‘ವೋಟ್ ಹಾಕಿದ ನಮಗೆ ಬೆಲೆ ಇಲ್ವಾ? ನಾವು ಮೋದಿ ಮುಖ ನೋಡಿಕೊಂಡು ವೋಟ್ ಹಾಕಿದ್ವಿ. ನಿಮ್ಮ ಸ್ವಂತ ಆಸ್ತಿಗಳನ್ನು ಘೋಷಣೆ ಮಾಡಿ. 29 ಸಾವಿರ ಕನ್ನಡಿಗರು ಸತ್ತಿದ್ದಾರೆ. ಅವರೆಲ್ಲರಿಗೂ ಒಂದೊಂದು ಕೋಟಿ ರೂಪಾಯಿ ಕೊಡಿ. ಅಷ್ಟು ಕನ್ನಡಿಗರನ್ನು ಸಾಯಿಸಿದ್ದೀರಲ್ಲ ನಿಮಗೆ ಪ್ರಾಯಶ್ಚಿತ್ತ ಇಲ್ಲವೇ? ಅದು ಹೇಗೆ ಊಟ ಮಾಡುತ್ತೀರಿ? ನೀವೆಲ್ಲ ಭ್ರಷ್ಟಾಚಾರಿಗಳು. ಅದನ್ನು ನಾನು ಕೋರ್ಟ್ನಲ್ಲಿ ಸಾಬೀತು ಮಾಡುತ್ತೇನೆ. ಅದಕ್ಕೆ ನನ್ನ ಬಳಿ ಸಾಕ್ಷಿ ಇದೆ’ ಎಂದು ಗುರುಪ್ರಸಾದ್ ಹೇಳಿದ್ದಾರೆ.
‘ಹೈಕಮಾಂಡ್ ಬಗ್ಗೆ ಯಡಿಯೂರಪ್ಪ ಮಾತನಾಡುತ್ತಾರೆ. ಕನ್ನಡಿಗರೇ ಹೈಕಮಾಂಡ್. ನಾವು ಹೇಳ್ತಾ ಇದ್ದೀವಿ. ನೀವು ರಾಜಿನಾಮೆ ಕೊಟ್ಟು ಮನೆಗೆ ಹೋಗಬೇಕು. ದುಡ್ಡು ಮಾಡಿದ್ದೀರಲ್ಲ ಅದನ್ನು ನೆಕ್ಕಬೇಕು. ಎಲ್ಲ ಕೆಲಸಗಾರರನ್ನು ಒಂದೂವರೆ ವರ್ಷ ಕೂಡಿ ಹಾಕಿದ್ದೀರಿ. ಎಲ್ಲರಿಗೂ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟು, ಯಾರಿಗೂ ಏನೂ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕಾದ್ದು ಸರ್ಕಾರದ ಜವಾಬ್ದಾರಿ’ ಎಂದು ಗುರುಪ್ರಸಾದ್ ಗುಡುಗಿದ್ದಾರೆ.
‘ಸಂಸ್ಕಾರಹೀನ, ಭ್ರಷ್ಟಾಚಾರಿ ರಾಜಕಾರಣಿಗಳ ಯುಗ ಮುಗಿಯುತ್ತಿದೆ. ಆದರೆ ಅದು ಸರಿಹೋಗಲು ಇನ್ನೂ 100 ವರ್ಷ ಬೇಕು. ಅದಕ್ಕೆ ಈಗ ಬೀಗ ಹಾಕುತ್ತಿದ್ದೇನೆ. ಪ್ರತಿಯೊಬ್ಬರ ಜೀವನ ಕಾಪಾಡುವುದು ಸರ್ಕಾರದ ಕೆಲಸ. ವೋಟ್ ಹಾಕುವವರು ದುಡ್ಡು ತೆಗೆದುಕೊಳ್ಳಬೇಡಿ’ ಎಂದಿದ್ದಾರೆ ಗುರುಪ್ರಸಾದ್. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.
ಏಪ್ರಿಲ್ನಲ್ಲಿ ಕೂಡ ಗುರುಪ್ರಸಾದ್ ಅವರು ಇದೇ ರೀತಿ ವಿಡಿಯೋ ಮಾಡಿದ್ದರು. ತಮಗೆ ಕೊವಿಡ್ ಬಂದಿದೆ. ಒಂದು ವೇಳೆ ಸತ್ತರೆ ಅದಕ್ಕೆ ರಾಜಕಾರಣಿಗಳು ಕಾರಣ ಎಂದು ಹೇಳಿದ್ದರು. ಈಗ ಮತ್ತೆ ಕೆಂಡಾಮಂಡಲ ಆಗಿದ್ದಾರೆ. ಅವರ ವಿಡಿಯೋಗೆ ನೆಟ್ಟಿಗರು ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅವರ ಅಭಿಪ್ರಾಯದ ಬಗ್ಗೆ ಪರ-ವಿರೋಧದದ ಚರ್ಚೆ ನಡೆಯುತ್ತಿದೆ.
ಇದನ್ನೂ ಓದಿ:
ನನ್ನ ಸಾವಿಗೆ ರಾಜಕಾರಣಿಗಳೇ ಕಾರಣ; ಕೊರೊನಾ ಸೋಂಕಿತ ‘ಮಠ’ ಗುರುಪ್ರಸಾದ್ ಬಹಿರಂಗ ಡೆತ್ ನೋಟ್
ಹೈಕಮಾಂಡ್ ಸೂಚಿಸಿದ ತಕ್ಷಣ ರಾಜೀನಾಮೆ ನೀಡುತ್ತೇನೆ: ಬಿ.ಎಸ್.ಯಡಿಯೂರಪ್ಪ