕೇಶ್​ ನಡುವಿನ ಮಾತಿನ ಗುದ್ದಾಟ ಮುಂದುವರಿದಿದೆ. ಇಬ್ಬರೂ ಸುದ್ದಿಗೋಷ್ಠಿ ನಡೆಸಿ ಪರಸ್ಪರ ಕಿತ್ತಾಡುತ್ತಿದ್ದಾರೆ. ಈ ವೇಳೆ ಇಬ್ಬರೂ ಅವಾಚ್ಯ ಶಬ್ದ ಬಳಕೆ ಮಾಡಿದ್ದರು. ಹೀಗಾಗಿ ದರ್ಶನ್ ಮತ್ತು ಇಂದ್ರಜಿತ್‌ ಅವರನ್ನು 5 ವರ್ಷ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಫಿಲ್ಮ್ ಚೇಂಬರ್‌ಗೆ ದೂರು ದಾಖಲು ಮಾಡಲಾಗಿದೆ.

ಸುದ್ದಿಗೋಷ್ಠಿ ನಡೆಸುವಾಗ ಇಂದ್ರಜಿತ್​ ಹಾಗೂ ದರ್ಶನ್​ ಇಬ್ಬರೂ ಅವಾಚ್ಯ ಶಬ್ದಗಳ ಬಳಕೆ ಮಾಡಿದ್ದರು. ಇನ್ನು, ದರ್ಶನ್​ ಅವರದ್ದು ಎನ್ನಲಾದ ಆಡಿಯೋ ಒಂದು ವೈರಲ್​ ಆಗಿತ್ತು. ಈ ಆಡಿಯೋದಲ್ಲಿ ಅತೀ ಕೆಟ್ಟ ಶಬ್ದಗಳಿಂದ ದರ್ಶನ್​ ಮಾಧ್ಯಮಗಳಿಗೆ ಬೈದಿದ್ದರು. ಹೀಗಾಗಿ, ಮಾನವಹಕ್ಕು, ಭ್ರಷ್ಟಚಾರ ನಿಗ್ರಹದಳ ಸಂಸ್ಥೆ ಫಿಲ್ಮ್ ಚೇಂಬರ್‌ಗೆ ದೂರು ನೀಡಿದೆ.  ‘ನಟ ದರ್ಶನ್ ಮತ್ತು ಇಂದ್ರಜಿತ್‌ ಅವರನ್ನು 5 ವರ್ಷ ಬ್ಯಾನ್ ಮಾಡಬೇಕು. ದರ್ಶನ್ ಅವಾಚ್ಯ ಪದಗಳನ್ನು ಬಳಕೆ ಮಾಡಿದ್ದಾರೆ. ದರ್ಶನ್ ಮಾತಿಗೆ ಕಡಿವಾಣ ಹಾಕಬೇಕು’ ಎಂದು ದೂರಿನಲ್ಲಿ ಕೋರಲಾಗಿದೆ.

ಮೈಸೂರಿನ ದಿ ಪ್ರಿನ್ಸ್​ ಹೋಟೆಲ್​ ಸಿಬ್ಬಂದಿ ಗಂಗಾಧರ್​ ಮೇಲೆ ದರ್ಶನ್​ ಹಲ್ಲೆ ಮಾಡಿದ್ದಾರೆ ಎಂದು ಇಂದ್ರಜಿತ್​ ಆರೋಪಿಸಿದ್ದರು. ದರ್ಶನ್​ ವಿರುದ್ಧ ಮಾಡಿರುವ ಗಂಭೀರ ಆರೋಪದಿಂದ ಇಂದ್ರಜಿತ್​ ಬೆದರಿಕೆ ಎದುರಿಸುತ್ತಿದ್ದಾರೆ. ‘ಪ್ರಕರಣದ ಬಗ್ಗೆ ನಾನು ಏನನ್ನೂ ಮಾತನಾಡುವುದಿಲ್ಲ. ಅದನ್ನು ಕಾನೂನಾತ್ಮಕವಾಗಿ ಹೋರಾಡುತ್ತೇನೆ. ದರ್ಶನ್​ ಪ್ರಚೋದನೆ ಮೂಲಕ ದರ್ಶನ್​ ಹಿಂಬಾಲಕರು, ಅವರ​ ರೌಡಿಗಳು ಫೋನ್​ ಮೂಲಕ, ವಾಟ್ಸ್​ ಆ್ಯಪ್​ ಮೂಲಕ ಬೆದರಿಕೆ ಹಾಕುತ್ತಿದ್ದಾರೆ. ಕಳೆದ 24 ಗಂಟೆಯಲ್ಲಿ  ಪ್ರತಿ 30 ಸೆಕೆಂಡ್​ಗೆ ಒಂದು ಕರೆ ಬರ್ತಿದೆ. ಅಶ್ಲೀಲ ಚಿತ್ರಗಳಲ್ಲದೆ, ಅಶ್ಲೀಲ ಮೆಸೇಜ್​ಕೂಡ ಬರ್ತಿದೆ. ಹೀಗಾಗಿ ಸೈಬರ್​ ಕ್ರೈಮ್​ಗೆ ದೂರು ನೀಡುತ್ತಿದ್ದೇನೆ. ಅವರಿಗೆ ಪಾಠ ಕಲಿಸುತ್ತೇನೆ’ ಎಂದು ಎಚ್ಚರಿಸಿದ್ದಾರೆ ಇಂದ್ರಜಿತ್​.

ಇದನ್ನೂ ಓದಿ: ದದರ್ಶನ್ ಹಲ್ಲೆ ಆರೋಪ ಪ್ರಕರಣ: ಪೊಲೀಸರಿಗೆ ಇನ್ನೂ ಸಿಗದ ಭದ್ರತಾ ಸಿಬ್ಬಂದಿ ಪ್ರಕಾಶ್

ಇಂದ್ರಜಿತ್ ಲಂಕೇಶ್ ಸುದ್ದಿಗೋಷ್ಠಿ: ದರ್ಶನ್ ಹಿಂಬಾಲಕರು, ರೌಡಿಗಳು ಬೆದರಿಕೆ ಹಾಕ್ತಿದಾರೆ, ಇವರಿಗೆ ಪಾಠ ಕಲಿಸುತ್ತೇನೆ; ಇಂದ್ರಜಿತ್ ಎಚ್ಚರಿಕೆ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್