ಬಿಂದಾಸ್ ಆಗಿರುವ ನೀವು ಇಷ್ಟೆಲ್ಲಾ ಹಣ ಹೇಗೆ ಸಂಪಾದಿಸುತ್ತೀರಿ ಎಂಬ ಪ್ರಶ್ನೆಗೆ ರಾಜ್ ಕುಂದ್ರಾ ಏನು ಹೇಳಿದ್ದರು ಗೊತ್ತೇ?

Shilpa Shetty Raj Kundra: ಕಪಿಲ್ ಶರ್ಮಾ ಅವರ ಶೋನಲ್ಲಿ ಈ ಹಿಂದೆ ರಾಜ್ ಕುಂದ್ರಾ ಅವರಿಗೆ ಕೇಳಿದ್ದ ಪ್ರಶ್ನೆಯೊಂದು ವೈರಲ್ ಆಗಿದೆ. ಅದರಲ್ಲಿ ಬಿಂದಾಸ್ ಆಗಿ ಓಡಾಡಿಕೊಂಡಿರುವ ನೀವು ಇಷ್ಟೆಲ್ಲಾ ಹಣ ಹೇಗೆ ಗಳಿಸುತ್ತೀರಿ ಎಂದು ಕಪಿಲ್ ಶರ್ಮಾ ಕೇಳಿದ್ದಾರೆ. ಇದಕ್ಕೆ ಬರಿಯ ನಗುವಿನಲ್ಲೇ ಪ್ರತಿಕ್ರಿಯೆ ನೀಡಿದ್ದ ರಾಜ್ ಕುಂದ್ರಾ ಅವರ ಪರ ಪತ್ನಿ ಶಿಲ್ಪಾ ಶೆಟ್ಟಿ ಮಾತನಾಡಿದ್ದರು.

ಬಿಂದಾಸ್ ಆಗಿರುವ ನೀವು ಇಷ್ಟೆಲ್ಲಾ ಹಣ ಹೇಗೆ ಸಂಪಾದಿಸುತ್ತೀರಿ ಎಂಬ ಪ್ರಶ್ನೆಗೆ ರಾಜ್ ಕುಂದ್ರಾ ಏನು ಹೇಳಿದ್ದರು ಗೊತ್ತೇ?
ಕಪಿಲ್ ಶರ್ಮಾ ಶೋನಲ್ಲಿ ರಾಜ್ ಕುಂದ್ರಾ, ಶಿಲ್ಪಾ ಶೆಟ್ಟಿ ಮತ್ತು ಶಮಿತಾ ಶೆಟ್ಟಿ(ಬಲ)

ಅಶ್ಲೀಲ ಚಿತ್ರಗಳನ್ನು ನಿರ್ಮಿಸಿ ಅದನ್ನು ಆಪ್​ಗಳಿಗೆ ಅಪ್​ಲೋಡ್ ಮಾಡಿದ ಆರೋಪದಿಂದಾಗಿ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ (Raj Kundra) ಬಂಧನವಾಗಿದೆ. ಅವರನ್ನು ಬಂಧಿಸಿರುವ ಮುಂಬೈ ಸೈಬರ್ ಪೊಲೀಸರು ಅವರಿಂದ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಕಪಿಲ್ ಶರ್ಮಾ ಅವರ ಶೋನಲ್ಲಿ ರಾಜ್ ಕುಂದ್ರಾ ಹಾಗೂ ಅವರ ಪತ್ನಿ ಶಿಲ್ಪಾ ಶೆಟ್ಟಿ ಭಾಗವಹಿಸಿದ್ದಾಗ ಕಪಿಲ್ ಶರ್ಮಾ ಅವರ ಆದಾಯದ ಮೂಲದ ಬಗ್ಗೆ ಕೇಳಿದ ಪ್ರಶ್ನೆಯೊಂದು ವೈರಲ್ ಆಗಿದೆ. ಯಾವಾಗಲೂ ಪಾರ್ಟಿ ಮಾಡುತ್ತಿರುತ್ತೀರಿ, ಸ್ಟಾರ್​ಗಳೊಂದಿಗೆ ಫುಟ್​ಬಾಲ್ ಆಡುತ್ತಿರುತ್ತೀರಿ, ನಿಮ್ಮ ಪತ್ನಿಯನ್ನು(ಶಿಲ್ಪಾ ಶೆಟ್ಟಿ) ಶಾಪಿಂಗ್​ಗೆ ಕರೆದೊಯ್ಯುತ್ತೀರಿ. ಇಷ್ಟೆಲ್ಲಾ ಬಿಂದಾಸ್ ಆಗಿದ್ದಾಗ್ಯೂ ಅಷ್ಟು ದುಡ್ಡನ್ನು ಹೇಗೆ ಸಂಪಾದಿಸುತ್ತೀರಿ ಎಂದು ಕಪಿಲ್ ಶರ್ಮಾ ಕೇಳಿದ್ದಾರೆ. 

ಈ ಪ್ರಶ್ನೆಗೆ ವೇದಿಕೆಯಲ್ಲಿದ್ದ ರಾಜ್ ಕುಂದ್ರಾ, ಶಿಲ್ಪಾ ಶೆಟ್ಟಿ ಮತ್ತು ಶಿಲ್ಪಾ ಅವರ ಸಹೋದರಿ ಶಮಿತಾ ಶೆಟ್ಟಿ ಮೂವರೂ ಜೋರಾಗಿ ನಗುತ್ತಾರೆ. ಕೊನೆಗೆ ಶಿಲ್ಪಾ ಶೆಟ್ಟಿ ಅದಕ್ಕೆ ಉತ್ತರ ನೀಡಿ, ಇಲ್ಲಾ; ಅವರು ತುಂಬಾ ಕಷ್ಟ ಪಡುತ್ತಾರೆ. ಕೆಲವೊಮ್ಮೆ ಅವರು ಕೆಲಸಕ್ಕೆ ಕೂತರೆ ಗಂಟೆಗಟ್ಟಲೆ ಏಳುವುದಿಲ್ಲ ಎಂದು ಉತ್ತರಿಸಿದ್ದರು. ಅಂದು ಕಪಿಲ್ ಶರ್ಮಾ ಅವರ ಹಾಸ್ಯ ಭರಿತ ಪ್ರಶ್ನೆಗೆ ಎಲ್ಲರೂ ನಕ್ಕಿದ್ದು ಹೌದಾದರೂ,  ಆ ವಿಡಿಯೊ ಈಗ ವೈರಲ್ ಆಗಿದೆ. ರಾಜ್ ಕುಂದ್ರಾ ಅವರ ಮೇಲಿನ ಆರೋಪದಿಂದಾಗಿ ಆ ವಿಡಿಯೊ ಈಗ ಬೇರೆಯದೇ ಅರ್ಥ ಪಡೆದುಕೊಂಡಿದೆ.

ಕಪಿಲ್ ಶರ್ಮಾ ಕೇಳಿದ ಪ್ರಶ್ನೆಯ ವಿಡಿಯೊ ಇಲ್ಲಿದೆ:

ಈ ನಡುವೆ, ರಾಜ್ ಕುಂದ್ರಾ ಅವರು  ಪೊಲೀಸರಿಗೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಖಲೆಗಳನ್ನು ಸಲ್ಲಿದ್ದಾರೆ. ಪೊಲೀಸರು ನೀಡಿರುವ ಮಾಹಿತಿಯಂತೆ ಈ ಪ್ರಕರಣದಲ್ಲಿ ರಾಜ್ ಅವರನ್ನೊಬ್ಬರನ್ನೇ ಬಂಧಿಸಲಾಗಿಲ್ಲ. ಇದುವರೆಗೆ ಒಟ್ಟು ಹನ್ನೊಂದು ಜನರನ್ನು ಬಂಧಿಸಲಾಗಿದೆ. ಹಾಗೆಯೇ ರಾಜ್ ಕುಂದ್ರಾ ವಿರುದ್ಧ ರೂಪದರ್ಶಿ, ನಟಿ ಶೆರ್ಲಿನ್ ಚೋಪ್ರಾ ಹಾಗೂ ಪೂನಮ್ ಪಾಂಡೆ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ತಮ್ಮನ್ನು ವಯಸ್ಕ ಚಿತ್ರಗಳಲ್ಲಿ ನಟಿಸಲು ಕರೆತಂದದ್ದೇ ರಾಕ್ ಕುಂದ್ರಾ ಎಂದು ಶೆರ್ಲಿನ್ ಹಾಗೂ ಪೂನಮ್ ಹೇಳಿದ್ದಾರೆ. ಪ್ರತೀ ಚಿತ್ರಕ್ಕೆ ಶೆರ್ಲಿನ್ ಚೋಪ್ರಾ ಮೂವತ್ತು ಲಕ್ಷ ರೂ.ಗಳನ್ನು ಸಂಭಾವನೆಯಾಗಿ ಪಡೆಯುತ್ತಿದ್ದರು ಎನ್ನಲಾಗಿದ್ದು, ಅವರು ಇದುವರೆಗೆ ಸುಮಾರು 15ರಿಂದ 20 ಚಿತ್ರಗಳನ್ನು ರಾಜ್ ಕುಂದ್ರಾ ಅವರ ನಿರ್ಮಾಣ ಸಂಸ್ಥೆಗೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Raj Kundra: ರಾಜ್​ ಕುಂದ್ರಾ ಬಂಧನ; ಶಿಲ್ಪಾ ಶೆಟ್ಟಿ ಪತಿ ನಡೆಸುತ್ತಿದ್ದರು ಪಾರ್ನ್​ ಸಿನಿಮಾ ಜಾಲ

ಇದನ್ನೂ ಓದಿ: Viral Video: ವಧು-ವರರಂತೆ ಸೀರೆ, ಪಂಚೆ ತೊಟ್ಟು ಸಿಂಗಾರಗೊಂಡ ಶ್ವಾನಗಳು! ವಿಡಿಯೋ ವೈರಲ್

(Old Video of Kapil Sharma asking Raj Kundra that how he earn so much money in his jolly life style goes viral now)