ಶಿವರಾಜ್​ಕುಮಾರ್​ 124ನೇ ಚಿತ್ರಕ್ಕೆ ನಾಯಕಿಯಾದ್ರು ಮೆಹ್ರೀನ್​ ಪೀರ್ಜಾದಾ

ಬಾಲಶ್ರೀರಾಮ್ ಸ್ಟುಡಿಯೋಸ್ ಲಾಂಛನದಲ್ಲಿ ಸ್ವಾತಿ ವನಪಲ್ಲಿ, ಶ್ರೀಕಾಂತ್ ದುಲಿಪುಡಿ ಹಾಗೂ ನಾರಾಲ ಶ್ರೀನಿವಾಸ ರೆಡ್ಡಿ ನಿರ್ಮಿಸುತ್ತಿರುವ ಶಿವರಾಜ್​ಕುಮಾರ್​ 124ನೇ ಚಿತ್ರಕ್ಕೆ ರಾಮ್ ದುಲಿಪುಡಿ ನಿರ್ದೇಶನ ಇದೆ.

ಶಿವರಾಜ್​ಕುಮಾರ್​ 124ನೇ ಚಿತ್ರಕ್ಕೆ ನಾಯಕಿಯಾದ್ರು ಮೆಹ್ರೀನ್​ ಪೀರ್ಜಾದಾ
ಶಿವರಾಜ್​ಕುಮಾರ್​ 124ನೇ ಚಿತ್ರಕ್ಕೆ ನಾಯಕಿಯಾದ್ರು ಮೆಹ್ರೀನ್​ ಪೀರ್ಜಾದಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 21, 2021 | 6:10 PM

2019ರಲ್ಲಿ ತೆರೆಗೆ ಬಂದ ‘ಎಫ್​ 2: ಫನ್​ ಆ್ಯಂಡ್ ಫ್ರಸ್ಟ್ರೇಷನ್’​ ಸಿನಿಮಾ ಹಿಟ್​ ಆಗಿತ್ತು. ಈ ಚಿತ್ರದಲ್ಲಿ ಮೆಹ್ರೀನ್​ ಪೀರ್ಜಾದಾ ಮಿಂಚಿದ್ದರು. ಹಿಂದಿ, ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಮೆಹ್ರೀನ್ ಹೆಸರು ಮಾಡಿದ್ದಾರೆ. ಈಗ ಅವರು​ ಸ್ಯಾಂಡಲ್​ವುಡ್​ಗೆ ಕಾಲಿಡುತ್ತಿದ್ದಾರೆ. ಶಿವರಾಜ್​ಕುಮಾರ್ ನಟನೆಯ 124ನೇ ಚಿತ್ರಕ್ಕೆ ಮೆಹ್ರೀನ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಬಾಲಶ್ರೀರಾಮ್ ಸ್ಟುಡಿಯೋಸ್ ಲಾಂಛನದಲ್ಲಿ ಸ್ವಾತಿ ವನಪಲ್ಲಿ, ಶ್ರೀಕಾಂತ್ ದುಲಿಪುಡಿ ಹಾಗೂ ನಾರಾಲ ಶ್ರೀನಿವಾಸ ರೆಡ್ಡಿ ನಿರ್ಮಿಸುತ್ತಿರುವ ಶಿವರಾಜ್​ಕುಮಾರ್​ 124ನೇ ಚಿತ್ರಕ್ಕೆ ರಾಮ್ ದುಲಿಪುಡಿ ನಿರ್ದೇಶನ ಇದೆ. ಈ ಚಿತ್ರದ ಶೂಟಿಂಗ್​ ಆಗಸ್ಟ್‌ನಲ್ಲಿ ಆರಂಭವಾಗಲಿದೆ. ಇದಕ್ಕೂ ಮೊದಲು ಚಿತ್ರತಂಡ ಮೆಹ್ರೀನ್​ ಅವರನ್ನು ಚಿತ್ರತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ.

ರವಿಕುಮಾರ್ ಸನಾ‌ ಅವರ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ನಿರ್ದೇಶನ, ದೀಪು ಎಸ್. ಕುಮಾರ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ, ರವಿ‌ ಸಂತೆಹಕ್ಲು ಕಲಾ ನಿರ್ದೇಶನ ಮಾಡಲಿದ್ದಾರೆ. ಆಗಸ್ಟ್​ ಮೊದಲ ವಾರದಲ್ಲಿ ಈ ಚಿತ್ರಕ್ಕೆ ಶೂಟಿಂಗ್​ ಆರಂಭಿಸಲಾಗುತ್ತಿದೆ. 70 ದಿನಗಳ ಕಾಲ ಚಿಕ್ಕಮಗಳೂರು, ಬೆಂಗಳೂರು, ಜಮ್ಮು ಕಾಶ್ಮೀರ ಮುಂತಾದ ಕಡೆ ಚಿತ್ರೀಕರಣ ಮಾಡಲು ತೀರ್ಮಾನಿಸಲಾಗಿದೆ. ‘ಕಣ್ಣೇ ಅದಿರಿಂದ’ ಹಾಡಿನ ಮೂಲಕ ಕರುನಾಡ ಜನತೆಯನ್ನು ತಮ್ಮತ್ತ ಸೆಳೆದುಕೊಂಡಿದ್ದ ಮಂಗ್ಲಿ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿರುವುದು ವಿಶೇಷ.

ಮೆಹ್ರೀನ್​ ಇತ್ತೀಚೆಗೆ ಮದುವೆ ವಿಚಾರದಲ್ಲಿ ಸುದ್ದಿಯಾಗಿದ್ದರು. ​ ಕೆಲ ತಿಂಗಳ ಹಿಂದೆ ರಾಜಕಾರಣಿ ಭವ್ಯ ಭಿಷ್ಣೋಯ್ ಜತೆ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದರು. ಕೊವಿಡ್​ ಎರಡನೇ ಅಲೆ ಕಾಣಿಸಿಕೊಳ್ಳದಿದ್ದರೆ ಮದುವೆಯನ್ನು ಈ ಜೋಡಿ ಮುಂದೂಡಿತ್ತು. ನಂತರ ಮದುವೆಯೇ ಆಗಬಾರದು ಎನ್ನುವ ನಿರ್ಧಾರಕ್ಕೆ ಇಬ್ಬರೂ ಬಂದಿದ್ದರು. ಅಂತೆಯೇ ಇಬ್ಬರೂ ಮದುವೆ ಆಗುತ್ತಿಲ್ಲ ಎಂದು ಘೋಷಿಸಿದ್ದರು.

ಇದನ್ನೂ ಓದಿ: 550ಕ್ಕೂ ಹೆಚ್ಚು ಬಾರಿ ರೀ-ರಿಲೀಸ್​ ಆದ ಶಿವರಾಜ್​ಕುಮಾರ್​-ಉಪೇಂದ್ರ ಓಂ ಚಿತ್ರಕ್ಕೆ 26 ವರ್ಷ; ಸಿನಿಮಾ ಮಾಡಿದ ದಾಖಲೆಗಳೆಷ್ಟು?

Shiva Rajkumar Birthday: ಶಿವರಾಜ್​ಕುಮಾರ್​ ಜನ್ಮದಿನ; ಅವರ ಬಗ್ಗೆ ಎಷ್ಟು ಗೊತ್ತಿದೆ ನಿಮಗೆ?

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ