AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sagarika Shona: ರಾಜ್ ಕುಂದ್ರಾ ನಗ್ನವಾಗಿ ಆಡಿಶನ್ ಕೊಡಲು ಹೇಳಿದ್ದರು: ನಟಿ ಸಾಗರಿಕಾ ಶೋನಾ ಗಂಭೀರ ಆರೋಪ

Raj Kundra: ನಟಿ, ರೂಪದರ್ಶಿ  ಸಾಗರಿಕಾ ಶೋನಾ ನೀಡಿರುವ ಸಂದರ್ಶನವೊಂದರಲ್ಲಿ ಅವರು ಉದ್ಯಮಿ, ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

Sagarika Shona: ರಾಜ್ ಕುಂದ್ರಾ ನಗ್ನವಾಗಿ ಆಡಿಶನ್ ಕೊಡಲು ಹೇಳಿದ್ದರು: ನಟಿ ಸಾಗರಿಕಾ ಶೋನಾ ಗಂಭೀರ ಆರೋಪ
ನಟಿ, ರೂಪದರ್ಶಿ ಸಾಗರಿಕಾ ಶೋನಾ
TV9 Web
| Updated By: shivaprasad.hs|

Updated on: Jul 20, 2021 | 12:26 PM

Share

ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಅವರನ್ನು ಅಶ್ಲೀಲ ಚಿತ್ರಗಳ ನಿರ್ಮಾಣ ಮತ್ತು ಹಂಚುವಿಕೆಯ ಆರೋಪದ ಮೇಲೆ ಸೋಮವಾರ ಮುಂಬೈನಲ್ಲಿ ಬಂಧಿಸಲಾಗಿತ್ತು. ಅವರ ಬಂಧನದ ಬೆನ್ನಲ್ಲೇ ನಟಿ, ರೂಪದರ್ಶಿ ಸಾಗರಿಕಾ ಶೋನಾ ನೀಡಿರುವ ಸಂದರ್ಶನವೊಂದು ವೈರಲ್ ಆಗಿದೆ. ಈ ಸಂದರ್ಶನವು ಎಂದು ಚಿತ್ರಿತವಾಗಿದೆ ಎಂಬ ಮಾಹಿತಿ ಇಲ್ಲದಿದ್ದರೂ ಇದು 2021ರ ಫೆಬ್ರವರಿಯಲ್ಲೇ ಸುದ್ದಿಯಾಗಿತ್ತು; ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಅದರಲ್ಲಿ ಸಾಗರಿಕಾ ಅವರು ತಾವು ರಾಜ್ ಕುಂದ್ರಾ ಅವರಿಗೆ ಸೇರಿದ ನಿರ್ಮಾಣ ಸಂಸ್ಥೆಗೆ ಆಡಿಶನ್ ಕೊಡುವಾಗ ರಾಜ್ ನಗ್ನವಾಗಿ ಕಾಣಿಸಿಕೊಳ್ಳಲು ಹೇಳಿದ್ದರು ಎಂದು ಆರೋಪಿಸಿದ್ದಾರೆ. ಪ್ರಸ್ತುತ ರಾಜ್ ಕುಂದ್ರಾ ಮೇಲೆ ಹಲವು ನಟಿಯರು ಆರೋಪ ಮಾಡಿದ್ದು, ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ.

ವಿಡಿಯೊದಲ್ಲಿ ಸಾಗರಿಕಾ ಶೋನಾ ಅವರು ತಮಗಾದ ಅನುಭವವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. “ನಾನೊಬ್ಬ ರೂಪದರ್ಶಿ ಮತ್ತು ನಟಿ. ಈ ಕ್ಷೇತ್ರದಲ್ಲಿ ಮೂರು- ನಾಲ್ಕು ವರ್ಷ ಕೆಲಸ ಮಾಡಿದ್ದೇನೆ. ಆದರೆ 2020ರ ಆಗಸ್ಟ್​ನಲ್ಲಿ ನನಗಾದ ಕೆಲವು ಕಹಿ ಅನುಭವಗಳನ್ನು ಹೇಳಿಕೊಳ್ಳಲೇಬೇಕು. ಲಾಕ್​ಡೌನ್ ಸಂದರ್ಭದಲ್ಲಿ (ಮೊದಲ ಲಾಕ್​ಡೌನ್) ಉಮೇಶ್ ಕಾಮತ್ ಅವರಿಂದ ಒಂದು ಕರೆ ಬಂದಿತು. ಅವರು ರಾಜ್ ಕುಂದ್ರಾ ನಿರ್ಮಾಣದ ವೆಬ್​ ಸಿರೀಸ್​ನಲ್ಲಿ ಪಾತ್ರವೊಂದನ್ನು ಮಾಡುವಂತೆ ಆಹ್ವಾನ ನೀಡಿದರು. ನಾನಾಗ ರಾಜ್ ಕುಂದ್ರಾ ಯಾರೆಂದು ಕೇಳಿದ್ದಕ್ಕೆ- ಶಿಲ್ಪಾ ಶೆ್ಟ್ಟಿ ಪತಿ ಎಂದು ಉಮೇಶ್ ಹೇಳಿದ್ದರು.”

“ಒಂದು ವೇಳೆ ನೀವು ಈ ಆಹ್ವಾನ ಒಪ್ಪಿದರೆ ಚಿತ್ರರಂಗದಲ್ಲಿ ಬಹಳ ಎತ್ತರಕ್ಕೆ ಹೋಗುವಿರಿ ಎಂಬ ಭರವಸೆಯನ್ನೂ ನೀಡಿದ್ದರು. ಆದ್ದರಿಂದಲೇ ಆಡಿಶನ್​ಗೆ ಒಪ್ಪಿಕೊಂಡೆ. ಆದರೆ ಕೋವಿಡ್ ಕಾರಣದಿಂದ ಆಡಿಶನ್ ಹೇಗೆ ಕೊಡುವುದು ಎಂದು ಕೇಳಿದಾಗ, ವಿಡಿಯೊ ಕಾಲ್ ಮುಖಾಂತರ ಕೊಡಬಹುದು ಎಂದರು. ಯಾವಾಗ ನಾನು ವಿಡಿಯೊ ಕಾಲ್​ನಲ್ಲಿ ಜಾಯ್ನ್ ಆದೆನೋ ಆಗ ಅವರು ನಗ್ನವಾಗಿ ಆಡಿಶನ್ ನೀಡಲು ಹೇಳಿದರು. ನನಗೆ ಶಾಕ್ ಆಗಿ, ಖಡಾಖಂಡಿತವಾಗಿ ನಿರಾಕರಿಸಿದೆ. ವಿಡಿಯೊ ಕಾಲ್​ನಲ್ಲಿ ಮೂವರಿದ್ದರು. ಅದರಲ್ಲಿ ಮುಖವನ್ನು ಮುಚ್ಚಿಕೊಂಡಿದ್ದ ಒಬ್ಬರು ರಾಜ್ ಕುಂದ್ರಾ ಎಂಬ ಅನುಮಾನ ನನಗಿದೆ. ಒಂದು ವೇಳೆ ಅವರು ಇಂತಹ ದಂಧೆಯಲ್ಲಿ ತೊಡಗಿಸಿಕೊಂಡಿರುವುದೇ ಹೌದಾದರೆ, ಅವರನ್ನು ಬಂಧಿಸಬೇಕು. ಆಗ ಇನ್ನಷ್ಟು ಮಾಹಿತಿಗಳು ದೊರೆಯಬಹುದು” ಎಂದು ಸಾಗರಿಕಾ ರಾಜ್ ಕುಂದ್ರಾ ವಿರುದ್ಧ ಗಂಭೀರ ಆರೋಪ ಮಾಡಿದ್ದರು.

ಸಾಗರಿಕಾ ಹೆಸರಿಸಿರುವ ಉಮೇಶ್ ಕಾಮತ್ ಅವರನ್ನು ಫೆಬ್ರವರಿ 9ರಂದು ಪೊಲೀಸರು ಬಂಧಿಸಿದ್ದರು. ಅವರು ರಾಜ್ ಕುಂದ್ರಾ ಅವರ ಕಂಪೆನಿಯಲ್ಲೇ ಕೆಲಸ ಮಾಡುತ್ತಿದ್ದರು. ಅಶ್ಲೀಲ ದೃಶ್ಯಗಳ ತಯಾರಿಕೆ ಮತ್ತು ಹಂಚಿಕೆಯ ಆರೋಪದಲ್ಲಿಯೇ ಉಮೇಶ್ ಕಾಮತ್ ಬಂಧನವಾಗಿತ್ತು. ಉಮೇಶ್ ಕಾಮತ್ ಬಂಧನವಾಗಿದ್ದು ನಟಿ ಗೆಹಾನಾ ವಸಿಷ್ಠ್ ಬಂಧನದ ನಂತರ ಆಕೆ ನೀಡಿದ ಮಾಹಿತಿಯಿಂದಾಗಿ.

ಒಟ್ಟಿನಲ್ಲಿ ಈ ಪ್ರಕರಣದಲ್ಲಿ ಇದುವರೆಗೆ ಹನ್ನೊಂದು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜೊತೆಗೆ ರಾಜ್ ಕುಂದ್ರಾ ಅವರನ್ನು ಬಂಧಿಸಿರುವುದು ಬಲವಾದ ಸಾಕ್ಷಾಧಾರಗಳು ಲಭ್ಯವಾದ ನಂತರ ಎನ್ನಲಾಗಿದೆ. ಜೊತೆಗೆ ಶೆರ್ಲಿನ್ ಚೋಪ್ರಾ, ಪೂನಮ್ ಪಾಂಡೆ ಸೇರಿದಂತೆ ಹಲವು ನಟಿಯರು ರಾಜ್ ಕುಂದ್ರಾ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದು, ರಾಜ್ ಮೇಲಿನ ಆರೋಪಕ್ಕೆ ಮತ್ತಷ್ಟು ಪುಷ್ಟಿಯನ್ನು ನೀಡುತ್ತಿದೆ.

ಇದನ್ನೂ ಓದಿ: ಬಿಂದಾಸ್ ಆಗಿರುವ ನೀವು ಇಷ್ಟೆಲ್ಲಾ ಹಣ ಹೇಗೆ ಸಂಪಾದಿಸುತ್ತೀರಿ ಎಂಬ ಪ್ರಶ್ನೆಗೆ ರಾಜ್ ಕುಂದ್ರಾ ಏನು ಹೇಳಿದ್ದರು ಗೊತ್ತೇ?

ಇದನ್ನೂ ಓದಿ: Raj Kundra: ರಾಜ್​ ಕುಂದ್ರಾ ಬಂಧನ; ಶಿಲ್ಪಾ ಶೆಟ್ಟಿ ಪತಿ ನಡೆಸುತ್ತಿದ್ದರು ಪಾರ್ನ್​ ಸಿನಿಮಾ ಜಾಲ

(Actress Sagarika Shona said in an undated interview that Raj Kundra offered a nude audition of her)