Rishab Shetty: ತೆಲುಗಿನಲ್ಲೂ ಮಿಂಚಲು ತಯಾರಾಗಿದ್ದಾನೆ ಕನ್ನಡದ ‘ಹೀರೋ’!

Hero Movie: ಕನ್ನಡದ ಹೀರೋ ಚಿತ್ರ ತೆಲುಗಿನಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ‘ಆಹಾ’ ಒಟಿಟಿಯಲ್ಲಿ ತೆರೆಕಾಣಲಿರುವ ಈ ಚಿತ್ರ- ತೆಲುಗಿನಲ್ಲಿಯೂ ‘ಹೀರೋ’ ಹೆಸರಿನಲ್ಲಿಯೇ ಬಿಡುಗಡೆಯಾಗಲಿದೆ.

Rishab Shetty: ತೆಲುಗಿನಲ್ಲೂ ಮಿಂಚಲು ತಯಾರಾಗಿದ್ದಾನೆ ಕನ್ನಡದ ‘ಹೀರೋ’!
ಹೀರೋ ಚಿತ್ರದ ಪೋಸ್ಟರ್ (ಕೃಪೆ: ಆಹಾ ಒಟಿಟಿ)
Follow us
TV9 Web
| Updated By: shivaprasad.hs

Updated on: Jul 22, 2021 | 10:22 AM

ಇತ್ತೀಚೆಗೆ ಕನ್ನಡದ ಚಿತ್ರಗಳು ತೆಲುಗಿನಲ್ಲಿ ಭರ್ಜರಿ ಸದ್ದು ಮಾಡುತ್ತಿವೆ. ತೆಲುಗಿನ ‘ಆಹಾ ಒಟಿಟಿ’ ಮುಖಾಂತರ ಕನ್ನಡದ ಹಲವು ಚಿತ್ರಗಳು ಡಬ್​ ಆಗಿ ತೆರೆಗೆ ಬರುತ್ತಿವೆ. ಈ ಹಿಂದೆ ಜಯತೀರ್ಥ ನಿರ್ದೇಶನದ, ರಿಷಬ್ ಶೆಟ್ಟಿ, ಹರಿಪ್ರಿಯಾ ಅಭಿನಯದ ‘ಬೆಲ್​ಬಾಟಂ’ ‘ಆಹಾ’ದಲ್ಲಿ ಬಿಡುಗಡೆಯಾಗಿ ತೆಲುಗು ಚಿತ್ರರಸಿಕರ ಮನಸೂರೆಗೊಂಡಿತ್ತು. ಇದರ ಬೆನ್ನಲ್ಲೇ ರಿಷಬ್ ಮತ್ತೊಮ್ಮೆ ತೆಲುಗಿಗೆ  ಜಿಗಿಯಲಿದ್ದಾರೆ. ಹೌದು. ರಿಷಬ್ ಶೆಟ್ಟಿ, ಗಾನವಿ ಲಕ್ಷ್ಮಣ್ ಮೊದಲಾದವರು ಅಭಿನಯಿಸಿರುವ ಕನ್ನಡದ ‘ಹೀರೋ’ ಚಿತ್ರ ಜುಲೈ 24ರಂದು ‘ಆಹಾ’ ಒಟಿಟಿಯಲ್ಲಿ ತೆರೆಕಾಣಲಿದೆ.

‘ಆಹಾ’ ಯುಟ್ಯೂಬ್ ಚಾನೆಲ್​ನಲ್ಲಿ ಈಗಾಗಲೇ ಹೀರೋ ಚಿತ್ರದ ತೆಲುಗು ಅವತರಣಿಕೆಯ ಟ್ರೈಲರ್ ಬಿಡುಗಡೆಯಾಗಿದ್ದು ಎಲ್ಲರ ಗಮನ ಸೆಳೆದಿದೆ. ಕನ್ನಡದಲ್ಲಿ ಮೊದಲ ಹಂತದ ಲಾಕ್​ಡೌನ್ ಮುಗಿದ ನಂತರ ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದ ಹೀರೋ ಚಿತ್ರ ಪ್ರೇಮಿಗಳ ಗಮನ ಸೆಳೆದಿತ್ತು. ಕೇವಲ 24 ಜನರ ತಂಡ ಲಾಕ್​ಡೌನ್​ನಲ್ಲಿ ಈ ಚಿತ್ರವನ್ನು ಚಿತ್ರೀಕರಿಸಿದ್ದು ವಿಶೇಷ. ಈಗ ‘ಹೀರೋ’ ತೆಲುಗಿಗೆ ಹೊರಡಲು ತಯಾರಾಗಿದ್ದಾನೆ. ಬೆಲ್​ಬಾಟಂನ ಯಶಸ್ಸು ಹೀರೋಗೆ ಆತ್ಮವಿಶ್ವಾಸ ತಂದುಕೊಟ್ಟಿರುವುದಂತೂ ಹೌದು. ಜೊತೆಗೆ ತೆಲುಗಿನ ಒಟಿಟಿಯಲ್ಲಿ ಕನ್ನಡದ ಚಿತ್ರಗಳು ಡಬ್ ಆಗಿ ತೆರೆ ಕಾಣುವುದು ಚಿತ್ರ ತಯಾರಕರಿಗೆ ಹೊಸ ಮಾರುಕಟ್ಟೆಯನ್ನೂ ಒದಗಿಸಿದಂತಾಗಿದೆ.

ಹೀರೋಚಿತ್ರದ ತೆಲುಗು ಟ್ರೈಲರ್:

‘ಆಹಾ’ ಒಟಿಟಿ ಹೀರೋ ಚಿತ್ರದ ಟ್ರೈಲರ್​ ಅನ್ನು ಹಂಚಿಕೊಂಡು “ನೀವೆಲ್ಲಾ ಪ್ರೇಮಕ್ಕಾಗಿ ಎಷ್ಟು ದೂರ ಪ್ರಯಾಣಿಸುತ್ತೀರಿ? ಆದರೆ ಇಲ್ಲೊಬ್ಬ ಪ್ರೇಮಿ ಎಷ್ಟು ದೂರ ಪ್ರಯಾಣಿಸುತ್ತಾನೆ ಎಂದು ತಿಳಿಯಬೇಕಾದರೆ ಚಿತ್ರವನ್ನು ನೋಡಬೇಕು” ಎಂದು ಬರೆದುಕೊಂಡಿದೆ. ಜುಲೈ 24ಕ್ಕೆ ಹೀರೋ ತೆಲುಗಿನಲ್ಲಿ ಲಭ್ಯವಿರಲಿದ್ದಾನೆ ಎಂದು  ಆಹಾ ತಿಳಿಸಿದೆ.

ಹೀರೋ ಚಿತ್ರವನ್ನು ಎಂ.ಭರತ್ ರಾಜ್ ನಿರ್ದೇಶಿಸಿದ್ದು, ಸ್ವತಃ ರಿಷಬ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ. ಅರವಿಂದ್.ಎಸ್.ಕಶ್ಯಪ್ ಛಾಯಾಗ್ರಹಣವನ್ನು ಮಾಡಿದ್ದು, ಬಿ.ಅಜನೀಶ್ ಲೋಕನಾಥ್ ಸಂಗೀತವನ್ನು ನೀಡಿದ್ದಾರೆ.

ಇತ್ತೀಚೆಗಷ್ಟೇ ಕನ್ನಡದ ಲೂಸಿಯಾ ಪವನ್ ನಿರ್ದೇಶನದಲ್ಲಿ ಅಮಲಾ ಪೌಲ್ ಅಭಿನಯದ ‘ಕುಡಿ ಎಡಮೈತೆ’ ಸೀರೀಸ್ ‘ಆಹಾ’ದಲ್ಲಿ ಬಿಡುಗಡೆಯಾಗಿತ್ತು. ಸೀರೀಸ್​ಗೆ ಕನ್ನಡ ಸಬ್​ಟೈಟಲ್​ ಅನ್ನು ನೀಡಿದ್ದಕ್ಕೆ ಕನ್ನಡದ ಅಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ದರ್ಶನ್​ ವಿವಾದ: ಫ್ಯಾನ್ಸ್​ ಇಟ್ಟ ಬೇಡಿಕೆಗೆ ಒಂದೇ ಮಾತಲ್ಲಿ ಉತ್ತರಿಸಿದ ಜಗ್ಗೇಶ್​

ಇದನ್ನೂ ಓದಿ: ‘ಕರಿಯ 2’ ನಿರ್ದೇಶಕರ ಜೊತೆ ‘ಬಾಡಿ ಗಾಡ್’ ಕಥೆ ಹೇಳಲು ಬಂದ ‘ಮಠ’ ಗುರುಪ್ರಸಾದ್​​

(Kannada Movie Hero starring Rishab Shetty will release in Telugu OTT Aha on July 24th)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ