‘ಕರಿಯ 2’ ನಿರ್ದೇಶಕರ ಜೊತೆ ‘ಬಾಡಿ ಗಾಡ್’ ಕಥೆ ಹೇಳಲು ಬಂದ ‘ಮಠ’ ಗುರುಪ್ರಸಾದ್​​

ಈ ಸಿನಿಮಾಗೆ ನಿರ್ದೇಶಕ ಪ್ರಭು ಶ್ರೀನಿವಾಸ್​ ಅವರು ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಪ್ರಮುಖ ಪಾತ್ರದಲ್ಲಿ ‘ಮಠ’ ಗುರುಪ್ರಸಾದ್​​, ‘ಮೊಗ್ಗಿನ ಮನಸು’ ಖ್ಯಾತಿಯ ಮನೋಜ್​ ನಟಿಸಿದ್ದಾರೆ.

‘ಕರಿಯ 2’ ನಿರ್ದೇಶಕರ ಜೊತೆ ‘ಬಾಡಿ ಗಾಡ್’ ಕಥೆ ಹೇಳಲು ಬಂದ ‘ಮಠ’ ಗುರುಪ್ರಸಾದ್​​
‘ಕರಿಯ 2’ ನಿರ್ದೇಶಕರ ಜೊತೆ ‘ಬಾಡಿ ಗಾಡ್’ ಕಥೆ ಹೇಳಲು ಬಂದ ‘ಮಠ’ ಗುರುಪ್ರಸಾದ್​​
TV9kannada Web Team

| Edited By: Madan Kumar

Jul 22, 2021 | 9:33 AM

ಮಠ, ಎದ್ದೇಳು ಮಂಜುನಾಥ್​ ರೀತಿಯ ಸಿನಿಮಾಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡ ಗುರುಪ್ರಸಾದ್​ (Mata Guruprasad) ಅವರು ನಟನೆಯಲ್ಲೂ ಪ್ರತಿಭಾವಂತರು. ಕೊರೊನಾ ಲಾಕ್ ಡೌನ್ ಸಮಯದಲ್ಲಿ ಅವರು ‘ಬಾಡಿ ಗಾಡ್’ ಶೀರ್ಷಿಕೆಯ ಹೊಸ ಸಿನಿಮಾದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಮೋಷನ್ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ‘ಗಣಪ’, ‘ಕರಿಯ 2’ (Kariya 2) ಚಿತ್ರಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡ ಪ್ರಭು ಶ್ರೀನಿವಾಸ್​ (Prabhu Srinivas) ಅವರು ‘ಬಾಡಿ ಗಾಡ್​’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಲಾಕ್ ಡೌನ್ ವೇಳೆ ನಿರ್ದೇಶಕರು ಹೇಳಿದ ಕಥೆಯನ್ನು ಗುರುಪ್ರಸಾದ್​ ತುಂಬ ಇಷ್ಟಪಟ್ಟು ನಟಿಸಲು ಒಪ್ಪಿಕೊಂಡರು. ಆ ಅನುಭವನನ್ನು ಅವರು ಹಂಚಿಕೊಂಡಿದ್ದಾರೆ.

‘ಅರವತ್ತರ ಆಸುಪಾಸಿನ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಈ ತನಕ ಪತ್ರಕರ್ತ ಹಾಗೂ ನಿರ್ದೇಶಕನಾಗಿ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ನನಗೆ ಇದು ವಿಭಿನ್ನ ಪಾತ್ರ. ಚೆನ್ನಾಗಿ ಓದಿದ್ದ ಮಗ-ಮಗಳು ವಿದೇಶದಲ್ಲಿ ನೆಲೆಸಿರುತ್ತಾರೆ. ವಯಸ್ಸಾದವರಿಗೆ ಮಕ್ಕಳ ಅವಶ್ಯಕತೆ ಎಷ್ಟಿರುತ್ತದೆ ಎನ್ನುವುದನ್ನು ಈ ಪಾತ್ರದ ಮೂಲಕ ಹೇಳಲಾಗುತ್ತಿದೆ. ನನ್ನ ಪತ್ನಿ ಪಾತ್ರದಲ್ಲಿ ಪದ್ಮಜಾರಾವ್ ಅಭಿನಯಿಸಿದ್ದಾರೆ. ಒಳ್ಳೆಯ ಕಥೆ, ಒಳ್ಳೆಯ ತಂಡ. ಇಡೀ ತಂಡದ ಶ್ರಮದಿಂದ ಚಿತ್ರ ಚೆನ್ನಾಗಿ ಬಂದಿದೆ. ಪ್ರೇಕ್ಷಕರ ಮೆಚ್ಚುಗೆಗೂ ಈ ಸಿನಿಮಾ ಪಾತ್ರವಾಗಲಿದೆ’ ಎಂಬುದು ಗುರುಪ್ರಸಾದ್ ಮಾತುಗಳು.

‘ಸತ್ತ ವ್ಯಕ್ತಿಯ ದೇಹದ ಹಿಂದೆ ಹೆಣೆಯಲಾಗಿರುವ ವಿಭಿನ್ನ ಕಥೆಯ ಈ ಚಿತ್ರವನ್ನು ಲಾಕ್ ಡೌನ್ ಸಮಯದಲ್ಲಿ ನಿರ್ದೇಶಿಸಿದ್ದೇನೆ. ಈ ಕಥೆಯನ್ನು ನನ್ನ ಸ್ನೇಹಿತರ ಬಳಿ ಹೇಳಿದೆ. ಅವರೇ ನಿರ್ಮಾಣ ಮಾಡಬೇಕಿತ್ತು. ಬಳಿಕ ಕಾರಣಾಂತರದಿಂದ ನಾನೇ ನಿರ್ಮಾಣವನ್ನು ಮಾಡಿದ್ದೇನೆ. ಪ್ರಮೋಷನಲ್ ಸಾಂಗ್ ಒಂದರ ಚಿತ್ರೀಕರಣ ಬಿಟ್ಟು ಬಾಕಿ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರ ಕೂಡ ತೆರೆಗೆ ಬರಲು ಬಹುತೇಕ ಸಿದ್ಧವಾಗಿದೆ.‌ ಅಂದುಕೊಂಡಂತೆ ನಡೆದರೆ ಸೆಪ್ಟೆಂಬರ್​ನಲ್ಲಿ ಚಿತ್ರವನ್ನು ರಿಲೀಸ್​ ಮಾಡುತ್ತೇವೆ’ ಎಂದಿದ್ದಾರೆ ನಿರ್ದೇಶಕ ಪ್ರಭು ಶ್ರೀನಿವಾಸ್.

ಮಧ್ಯಮವರ್ಗದ ಯುವಕನ ಪಾತ್ರದಲ್ಲಿ ಮನೋಜ್​ ನಟಿಸಿದ್ದಾರೆ. ‘ನನ್ನ ಹಾಗೂ ಗುರುಪ್ರಸಾದ್ ಅವರ ಕಾಂಬಿನೇಶನ್​ನಲ್ಲಿ ಬರುವ ಸನ್ನಿವೇಶಗಳು ಚೆನ್ನಾಗಿವೆ’ ಎಂದು ಖುಷಿಪಡುತ್ತಾರೆ ಮನೋಜ್. ಈ ಹಿಂದೆ ‘ಮೊಗ್ಗಿನ ಮನಸು’, ‘ಓ ಪ್ರೇಮವೇ’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ ಅನುಭವ ಅವರಿಗೆ ಇದೆ. ‘ಬಾಡಿ ಗಾಡ್​’ ಚಿತ್ರದಲ್ಲಿ ಮನೋಜ್​ ಅವರ ನಟನೆಗೆ ನಿರ್ದೇಶಕರಿಗೆ ಮೆಚ್ಚುಗೆ ಆಗಿದೆ. ನಿರಂಜನ್, ಅಶ್ವಿನ್ ಹಾಸನ್ ಕೂಡ ನಟಿಸಿದ್ದಾರೆ. ಕರಣ್ ಬಿ. ಕೃಪ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಂಕಲನಕಾರರಾಗಿ ಉಜ್ವಲ್ ಚಂದ್ರ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ:

ನನ್ನ ಸಾವಿಗೆ ರಾಜಕಾರಣಿಗಳೇ ಕಾರಣ; ಕೊರೊನಾ ಸೋಂಕಿತ ‘ಮಠ’ ಗುರುಪ್ರಸಾದ್​ ಬಹಿರಂಗ ಡೆತ್​ ನೋಟ್​​

ದರ್ಶನ್​ ವಿವಾದ: ಫ್ಯಾನ್ಸ್​ ಇಟ್ಟ ಬೇಡಿಕೆಗೆ ಒಂದೇ ಮಾತಲ್ಲಿ ಉತ್ತರಿಸಿದ ಜಗ್ಗೇಶ್​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada