ದರ್ಶನ್ ಹಲ್ಲೆ ಆರೋಪ; ಆಡಿಯೋ ಬಗ್ಗೆ ಪ್ರತಿಕ್ರಿಯೆ ನೀಡದ ಸಂದೇಶ್, ಹರ್ಷಾ ಮೆಲಂಟಾ ಹೇಳಿದ್ದೇನು?

ಇಂದ್ರಜಿತ್, ಸಂದೇಶ್​ರದ್ದು ಎನ್ನಲಾದ ಆಡಿಯೋ ಬಗ್ಗೆ ಮೈಸೂರು ಪೊಲೀಸರು ಮಾಹಿತಿ ಸಂಗ್ರಹಿಸುವ ಸಾಧ್ಯತೆಯಿದೆ. ಪೊಲೀಸರು ನಿನ್ನೆ ಪ್ರಿನ್ಸ್ ಹೋಟೆಲ್​ಗೆ ತೆರಳಿ ಸಂದೇಶ್​ರವರನ್ನು ಹಾಗೂ ಹೋಟೆಲ್ ಸಿಬ್ಬಂದಿಯನ್ನ ವಿಚಾರಣೆ ಮಾಡಿದ್ದರು.

ದರ್ಶನ್ ಹಲ್ಲೆ ಆರೋಪ; ಆಡಿಯೋ ಬಗ್ಗೆ ಪ್ರತಿಕ್ರಿಯೆ ನೀಡದ ಸಂದೇಶ್, ಹರ್ಷಾ ಮೆಲಂಟಾ ಹೇಳಿದ್ದೇನು?
ದರ್ಶನ್​

ಮೈಸೂರು: ಸ್ಯಾಂಡಲ್ವುಡ್ ನಟ ದರ್ಶನ್ ಹಲ್ಲೆ ಆರೋಪ ವಿಚಾರಕ್ಕೆ ಸಂಬಂಧಿಸಿ ಹೋಟೆಲ್ ಮಾಲೀಕ ಸಂದೇಶ್ ಮತ್ತು ನಿರ್ದೇಶಕ ಇಂದ್ರಜಿತ್ ಲಂಕೇಶ್ದೂ ಎನ್ನಲಾದ ಆಡಿಯೋ ವೈರಲ್ ಆಗಿದೆ. ಅದರೆ ವೈರಲ್ ಆಗಿರುವ ಆಡಿಯೋ ಬಗ್ಗೆ ಹೋಟೆಲ್ ಮಾಲೀಕ ಸಂದೇಶ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇಂದು ಬೆಂಗಳೂರಿಗೆ ಸಂದೇಶ್ ತೆರಳುವ ಸಾಧ್ಯತೆಯಿದ್ದು, ಈ ಬಗ್ಗೆ ಸಂದೇಶ್ ತಂದೆ ನಿನ್ನೆ ಮಾಹಿತಿ ನೀಡಿದ್ದರು.

ಇಂದ್ರಜಿತ್, ಸಂದೇಶ್​ರದ್ದು ಎನ್ನಲಾದ ಆಡಿಯೋ ಬಗ್ಗೆ ಮೈಸೂರು ಪೊಲೀಸರು ಮಾಹಿತಿ ಸಂಗ್ರಹಿಸುವ ಸಾಧ್ಯತೆಯಿದೆ. ಪೊಲೀಸರು ನಿನ್ನೆ ಪ್ರಿನ್ಸ್ ಹೋಟೆಲ್​ಗೆ ತೆರಳಿ ಸಂದೇಶ್​ರವರನ್ನು ಹಾಗೂ ಹೋಟೆಲ್ ಸಿಬ್ಬಂದಿಯನ್ನ ವಿಚಾರಣೆ ಮಾಡಿದ್ದರು. ಪೊಲೀಸರು ಸಂಪರ್ಕಿಸಿದರೆ ಮಾಹಿತಿ ಮತ್ತು ಸಾಕ್ಷ್ಯಾಧಾರಗಳನ್ನ ನೀಡುತ್ತೇನೆ ಎಂದು ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಇಂದ್ರಜಿತ್ ಹೇಳಿದ್ದರು.

ನಾನು ಮತ್ತು ರಾಕೇಶ್ ಪಾಪಣ್ಣ ಹೋಟೆಲ್ಗೆ ಹೋಗಿಲ್ಲ. ಅವತ್ತೇ ಅಲ್ಲ ಇದುವರೆಗೂ ನಾವು ಹೋಟೆಲ್ಗೆ ಹೋಗಿಲ್ಲ. ಯಾರ ಕಾಲು ಹಿಡಿಯುವ ಪರಿಸ್ಥಿತಿ ನನಗೆ ಬಂದಿಲ್ಲ. ನಾನು ಸಹ ಹೋಟೆಲ್ ಯಜಮಾನ. ಸಂದೇಶ್ರವರು ಇದಕ್ಕೆ ಉತ್ತರ ಕೊಡಬೇಕು. ಇದು ಸಂದೇಶ್ ಹೇಳಿರುವ ಮಾತಲ್ಲ ಎಂದು ಟಿವಿ9ಗೆ ನಟ ದರ್ಶನ್ ಆಪ್ತ ಹರ್ಷಾ ಮೆಲಂಟಾ ಪ್ರತಿಕ್ರಿಯೆ ನೀಡಿದ್ದಾರೆ.

ಗಲಾಟೆ ಆದ ದಿನ ಉಮಾಪತಿ ಇರಲಿಲ್ಲ. ನಮ್ಮ ಇಬ್ಬರು ಫ್ಯಾಮಿಲಿ ಫ್ರೆಂಡ್ಸ್ ಇದ್ದರು. ನಾನು ನಮ್ಮ ಕುಟುಂಬದವರ ಜತೆ ಹೋಟೆಲ್​ಗೆ ಹೋಗಿದ್ದೆ. ಮಕ್ಕಳು ಸಹ ನಮ್ಮ ಜತೆ ಹೋಟೆಲ್​ಗೆ ಬಂದಿದ್ರು. ದರ್ಶನ್ ಫೋನ್ ಮಾಡಿ ಊಟಕ್ಕೆ ಬನ್ನಿ ಅಂದ್ರು. ನಾಗರಾಜ್, ದರ್ಶನ್ ಫ್ರೆಂಡ್ ಇದ್ದರು. ನಮ್ಮ ಜತೆ ಪವಿತ್ರ ಗೌಡ ಸಹ ಇದ್ದರು ಎಂದು ದರ್ಶನ್ ಆಪ್ತ ಹರ್ಷ ಮೆಲಂಟಾ ತಿಳಿಸಿದರು.

ಅರುಣಾ ಕುಮಾರಿ ಪ್ರಕರಣ ಡೈವರ್ಟ್ ಮಾಡಲು ಪಿತೂರಿ ನಡೆದಿದೆ. ದರ್ಶನ್ ಹೊಡೆಯುವ ವಕ್ತಿಯಲ್ಲ. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಾರೆ. ನಮ್ಮ ಹೋಟೆಲ್​ನಲ್ಲಿ ಮನರಂಜನೆ ಆಯೋಜನೆ ಮಾಡಿ, ನಮ್ಮ ಕೈಯಲ್ಲಿ ಹಾಡು ಹೇಳಿಸಿ ಹಣ ಸೇರಿಸಿದ್ರು. ಆ ಹಣವನ್ನ ಹೋಟೆಲ್ ಸಿಬ್ಬಂದಿಗೆ ಮೀಸಲಿಟ್ಟಿದ್ದರು. ಕಷ್ಟದಲ್ಲಿದ್ದಾಗ ಅದನ್ನ ಬಳಸಲು ನನಗೆ ಹೇಳಿದ್ರು. ಒಂದು ಲಕ್ಷ ಹಣ ಸೇರಿಸಿ ನನಗೆ ಕೊಟ್ಟಿದ್ದರು. ಪೊರಕೆ ತಂದು ಗಲಭೆ ಮಾಡುವಷ್ಟು ಗಲಾಟೆ ಆಗಿಲ್ಲ. ಹೋಟೆಲ್ ಗಲಾಟೆಗೆ ಸಂಬಂಧಿಸಿದಂತೆ ನೋಟಿಸ್ ಬಂದಿಲ್ಲ. ಪೊಲೀಸರು ತನಿಖೆಗೆ ಕರೆದರೆ ಹೋಗಿ ವಿಚಾರಣೆಗೆ ಹಾಜರಾಗುತ್ತೇವೆ ಎಂದು ಹರ್ಷ ಅಭಿಪ್ರಾಯಪಟ್ಟರು.

ಇದನ್ನೂ ಓದಿ

ದರ್ಶನ್​ ಹಲ್ಲೆ ಪ್ರಕರಣದ ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಆಡಿಯೋ ಇಲ್ಲಿದೆ

15 ಜನ ಸೇರಿ ಒಬ್ಬನಿಗೆ ಹೊಡೀತಿದ್ರು; ದರ್ಶನ್​ ಮತ್ತು ಸ್ನೇಹಿತರ ಮೇಲೆ ಸಂದೇಶ್ ಸ್ಫೋಟಕ ಆರೋಪ

(Sandesh did not react on Audio being viral)