Radhika Pandit: ಹೊಸ ಮನೆಯ ಬಾಲ್ಕನಿ ವ್ಯೂ ಹಂಚಿಕೊಂಡ ನಟಿ ರಾಧಿಕಾ ಪಂಡಿತ್​

ಪ್ರೆಸ್ಟೀಜ್​ ಗಾಲ್ಫ್​ ಅಪಾರ್ಟ್​​ಮೆಂಟ್​​ನಲ್ಲಿ ಯಶ್‌ ಹೊಸ ಮನೆ​ ಖರೀದಿ ಮಾಡಿದ್ದರು. ಹಲವು ತಿಂಗಳ ಕಾಲ ಮನೆಯ ವಿನ್ಯಾಸ ಕೆಲಸಗಳು ನಡೆಯುತ್ತಿತ್ತು. ಅವೆಲ್ಲವೂ ಪೂರ್ಣಗೊಂಡಿದ್ದು, ಜುಲೈ 1ರಂದು ಗೃಹ ಪ್ರವೇಶದ ಕಾರ್ಯಗಳು ನಡೆದಿದ್ದವು.

Radhika Pandit: ಹೊಸ ಮನೆಯ ಬಾಲ್ಕನಿ ವ್ಯೂ ಹಂಚಿಕೊಂಡ ನಟಿ ರಾಧಿಕಾ ಪಂಡಿತ್​
ರಾಧಿಕಾ ಪಂದಿತ್
TV9kannada Web Team

| Edited By: Rajesh Duggumane

Jul 20, 2021 | 2:43 PM

ರಾಕಿಂಗ್​ ಸ್ಟಾರ್​ ಯಶ್​ ಹಾಗೂ ರಾಧಿಕಾ ಪಂಡಿತ್​ ಅವರ ಕನಸಿನ ಮನೆಯ ಗೃಹ ಪ್ರವೇಶ ಈ ತಿಂಗಳ ಆರಂಭದಲ್ಲಿ ನೆರವೇರಿತ್ತು.  ಕೊವಿಡ್ ಇರುವ ಕಾರಣ ಕೇವಲ ಆಪ್ತರ ಸಮ್ಮುಖದಲ್ಲಿ​ ಗೃಹ ಪ್ರವೇಶದ ಕಾರ್ಯಗಳನ್ನು ಯಶ್-ರಾಧಿಕಾ ದಂಪತಿ ಪೂರ್ಣಗೊಳಿಸಿದ್ದರು. ಈಗ ಸಾಮಾಜಿಕ ಜಾಲತಾಣದಲ್ಲಿ ರಾಧಿಕಾ ಬಾಲ್ಕನಿಯ ಫೋಟೋ ಹಂಚಿಕೊಂಡಿದ್ದಾರೆ.

ಪ್ರೆಸ್ಟೀಜ್​ ಗಾಲ್ಫ್​ ಅಪಾರ್ಟ್​​ಮೆಂಟ್​​ನಲ್ಲಿ ಯಶ್‌ ಹೊಸ ಮನೆ​ ಖರೀದಿ ಮಾಡಿದ್ದರು. ಹಲವು ತಿಂಗಳ ಕಾಲ ಮನೆಯ ವಿನ್ಯಾಸ ಕೆಲಸಗಳು ನಡೆಯುತ್ತಿತ್ತು. ಅವೆಲ್ಲವೂ ಪೂರ್ಣಗೊಂಡಿದ್ದು, ಜುಲೈ 1ರಂದು ಗೃಹ ಪ್ರವೇಶದ ಕಾರ್ಯಗಳು ನಡೆದಿದ್ದವು. ಈ ಸಂದರ್ಭದಲ್ಲಿ ಯಶ್​ ಮನೆಯ ಫೋಟೋಗಳು, ಗೃಹ ಪ್ರವೇಶ ಕಾರ್ಯಕ್ರಮದ ಚಿತ್ರಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದವು.

ಈಗ ರಾಧಿಕಾ ಪಂಡಿತ್​ ಬಾಲ್ಕನಿಯಲ್ಲಿ ನಿಂತಿರುವ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ರಾಧಿಕಾ ಪಂಡಿತ್​ ಬಾಲ್ಕನಿಯಲ್ಲಿ ನಿಂತಿದ್ದಾರೆ. ಎದುರು ದೊಡ್ಡದಾದ ಕಟ್ಟಡ ಇದೆ. ಆಗಸದಲ್ಲಿ ಸಣ್ಣದಾಗಿ ಕಾಮನಬಿಲ್ಲು ಕೂಡ ಮೂಡಿದೆ. ಈ ದೃಶ್ಯ ರಾಧಿಕಾಗೆ ಮುದ ನೀಡಿದೆ. ಹೀಗಾಗಿ, ಅಭಿಮಾನಿಗಳಿಗೂ ಅವರು ಇದನ್ನು ತೋರಿಸಿದ್ದಾರೆ.

​ರಾಧಿಕಾ ಪಂಡಿತ್​ ಚಿತ್ರರಂಗದಿಂದ ದೂರವೇ ಉಳಿದರೂ ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟಿವ್​ ಆಗಿದ್ದಾರೆ. ಮಕ್ಕಳ ಪಾಲನೆಯಲ್ಲಿ ತೊಡಗಿರುವ ಅವರು ಅಭಿಮಾನಿಗಳನ್ನು ಮರೆತಿಲ್ಲ. ಆಗೊಂದು ಈಗೊಂದು ಪೋಸ್ಟ್​ ಹಾಕುವ ಮೂಲಕ ಅಭಿಮಾನಿಗಳ ಜತೆ ರಾಧಿಕಾ ಪಂಡಿತ್​ ಸಂಪರ್ಕದಲ್ಲಿದ್ದಾರೆ. ಯಶ್​ ‘ಕೆಜಿಎಫ್​ 2’ ಸಿನಿಮಾದಲ್ಲಿ ನಟಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಸಿನಿಮಾ ಜುಲೈನಲ್ಲಿ ತೆರೆಗೆ ಬರಬೇಕಿತ್ತು. ಆದರೆ, ಕೊವಿಡ್ ಕಾರಣದಿಂದ ಸಿನಿಮಾ ರಿಲೀಸ್​ ದಿನಾಂಕ ಮುಂದೂಡಲ್ಪಟ್ಟಿದೆ. ಸೆಪ್ಟೆಂಬರ್ 9ಕ್ಕೆ ಚಿತ್ರ ರಿಲೀಸ್​ ಆಗಲಿದೆ ಎನ್ನುವ ಮಾಹಿತಿ ಇದೆಯಾದರೂ ಈ ಬಗ್ಗೆ ಅಧಿಕೃತ ಘೋಷಣೆ ಆಗಿಲ್ಲ.

ಇದನ್ನೂ ಓದಿ: ‘ಐ ಗಾಟ್​ ಹರ್ಟ್​ ಮಮ್ಮಾ’; ಯಥರ್ವ್​​ ಎಸೆದ ಮೈಕ್​ ಬಿದ್ದಿದ್ದು ಆಯ್ರಾ ತಲೆಮೇಲೆ, ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada