‘ಐ ಗಾಟ್​ ಹರ್ಟ್​ ಮಮ್ಮಾ’; ಯಥರ್ವ್​​ ಎಸೆದ ಮೈಕ್​ ಬಿದ್ದಿದ್ದು ಆಯ್ರಾ ತಲೆಮೇಲೆ, ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್​

ರಾಧಿಕಾ ಪಂಡಿತ್​ ಚಿತ್ರರಂಗದಿಂದ ದೂರವೇ ಉಳಿದರೂ ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟಿವ್​ ಆಗಿದ್ದಾರೆ. ಮಕ್ಕಳ ಪಾಲನೆಯಲ್ಲಿ ತೊಡಗಿರುವ ಅವರು ಅಭಿಮಾನಿಗಳನ್ನು ಮರೆತಿಲ್ಲ.

‘ಐ ಗಾಟ್​ ಹರ್ಟ್​ ಮಮ್ಮಾ’; ಯಥರ್ವ್​​ ಎಸೆದ ಮೈಕ್​ ಬಿದ್ದಿದ್ದು ಆಯ್ರಾ ತಲೆಮೇಲೆ, ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್​
TV9kannada Web Team

| Edited By: Rajesh Duggumane

Jul 16, 2021 | 9:46 PM

ನಟ ಯಶ್​ ಹಾಗೂ ನಟಿ ರಾಧಿಕಾ ಪಂಡಿತ್ ದಂಪತಿ ಮಕ್ಕಳು ಮಾಡುವ ತುಂಟಾಟ ನೋಡೋಕೆ ಅಭಿಮಾನಿಗಳಿಗೆ ಇಷ್ಟ. ಈ ಕಾರಣಕ್ಕೆ ರಾಧಿಕಾ ಪಂಡಿತ್​ ಮಕ್ಕಳ ವಿಡಿಯೋ ಹಾಗೂ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಈಗ ಅವರು ಪೋಸ್ಟ್​ ಮಾಡಿರುವ ಹೊಸ ವಿಡಿಯೋ ಸಾಕಷ್ಟು ವೈರಲ್​ ಆಗಿದೆ. ಆಯ್ರಾ ಕ್ಯೂಟ್​ನೆಸ್ ನೋಡಿ ಅಭಿಮಾನಿಗಳು ಸಖತ್​ ಇಷ್ಟಪಟ್ಟಿದ್ದಾರೆ.  

​ರಾಧಿಕಾ ಪಂಡಿತ್​ ಚಿತ್ರರಂಗದಿಂದ ದೂರವೇ ಉಳಿದರೂ ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟಿವ್​ ಆಗಿದ್ದಾರೆ. ಮಕ್ಕಳ ಪಾಲನೆಯಲ್ಲಿ ತೊಡಗಿರುವ ಅವರು ಅಭಿಮಾನಿಗಳನ್ನು ಮರೆತಿಲ್ಲ. ಆಗೊಂದು ಈಗೊಂದು ಪೋಸ್ಟ್​ ಹಾಕುವ ಮೂಲಕ ಅಭಿಮಾನಿಗಳ ಜತೆ ರಾಧಿಕಾ ಪಂಡಿತ್​ ಸಂಪರ್ಕದಲ್ಲಿದ್ದಾರೆ. ಈಗ ಅವರು ಆಯ್ರಾ ಹಾಗೂ ಯಥರ್ವ್ ಹೊಸ ವಿಡಿಯೋ ಹಂಚಿಕೊಂಡಿದ್ದಾರೆ.

ಈ ವಿಡಿಯೋದಲ್ಲಿ ಯಥರ್ವ್​​ಗೆ ಮೈಕ್​ ಒಂದನ್ನು ನೀಡಲಾಗಿದೆ. ಈ ಮೈಕ್​ ಹಿಡಿದುಕೊಂಡು ಆಡುತ್ತಾ ಯಥರ್ವ್ ಅದನ್ನು ಮೇಲೆ ಎಸೆದಿದ್ದಾನೆ. ಇದು ಆಯ್ರಾ ತಲೆ ಮೇಲೆ ಬಿದ್ದಿದೆ. ‘ಐ ಗಾಟ್​ ಹರ್ಟ್​ ಮಮ್ಮಾ’ ಎಂದು ಆಯ್ರಾ ಮುದ್ದಾಗಿ ಅಮ್ಮನ ಬಳಿ ದೂರು ನೀಡಿದ್ದಾಳೆ. ಸದ್ಯ, ಈ ವಿಡಿಯೋ ಅಭಿಮಾನಿಗಳಿಗೆ ಸಾಕಷ್ಟು ಇಷ್ಟವಾಗಿದೆ. ನಟಿ ಆಶಿಕಾ ರಂಗನಾಥ್​ ಕೂಡ ಈ ವಿಡಿಯೋಗೆ ಕಮೆಂಟ್​ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯಶ್​-ರಾಧಿಕಾ ಮೊದಲ ಮಗು ಆಯ್ರಾ. ಆಯ್ರಾ ಸಾಕಷ್ಟು ಫೇಮ್​ ಸೃಷ್ಟಿಸಿಕೊಂಡಿದ್ದಾಳೆ. ಯಶ್​ ಮೊದಲ ಮಗು ಎನ್ನುವ ಕಾರಣಕ್ಕೆ ಸೋಶಿಯಲ್​ ಮೀಡಿಯಾದಲ್ಲಿ ಸೆನ್ಸೇಶನ್​ ಸೃಷ್ಟಿ ಮಾಡಿದ್ದಾಳೆ. ಇವಳಿಗೆ ಯಶಿಕಾ ಎಂದು ನಾಮಕರಣ ಮಾಡಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದ್ದರು.

ರಾಧಿಕಾ ಪಂಡಿತ್​ ಚಿತ್ರರಂಗಕ್ಕೆ ಮರಳೋದು ಯಾವಾಗ ಎನ್ನುವ ಪ್ರಶ್ನೆಗಳನ್ನು ಅಭಿಮಾನಿಗಳು ಕೇಳುತ್ತಿದ್ದಾರೆ. ‘ಆದಿ ಲಕ್ಷ್ಮೀ ಪುರಾಣ’ ಚಿತ್ರವೇ ಕೊನೆ. ಅದಾದ ನಂತರದಲ್ಲಿ ಅವರು ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಆದಷ್ಟು ಬೇಗ ಅವರನ್ನು ತೆರೆಮೇಲೆ ನೋಡಬೇಕು ಎಂಬುದು ಅಭಿಮಾನಿಗಳ ಕನಸು. ಆದರೆ, ಈ ಬಗ್ಗೆ ಅವರು ಎಲ್ಲಿಯೂ ಹೇಳಿಕೊಂಡಿಲ್ಲ.

ಇನ್ನು, ಯಶ್​ ಕೆಜಿಎಫ್​ 2 ಸಿನಿಮಾದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇಂದು (ಜುಲೈ 16) ಚಿತ್ರ ತೆರೆಗೆ ಬರಬೇಕಿತ್ತು. ಆದರೆ, ಕೊವಿಡ್​ ಕಾರಣದಿಂದ ಸಿನಿಮಾ ರಿಲೀಸ್​ ದಿನಾಂಕ ಮುಂದೂಡಲ್ಪಟ್ಟಿರುವ ಬಗ್ಗೆ ಚಿತ್ರತಂಡ ಇತ್ತೀಚೆಗೆ ಘೋಷಣೆ ಮಾಡಿತ್ತು. ಇನ್ನು, ನರ್ತನ್​ ನಿರ್ದೇಶನದ ಮುಂದಿನ ಚಿತ್ರದಲ್ಲಿ ಯಶ್​ ನೌಕಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.

ಇದನ್ನೂ ಓದಿ: Ayra Yash: ಯಶ್ ಮತ್ತು ರಾಧಿಕಾ ತಮ್ಮ ಪ್ರೀತಿಯ ಮಗಳಿಗೆ ಐರಾ ಎಂದು ಹೆಸರಿಟ್ಟಿದ್ದೇಕೆ ಗೊತ್ತಾ? 

ರಾಧಿಕಾ ಪಂಡಿತ್​ ಹಂಚಿಕೊಂಡ್ರು ಮಗುವಿನ ಹೊಸ ಫೋಟೋ; ಆಯ್ರಾ ಸ್ಮೈಲ್​ ಹೇಗಿದೆ ನೋಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada