Viral Video: ವಧು-ವರರಂತೆ ಸೀರೆ, ಪಂಚೆ ತೊಟ್ಟು ಸಿಂಗಾರಗೊಂಡ ಶ್ವಾನಗಳು! ವಿಡಿಯೋ ವೈರಲ್

ಹೆಣ್ಣು ನಾಯಿಗೆ ಕಿವಿಯೋಲೆ, ಸರ ಹಾಕಿ, ಹಣೆಗೆ ಬಿಂದಿ ಇಟ್ಟು ಲಕ್ಷಣವಾಗಿ ಅಲಂಕಾರ ಮಾಡಲಾಗಿದೆ. ಅದೇ ರೀತಿ ಗಂಡು ನಾಯಿಗೆ ಕೊರಳಿಗೆ ಮಾಲೆ ಹಾಕಿಸಿ ಶಲ್ಯ ತೊಡೆಸಿ ಕೂರಿಸಲಾಗಿದೆ.

Viral Video: ವಧು-ವರರಂತೆ ಸೀರೆ, ಪಂಚೆ ತೊಟ್ಟು ಸಿಂಗಾರಗೊಂಡ ಶ್ವಾನಗಳು! ವಿಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ತಮಾಷೆಯ ವಿಡಿಯೋಗಳು ಹರಿದಾಡುತ್ತಿರುವುದು ನಿಜ. ಕೆಲವು ಮನಸ್ಸಿಗೆ ತುಂಬಾ ಹಿಡಿಸಿಬಿಡ್ತವೆ. ಇನ್ನು ಕೆಲವು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತವೆ. ಇದೀಗ ವೈರಲ್ ಆದರ ಸುದ್ದಿಯೂ ಅಂಥದ್ದೇ ಒಂದು. ವಧು- ವರ ಮದುವೆಯಲ್ಲಿ ಹೇಗೆ ರೆಡಿ ಆಗ್ತಾರೋ ಅದೇ ರೀತಿ ಎರಡು ನಾಯಿಗಳು ಅಲಂಕಾರಗೊಂಡು ಮಾಲೆ ಹಾಕಿಕೊಂಡು ಕುಳಿತಿವೆ. ಈ ದೃಶ್ಯದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ಹಾಸ್ಯ ಮಾಡಿ ನಗುತ್ತಿದ್ದಾರೆ. ನೀವೂ ಒಮ್ಮೆ ವಿಡಿಯೋ ನೋಡಿ.. ಬಿದ್ದೂ ಬಿದ್ದೂ ನಗ್ತೀರಾ.

ಹೆಣ್ಣು ನಾಯಿಗೆ ಕಿವಿಯೋಲೆ, ಸರ ಹಾಕಿ, ಹಣೆಗೆ ಬಿಂದಿ ಇಟ್ಟು ಲಕ್ಷಣವಾಗಿ ಅಲಂಕಾರ ಮಾಡಲಾಗಿದೆ. ಅದೇ ರೀತಿ ಗಂಡು ನಾಯಿಗೆ ಕೊರಳಿಗೆ ಮಾಲೆ ಹಾಕಿಸಿ ಶಲ್ಯ ತೊಡೆಸಿ ಕೂರಿಸಲಾಗಿದೆ. ವಧು ಮತ್ತು ವರರಂತೆ ನಾಯಿಗಳು ಅಲಂಕಾರಗೊಂಡು ವಿವಾಹಕ್ಕೆ ಸಿದ್ಧರಾದಂತೆ ಅನಿಸುತ್ತದೆ. ವಿಡಿಯೋ ಇದೀಗ ಫುಲ್ ವೈರಲ್​ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಳ್ಳಲಾಗುತ್ತಿದ್ದಂತೆಯೇ 46 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿಕೊಂಡಿದೆ. 1,000ಕ್ಕೂ ಹೆಚ್ಚು ಲೈಕ್ಸ್​ಗಳು ಲಭಿಸಿವೆ. ತಮ್ಮ ಅಭಿಪ್ರಾಯಗಳನ್ನು ನೆಟ್ಟಿಗರು ಕಾಮೆಂಟ್ಸ್​ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ.

 

View this post on Instagram

 

A post shared by Raj (Heera lal) (@24_birds_animals)

ಇದನ್ನೂ ಓದಿ:

Viral video: ವಧು ಪಕ್ಕದಲ್ಲಿರುವಾಗಲೇ ವರನಿಗೆ ಗಡದ್ದಾಗಿ ನಿದ್ದೆ! ರಾತ್ರಿ ಕುಡಿದಿದ್ದೇ ಹೆಚ್ಚಾಯ್ತಾ? ಎಂದ ನೆಟ್ಟಿಗರು

Viral Video: ಮದುವೆ ವೇಳೆ ಪ್ರಜ್ಞೆ ತಪ್ಪಿ ಬಿದ್ದ ವಧು; ಕಂಗಾಲಾಗಿ ಮಂಟಪದಿಂದ ಓಡಿಹೋದ ವರ!