‘ಪ್ರಶಸ್ತಿಗಿಂತ ಜನರ ಪ್ರೀತಿ ದೊಡ್ಡದು’; AnanthnagForPadma ಆಂದೋಲನದ ಬಗ್ಗೆ ಅನಂತ್​ನಾಗ್​ ಪ್ರತಿಕ್ರಿಯೆ

#AnanthnagForPadma ಎಂಬ ಹ್ಯಾಷ್​ಟ್ಯಾಗ್​ನಡಿ ಟ್ವಿಟ್ಟರ್​ನಲ್ಲಿ ಅಭಿಯಾನ ನಡೆಯುತ್ತಿದೆ. ಸ್ಯಾಂಡಲ್​ವುಡ್ ನಿರ್ದೇಶಕ, ನಟರಾದ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಪುನೀತ್​ ರಾಜ್​ಕುಮಾರ್​ ಕೂಡ ಈ ಅಭಿಯಾನಕ್ಕೆ ಕೈಜೋಡಿಸಿದ್ದಾರೆ. 

‘ಪ್ರಶಸ್ತಿಗಿಂತ ಜನರ ಪ್ರೀತಿ ದೊಡ್ಡದು’; AnanthnagForPadma ಆಂದೋಲನದ ಬಗ್ಗೆ ಅನಂತ್​ನಾಗ್​ ಪ್ರತಿಕ್ರಿಯೆ
‘ಪ್ರಶಸ್ತಿಗಿಂತ ಜನರ ಪ್ರೀತಿ ದೊಡ್ಡದು’; AnanthnagForPadma ಆಂದೋಲನದ ಬಗ್ಗೆ ಅನಂತ್​ನಾಗ್​ ಪ್ರತಿಕ್ರಿಯೆ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 15, 2021 | 9:58 PM

ಕನ್ನಡದ ಹಿರಿಯ ನಟ ಅನಂತ್​ ನಾಗ್​ ಅವರಿಗೆ ಪದ್ಮ ಪ್ರಶಸ್ತಿ ದೊರೆಯಬೇಕು ಎನ್ನುವ ಒತ್ತಾಯ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ. ಈ ಬಗ್ಗೆ ಸಾಕಷ್ಟು ಜನರು, ಸೆಲೆಬ್ರಿಟಿಗಳು ಟ್ವೀಟ್​ ಮಾಡುವ ಮೂಲಕ ತಮ್ಮ ಹಕ್ಕೊತ್ತಾಯ ಮಾಡಿದ್ದಾರೆ. ಈಗ ಈ ಅಭಿಯಾನದ ಬಗ್ಗೆ ಸ್ವತಃ ಅನಂತ್​ ನಾಗ್​ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಹೇಳಿದ್ದೇನು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಬರಹಗಾರ ಜೋಗಿ ಹಾಗೂ ಅವರ ತಂಡ ನಡೆಸುತ್ತಿರುವ ಕ್ಲಬ್​ ಹೌಸ್​ನ ಹಾಲ್ಫ್​ ಸರ್ಕಲ್​ನಲ್ಲಿ ಮಾತನಾಡಿರುವ ಅನಂತ್​ ನಾಗ್​, ‘ನನಗೆ ಪ್ರಶಸ್ತಿ ಸಿಕ್ಕರೆ ಖುಷಿ ಆಗುತ್ತದೆ. ಅದು ಒಂದು ದಿನ ಮಾತ್ರ. ನಂತರ ಈ ಪ್ರಶಸ್ತಿ ಶೋಕೇಸ್​ ಸೇರುತ್ತದೆ. ಈ ಪ್ರಶಸ್ತಿಗಿಂತ ಜನರ ಪ್ರೀತಿ ದೊಡ್ಡದು. ಇದನ್ನು ನಾನು ಉಳಿಸಿಕೊಳ್ಳುವ ಪ್ರಯತ್ನ ಮಾಡ್ತೀನಿ’ ಎಂದಿದ್ದಾರೆ. ಈ ಮೂಲಕ ಅಭಿಮಾನಿಗಳ ಪ್ರೀತಿಯೇ ದೊಡ್ಡದು ಎಂದು ಹೇಳಿದ್ದಾರೆ.

#AnanthnagForPadma ಎಂಬ ಹ್ಯಾಷ್​ಟ್ಯಾಗ್​ನಡಿ ಟ್ವಿಟ್ಟರ್​ನಲ್ಲಿ ಅಭಿಯಾನ ನಡೆಯುತ್ತಿದೆ. ಸ್ಯಾಂಡಲ್​ವುಡ್ ನಿರ್ದೇಶಕ, ನಟರಾದ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಪುನೀತ್​ ರಾಜ್​ಕುಮಾರ್​ ಕೂಡ ಈ ಅಭಿಯಾನಕ್ಕೆ ಕೈಜೋಡಿಸಿದ್ದಾರೆ.

‘ನನ್ನ ನೆಚ್ಚಿನ ನಟರಲ್ಲಿ ಒಬ್ಬರಾದ ಅನಂತ್​​ನಾಗ್ ಅವರಿಗೆ ಪದ್ಮ ಪ್ರಶಸ್ತಿ ನೀಡಬೇಕೆಂಬುದು ನಮ್ಮೆಲ್ಲರ ಆಸೆ. ನಾನು ಅವರ ದೊಡ್ಡ ಅಭಿಮಾನಿ. ಸಿನಿಮಾ ರಂಗಕ್ಕೆ ಅನಂತನಾಗ್ ಕೊಡುಗೆ ಅಪಾರ’ ಎಂದಿದ್ದಾರೆ.

1973ರಲ್ಲಿ ತೆರೆಗೆ ಬಂದಿದ್ದ ‘ಸಂಕಲ್ಪ’ ಸಿನಿಮಾ ಮೂಲಕ ಅನಂತ್​ ನಾಗ್​ ಚಿತ್ರರಂಗಕ್ಕೆ ಕಾಲಿಟ್ಟರು. ಅವರ ವೃತ್ತಿ ಜೀವನದಲ್ಲಿ 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ, ಹಿಂದಿ, ಮರಾಠಿ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದು ಅವರ ಹೆಚ್ಚುಗಾರಿಕೆ.ಅದ್ಭುತ ನಟನೆ ಮೂಲಕ ಅನಂತ್​ ನಾಗ್​ ಎಲ್ಲರ ಗಮನ ಸೆಳೆದಿದ್ದಾರೆ. ಪೋಷಕ ಪಾತ್ರದಲ್ಲಿ ನಟಿಸೋಕೆ ಅವರಿಗೆ ಭಾರೀ ಬೇಡಿಕೆ ಇದೆ.

ಇದನ್ನೂ ಓದಿ: Padma Awards: ಅನಂತ್ ​ನಾಗ್​ಗೆ ಪದ್ಮ ಪ್ರಶಸ್ತಿ ನೀಡಿ; ಸೆಲೆಬ್ರಿಟಿಗಳಿಂದಲೂ ಶುರುವಾಯ್ತು ಟ್ವಿಟ್ಟರ್​ ಅಭಿಯಾನ

ಕೆಜಿಎಫ್​-2ನಲ್ಲಿ ಅನಂತ್​ ನಾಗ್​-ಪ್ರಕಾಶ್​ ರೈ​​ ಪಾತ್ರಕ್ಕೂ ಇರುವ ಸಂಬಂಧವೇನು? ಪ್ರಶಾಂತ್​ ನೀಲ್​ ಬಿಚ್ಚಿಟ್ರು ಅಸಲಿ ವಿಚಾರ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ