Ayra Yash: ಯಶ್ ಮತ್ತು ರಾಧಿಕಾ ತಮ್ಮ ಪ್ರೀತಿಯ ಮಗಳಿಗೆ ಐರಾ ಎಂದು ಹೆಸರಿಟ್ಟಿದ್ದೇಕೆ ಗೊತ್ತಾ?

Radhika Pandit: ಸ್ಯಾಂಡಲ್​ವುಡ್​ನ ಜನಪ್ರಿಯ ತಾರಾ ಜೋಡಿ ಯಶ್ ಮತ್ತು ರಾಧಿಕಾ ತಮ್ಮ ಮಗಳಿಗೆ ಐರಾ ಎಂದು ನಾಮಕರಣ ಮಾಡಲು ಕಾರಣವೇನು ಗೊತ್ತಾ? ಒಂದಲ್ಲಾ ಎರಡಲ್ಲಾ, ಹಲವು ಕಾರಣಗಳಿವೆ. ಮುಂದೆ ಓದಿ.

Ayra Yash: ಯಶ್ ಮತ್ತು ರಾಧಿಕಾ ತಮ್ಮ ಪ್ರೀತಿಯ ಮಗಳಿಗೆ ಐರಾ ಎಂದು ಹೆಸರಿಟ್ಟಿದ್ದೇಕೆ ಗೊತ್ತಾ?
ಯಶ್, ರಾಧಿಕಾ ಪಂಡಿತ್ ಮತ್ತು ಐರಾ
Follow us
TV9 Web
| Updated By: shivaprasad.hs

Updated on: Jul 14, 2021 | 4:27 PM

ಸ್ಯಾಂಡಲ್​ವುಡ್​ನ ತಾರಾ ಜೋಡಿ ಯಶ್ ಮತ್ತು ರಾಧಿಕಾ ಅಭಿಮಾನಿಗಳ ಆಸೆ ಆಕಾಂಕ್ಷೆಗಳಿಗೆ, ಬಯಕೆಗಳಿಗೆ ಗೌರವ ನೀಡುವುದರಿಂದ ಅವರು ಫ್ಯಾನ್ಸ್​ಗಳಿಗೆ ಬಹಳ ಅಚ್ಚುಮೆಚ್ಚು. ಅವರ ಮೊದಲ ಮಗಳಿಗೆ ಹೆಸರಿಡುವಾಗಲೂ ಅವರು ಅಭಿಮಾನಿಗಳ ಕೋರಿಕೆಯನ್ನು ಗೌರವಿಸಿ ಹೆಸರು ನೀಡಿದ್ದರು. ರಾಧಿಕಾ ಮತ್ತು ಯಶ್ ಈವರೆಗೆ ತಮ್ಮ ಮಗಳ ವೈಶಿಷ್ಟ್ಯಪೂರ್ಣ ಹೆಸರಿನ ಕುರಿತು ಹೇಳಿರುವುದನ್ನೆಲ್ಲಾ ಸೇರಿಸಿ ಅವರು ತಮ್ಮ ಮಗಳಿಗೆ ಹೆಸರು ನೀಡಿರುವುದರ ಹಿಂದಿನ ಸಾಧ್ಯತೆಯನ್ನು ಇಲ್ಲಿ ನೀಡಲಾಗಿದೆ.

ಯಶ್ ಮತ್ತು ರಾಧಿಕಾ ಜೋಡಿ ಸ್ಯಾಂಡಲ್​ವುಡ್​ನಲ್ಲಿ ರಾಕಿಂಗ್ ಕಪಲ್ ಎಂದೇ ಪ್ರಸಿದ್ಧವಾಗಿದೆ. ಅವರ ಮಗಳ ಹೆಸರು ಐರಾ. ಮಗನ ಹೆಸರು ಯಥರ್ವ್. ತಮ್ಮ ಕುಟುಂಬದ ಫೊಟೊ ಹಾಗೂ ವಿಡಿಯೊಗಳನ್ನು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಈ ಜೋಡಿ ಹಂಚಿಕೊಳ್ಳುತ್ತಲೇ ಇರುತ್ತದೆ. ಮಕ್ಕಳಿಗೆ ಹೆಸರಿಡುವ ಸಂದರ್ಭದಲ್ಲೂ ಇಂಥದ್ದೇ ಒಂದು ವಿಡಿಯೊ ಬಿಡುಗಡೆ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು. ಅದನ್ನೆಲ್ಲಾ ಆಧಾರವಾಗಿಟ್ಟುಕೊಂಡು ಐರಾಗೆ ಹೆಸರಿಟ್ಟ ಹಿಂದಿನ ಕಾರಣವನ್ನು ಇಲ್ಲಿ ವಿವರಿಸಲಾಗಿದೆ.

ರಾಧಿಕಾ ಪಂಡಿತ್ ಅವರ ಪ್ರಕಾರ ಅವರ ಮಗಳು ಹುಟ್ಟಿದಾಗ ಎಲ್ಲರೂ ಆಕೆಯನ್ನು ಲಕ್ಷ್ಮಿಯೇ ಮನೆಗೆ ಬಂದಳು ಎನ್ನುತ್ತಿದ್ದರಂತೆ. ಆದ್ದರಿಂದಲೇ ತಾರಾ ದಂಪತಿಗೆ ದೇವಿಯ ಹೆಸರನ್ನು ಒಳಗೊಂಡಿರುವ ಹೆಸರನ್ನು ಇಡಬೇಕು ಎಂಬ ಯೋಚನೆ ಬಂದಿತಂತೆ. ಇದರ ಮಧ್ಯೆಯೇ ಅಭಿಮಾನಿಗಳು ಯಶ್ ಮತ್ತು ರಾಧಿಕಾ ಅವರ ಹೆಸರನ್ನು ಸೇರಿಸಿ ಮಗಳನ್ನು ಯಶಿಕಾ ಮತ್ತು YR ಎಂದು ಕರೆಯಲು ಪ್ರಾರಂಭಿಸಿದ್ದರು. ಆದ್ದರಿಂದ ಹೆಸರನ್ನು ಇಡುವಾಗ YR ಪದಗಳನ್ನು ಹೆಸರಿಗೆ ಸೇರಿಸಬೇಕು ಎಂದು ತೀರ್ಮಾನಿಸಿದರಂತೆ. ಆದ್ದರಿಂದ ಈ ಎರಡೂ ಪದಗಳ ಹಿಂದು ಮತ್ತು ಮುಂದು Aಯನ್ನು ಸೇರಿಸಿದರಂತೆ. ಅದು ಹಲವು ರೀತಿಯಲ್ಲಿ ಅರ್ಥಗಳನ್ನು ನೀಡುತ್ತದೆ.

AYRAದಲ್ಲಿ AYಯನ್ನು ತೆಗೆದುಕೊಂಡಾಗ ಅದು ಯಶ್ ಅವರ ಮೊದಲ ಎರಡು ಅಕ್ಷರಗಳನ್ನು ತಿರುವು ಮುರುವಾಗಿ ಸೂಚಿಸುತ್ತದೆ. ಹಾಗೆಯೇ RA ಎನ್ನುವುದು ರಾಧಿಕಾ ಅವರ ಹೆಸರಿನ ಮೊದಲ ಅಕ್ಷರಗಳನ್ನು ಸೂಚಿಸುತ್ತದೆ. ಇನ್ನೊಂದು ರೀತಿಯಲ್ಲಿ ನೋಡುವುದಾದರೆ ‘ಅಪ್ಪ ಯಶ್ ರಾಧಿಕಾ ಅಮ್ಮ’ ಎಂದು AYRA ಹೆಸರು ಸೂಚಿಸುತ್ತದೆ. ಅಭಿಮಾನಿಗಳು ಹಲವಾರು ಹೆಸರನ್ನು ಸೂಚಿಸಿದ್ದರೂ ಸಹ, ಅದಕ್ಕಿಂತ ಭಿನ್ನವಾಗಿ ಹೆಸರನ್ನು ಇಡಬೇಕು ಎನ್ನುವುದು ನಮ್ಮ ಆಲೋಚನೆಯಾಗಿತ್ತು ಎನ್ನುವುದನ್ನು ಈ ಹಿಂದೆ ರಾಧಿಕಾ ಹೇಳಿಕೊಂಡಿದ್ದರು.

ಹಾಗೆಯೇ ಐರಾ ಎಂಬ ಹೆಸರು ಬಂದಿರುವುದು ಐರಾವತಿ ಎಂಬ ನಾಮದಿಂದ. ಅದು ದೇವಿ ಲಕ್ಷ್ಮಿಯ ಮತ್ತೊಂದು ಹೆಸರು. ಆದ್ದರಿಂದಲೇ ಐರಾ ಎಂಬ ಹೆಸರು ತಮ್ಮ ಮಗಳಿಗೆ ಅತ್ಯಂತ ಚೆನ್ನಾಗಿ ಹೊಂದಿಕೆಯಾಗುತ್ತದೆ ಎನ್ನುವುದು ಜನಪ್ರಿಯ ತಾರಾ ಜೋಡಿಗಳ ಅನಿಸಿಕೆ. ಇದನ್ನು ಅವರ ಅಭಿಮಾನಿಗಳೂ ಒಪ್ಪಿ, ಅಪ್ಪಿಕೊಂಡಿದ್ದಾರೆ. ಐರಾ ಮತ್ತು ಯಥರ್ವ್​ರ ಬಾಲ್ಯದ ತುಂಟಾಟಗಳನ್ನು ಜಾಲತಾಣದಲ್ಲೇ ನೋಡಿ ಆನಂದಿಸುತ್ತಿದ್ದಾರೆ.

(Radhika Pandith reveals that why they name their daughter Ayra)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ